Posts

Showing posts from June, 2018

ಟಿ20ಯಲ್ಲಿ ಭಾರತಕ್ಕೆ ಅತಿದೊಡ್ಡ ಗೆಲುವು... ಸರಣಿ ಗೆದ್ದ ಕೊಹ್ಲಿ ಪಡೆಯಿಂದ ಏನೆಲ್ಲಾ ದಾಖಲೆ!

Image
ಜೈ ಶೇಗುಣಸಿ ಸುದ್ದಿ... ಡಬ್ಲಿನ್​ : ಕ್ರಿಕೆಟ್​ ಶಿಶು ಐರ್ಲೆಂಡ್​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಬರೋಬ್ಬರಿ 143ರನ್​ಗಳ ಗೆಲುವು ದಾಖಲಿಸಿ 2 ಪಂದ್ಯಗಳ ಸರಣಿಯನ್ನ ವೈಟ್​ ವಾಶ್​ ಮಾಡಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ಅಂತಾರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಟೀಂ ಇಂಡಿಯಾ ಸಾಧಿಸಿರುವ ಅತಿದೊಡ್ಡ ಗೆಲುವು ಇದಾಗಿದೆ. ಭಾರತ ನೀಡಿದ್ದ 214ರನ್​ಗಳ ಟಾರ್ಗೆಟ್​​ ಬೆನ್ನತ್ತಿದ್ದ ಐರ್ಲೆಂಡ್​ ತಂಡ 12.3 ಓವರ್​ಗಳಲ್ಲಿ ಕೇವಲ 70ರನ್​ಗಳಿಸಲು ಮಾತ್ರ ಶಕ್ತವಾಯಿತು. ರಾಹುಲ್​ ಬ್ಯಾಟಿಂಗ್​ ಮಿಂಚು, ಬೌಲಿಂಗ್​ನಲ್ಲಿ ಸ್ವಿನ್ನರ್​ಗಳ ಅಬ್ಬರ, ಐರ್ಲೆಂಡ್​ ವಿರುದ್ಧದ ಟಿ20 ಸರಣಿ ಕೈವಶ ಟೀಂ ಇಂಡಿಯಾ ಪರ ಆರಂಭಿಕ ಕೆಎಲ್​ ರಾಹುಲ್​ 70ರನ್​(36ಎಸೆತ,3ಬೌಂಡರಿ,6ಸಿಕ್ಸ್​), ಸುರೇಶ್​ ರೈನಾ 69ರನ್​(45ಎಸೆತ,5ಬೌಂಡರಿ,3ಸಿಕ್ಸ್​), ಹಾಗೂ ಹಾರ್ದಿಕ್​ ಪಾಂಡ್ಯ 32ರನ್​(9ಎಸೆತ,1ಬೌಂಡರಿ,4ಸಿಕ್ಸ್​) ಸಿಡಿಸಿದರು. ಏನೆಲ್ಲಾ ದಾಖಲೆ ನಿರ್ಮಾಣ ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಅನೇಕ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಟಿ20 ಪಂದ್ಯವೊಂದರಲ್ಲಿ ಭಾರತಕ್ಕೆ ಅತಿದೊಡ್ಡ ಗೆಲುವು ಇದಾಗಿದೆ. ಇದರ ಜತೆಗೆ ಟಿ20 ಪಂದ್ಯವೊಂದರಲ್ಲಿ ಭಾರತದ ವಿರುದ್ಧ ಐರ್ಲೆಂಡ್​ ತಂಡ ಕನಿಷ್ಠ ಮೊತ್ತಕ್ಕೆ ಆಲೌಟ್​ ಆಗಿರುವ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ತಂಡ ಕೇವಲ 80ರನ್​ಗಳಗೆ ಆಲೌಟ್​ ಆಗಿತ್ತು. ಟಿ20 ಪಂದ್ಯಗಳಲ್ಲಿ 200ಕ್ಕ...

ಕಬ್ಬಿನ ಬಾಕಿ ಶೀಘ್ರ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

Image
ಜೈ ಶೇಗುಣಸಿ ಸುದ್ದಿ... ಬೆಳಗಾವಿ: 2017-18ನೇ ಸಾಲಿನಲ್ಲಿ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ತಕ್ಷಣವೇ ಎಫ್‌ಆರ್‌ಪಿ ಪ್ರಕಾರ ರೈತರಿಗೆ ಕಬ್ಬಿನ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಜೂ.20ರ ಒಳಗಾಗಿ ಬಾಕಿ ಕಬ್ಬಿನ ಬಿಲ್ ನೀಡುವಂತೆ ಸೂಚನೆ ನೀಡಲಾಗಿತ್ತು.ಅದಾದ ಬಳಿಕ ಅನೇಕ ಕಾರ್ಖಾನೆಗಳು ಬಾಕಿ ಹಣ ಪಾವತಿಸಿವೆ. ಕೆಲವು ಕಾರ್ಖಾನೆಗಳು ಮಾತ್ರ ಬಾಕಿ ಉಳಿಸಿಕೊಂಡಿವೆ. ಕಾಲಮಿತಿಯೊಳಗೆ ಬಾಕಿ ಹಣ ಪಾವತಿಸಬೇಕು ಎಂದು ಹೇಳಿದರು. ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರು ಸಂಕಷ್ಟದಲ್ಲಿದ್ದಾರೆ. ಕಾರ್ಖಾನೆಗಳು ಇದನ್ನು ಅರಿತುಕೊಂಡು ಅವರಿಗೆ ಬಾಕಿ ಹಣ ಪಾವತಿಸಬೇಕು.ಇಲ್ಲದಿದ್ದರೆ ಬಾಕಿ ಹಣ ವಸೂಲಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು ಎಂದು ತಿಳಿಸಿದರು. ಮುನವಳ್ಳಿಯ ರೇಣುಕಾ ಶುಗರ್ಸ್‌ ಪ್ರತಿನಿಧಿ ಮಾತನಾಡಿ, ಕಳೆದ ಸಭೆಯ ಬಳಿಕ ಇದುವರೆಗೆ 64 ಕೋಟಿ ರೂಪಾಯಿ ಬಾಕಿ ಹಣ ಪಾವತಿಸಲಾಗಿದೆ. ಉಳಿದ ಹಣ ಪಾವತಿಗೆ ಹದಿನೈದು ದಿನ ಕಾಲಾವಕಾಶ ಬೇಕು ಎಂದರು. ಹಾಲಸಿದ್ಧನಾಥ ಕಾರ್ಖಾನೆಯ ಪ್ರತಿನಿಧಿಯು ಎಂಟು ದಿನದಲ್ಲಿ ಬಾಕಿ ಪಾವತಿಸುವುದಾಗಿ ಭರವಸೆ ನೀಡಿದರು. ರೇಣುಕಾ ಶು...

ರೈತರಿಗೆ ಪ್ರಧಾನಿ ಮೋದಿ ಬಂಪರ್‌ ಗಿಫ್ಟ್‌

Image
ಜೈ ಶೇಗುಣಸಿ ಸುದ್ದಿ... ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕುತ್ತಿಲ್ಲ ಎಂಬ ರೈತರ ಕೂಗಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ರೈತಾಪಿ ವಲಯಕ್ಕೆ ಭರ್ಜರಿ ಉಡುಗೊರೆ ಘೋಷಿಸಿದ್ದಾರೆ. ಭತ್ತ ಸೇರಿದಂತೆ ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಮತ್ತು ಇನ್ನೆರಡು ವಾರಗಳಲ್ಲಿ ಕಬ್ಬು ಬೆಳೆಗೆ ನ್ಯಾಯೋಚಿತ ಮತ್ತು ಸಂಭಾವನೆ ಬೆಲೆ (ಎಫ್‌ಆರ್‌ಪಿ)ಯನ್ನು ಘೋಷಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಇಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಪಂಜಾಬ್‌ ಸೇರಿದಂತೆ ಪ್ರಮುಖ ಕಬ್ಬು ಬೆಳೆಯುವ ರಾಜ್ಯಗಳ 140 ಪ್ರತಿನಿಧಿಗಳಿಗೆ ಅವರು ಈ ಭರವಸೆ ನೀಡಿದ್ದಾರೆ. ಪ್ರಧಾನಿ ನೀಡಿರುವ ಈ ಭರವಸೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ ಕೋಟ್ಯಂತರ ರೈತರಿಗೆ, ತಾವು ಬೆಳೆ ಬೆಳೆಯಲು ಮಾಡಿದ ವೆಚ್ಚಕ್ಕಿಂತ ಹೆಚ್ಚಿನ ಬೆಲೆ ಸಿಗುವ ಖಾತರಿಯನ್ನು ಒದಗಿಸಲಿದೆ. ಭರ್ಜರಿ ಏರಿಕೆ:  ಕಳೆದ 10 ದಿನದಲ್ಲಿ ಎರಡನೇ ಬಾರಿ ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಮುಂಗಾರು ಹಂಗಾಮಿನ ಬೆಳೆಗಳಿಗೆ, ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹಣವನ್ನು ಕನಿಷ್ಠ ಬೆಂಬಲ ಬೆಲೆಯಾಗಿ ಘೋಷಿಸಲಾಗುವುದು. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳ...

ಜೈ ಶೇಗುಣಸಿ ದಿನದ ಸುದ್ದಿ... ದಿ: 30-06-18

ಜೈ ಶೇಗುಣಸಿ ದಿನದ ಸುದ್ದಿ... ದಿ: 30-06-18 ** ಪ್ರಧಾನಿಯೊಂದಿಗೆ ಕಬ್ಬು ಬೆಳೆಗಾರರ ಸಂವಾದದಲ್ಲಿ ಭಾಗವಹಿಸಿದ ಶೇಗುಣಸಿಯ ರೈತರಾದ ಅಶೋಕ, ಪರಗೌಡ. ** ನನ್ನ ಮೇಲೆ ವಿಶ್ವಾಸವಿಡಿ, ಕಾದು ನೋಡಿ: ರಾಜ್ಯದ ಜನರಿಗೆ ಸಿಎಂ ಎಚ್ಡಿಕೆ ಮನವಿ. ** ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳು ಮುಂದುವರಿಯಲಿವೆ: ಪರಮೇಶ್ವರ್. ** ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಧನೆ ಅಗತ್ಯ: ರಾಜ್ಯಪಾಲ ವಜುಭಾಯಿ ವಾಲಾ. ** ಉದ್ಯೋಗ ಕೊರತೆಯಿಂದ ಉನ್ನತ ಶಿಕ್ಷಣ ಪಡೆಯುವರ ಸಂಖ್ಯೆ ಕ್ಷೀಣಿಸುತ್ತಿದೆ: ಜಿಟಿಡಿ. ** ಬಿಜೆಪಿಗೆ ಅಧಿಕಾರ ಸಿಗದಿರುವುದಕ್ಕೆ ರಾಜ್ಯದ ಜನರಿಗೂ ಬೇಸರವಿದೆ: ಬಿಎಸ್​ವೈ. ** ಖಂಡಿತವಾಗಿಯೂ ಇನ್ನೊಂದು ಸರ್ಜಿಕಲ್ ದಾಳಿ ನಡೆಸಬಲ್ಲೆವು: ಮಾಜಿ ಸೇನಾಧಿಕಾರಿ. ** ನಾನು ಸರಕಾರದ ವಿರೋಧಿ ಎನ್ನುವುದು ಸುಳ್ಳು: ಸಿದ್ದು ಸ್ಪಷ್ಟನೆ. ** ಕರ್ನಾಟಕದ ಪೊಲೀಸರನ್ನು ಹಾಡಿ ಹೊಗಳಿದ ಬಾಂಬೇ ಹೈ ಕೋರ್ಟ್. ** ಕ್ರಿಕೆಟ್- 2ನೇ ಟಿ-20 ಪಂದ್ಯ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಜಯ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 29-06-18

ಜೈ ಶೇಗುಣಸಿ ದಿನದ ಸುದ್ದಿ..     ದಿ: 29-06-18 ** ಸರ್ಕಾರದಲ್ಲಿ ಸಿದ್ದು ನಿರ್ಲಕ್ಷಿಸಿದರೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ: ಕಾಗಿನೆಲೆ ಶ್ರೀ. ** ಕರ್ನಾಟಕದ ಮುದ್ದೆ, ನಾಟಿಕೋಳಿ ಸಾರು ಬಲು ರುಚಿ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು. ** ಶಾಂತಿವನದಿಂದ ಡಿಸ್ಟಾರ್ಜ್​ ಆದ ಮಾಜಿ ಸಿಎಂರಿಂದ ಮಂಜುನಾಥನ ದರ್ಶನ. ** ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗಳನ್ನು ಯಾರೂ ಸಮರ್ಥಿಸಬೇಡಿ: ಸಚಿವರಿಗೆ ಡಿಸಿಎಂ ತಾಕೀತು. ** ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅಧಿಕಾರ ಅವಧಿ ಅಂತ್ಯ. ** ಬಜೆಟ್ ನಲ್ಲಿ ಸಾಲ ಮನ್ನಾ ಬಿಟ್ಟರೆ ಬೇರೇನು ಇರದು : ಸಿಎಂ ಅಭಯ. ** ರಾಜಕೀಯ ತಂತ್ರ ಹೆಣೆಯಲು ವಿಶ್ರಾಂತಿ ನೆಪ: ಸಂಸದ ಜೋಶಿ ವಾಗ್ದಾಳಿ..! ** ಚಳ್ಳಕೆರೆ ತಾಲೂಕಿನಲ್ಲಿ ರಾಮುಲು ಗ್ರಾಮ ವಾಸ್ತವ್ಯ. ** ಮುಂಬೈನಲ್ಲಿ ಲಘು ವಿಮಾನ ಪತನ: ಪೈಲಟ್‌ಗಳಿಬ್ಬರು ಸೇರಿ ಐವರ ಸಾವು. ** ಮುಸ್ಲಿಮರನ್ನು ಓಲೈಸಲು ವಂದೇ ಮಾತರಂಗೆ ಕೋಮಿನ ಬಣ್ಣ ಬಳಿದ ಕಾಂಗ್ರೆಸ್‌: ಅಮಿತ್‌ ಶಾ. ** ಅತೀ ದೊಡ್ಡ ಸ್ವಾರ್ಥಿಗಳೇ ಸಮಾಜವಾದದ ಬಗ್ಗೆ ಮಾತನಾಡುತ್ತಿದ್ದಾರೆ: ಪ್ರಧಾನಿ

ಕಾಫಿ ನಾಡಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿ....!

Image
Chetan Yala dagi ಗಗನದಲಿ ಮಳೆಯದಿನ ಗುಡುಗಿನ ತನನಾ ಆ ತನನದಿನಾ ಧರಣಿಯಲೀ ಹಸುರಿನ ಜನನಾ  ಮಲೆನಾಡಿನ ಮಳೆಹಾಡಿನ ಪಿಸುಮಾತಿನ ಹೊಸತನ ಸವಿದೆನಾ...                ನಾದಬ್ರಹ್ಮ ಹಂಸಲೇಖರ ಪದಗಳಿಗೆ ಸಾಕ್ಷಿ ಚಿಕ್ಕಮಗಳೂರು. ನಾನು ಬೆಂಗಳೂರಿನ ಒಂದು ಸಾಫ್ಟವೇರ್ ಕಂಪನಿ ಸೇರಿಕೊಂಡ ನಂತರ ನನ್ನ Tripನ ಕನಸು ಸಾಕಾರಗೊಂಡದ್ದು 1ವರ್ಷದ ನಂತರ. ಅದು ಕಾಫಿ ನಾಡು ಚಿಕ್ಕಮಗಳೂರಿನ ಪ್ರವಾಸ. ಒಂದು ತಿಂಗಳ ಮುಂಚೆಯೇ ಕೊಡೆಕಿನಾಲ್, ಮೈಸೂರು ಎಂತೆಲ್ಲಾ Plan ಮಾಡಿ, ಕೊನೆಗೆ ಹೋಗಿದ್ದು ಚಿಕ್ಕಮಗಳೂರಿಗೆ. 2ದಿನದ ಮುಂಚೆಯೇ ಚಿಕ್ಕಮಗಳೂರಿನ ಹೆನ್ರಿ ಕಾರ್ನ್‍ರ್ ಲಾಡ್ಜನ್ನು ಮತ್ತು ವಾಯುಪುತ್ರ ಕ್ಯಾಬ್ಸ್‍ನಲ್ಲಿ ಟೆಂಪೊ-ಟ್ರಾವೆಲ್ಲರ್ ಬುಕ್ ಮಾಡಿದೆವು.            ಶುಕ್ರವಾರದ ದಿನ ಆಫೀಸ್ ಮುಗಿಸಿಕೊಂಡು ಸಹದ್ಯೋಗಿ ಮಿತ್ರರಾದ ಪುನೀತ್, ನಮ್ರತಾ, ಸ್ನೇಹಾ, ರೂಪೇಶ, ರೈನಾ, ದೀಪ್ತಿ, ಶೃತಿ, ಬೆಲಿಂಡಾರನ್ನ ಒಳಗೊಂಡ ನಮ್ಮ ತಂಡ ರಾತ್ರಿ ಸುಮಾರು 10.30ಗಂ. ಗೆ ಎಲೆಕ್ಟ್ರಾನ್ ಸಿಟಿಯಿಂದ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದೆವು. ರಾತ್ರಿ 11.30 ಸುಮಾರಿಗೆ ಬನಶಂಕರಿಯ ಸಂಧಿಗೊಂಧಿಗಗಳ ಮಧ್ಯೆ ನಮ್ಮ ವಾಹನ ಹಾಯ್ದು ಇನ್ನೊಬ್ಬ ಸ್ನೇಹಿತನಾದ ಅರ್ಜುನನನ್ನು Pickup ಮಾಡಿಕೊಂಡು ಬೆಂಗಳೂರಿನಿಂದ ಹೊರ ಬರುವುದರೊಳಗಾಗಿ ಗಂಟೆ 1 ಆಗಿತ್ತು. ಒಂದು ಒಳ್ಳೆಯ...

ಜೈ ಶೇಗುಣಸಿ ದಿನದ ಸುದ್ದಿ ದಿ: 28-06-18

ಜೈ ಶೇಗುಣಸಿ ದಿನದ ಸುದ್ದಿ ದಿ: 28-06-18 ** ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯ: ಎಚ್‌ಡಿಕೆ. ** ಮಾಜಿ ಸಚಿವ ಟಿ.ಬಿ.ಜಯಚಂದ್ರ ಭೇಟಿಗೆ ನಿರಾಕರಿಸಿದ ಮಾಜಿ ಸಿಎಂ ಸಿದ್ದು. ** ಸಮ್ಮಿಶ್ರ ಸರಕಾರ ಐದು ವರ್ಷ ಅಧಿಕಾರ ನಡೆಸುವುದು ಖಚಿತ: ಡಿಕೆಶಿ. ** ಕರ್ನಾಟಕದ ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ. ** ಶಾಂತಿವನದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಕೈ ಪಡೆ. ** ನಾನು ಮೊದಲು ಸರ್ಕಾರದ ಪರ ಬ್ಯಾಟಿಂಗ್ ಮಾಡುತ್ತೇನೆ: ಪ್ರಿಯಾಂಕ್ ಖರ್ಗೆ ** ರೈಸಿಂಗ್‌ ಕಾಶ್ಮೀರ ಸಂಪಾದಕನ ಹತ್ಯೆ: ಆರೋಪಿಗಳಲ್ಲಿ ಓರ್ವ ಪಾಕಿಸ್ತಾನಿ ** ನೀರವ್‌ ಮೋದಿ ಹಸ್ತಾಂತರ ಪ್ರಕ್ರಿಯೆ ಸಹಾಯ ಕೋರಿ ಯುರೋಪಿಯನ್ ರಾಷ್ಟ್ರಗಳಿಗೆ ಪತ್ರ. ** 50 ಕೋಟಿ ಮಂದಿ ತಲುಪಿದ ಸಾಮಾಜಿಕ ಭದ್ರತಾ ಯೋಜನೆಗಳು: ಪ್ರಧಾನ ಮಂತ್ರಿ ಮೋದಿ. ** ಮೊದಲ ಟಿ-20 ಪಂದ್ಯ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು. ರೋಹಿತ್ ಧವನ್ ಭರ್ಜರಿ ಬ್ಯಾಟಿಂಗ್. ** ಫಿಫಾ ವಿಶ್ವಕಪ್ ಟೂರ್ನಿ- ವಿಶ್ವ ಚಾಂಪಿಯನ್ ಜರ್ಮನಿಗೆ ಸೋಲು,ಟೂರ್ನಿಯಿಂದ ಔಟ್;ಕ್ರೋವೆಷಿಯಾ ವಿರುದ್ಧ ಸೋತ ಐಸ್ಲ್ಯಾಂಡ್ ನಿರ್ಗಮನ; ನಾಕೌಟ್ ಗೆ ಅರ್ಜೆಂಟೀನಾ.

ಜೈ ಶೇಗುಣಸಿ ದಿನದ ಸುದ್ದಿ ದಿ: 27-06-18

ಜೈ ಶೇಗುಣಸಿ ದಿನದ ಸುದ್ದಿ ದಿ: 27-06-18 ** ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಹೇಳೀಕೆ ಕೊಡುವುದು ಸರಿಯಲ್ಲ- ಕುಮಾರಸ್ವಾಮಿ. ** ಸರ್ಕಾರ 5ವರ್ಷ ಪೂರೈಸಲಿದೆ- ಪರಮೇಶ್ವರ್. ** 5ವರ್ಷ್ ಸಮ್ಮಿಶ್ರ ಸರ್ಕಾರ ಇರುವುದು ಡೌಟ್- ಸಿದ್ದರಾಮಯ್ಯ. ** ರಾಜ್ಯ ನಾಯಕರೊಂದಿಗೆ ಬಿಎಸ್ವೈ ಸಾಲು ಸಾಲು ಮೀಟಿಂಗ್. ** ನಾನು ಹೊಸ ಕಾರು ಕೇಳಿಲ್ಲ- ಜಮೀರ್. ** ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆರ್.ಅಶೋಕ ಮಂಡ್ಯದಿಂದ ಸ್ಪರ್ಧೆಗೆ ಚಿಂತನೆ. ** ಜುಲೈ 2ರಿಂದ ಬಿಜೆಟ್ ಅಧಿವೇಶನ ಪ್ರಾರಂಭ- ಸಿಎಂ. ** ಫಿಲ್ಮ್ ಛೇಂಬರ್ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆ. ** ಮಹಾರಾಷ್ಟ್ರ ಉಸ್ತುವಾರಿಯಾಗಿ ಇಂದು ಖರ್ಗೆ ಅಧಿಕಾರ ಸ್ವೀಕಾರ. ** ಶಿಕ್ಷಣ ಸಚಿವನಾಗುವ ಇಚ್ಛೆ ಈಗಲೂ ಇದೆ ಎಂದ ಹೊರಟ್ಟಿ. ** ಪ್ರಧಾನಿ ಮೋದಿಯವರಿಗೆ ಜೀವಬೆದರಿಕೆ; ಮುಂಜಾಗ್ರತೆಗಾಗಿ ಹೊಸ ನಿಯಮ ಜಾರಿಗೊಳಿಸಿದ ಗೃಹ ಸಚಿವಾಲಯ.

ಜೈ ಶೇಗುಣಸಿ ದಿನದ ಸುದ್ದಿ ದಿ: 26-06-18

ಜೈ ಶೇಗುಣಸಿ ದಿನದ ಸುದ್ದಿ ದಿ: 26-06-18 ** ರೈತರ ಸಾಲ ಮನ್ನಾ ಆದರೆ ನನಗೆ ಯಾರೂ ಕಮಿಷನ್‌ ಕೊಡುವುದಿಲ್ಲ- ಸಿಎಂ ಎಚ್‌.ಡಿ. ಕುಮಾರಸ್ವಾಮಿ. ** ಬಜೆಟ್‌ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ- ಪರಮೇಶ್ವರ್‌. ** 2 ಹಂತದಲ್ಲಿ ರೈತರ ಸಾಲಮನ್ನಾ- ಬಂಡೆಪ್ಪ ಕಾಶೆಂಪುರ. ** ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದ ಸಚಿವ ರಮೇಶ್‌ ಜಾರಕಿಹೊಳಿ. ** ಹಿಂದೂ ಮಹಾಸಾಗರದಲ್ಲಿ ನೌಕಾನೆಲೆ ನಿರ್ಮಾಣಕ್ಕೆ ಭಾರತ-ಸೀಶೆಲ್ಸ್‌ ಒಪ್ಪಂದ, ಪರಸ್ಪರ ಹಿತರಕ್ಷಣೆಯ ಮೂಲಕ ನೌಕಾನೆಲೆ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ- ಸೀಶೆಲ್ಸ್‌ ಅಧ್ಯಕ್ಷ ಡ್ಯಾನಿ ಫೌರೆ ಒಪ್ಪಂದ. ** ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ನಾನು ಹೇಳಿಲ್ಲ, ಬಿಜೆಪಿಯವರ ಸಲಹೆ ಪರಿಗಣಿಸುವೆ- ಜಮೀರ್. ** ಹಾವೇರಿ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರ ಮುಂದುವರಿಕೆ.

ಜೈ ಶೇಗುಣಸಿ ದಿನದ ಸುದ್ದಿ... ದಿ: 25-06-18

ಜೈ ಶೇಗುಣಸಿ ದಿನದ ಸುದ್ದಿ... ದಿ: 25-06-18 ** ಸಮ್ಮಿಶ್ರ ಸರ್ಕಾರದ ಬಗ್ಗೆ ಸಿದ್ದುಗೆ ಅಸಮಾಧಾನವಿದ್ದರೆ ಚರ್ಚಿಸುತ್ತೇನೆ: ಪರಮೇಶ್ವರ್‌. ** ಕಾಶ್ಮೀರದಲ್ಲಿ ಭದ್ರತಾ ಪಡೆ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ. ** ಟಿಪ್ಪು ಸುಲ್ತಾನ್ ಹಿಂದೂಗಳ ಹತ್ಯೆ ಮಾಡಿದ್ದಾನೆ: ಜಗದೀಶ್ ಶೆಟ್ಟರ್​. ** ಮನ್​ ಕೀ ಬಾತ್​ನಲ್ಲಿ ಅಪಘಾನ್​ ಕ್ರಿಕೆಟರ್​ನನ್ನು ಹೊಗಳಿದ ಪ್ರಧಾನಿ ** ಹಜ್ ಭವನಕ್ಕೆ ಕಲಾಂ ಹೆಸರಿಡಲಿ: ಬಿಎಸ್‌ವೈ. ** ಡಿಕೆಶಿ ವಿರುದ್ಧ ಆಧಾರ ರಹಿತ ಸುದ್ದಿ ಬಿತ್ತರಿಸದಂತೆ ತಾತ್ಕಾಲಿಕ ತಡೆ. ** ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದರ ವಿಭಜನೆಗೆ ಎಂದೂ ಅವಕಾಶ ನೀಡುವುದಿಲ್ಲ- ಷಾ ** ಸ್ವಚ್ಛ ನಗರಿ ಕುಸಿತ- 5ರಿಂದ 8ನೇ ಸ್ಥಾನಕ್ಕೆ ಜಾರಿದ ಮೈಸೂರು. ** ಅಮರನಾಥ ಯಾತ್ರಿಕರ ರಕ್ಷಣೆಗೆ ಎನ್ ಎಸ್ ಜಿ ಕಮಾಂಡೊಗಳ ನಿಯೋಜನೆ.

ಜೈ ಶೇಗುಣಸಿ ದಿನದ ಸುದ್ದಿ.. ದಿನ: 22-06-18

ಜೈ ಶೇಗುಣಸಿ ದಿನದ ಸುದ್ದಿ.. ದಿನ: 22-06-18 ** ರೈತರಿಗೆ ನೀರುಬಿಡಿ, ಏನೇ ಬಂದರೂ ನಾನಿದ್ದೇನೆ - ಮಂಡ್ಯದಲ್ಲಿ ಎಚ್‌ಡಿಕೆ. ** ಕೊಟ್ಟರೆ ಸಚಿವ ಸ್ಥಾನ ಕೊಡಲಿ, ನಿಗಮ ಮಂಡಳಿ ಬೇಡ- ಬಿ.ಸಿ. ಪಾಟೀಲ್‌ ** ರೈತರ ಸಾಲಮನ್ನಾ ಗೆ ಸಿಎಂ ಸರ್ಕಸ್- ಅನುದಾನದಲ್ಲಿ 20% ಕಡಿತ. ** ಶಂಕರಮೂರ್ತಿಯ ಮೇಲ್ಮನೆ ಸಭಾಪತಿ ಅಧಿಕಾರ ಅವಧಿ ಅಂತ್ಯ,ಹೊರಟ್ಟಿ ಹಂಗಾಮಿ ಸಭಾಪತಿ. ** ಡೆಹ್ರಾಡೂನ್ ನಲ್ಲಿ ಮೋದಿ ಯೋಗ, ಬೆಂಗಳೂರಿನಲ್ಲಿ ಗೌಡರಿಂದ ಯೋಗಾಭ್ಯಾಸ. ** ಇಂದಿನಿಂದ ಉನ್ನತ ಶಿಕ್ಷಣ ಸಚಿವರಾಗಿ ಜಿ.ಟಿ.ದೇವೇಗೌಡ ಅಧಿಕಾರ ಪ್ರಾರಂಭ. ** ನ್ಯಾಚುರೋಪತಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ ಕೇಜ್ರಿವಾಲ್​. ** ಉಗ್ರರ ಹೆಡೆಮುರಿ ಕಟ್ಟಲು ಕಾಶ್ಮೀರ ತಲುಪಿದ ಎನ್​ಎಸ್​ಜಿ ಕಮಾಂಡೋಗಳು. ** 2 ವರ್ಷದ ಬಳಿಕ ಸಚಿವ ಸ್ಥಾನದ ಭರವಸೆ ಸಿಕ್ಕಿದೆ- ಸತೀಶ್​ ಜಾರಕಿಹೊಳಿ. ** ವಿಶ್ವ ಯೋಗ ದಿನಾಚರಣೆ ಕ್ರೆಡಿಟ್ ಮೋದಿಗೆ ಸಲ್ಲಬೇಕು- ಯೋಗಿ ಆದಿತ್ಯನಾಥ್.

ಕರಾಟೆಯಲ್ಲಿ ರಡ್ಡೇರಹಟ್ಟಿ ಗ್ರಾಮದ ವಿದ್ಯಾರ್ಥಿ- ಸಕ್ಷಮಗೆ ಚಿನ್ನದ ಪದಕ

Image
ಜೈ ಶೇಗುಣಸಿ  ಸುದ್ದಿ.. ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ವಿದ್ಯಾರ್ಥಿ ಸಕ್ಷಮ ರಮೇಶ ಭೋಸಲೆ ಈಚೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ 27 ಕೆ.ಜಿ ಕರಾಟೆ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಅಥಣಿಯ ಸಿ.ಬಿ ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದು. 2018 ಮೇ 26 ರಿಂದ 29 ರ ವರೆಗೆ ನಡೆದ 23ನೇ ಅಂತಾರಾಷ್ಟ್ರೀಯ ಹೈಸ್ಕೂಲ್ ಕರಾಟೆ ಚಾಂಪಿಯನ್ ಶಿಪ್‌ದಲ್ಲಿ ಸಕ್ಷಮ ಈ ಸಾಧನೆ ಮಾಡಿದ್ದಾನೆ.

ಜಲಯೋಗ ಪ್ರದರ್ಶಿಸಿ ಯೋಗದ ಮಹತ್ವ ಸಾರಿದ ಅಂಗವಿಕಲರು

Image
ಜೈ ಶೇಗುಣಸಿ  ಸುದ್ದಿ.. 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಗರದಲ್ಲಿ ಆಯೋಜಿಸಲಾಗಿದ್ದ ಜಲಯೋಗ ಕಾರ್ಯಕ್ರಮದಲ್ಲಿ ಅಂಗವಿಕಲರು ಜಲಯೋಗ ಪ್ರದರ್ಶಿಸಿ ಯೋಗ ಮಹತ್ವವನ್ನು ಸಾರಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್​ ಇಲಾಖೆ ಹಾಗೂ ಕೆಎಲ್​ಇ ಶಿಕ್ಷಣ ಸಂಸ್ಥೆಗಳ ಸಯೋಗದಲ್ಲಿ ನಗರದ ಕೆಎಲ್​ಇ ಸಂಸ್ಥೆಯ ಸುವರ್ಣ ಜಿಎನ್​ ಎಮ್​ ಸಿ ಈಜುಕೊಳದಲ್ಲಿ ಜಲಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಮೇಶ ಕಲಘಟಗಿ ಅವರ ತಂಡದೊಂದಿಗೆ ಸಣ್ಣ ಮಕ್ಕಳು ನೀರಿನಲ್ಲಿ ಯಾವುದೇ ಪ್ರಯಾಸವಿಲ್ಲದೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಹಿರಿಯರೂ ಸಹ ಜಲಯೋಗ ಪ್ರದರ್ಶನ ನೀಡಿದರು. ಪರ್ವತ ಆಸನ, ಹನುಮ ಆಸನ, ಸಮಸ್ಥಿತಿ, ಸೂರ್ಯ ನಮಸ್ಕಾರ,ಕಂದರ ಆಸನ ಇನ್ನಿತರ ಆಸನಗಳನ್ನು ಪ್ರದರ್ಶಿಸಿದರು. ಹನಿ ಹನಿ ಮಳೆಯ ನಡುವೆಯೂ ಜನರು ಯೋಗಭಂಗಿಗಳನ್ನು ನೋಡಿ ಸಂತಸಪಟ್ಟರು.

ಜೈ ಶೇಗುಣಸಿ ದಿನದ ಸುದ್ದಿ.. ದಿ: 21-06-2018

ಜೈ ಶೇಗುಣಸಿ ದಿನದ ಸುದ್ದಿ.. ದಿ: 21-06-2018 ** ಇಂದು ದೇಶದೆಲ್ಲೆಡೆ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ. ** ರಾಜ್ಯಾದ 19.6ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್- ರಾಜ್ಯ ಸರ್ಕಾರ. ** ಡಿ.ಕೆ.ಶಿವಕುಮಾರ್‌ ಯಾಕೆ ರಾಜೀನಾಮೆ ನೀಡಬೇಕು, ಅವರು ಕಾನೂನಾತ್ಮಕವಾಗಿ ಹೋರಾಡುತ್ತಿದ್ದಾರೆ- ಎಚ್‌. ಡಿ.ಕುಮಾರಸ್ವಾಮಿ ** ಗಂಗಾಧರ ಚಡಚಣ ಹತ್ಯೆ ಪ್ರಕರಣ- ಸಿಐಡಿಯಿಂದ ತೀವ್ರಗೊಂಡ ತನಿಖೆ. ** ಹುತಾತ್ಮ ಯೋಧ ಔರಂಗಜೇಬ್‌ ಮನೆಗೆ ರಕ್ಷಣಾ ಸಚಿವೆ ಭೇಟಿ, ಸಾಂತ್ವನ. ** 2022ಕ್ಕೆ ರೈತರ ಆದಾಯ ದ್ವಿಗುಣ ಬದ್ಧತೆ ಪುನರುಚ್ಚರಿಸಿದ ಪ್ರಧಾನಿ ಮೋದಿ. ** ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ರಾಷ್ಟ್ರಪತಿ ಅಂಕಿತ. **ತಾಲಿಬಾನ್​ ಉಗ್ರರಿಂದ ಸರಣಿ ದಾಳಿ: 30 ಆಫ್ಘನ್​ ಯೋಧರ ಸಾವು.

ಜೈ ಶೇಗುಣಸಿ ದಿನದ ಸುದ್ದಿ.. ದಿ- 20-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ- 20-06-18 ** ಸಾಲಮನ್ನಾದಿಂದ ಹಿಂದೆ ಸರಿಯಲ್ಲ, ವೈಜ್ಞಾನಿಕವಾಗಿ ಸಾಲಮನ್ನಾ ಮಾಡ್ತೀನಿ- ಸಿಎಂ. ** ಲಕ್ಷ್ಮೀ ಹೆಬ್ಬಾಳ್ಕರ್​ ನನ್ನನ್ನು ಅಕ್ಕಾ ಎಂದು ಕರೆದು ಕ್ಷಮೆ ಕೇಳಿದ್ದಾರೆ- ಜಯಮಾಲ. ** ರಾಹುಲ್ ಬಳಿ ಯಾರ ಬಗ್ಗೆಯೂ ಚಾಡಿ ಹೇಳುವ ಪ್ರಯತ್ನ ಮಾಡಿಲ್ಲ- ಎಚ್ಡಿಕೆ. ** ಮತ್ತೆ ತೀವ್ರಗೊಂಡ ಲಿಂಗಾಯತ ಧರ್ಮ ಹೋರಾಟ- ಸಿದ್ದರಾಮ ಸ್ವಾಮೀಜಿ. ** ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಅಥಣಿಯಲ್ಲಿ ಶುಭಾರಂಭ. ** ಸಚಿವ ಸ್ಥಾನಕ್ಕಾಗಿ ಮುಸ್ಲಿಂ ಸಮುದಾಯದ ನಾಯಕರ ಜಟಾಪಟಿ. ** ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ ಕೇಂದ್ರಕ್ಕೆ 250 ಕೋಟಿ ರೂ. ಪ್ರಸ್ತಾವ- ಎಚ್​.ಡಿ. ರೇವಣ್ಣ ** ಜೂನ್ 27ರವರೆಗೆ ಮುಷ್ಕರ ಮಾಡದಂತೆ ಬಿಎಂಆರ್‌ಸಿಎಲ್ ನೌಕರರಿಗೆ ಹೈಕೋರ್ಟ್​ ಸೂಚನೆ. **ಕಾಶ್ಮೀರದಲ್ಲಿ ಪಿಡಿಪಿ ಜೊತೆ ಮೈತ್ರಿ ಮುರಿದ ಬಿಜೆಪಿ. ** ಬೆಂಗಳೂರಿನಲ್ಲಿ ನಾಪತ್ತೆಯಾದ 8ವಿದ್ಯಾರ್ಥಿಗಳು ಸಂಜೆ ವೇಳೆಗೆ ಪತ್ತೆ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 19-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 19-06-18 ** ಸಾಲಮನ್ನಾಕ್ಕೆ ಕೇಂದ್ರದಿಂದ ಸಹಕಾರಕ್ಕೆ ಮನವಿ- ದೆಹಲಿಯಲ್ಲಿ ಮೋದಿ ಭೇಟಿಮಾಡಿದ ಸಿಎಂ ಕುಮಾರಸ್ವಾಮಿ. ** ಸಾಲಮನ್ನಾ ಆಯಾ ರಾಜ್ಯಗಳಿಗೆ ಬಿಟ್ಟಿದ್ದು- ಜೇಟ್ಲಿ. ** ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಕಿತ್ತಾಟ- ಜಯಮಾಲಾ-ಹೆಬ್ಬಾಳಕರ ಜಟಾಪಟಿ. ** ಪೆಟ್ರೋಲ್​, ಡೀಸೆಲ್​ ಮೇಲೆ ಸುಂಕ ಕಡಿತ ಸದ್ಯಕ್ಕಿಲ್ಲ- ಸೂಚನೆ ನೀಡಿದ ಜೇಟ್ಲಿ ** ಸಮ್ಮಿಶ್ರ ಸರ್ಕಾರ ಈಗ ಗೊಂದಲದ ಗೂಡಾಗಿದೆ- ಬಿಎಸ್​ವೈ. ** ಸಮ್ಮಿಶ್ರ ಸರಕಾರ ಐದು ವರ್ಷ ಪೂರೈಸಲಿದೆ- ಸಚಿವ ಶಂಕರ್. ** ಮೇಲ್ಮನೆ ಆಯ್ಕೆ ಮಾಡಿದ್ದಕ್ಕೆ ಬಿಜೆಪಿಯ ಪುಟ್ಟಸ್ವಾಮಿ ಅಸಮಾಧಾನ. ** ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ 'ಬೆಂಗಳೂರು ಚಲೋ'. ** ಸಿದ್ದರಾಮಯ್ಯ ಅವರೇ ನನಗೆ ಈಗಲೂ ಮುಖ್ಯಮಂತ್ರಿ- ಸಚಿವ ಪುಟ್ಟರಂಗಶೆಟ್ಟಿ

Father's Day Special.... I

ಜೈ ಶೇಗುಣಸಿ ..... 13ನೇ ವರ್ಷಕ್ಕೇ ಮನೆಯಿಂದ ಹೊರಹಾಕುವ ಅಮೆರಿಕದಲ್ಲೇ ಮಕ್ಕಳು ‘ಮದರ್‍ಸ್ ಡೇ’, ‘ಫಾದರ್‍ಸ್ ಡೇ’ ಆಚರಿಸುತ್ತಾರೆ! ಹಾಗಿರುವಾಗ ಭಾರತೀಯರಾದ ನಮ್ಮಲ್ಲಿ ಕೊನೆಯುಸಿರುವವರೆಗೂ ಮಕ್ಕಳ ಅಭ್ಯುದಯದ ಬಗ್ಗೆಯೇ ಯೋಚಿಸುವ ಅಪ್ಪ-ಅಮ್ಮನನ್ನು ನೆನಪಿಸಿಕೊಳ್ಳದಿರುವುದು ಥರವೇ?! ಇದೆಲ್ಲಾ ವೆಸ್ಟ್‌ರ್ನ್ ಕಾನ್ಸೆಪ್ಟ್, ಗ್ರೀಟಿಂಗ್ಸ್ ಕಾರ್ಡ್ ಕಂಪನಿಯವರ ವ್ಯಾಪಾರ ತಂತ್ರ ಎಂದು ಯಾರೇನೇ ಬೊಬ್ಬೆ ಹಾಕಲಿ.  ಜೂನ್  17‘ಫಾದರ್‍ಸ್ ಡೇ’. ನಾವು ಅಂಬೆಗಾಲಿಡುವಾಗ ಕೈಹಿಡಿದು ಮುನ್ನಡೆಸಿದ, ನಾವೇ ಜನ್ಮಕೊಟ್ಟಾಗ ಮೊಮ್ಮಕ್ಕಳಿಗೂ ಪುಟ್ಟ ಪುಟ್ಟ ಹೆಜ್ಜೆಯಿಡುವುದನ್ನು ಕಲಿಸುವ ಅಪ್ಪನ ಅಗೋಚರ ಪ್ರೀತಿ, ನಿಸ್ವಾರ್ಥತೆಯನ್ನು ನೆನೆದು ಕನಿಷ್ಠ ಕೃತಜ್ಞತೆಯನ್ನಾದರೂ ಹೇಳೋಣ. ಮರೆಯದಿರಿ.

ಜೈ ಶೇಗುಣಸಿ ದಿನದ ಸುದ್ದಿ ದಿ: 17-06-2018

ಜೈ ಶೇಗುಣಸಿ ದಿನದ ಸುದ್ದಿ ದಿ: 17-06-2018 ** ಹೊಸ ಬಜೆಟ್ ಮಂಡನೆ ಮಾಡುವ ಅಗತ್ಯವಿಲ್ಲ, ಹಳೆಯ ಯೋಜನೆ ಮುಂದುವರೆಸಿ- ಸಿದ್ದರಾಮಯ್ಯ. ** ಜುಲೈ ಮೊದಲ ವಾರದಲ್ಲಿ ನಮ್ಮ ಸರ್ಕಾರದ ಮೊದಲ ಬಜೆಟ್- ಸಿಎಂ. ** ನಾನು ಕೆಪಿಸಿಸಿ ಅಧ್ಯಕ್ಷರ ರೇಸ್ ನಲ್ಲಿಲ್ಲ- ಸಿದ್ದರಾಮಯ್ಯ. ** ಜಿಲ್ಲೆಗೊಂದು ಆಯುಷ್ ಆಸ್ಪತ್ರೆ: ಸಚಿವ ಶ್ರೀಪಾದ. ** ಗೌರಿ ಹತ್ಯೆಯಲ್ಲಿ  ಮುತಾಲಿಕ್​ರನ್ನು ಮೊದಲು ತನಿಖೆ ಮಾಡಿ​: ಶಾಸಕ ಇಬ್ರಾಹಿಂ. ** ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಗಡ್ಕರಿ ಜತೆ ಸಿಎಂ ಚರ್ಚೆ ನಿರ್ಧಾರ. ** ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ನ್ಯಾಯಾಂಗ ಬಂಧನಕ್ಕೆ. ** ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಯೋಧ ಸಾವು. ** ಈದ್​ ಸಿಹಿ ಸ್ವೀಕರಿಸಲು ನಿರಾಕರಿಸಿದ ಭಾರತೀಯ ಭದ್ರತಾ ಪಡೆ. ** ಸ್ಪೇನ್ ವಿರುದ್ಧ ಜಯಗಳಿಸಿದ ಭಾರತೀಯ ಮಹಿಳೆಯರ ಹಾಕಿ ತಂಡ.

ಇಂದಿನಿಂದ ಬಾಗಲಕೋಟೆ-ಕುಡಚಿ ರೈಲ್ ಬಸ್ ಸೇವೆ ಆರಂಭ

Image
ಜೈ ಶೇಗುಣಸಿ ಸುದ್ದಿ... ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಗಲಕೋಟೆ ಮತ್ತು ಕುಡಚಿ ನಡುವಿನ ಹೊಸ ರೈಲು ಮಾರ್ಗದಲ್ಲಿ ರೈಲ್ ಬಸ್ ಸೇವೆ ಆರಂಭವಾಗಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡರ, ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕೂಡಲೇ ಮಾಡಿ ಎಂದು ಜಮಖಂಡಿ ಜನ ಸಾಕಷ್ಟು ಮನವಿ ಮಾಡಿದ್ದರು.ಜನ ಮನವಿ ಮಾಡಿರುವಂತೆ ರೈಲ್ ಬಸ್ ಸೇವೆ ಆರಂಭಗೊಂಡಿದೆ. ಕೇಂದ್ರ ಸರ್ಕಾರದ ಕೆಲಸದ ಜತೆಗೆ ಈ ಭಾಗದಲ್ಲಿ ರೈಲು ಸೇವೆಗೆ ಒತ್ತು ನೀಡಿದ್ದೇನೆ. ಹೆಚ್ಚು ಒತ್ತಡ ಹಾಕಿದಾಗ ಕೆಲಸ ಆಗುತ್ತದೆ. ಅದರಂತೆ ರೈಲು ಮಾರ್ಗಕ್ಕೆ ರೈತರನ್ನು ಮನವೊಲಿಸಿ ಭೂಮಿ ವಶಪಡಿಸಿಕೊಂಡು ಕೆಲಸ ಮಾಡಲಾಗಿದೆ ಎಂದರು. ಸ್ವಾರ್ಥ ಬಿಟ್ಟು ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ನವರು ರೈಲು ಸೇವೆಗೆ ಒತ್ತು ಕೊಟ್ಟು, ಶೇ.50 ಭಾಗದ ಖರ್ಚು ಕೊಡಲು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರಿಂದ ಇಂದು ಈ ಮಾರ್ಗ ಆರಂಭಗೊಂಡಿದೆ ಎಂದು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕುಡಚಿ-ಬಾಗಲಕೋಟೆ ಮಾರ್ಗ142 ಕೀ.ಮೀ‌ ಪೈಕಿ ಈಗ ಬಾಗಲಕೋಟೆ ಯಿಂದ ಖಜ್ಜಿಡೋಣಿ ಗ್ರಾಮದವರೆಗೆ 30 ಕೀ.ಮೀ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡು ರೈಲ್ ಬಸ್ ಆರಂಭಗೊಂಡಿದೆ. ಬಾಗಲಕೋಟೆ ರೈಲ್ವೆ ಸ್ಟೇಶನ್ ಆದರ್ಶ ರೈಲ್ವೆ ಸ್ಟೇಶನ್ ಎಂದು ಘೋಷಿಸಲ...

ಜೈ ಶೇಗುಣಸಿ ದಿನದ ಸುದ್ದಿ... ದಿ: 16-06-18

ಜೈ ಶೇಗುಣಸಿ ದಿನದ ಸುದ್ದಿ... ದಿ: 16-06-18 ** ರೈತರ ಸಾಲಮನ್ನಾ ಬಜೆಟ್​ನಲ್ಲಿ ಘೋಷಣೆ: ಎಚ್​ಡಿಕೆ ** ತಗ್ಗಿದ ಮಳೆ ಆರ್ಭಟ, ಭದ್ರಾ ಜಲಾಶಯಕ್ಕೆ ಒಂದೇ ದಿನಕ್ಕೆ 5 ಅಡಿ ನೀರು. ** ಕನಿಷ್ಠ ಸಾಮಾನ್ಯ ಕಾರ್ಯಕ್ರಮ ಪಟ್ಟಿ ತಯಾರಿಕಾ ಸಮಿತಿಯಲ್ಲಿ ಡಿಕೆಶಿ, ರೇವಣ್ಣ. ** ಆರ್‌ಎಸ್‌ಎಸ್‌, ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿಯಿಂದ ಔತಣಕೂಟ. ** ಕೊಟ್ಟ ಖಾತೆಯನ್ನು ಸರಿಯಾಗಿ ನಿರ್ವಹಿಸಿ ಎಂದು ಜಲಸಂಪನ್ಮೂಲ ಸಚಿವ ಡಿಕೆಶಿಗೆ ಶ್ರೀ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಸಲಹೆ. ** ಅಕ್ಬರ್ ಅಲ್ಲ, ಮೋವಾರ ರಾಜ ಮಹಾರಾಣ ಪ್ರತಾಪ್ ಅತ್ಯಂತ ದೊಡ್ಡ ವ್ಯಕ್ತಿ- ಯೋಗಿ ಆದಿತ್ಯನಾಥ್. ** ಶಾಸಕ ಸತೀಶ್​ ಜಾರಕಿಹೊಳಿ ನೀರು ಕೊಡುತ್ತಿಲ್ಲವೆಂದು ಫೇಸ್​ಬುಕ್​ನಲ್ಲಿ ಸ್ಟೇಟಸ್​ ** ಐತಿಹಾಸಿಕ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು. ಕೇವಲ ಎರಡೇ ದಿನದಲ್ಲಿ ಸೋಲಿಗೆ ಶರಣಾದ ಅಫ್ಘಾನ್‌. ** ಫಿಫಾ ವಿಶ್ವಕಪ್ ಟೂರ್ನಿ- ಈಜಿಪ್ಟ್ ವಿರುದ್ದ  ಉರುಗ್ವೆ ಗೆ ರೋಚಕ ಜಯ.

ಸೀತಾಗಿರಿಯಲ್ಲಿ ಸಂಜೀವಿನಿ ಸಮಾಧಿ ಹೊಂದಿದ ಶ್ರೀ ಸ.ಸ. ಕಲ್ಮೇಶ್ವರ ಮಹಾರಾಜರ ಮಠದಲ್ಲಿ ಶ್ರೀ ರಾಮ ದೇವಸ್ಥಾನದ ಸ್ಥಾಪನೆ ಹಿನ್ನಲೆ....

Image
ಜೈ ಶೇಗುಣಸಿ ಸುದ್ದಿ... -ಪೀಠಾಧಿಪತಿ ಶ್ರೀ ಸ.ಸ. ವಾಲಿ ಮಹಾರಾಜರ ಸಂಶೋಧನಾ ಪ್ರಬಂಧದಿಂದ.. ಸೀತಾಗಿರಿ  ಹೆಸರೇ ಸೂಚಿಸುವಂತೆ ಸೀತಾಮಾತೆ ವಾಸವಾಗಿದ್ದ ಸ್ಥಾನ. ಸುತ್ತಮುತ್ತಲ ಪ್ರದೇಶದಲ್ಲಿ ಶ್ರೀ ರಾಮದೇವರ ವಾಸ್ತವ್ಯವಿತ್ತು ಎಂದು ತಿಳಿದುಬಂದಿದೆ... ಚಿನ್ನದ ಮೃಗದ ವೇಷಧಾರಿ ಮಾರೀಚನನ್ನು ಶ್ರೀರಾಮ ಬಹಳ ದೂರದವರೆಗೂ ಅಟ್ಟಿಸಿಕೊಂಡು ಬಂದ..ಅವನನ್ನು ಆಲಮಟ್ಟಿಯ ಸಮೀಪದಲ್ಲಿರು ಅರಣ್ಯದಲ್ಲಿ ಕೊಂದ ಎಂದು..ಚಿನ್ನದ ಮೃಗವನ್ನು ಕೊಂದ ಪ್ರದೇಶವೇ ಈಗಿನ ಚಿಮ್ಮಲಗಿ... ಸೀತಾದೇವಿಯನ್ನು ಅಪಹರಿಸಿ ಜಟಾಯು ಅಡ್ಡಗಟ್ಟಿ ತೊಂದರೆ ಕೊಡುತ್ತಾ ಅಟ್ಟಿಸಿಕೊಂಡು ಹೋದನಂತೆ..ಅದನ್ನೇ ಈಗ "ಅಡ್ಡಗಟ್ಟಿ  ಹಳ್ಳಿ" ಎಂದು ಕರೆಯುತ್ತಾರೆ... ಆಲಮಟ್ಟಿಯ ಹತ್ತಿರವೇ ಇರುವ ಇನ್ನೊಂದು  ಸೀತಿಮನಿ ಎಂಬಲ್ಲಿ ಸೀತಾದೇವಿ ವಾಸವಿದ್ದಳು ಎಂದು..ಇಲ್ಲಿ ಇಂದಿಗೂ ಅರಿಶಿಣ ಹೊಂಡ,  ಲವ ಕುಶ ಹೊಂಡ ಎಂಬ ಹೊಂಡಗಳಿವೆ..  ಲವ ಕುಶರನ್ನು ನೋಡಲು ಶ್ರೀ ರಾಮ ಪುಷ್ಪಕ ವಿಮಾನ ತೆಗೆದುಕೊಂಡು ಬಂದಿಳಿದ ಜಾಗದಲ್ಲಿ ಶ್ರೀ ಕಲ್ಮೇಶ್ವರ ಮಹಾರಾಜರು ಶ್ರೀ ರಾಮಚಂದ್ರಪ್ಪ ಎಂಬ ಹವಾಲ್ದಾರ್ ರ ಮೂಲಕ  75 ವರ್ಷದ ಹಿಂದೆ ತಮ್ಮ ಗುರುಗಳಾದ ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಹೆಸರನ್ನು ಇಟ್ಟು ಮಠ ಸ್ಥಾಪನೆ ಮಾಡಿದರು.  ಲೋಕದ ಅಪವಾದಕ್ಕೆ ಅಂಜಿದ ಶ್ರೀ ರಾಮ ಬೆಟ್ಟದ ಮೇಲೆ ಹೋಗುವ ಗೋಜಿಗೆ ಹೋಗಲಿಲ್ಲ. ಇಲ್ಲೆ ನಿಂತು ತನ್ನ ಪರಿವಾರ ಒಂದುಗೂಡಿ...

ರೈತರ ಸಾಲಮನ್ನಾ ಬಜೆಟ್​ನಲ್ಲಿ ಘೋಷಣೆ: ಎಚ್​ಡಿಕೆ

Image
ಜೈ ಶೇಗುಣಸಿ ಸುದ್ದಿ.. ರೈತರ ಸಾಲಮನ್ನಾವನ್ನು ಬಜೆಟ್​ನಲ್ಲಿ ಘೋಷಿಸುತ್ತೇನೆ. ರಾಜ್ಯದ ಆರ್ಥಿಕ ಶಿಸ್ತಿಗೆ ಧಕ್ಕೆಯಾಗದ ರೀತಿ ಸಾಲಮನ್ನಾ ಮಾಡಲಾಗುವುದು. ನಾನು ಈ ವಿಚಾರದಲ್ಲಿ ಎಸ್ಕೇಪ್​ ಆಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಬಜೆಟ್ ಯಾವುದೇ ಒಂದು ವರ್ಗಕ್ಕೆ ಮೀಸಲಿರುವುದಿಲ್ಲ. ಸಾರ್ವಜನಿಕ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಿ ರಾಜ್ಯದ ಆರೂವರೆ ಕೋಟಿ ಜನರಿಗೆ ಅನುಕೂಲವಾಗುವಂಥ ಬಜೆಟ್​ನ್ನು ಮಂಡಿಸಲಾಗುತ್ತದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಸರ್ಕಾರದಲ್ಲಿ ಹಲವು ಕಾರ್ಯಕ್ರಮ ನೀಡಬೇಕು. ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ರೈತರ ಸಾಲಮನ್ನಾ ವಿಚಾರವು ಇದೆ. ಇದರಲ್ಲಿ ಅನಗತ್ಯ ಗೊಂದಲ ಬೇಡ. ಇದಕ್ಕೆ ಅವಶ್ಯಕವಾದ ಹಣ ಕ್ರೂಡೀಕರಣ ಮಾಡುತ್ತಿದ್ದೇನೆ ಎಂದಿದ್ದಾರೆ. ಸಾಲಮನ್ನಾ ವಿಚಾರದಲ್ಲಿ ನನ್ನ ಹಾಗೂ ಡಿಸಿಎಂ ನಡುವೆ ಗೊಂದಲವಿಲ್ಲ. ಗಡುವು ಕೊಡುವುದು ಬೇಡ ಎಂದು ಡಿಸಿಎಂ ಹೇಳಿದ್ದಾರೆ. ಸಾಲಮನ್ನಾ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ .

ಕೃಷ್ಣಾ ಶುಗರ್ಸ್ ಮಲ್ಟಿಪರ್ಪಸ್ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಲಕ್ಷಾಂತರ ರೂ. ಕಳ್ಳತನ.

Image
ಜೈ ಶೇಗುಣಸಿ ಸುದ್ದಿ.. ಹಲ್ಯಾಳ ಗ್ರಾಮದ ಹೊರವಲಯದ ಕೃಷ್ಣಾ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಕೃಷ್ಣಾ ಶುಗರ್ಸ್ ಮಲ್ಟಿಪರ್ಪಸ್ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಬುಧವಾರ ಮಧ್ಯರಾತ್ರಿ ಲಕ್ಷಾಂತರ ರೂ. ಬುಧವಾರ ಮಧ್ಯರಾತ್ರಿ ಕಳ್ಳತನವಾಗಿದೆ. ಕೃಷ್ಣಾ ಶುಗರ್ಸ್ ಮಲ್ಟಿಪರ್ಪಸ್ ಕೋ-ಆಪ್. ಕ್ರೆಡಿಟ್ ಸೊಸೈಟಿಯಲ್ಲಿ ವೇತನ ಬಟವಡೆಗೆಂದು ಅಥಣಿ ಕಾರ್ಪೊರೇಷನ್ ಬ್ಯಾಂಕ್‌ನಿಂದ ಬ್ಯಾಂಕನಿಂದ ತಂದಿಡಲಾಗಿದ್ದ 10,85,520 ರೂ. ಕಳ್ಳತನ ಮಾಡಲಾಗಿದೆ ಎಂದು ಅಥಣಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ಅವರು ಕೂಲಂಕಷವಾಗಿ ಪರಿಶೀಲಿಸಿ ಶೀಘ್ರ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಡಿ.ವೈ.ಎಸ್.ಪಿ. ರಾಮಗೌಡ ಬಸರಗಿ, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಸುರೇಶ ಬೆಂಡೆಗುಂಬಳ, ತನಿಖಾ ಸಹಾಯಕ ಬಿ.ಆರ್. ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಿಸಿದೆ.

ಬಡ ಜೈನ ವಿದ್ಯಾರ್ಥಿಗಳಿಗೆ ಅರಿಹಂತ ಫೌಂಡೇಶನ್‌ ನೆರವು...

Image
ಜೈ ಶೇಗುಣಸಿ ಸುದ್ದಿ.. ಬಡ ಪ್ರತಿಭಾವಂತ ಜೈನ ವಿದ್ಯಾರ್ಥಿಗಳು ಬಡತನದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಯಬಾಗ ತಾಲೂಕಿನ ಜೈನ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅರಿಹಂತ ಚಾರಿಟೇಬಲ್ ೌಂಡೇಶನ್ ಆರ್ಥಿಕ ನೆರವು ನೀಡುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಫೌಂಡೇಶನ ಅಧ್ಯಕ್ಷ ಡಿ.ಸಿ.ಸದಲಗಿ ಹೇಳಿದ್ದಾರೆ. ಸ್ಥಳೀಯ ಜೈನ ಮಂದಿರದಲ್ಲಿ ಮಂಗಳವಾರ ನಡೆದ ಫೌಂಡೇಶನ್ ದಾನಿಗಳಿಗೆ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಡು ಬಡತನ ಹಾಗೂ ಸಾಂಸಾರಿಕ ತೊಂದರೆಗಳಿಂದ ಜೈನ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದಾರೆ. ಜೈನ ಸಮಾಜದಿಂದ ಹಿಂದುಳಿದವರಿಗಾಗಿಯೇ ಅರಿಹಂತ ಚಾರಿಟೇಬಲ್ ಫೌಂಡೇಶನ್ ಎಂಬ ಬೃಹತ್ ಸಂಘಟನೆಯನ್ನು ಸ್ಥಾಪಿಸಿ, ಅವರಿಗೆ ಸೂಕ್ತ ಸಹಾಯ ಸಹಕಾರ ನೀಡಲಾಗುತ್ತಿದೆ ಎಂದರು. ಕಾರ್ಯದರ್ಶಿ ಎಂ.ಪಿ.ಖಾನಟ್ಟಿ ಮಾತನಾಡಿ ಫೌಂಡೇಶನ್ ಆಶ್ರಯದಲ್ಲಿ ಗಣಪತರಾಯ ಗಂಗಾರಾಮ ಹಜಾರೆ ಮತ್ತು ಶ್ರೀಮತಿ ಪ್ರಭಾವತಿ ಹಜಾರೆ ದಂಪತಿಗಳು ತಾಲೂಕಿನ ಜೈನ ಬಡ ವಿದ್ಯಾರ್ಥಿಗಳಿಗೆ ನೆರವಾಗಲು 2018-19 ನೇ ಸಾಲಿಗೆ ಪ್ರೋತ್ಸಾಹ ಧನ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದಲ್ಲಿ ಶೇ 80 ಕ್ಕಿಂತ ಹೆಚ್ಚು ಅಂಕಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು. ಅರ್ಹ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯೊಂದಿಗೆ ಅರ್ಜಿ ಜೊತೆಗೆ ದೃಢೀಕೃತ ಅಂಕಪಟ್ಟಿ,...

ಜೈ ಶೇಗುಣಸಿ ದಿನದ ಸುದ್ದಿ.. ದಿ: 15-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 15-06-18 ** ಸಮನ್ವಯ ಸಮಿತಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗೆ ನಿರ್ಧಾರ. ** ಎಚ್​ಡಿಕೆ ಅಪ್ರಬುದ್ಧ ಮುಖ್ಯಮಂತ್ರಿ- ಅನಂತ್​ಕುಮಾರ್​ ಹೆಗಡೆ ಟ್ವೀಟ್. ** ವಿವಿಧ ಕ್ಷೇತ್ರದ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ತಾಕೀತು ** ಹೊಸ ಯೋಜನೆ ಜಾರಿ ಸದ್ಯಕ್ಕಿಲ್ಲ ಎಂದ ಸಿದ್ದರಾಮಯ್ಯ. ** ಕಾಂಗ್ರೆಸ್​ನಿಂದ ಖಡಕ್​ ಎಚ್ಚರಿಕೆ: ಅತೃಪ್ತರ ಸಭೆ ದಿಢೀರ್​ ರದ್ದು ** ಖಾತೆಗಳಲ್ಲಿ ನನ್ನ ಹಸ್ತಕ್ಷೇಪವಿಲ್ಲ: ಎಚ್‌. ಡಿ. ರೇವಣ್ಣ ** ಉಚಿತ ಬಸ್‌ಪಾಸ್‌ಗೆ ರಸ್ತೆಗಿಳಿದ ಬೆಳಗಾವಿ ಕೆಎಲ್ಇ ವಿದ್ಯಾರ್ಥಿಗಳು ** ಮೂರು ತಿಂಗಳ ಬಳಿಕ ಗೋವಾಗೆ ಹಿಂದಿರುಗಿದ ಮುಖ್ಯಮಂತ್ರಿ ಪರಿಕ್ಕರ್‌. ** ದಿನದ ಕೊನೆಯ ಹಂತದಲ್ಲಿ ತಿರುಗಿಬಿದ್ದ ಆಘ್ಘಾನ್; ಮೊದಲ ದಿನದಂತ್ಯಕ್ಕೆ ಭಾರತ 347/6.

ಜೈ ಶೇಗುಣಸಿ ದಿನದ ಸುದ್ದಿ.. ದಿ- 14-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ- 14-06-18 ** ಜಯನಗರ ವಿಧಾನಸಭಾ ಚುನಾವಣೆ- ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯಾ ರೆಡ್ಡಿ ಭರ್ಜರಿ ಜಯಭೇರಿ. ** ಬಿಜೆಪಿ ಸೋಲಿಗೆ ಅಮಿತ್ ಷಾ ಅಸಮಾಧಾನ. ಅನಂತಕುಮಾರ್ ಜೊತೆ ಚರ್ಚೆ. ** ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ- ಬಿಜೆಪಿ-3, ಜೆಡಿಎಸ್-2, ಕಾಂಗ್ರೆಸ್-1ರಲ್ಲಿ ಗೆಲುವು. ** ಜಲಸಂಪನ್ಮೂಲ ಅಧಿಕಾರಿಗಳ ವರ್ಗ- ಸಿಎಂರಿಂದ ಏಕಪಕ್ಷೀಯ ನಿರ್ಧಾರ, ಡಿಕೆಶಿಗೆ ಅಸಮಾಧಾನ. ** ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥರಾಗಲಿದ್ದಾರೆ ನಾರಾಯಣಮೂರ್ತಿ. ** ರಾಜ್ಯಾದ್ಯಂತ ಜೂ.21ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಪ್ರಾರಂಭ. ** ನನ್ನ ಫಿಟ್​ನೆಸ್​ಗಿಂತ ರಾಜ್ಯದ ಅಭಿವೃದ್ಧಿ ಫಿಟ್​ನೆಸ್​ ಮುಖ್ಯ- ಪ್ರಧಾನಿಯ ಫಿಟ್ನೆಸ ಸವಾಲಿಗೆ ಸಿಎಂ ಪ್ರತಿಕ್ರಿಯೆ. ** ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಸದ್ಯಕ್ಕಿಲ್ಲ- ಸಾರಿಗೆ ಸಚಿವ. ** ಅಟಲ್‌ ಬಿಹಾರಿ ವಾಜಪೇಯಿ ಆರೋಗ್ಯದಲ್ಲಿ ಚೇತರಿಕೆ- ಏಮ್ಸ್‌ ** ಉತ್ತಮ ಮಳೆಯಾಗಲು ದೈವೀಶಕ್ತಿಯೇ ಕಾರಣ- ಮುಖ್ಯಮಂತ್ರಿ ಕುಮಾರಸ್ವಾಮಿ. ** ರಾಯರ ದರ್ಶನದಿಂದಲೇ ರಾಜ್‌ ಕುಟುಂಬ ಬೆಳೆದಿದೆ- ರಾಘವೇಂದ್ರ ರಾಜ್‌ಕುಮಾರ್‌. ** ಇಂದು ಭಾರತ-ಅಫ್ಘಾನಿಸ್ಥಾನ ನಡುವೆ ಮೊದಲ ಟೆಸ್ಟ್ ಪಂದ್ಯ. ** ಇಂದು ವಿಶ್ವಕಪ್ ಫುಟ್ಬಾಲ್ ಲೀಗ್ ಗೆ ಚಾಲನೆ.

ಜಯನಗರ ಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯಾ ರೆಡ್ಡಿ ಜಯಭೇರಿ

Image
ಜೈ ಶೇಗುಣಸಿ ದಿನದ ಸುದ್ದಿ... ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯ ಕಣವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಅದ್ಭುತ ಗೆಲುವು ಸಾಧಿಸಿದ್ದಾರೆ. ಅಂಚೆ ಮತ ಎಣಿಕೆಯನ್ನು ಬಿಟ್ಟರೆ, ಒಟ್ಟು 16 ಸುತ್ತುಗಳಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೊದಲ ಸುತ್ತಿನಿಂದಲೂ ಸೌಮ್ಯಾ ರೆಡ್ಡಿಯವರು ನಿರಂತರ ಮುನ್ನಡೆ ಕಾಯ್ದುಕೊಂಡು ಬರುತ್ತಿದ್ದರು. ಕೊನೆಯಲ್ಲಿ ಸೌಮ್ಯಾರೆಡ್ಡಿ ಅವರು 2886 ಮತಗಳ ಅಂತರದಿಂದ ಬಿಜೆಪಿಯ ಪ್ರಹ್ಲಾದ್ ಬಾಬು​ ಅವರ ವಿರುದ್ಧ ಜಯಗಳಿಸಿದ್ದಾರೆ. # ಕಾಂಗ್ರೆಸ್ ಸೌಮ್ಯಾರೆಡ್ಡಿ (ಕಾಂಗ್ರೆಸ್​) – 54457 # ಬಿಜೆಪಿ ಅಭ್ಯರ್ಥಿ (ಬಿಜೆಪಿ) – 51568 # ರವಿಕೃಷ್ಣಾರೆಡ್ಡಿ (ಪಕ್ಷೇತರ)- 1861 # ನೋಟಾ -848 # ಅಂತರ – 2886

ಜೈ ಶೇಗುಣಸಿ ದಿನದ ಸುದ್ದಿ.. ದಿ- 13-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ- 13-06-18 ** ಗೌರಿ ಲಂಕೇಶ್ ಹತ್ಯೆ: ಆರೋಪಿ ಪರಶುರಾಮ್ ವಾಗ್ಮೋರೆ ಬಂಧನ. ** ಇಂದು ಜಯನಗರ ಮತ ಎಣಿಕೆ- ಎಸ್ಎಸ್ಎಂಆರ್ ವಿ ಕಾಲೇಜು ಸುತ್ತ ಬಿಗಿ ಭದ್ರತೆ ** ವಾಜಪೇಯಿ ಆರೋಗ್ಯ ಸ್ಥಿರ, ಚಿಕಿತ್ಸೆಗೆ ಸ್ಪಂದನೆ. ** ರಾಜ್ಯ ನಾಯಕರಿಂದಲೇ ನನಗೆ ಸಚಿವ ಸ್ಥಾನ ಕೈತಪ್ಪಿದ್ದು- ಸತೀಶ್​ ಜಾರಕಿಹೊಳಿ. ** ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ- ದಿನೇಶ್​ ಗುಂಡೂರಾವ್​. ** ಜೂನ್ 14 ಅಥವಾ 15 ರಂದು ಪ್ರಧಾನಿ ಮೋದಿಯವರನ್ನ  ಭೇಟಿಯಾಗಲಿರುವ ಕಳಸಾ ಬಂಡೂರಿ ರೈತರ‌ ನಿಯೋಗ. ** ಎಐಸಿಸಿಗೆ ರಾಜೀನಾಮೆ ನೀಡಿದ ಸತೀಶ್ ಜಾರಕಿಹೊಳಿ. ** ಚಾರ್ಮುಡಿ ಘಾಟ್ ನಲ್ಲಿ ಭೂಕುಸಿತ- 2ದಿನ ಸಂಚಾರ ಸ್ಥಗಿತ. ** ಜನರಿಗೆ ಹತ್ತಿರವಾಗುವಂತಹ ಖಾತೆ ಕೊಡಿ- ಜಿಟಿಡಿಯಿಂದ ಮನವಿ. ** ಶಿಕ್ಷಕರ ಕ್ಷೇತ್ರದ ಚುನಾವಣೆ- ಜೆಡಿಎಸ್ ನ ಮರಿತಿಬ್ಬೇಗೌಡಗೆ ಗೆಲುವು. ** ಮಳೆ ಅಬ್ಬರ- ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಡಿತ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 12-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 12-06-18 ** ಜಯನಗರ ಚುನಾವಣೆ- ಒಟ್ಟು ಶೇ.54.9 ರಷ್ಟು ಮತದಾನ. ** ಒಂದೇ ಸಲ ಭ್ರಷ್ಟಾಚಾರ ನಿಲ್ಲಿಸಲು ಹೋದರೆ ನನ್ನ ಸ್ಥಾನ ಉಳಿಯಲ್ಲ- ಎಚ್‌ಡಿಕೆ. ** ಸಚಿವ ಸ್ಥಾನ ಇಲ್ಲದಿದ್ದರೂ ಜನಸೇವೆ ಮಾಡುವ ಅವಕಾಶವಿದೆ- ಎಚ್.ಕೆ.ಪಾಟೀಲ್. ** ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು. ** ಸಚಿವರಾದ ಮರುದಿನವೇ ಶಾಲೆ ಬಿಟ್ಟ ಮಕ್ಕಳನ್ನು ಭೇಟಿ ಮಾಡಿದ ಶಿಕ್ಷಣ ಸಚಿವ ಎನ್ ಮಹೇಶ್ ** ಸಚಿವ ಜಿ.ಟಿ.ದೇವೆಗೌಡರ ಖಾತೆ ಬದಲಾವಣೆಗೆ ಮುಖಂಡರ ಒಪ್ಪಿಗೆ. ** ಕಾಂಗ್ರೆಸ್ ನಲ್ಲಿರುವ ಭಿನ್ನಮತ ಸದ್ಯದಲ್ಲೇ ಶಮನ- ಸಿದ್ದರಾಮಯ್ಯ. ** ಅಟಲ್ ಆರೋಗ್ಯವಾಗಿದ್ದಾರೆ, ಭಯ ಪಡಬೇಡಿ.-ಏಮ್ಸ ವೈದ್ಯರು.

ಜೈ ಶೇಗುಣಸಿ ದಿನದ ಸುದ್ದಿ.. ದಿ- 11-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ- 11-06-18 ** ಇಂದು ಜಯನಗರ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ. ** ಸಮ್ಮಿಶ್ರ ಸರ್ಕಾರದಲ್ಲಿ ನೀಡಿರುವ ಖಾತೆ ತೃಪ್ತಿ ತಂದಿದೆ: ಎನ್‌ ಮಹೇಶ್‌. ** ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ತಾಕತ್ತಿದ್ದರೆ ರೈತರ ಸಾಲಮನ್ನಾ ಮಾಡಲಿ-  ಲೋಕೋಪಯೋಗಿ ಸಚಿವ ಎಚ್​.ಡಿ ರೇವಣ್ಣ. ** ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ನಾನು ಅತೃಪ್ತರಿಗೆ ಸ್ಪಂದಿಸಿಲ್ಲ ಎನ್ನುವುದು ಊಹೋಪೋಹ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ** ಕಾಲಾ ಚಿತ್ರ ನೋಡುವ ಕನ್ನಡಿಗರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶಾಲು ಹೊದೆಸಿ ವ್ಯಂಗ್ಯ. ** ಅಕ್ರಮ ಗಡಿನುಸುಳುತ್ತಿದ್ದ ಆರು ಉಗ್ರರನ್ನು ಹೊಡೆದುರುಳಿಸಿದ ಸೇನೆ. ** ಏಷ್ಯಾಕಪ್ ಟಿ-20 ಮಹಿಳೆಯರ ಫೈನಲ್-ಭಾರತದ ವಿರುದ್ಧ ಬಾಂಗ್ಲಾದೇಶಕ್ಕೆ 3 ವಿಕೆಟ್​ಗಳ ಭರ್ಜರಿ ಜಯ.

ಗುರುವಿನ ಕೃಪೆವೊಂದಿದ್ದರೆ ಮುಕ್ತಿ ಸಾಧ್ಯ- ಶ್ರೀ ರೇವಣಸಿದ್ಧೇಶ್ವರ ಮಹಾರಾಜರ ಅಭಿಮತ..

Image
ಜೈ ಶೇಗುಣಸಿ ಸುದ್ದಿ.. ನಾವು ನಂಬಿದ ಗುರು ಎಂದೂ ನಮ್ಮ ಕೈ ಬಿಡುವುದಿಲ್ಲ. ನಮ್ಮನ್ನು ಕಷ್ಟದಿಂದ ಪಾರುಮಾಡುವ ಶಕ್ತಿ ಗುರುವಿಗೆ ಇದೆ ಎಂದು ಇಂಚಗೇರಿ ಆಧ್ಯಾತ್ಮ ಆಶ್ರಮದ ಪೀಠಾಧಿಪತಿಗಳಾದ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಬೆಂಗಳೂರಿನ ಮಂತ್ರಿ ಮಾಲ್ ಎದುರು ಶ್ರೀ ಗುಂಡುರಾವ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಶ್ರೀ ಮಾಧವಾನಂದ ಮಹಾರಾಜರ ಪುಣ್ಯಸ್ಮರಣೆ ಹಾಗೂ ಪಂಪಕವಿ ರಾಮಪ್ಪ ಬೆಳಗಲಿ ರವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು, ಗುರುವಿನ ಕೃಪೆವೊಂದಿದ್ದರೆ ಮುಕ್ತಿ ಸಾಧ್ಯ ಎಂದರು. ಸಾನಿಧ್ಯ ವಹಿಸಿದ್ದ ಅಥಣಿ ಭೂ ಕೈಲಾಸ ಮಂದಿರದ ಶ್ರೀ ಮಹಾದೇವ ಮಹಾರಾಜರು, ಮಾಧವಾನಂದ ಮಹಾರಾಜರ ಜೀವನದ ಘಟನೆಗಳನ್ನು ಬಿಚ್ಚಿಟ್ಟರು. ಕಾರ್ಯಕ್ರಮದಲ್ಲಿ ಕಕಮರಿಯ ತಾರಾಚಂದ ಮಹಾರಾಜರು, ಹೋಮಿಯೋಪತಿ ವೈದ್ಯ ಡಾ. ರುದ್ರೇಶ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಇಂಡಿ ಶಾಸಕ ಯಶವಂತಗೌಡ, ಕ್ರಾಂತಿವೀರ ಮಹಾದೇವರು ಚಿತ್ರದ ನಿರ್ದೇಶಕ ಓಂ ಸಾಯಿಪ್ರಕಾಶ್, ನಟರಾದ ಶ್ರೀ ರಾಮ್ ಕುಮಾರ್, ಶ್ರೀ ಶ್ರೀಶೈಲ ನಾರಗೊಂಡ ರವರು ಪಾಲ್ಗೊಂಡಿರುವುದು.

ಜೈ ಶೇಗುಣಸಿ ದಿನದ ಸುದ್ದಿ.. ದಿ: 10-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 10-06-18 ** ಸಾಲಮನ್ನಾ ಮಾಡಲು 1ತಿಂಗಳು ಗಡುವು, ರೈತರ ಸಾಲಮನ್ನಾ ಕುರಿತು ಮಾತು ತಪ್ಪದಿರಿ- ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷ್ಮಣ ಸವದಿ. ** ಬಜೆಟ್ ಮಂಡನೆ ಬಳಿಕ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಯಡಿಯೂರಪ್ಪ. ** 15ದಿನದಲ್ಲಿ ಸಾಲಮನ್ನಾ ರೂಪುರೇಷ ಸಿದ್ದ, ಬಿಜೆಪಿಯವರು ಸ್ವಲ್ಪ ತಾಳ್ಮೆಯಿಂದ ಇರಿ- ಕುಮಾರಸ್ವಾಮಿ. ** ಭಾರತೀಯರಿಗೆ ಅಪಮಾನ: ಪ್ರಿಯಾಂಕಾ ಛೋಪ್ರಾ ವಿರುದ್ಧ ಹಿಂದುತ್ವ ಸಂಘಟನೆ ಪ್ರಮುಖರ ಪ್ರತಿಭಟನೆ. ** ಶಾಂಘೈ ಶೃಂಗ ಸಭೆ: ಕ್ಯುಂಗ್ಡಾವೋ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷರೊಂದಿಗೆ ಭಯೋತ್ಪಾದನೆ ಕುರಿತು ಚರ್ಚೆ. ** ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಚಿವ ಸ್ಥಾನದ ಬಗ್ಗೆ ಚರ್ಚಿಸಿದ ಎಂ ಬಿ ಪಾಟೀಲ. ** ಇನ್ನು 6ಜನ ಶಾಸಕರಿಗೆ ಸಚಿವ ಸ್ಥಾನದ ಅವಕಾಶ ಇದೆ- ಪರಮೇಶ್ವರ್.

ಜೈ ಶೇಗುಣಸಿ ದಿನದ ಸುದ್ದಿ.. ದಿ- 09-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ- 09-06-18 ** ಸಮ್ಮಿಶ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆಗೆ ತೆರೆ. ** ಆದೇಶ ಪಾಲಿಸದ್ದಕ್ಕೆ ಸಿಎಂ ಗರಂ.. ಆಯುಕ್ತರಿಗೆ ಹೆಚ್‌ಡಿಕೆ ಖಡಕ್ ವಾರ್ನಿಂಗ್. ** ವಿವಾದಾತ್ಮಕ ಹೇಳಿಕೆ ನೀಡಬೇಡಿ- ಯತ್ನಾಳ್ ಗೆ ಯಡಿಯೂರಪ್ಪ ಸಲಹೆ. ** ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ ಭಾರತವನ್ನು ವಿಭಜನೆ ಮಾಡುತ್ತೇವೆ- ನಿಷೇಧಿತ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್. ** ಶಾಮನೂರು ಶಿವಶಂಕರಪ್ಪಗೆ ತಪ್ಪಿದ ಸಚಿವ ಸ್ಥಾನ- ರಂಭಾಪುರಿ ಶ್ರೀ ಅಸಮಾಧಾನ. ** ನಾನು ಏಕಾಂಗಿಯಲ್ಲ, ನನ್ನ ಜೊತೆ 20ಜನ ಶಾಸಕರಿದ್ದಾರೆ- ಎಂ. ಬಿ. ಪಾಟೀಲ. ** ಬೀದರ್ ನಲ್ಲಿ ಭಾರೀ ಮಳೆ: ಸಂಪರ್ಕ ಕಳೆದುಕೊಂಡು ಒದ್ದಾಡುತ್ತಿದ್ದಾರೆ  ನಿಡೋದಾ ಗ್ರಾಮಸ್ಥರು ** ಕ್ರೀಡಾಳುಗಳ ಆದಾಯದ ಮೂರನೇ ಒಂದು ಭಾಗ ಕೇಳಿದ ಹರಿಯಾಣ ಸರ್ಕಾರದ ವಿರುದ್ಧ ಆಕ್ರೋಶ

ನೂತನ ಸರ್ಕಾರದಲ್ಲಿ ಯಾರ್ಯಾರಿಗೆ ಯಾವ ಖಾತೆ...

ಜೈ ಶೇಗುಣಸಿ ಸುದ್ದಿ.. * ಹೆಚ್. ಡಿ.ಕುಮಾರ ಸ್ವಾಮಿ - ಮುಖ್ಯಮಂತ್ರಿ  - ಹಣಕಾಸು, ಅಬಕಾರಿ, ಗುಪ್ತಚರ ಇಲಾಖೆ, ಇಂಧನ, ಸಾರ್ವಜನಿಕ ಉದ್ದಿಮೆ - ಜವಳಿ ಖಾತೆ, ಸಚಿವಾಲಯ ವ್ಯವಹಾರ, ವಾರ್ತಾ ಮತ್ತು ಪ್ರಸಾರ ಇಲಾಖೆ, ಯೋಜನಾ ಮತ್ತು ಸಂಖ್ಯಾ, ಮೂಲಭೂತ ಸೌಕರ್ಯ * ಡಾ.ಜಿ.ಪರಮೇಶ್ವರ್  : ಉಪ ಮುಖ್ಯಮಂತ್ರಿ, ಗೃಹ ಖಾತೆ, ಬೆಂಗಳೂರು ಅಭಿವೃದ್ಧಿ * ಆರ್.ವಿ.ದೇಶಪಾಂಡೆ :  ಕಂದಾಯ , ಕೌಶಲ್ಯಾಭಿವೃದ್ಧಿ * ಹೆಚ್.ಡಿ.ರೇವಣ್ಣ: ಲೋಕೋಪಯೋಗಿ * ಕೆ.ಜೆ.ಜಾರ್ಜ್ - ಬೃಹತ್ ಕೈಗಾರಿಕೆ, ಐಟಿ ಬಿಟಿ * ಡಿ.ಕೆ.ಶಿವಕುಮಾರ್ -  ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ * ಬಂಡೆಪ್ಪ ಕಾಶೆಂಪೂರ್ - ಸಹಕಾರ , * ಶಿವಶಂಕರ್ ರೆಡ್ಡಿ - ಕೃಷಿ ಖಾತೆ * ಕೃಷ್ಣ ಬೈರೇಗೌಡ :  ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್,  ಕಾನೂನು ಮತ್ತು ಸಂಸದೀಯ ವ್ಯವಹಾರ * ಯು.ಟಿ.ಖಾದರ್ - ನಗರಾಭಿವೃದ್ಧಿ [ಬಿಬಿಎಂಪಿ ಹೊರತು ಪಡಿಸಿ] , ವಸತಿ * ಜಮೀರ್ ಅಹ್ಮದ್ - ಅಹಾರ ಮತ್ತು ನಾಗರಿಕ ಪೂರೈಕೆ , ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ * ಶಿವನಾಂದ್ ಪಾಟೀಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ * ವೆಂಕಟರಮಣಪ್ಪ - ಕಾರ್ಮಿಕ * ಜಿ.ಟಿ.ದೇವೇಗೌಡ - ಉನ್ನತ ಶಿಕ್ಷಣ * ರಾಜಶೇಖರ್ ಪಾಟೀಲ್ - ಗಣಿ ,ಭೂ ವಿಜ್ಞಾನ * ಆರ್.ಶಂಕರ್ - ಅರಣ್ಯ, ಪರಿಸರ, ಜೀವವೈವಿದ್ಯ * ಸಾ.ರಾ.ಮಹೇಶ್-ಪ್ರವಾಸೋದ್ಯಮ, ರೇಶ್ಮೆ * ಡಿ.ಸಿ.ತಮ್ಮಣ್ಣ - ಸಾರಿಗೆ * ಸಿ.ಪ...

ಎಂಬೆಸ್ಸಿ ಟೆಕ್‌ ವಿಲೇಜ್‌ ಸಾಫ್ಟ್‌ವೇರ್‌ ಕಚೇರಿಗೆ ಬಾಂಬ್‌ ಬೆದರಿಕೆ ಕರೆ..

Image
ಜೈ ಶೇಗುಣಸಿ ಸುದ್ದಿ  ಸಿಲಿಕಾನ್‌ ಸಿಟಿ, ರಾಜಧಾನಿಯಲ್ಲಿರುವ ಎಂಬೆಸ್ಸಿ ಟೆಕ್‌ ವಿಲೇಜ್‌ನಲ್ಲಿ ಸಾಫ್ಟ್‌ವೇರ್‌ ಕಂಪನಿಯೊಂದಕ್ಕೆ ಶುಕ್ರವಾರ ಬಾಂಬ್‌ ಬೆದರಿಕೆ ಕರೆ ಬಂದಿದ್ದು, ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಾಡುಬೀಸನಹಳ್ಳಿಯಲ್ಲಿರುವ ಎಂಬೆಸ್ಸಿ ಟೆಕ್ ವಿಲೇಜ್‌ನಲ್ಲಿರುವ ಸಿಸ್ಕೋ ಸಾಫ್ಟ್‌ವೇವೇರ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇಂಟರ್‌ನೆಟ್‌ ಕರೆ ಮಾಡಿದ ದುಷ್ಕರ್ಮಿ ಹತ್ತು ನಿಮಿಷಗಳಲ್ಲಿ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಆತ ಹಿಂದಿಯಲ್ಲಿ ಮಾತನಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಮುಂಜಾಗ್ರತಾ ಕ್ರಮವಾಗಿ ಕಚೇರಿಯಲ್ಲಿದ್ದ ಸಾವಿರಾರರು ಸಿಬ್ಬಂದಿಯನ್ನು ಕಟ್ಟದಿಂದ ಹೊರಗೆ ಕಳುಹಿಸಲಾಯಿತು.

ಸಾವಿನ ನಮನದಲ್ಲೂ ಎಚ್‌ಡಿಕೆ ರಾಜಕೀಯ...

Image
ಜೈ ಶೇಗುಣಸಿ ಸುದ್ದಿ.. ಸಮಯ ಸಂದರ್ಭಗಳ ಸೂಕ್ಷ್ಮತೆಯನ್ನು ಅರಿಯದೇ ಇಳಕಲ್‌ ಸ್ವಾಮೀಜಿಯವರಿಗೆ ಅಂತಿಮ ನಮನ ಸಲ್ಲಿಸಲು ಹೋಗಿದ್ದನ್ನು ದುಂದು ವೆಚ್ಚ ಎಂಬ ಹೇಳಿಕೆ ಎಷ್ಟು ಸರಿ ಎಂದು ಸಿಎಂ ಕುಮಾರಸ್ವಾಮಿಯವರನ್ನು ಪ್ರಶ್ನಿಸಿ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗ ಪತ್ರ ಬರೆದಿದ್ದಾರೆ. 'ಇಳಕಲ್‌ ಜಿಲ್ಲೆಯ ಮಹಾಂತ ಶಿವಯೋಗಿಗಳ ಅಂತಿಮ ನಮನಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದು ದುಂದು ವೆಚ್ಚ' ಎಂಬ ಸಿಎಂ ಎಚ್‌.ಡಿ.ಕುಮಾರಸ್ವಾವಿಹೇಳಿಕೆಗೆ ''ಆ ಪ್ರವಾಸ ವೆಚ್ಚವನ್ನು ಬೇಕಾದರೆ ನಾನೇ ಭರಿಸುತ್ತೇನೆ,'' ಎಂದು ತಿರುಗೇಟು ನೀಡಿದ್ದಾರೆ. ''ಅಂತಿಮ ನಮನಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಸೂಚಿಸಿದ್ದರು. ಮುಖ್ಯ ಕಾರ್ಯದರ್ಶಿಗಳಿಗೂ ಮಾಹಿತಿ ನೀಡಲಾಗಿದೆ. ಮೃತರ ನಮನ ವಿಚಾರದಲ್ಲಿ ಹಗುರವಾಗಿ ಮಾತನಾಡಿರುವುದು ನನಗೆ ಖೇದವನ್ನುಂಟು ಮಾಡಿದೆ. ಸಂದರ್ಭಗಳ ಸೂಕ್ಷ್ಮ ಅರಿಯದೇ ಒಬ್ಬ ರೈತ ಮತ್ತು ಧರ್ಮಗುರುಗಳ ಅಂತಿಮ ನಮನದ ವಿಚಾರದಲ್ಲೂ ರಾಜಕೀಯ ಯೋಚನೆ ಮಾಡಿದ್ದು ಸರಿಯೇ,'' ಎಂದು ಪ್ರಶ್ನಿಸಿದ್ದಾರೆ. ''ನಿಮ್ಮ ವೈಯಕ್ತಿಕ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಲು ಈ ಹೇಳಿಕೆ ನೀಡಿರುವುದು ನನಗೆ ನೋವುಂಟು ಮಾಡಿದೆ. ವೈಯಕ್ತಿಕವಾಗಿ ನಿಮಗೆ ಸ್ವಾಮೀಜಿಗಳ ಬಗ್ಗೆ ಗೌರವವಿಲ್ಲದೇ ಇರಬಹುದು. ಅಧಿಕಾರ ವಹಿಸಿಕೊಂಡ ತಕ್ಷಣ ಸಿರಿ...

ಜೈ ಶೇಗುಣಸಿ ದಿನದ ಸುದ್ದಿ .. ದಿ:08-06-18

ಜೈ ಶೇಗುಣಸಿ ದಿನದ ಸುದ್ದಿ ದಿ:08-06-18 ** ಮುಂದುವರೆದ ಕಾಂಗ್ರೆಸ್ ಅತೃಪ್ತ ಸಚಿವರ ಕಾರ್ಯಕರ್ತರ ಪ್ರತಿಭಟನೆ. ** ನಾನು ಯಾರ ಮೇಲೂ ಸೇಡು  ತೀರಿಸಿಕೊಂಡಿಲ್ಲ- ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸ್ಪಷ್ಟನೆ. ** ಸತೀಶ್​ ಜಾರಕಿಹೊಳಿ ಸಣ್ಣ ಹುಡುಗನಲ್ಲ; ಮನವೊಲಿಸುವ ಅಗತ್ಯವಿಲ್ಲ- ರಮೇಶ್ ಜಾರಕಿಹೊಳಿ ** ನಾನು ಸೆಕೆಂಡ್​ ಕ್ಲಾಸ್​ ಸಿಟಿಜನ್​ ಅಲ್ಲ, ಎರಡನೇ ಹಂತದ ಸಚಿವ ಸ್ಥಾನ ಬೇಡ- ಎಂ.ಬಿ.ಪಾಟೀಲ್​ ** ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಬಿ.ಸಿ. ಪಾಟೀಲ್ ** ಮೋದಿ ಪ್ರಿಯರು ನಮಗೆ ಮತ ನೀಡುತ್ತಾರೆ: ಆಯನೂರು ಮಂಜುನಾಥ್‌ ** ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿರುವುದು ಶುದ್ಧ ಸುಳ್ಳು. ರಾಹುಲ್‌ ಗಾಂಧಿ ಪ್ರಬುದ್ಧತೆ ತೋರಬೇಕಾಗಿದೆ- ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ. ** ನಾನಿಲ್ಲಿರುವುದು ರಾಷ್ಟ್ರ ಮತ್ತು ರಾಷ್ಟ್ರೀಯತೆ ಬಗ್ಗೆ ಮಾತನಾಡಲು-ಆರ್ ಎಸ್ ಎಸ್ ಸಭೆಯಲ್ಲಿ ಪ್ರಣಬ್​ ಮುಖರ್ಜಿ. ** ಬಾದಾಮಿ ಜನತೆಗೆ ಸದಾ ಋಣಿ- ಮಾಜಿ ಸಿಎಂ ಸಿದ್ದರಾಮಯ್ಯ. ** ಸಾಲಮನ್ನಾ ವಿಚಾರದಲ್ಲಿ ಸಿಎಂ ರೈತರ ಕಿವಿಗೆ ಹೂವು ಇಡ್ತಿದ್ದಾರೆ- ಶ್ರೀರಾಮುಲು. ** ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರ ಬಿಡುಗಡೆಗೆ ಕಪ್ಪು ಬಾವುಟ, ರಾಜ್ಯದಲ್ಲಿ ಕಂಗಾಲಾದ 'ಕಾಲಾ'.

ಹಿಂದೂ ಪರ ಕೆಲ್ಸ ಮಾಡಿ,ಸಾಬ್ರ್‌ ಪರವಾಗಿ ಅಲ್ಲ:ಶಾಸಕ ಯತ್ನಾಳ್‌ ವಿವಾದ...

Image
ಜೈ ಶೇಗುಣಸಿ ಸುದ್ದಿ ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಕೋಮ ವಿಚಾರದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ  ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಸಂಘಟನೆಯೊಂದರ ವತಿಯಿಂದ ನಡೆದ ಶಿವಾಜಿ ಮಹಾರಾಜರ ಕುರಿತಾಗಿನ ಸಮಾರಂಭದ ವೇದಿಕೊಯಂದರಲ್ಲಿ ಮಾತನಾಡಿದ ಯತ್ನಾಳ್‌ ಅವರು ಮಾಡಿರುವ ವಿವಾದಾತ್ಮಕ ಭಾಷಣದ ವಿಡಿಯೋ ಬಹಿರಂಗವಾಗಿದ್ದು ವೈರಲ್‌ ಆಗಿದೆ. 'ಸಾಬ್ರ್‌ಗ್‌ ನಾನ್‌ ಮೊದಲೇ ಹೇಳಿದ್ದೆ ವೋಟ್‌ ಹಾಕೋದ್‌ ಬ್ಯಾಡಿ ಅಂತಾ.ನಮ್ಮವರಿಗೆಲ್ಲಾ  ತಾಕೀತ್‌ ಮಾಡಿದ್ದೆ ,ಕಾರ್ಪೋರೇಟರ್‌ಗಳನ್ನು ಕರೆದು ಹೇಳಿದ್ದೆ, ಇನ್ನು ನೀವು ಹಿಂದೂ ಪರ ಕೆಲ್ಸ ಮಾಡ್ಬೇಕು, ಸಾಬ್ರ್‌ ಪರವಾಗಿ ಅಲ್ಲ. ನನ್‌ ಆಫೀಸ್‌ ಮುಂದೆ ಬುರ್ಖಾ,ಟೋಪಿ  ಹಾಕ್ದೋರು ತಪ್ಪಿನೂ ಬರ್ಬಾರ್ದು ಅಂತಾ ಹೇಳಿದ್ದೇನೆ' ಎಂದರು. 'ವಿಜಯಪುರ ನಗರದಲ್ಲಿ ನನಗ್‌ ವೋಟ್‌ ಹಾಕ್‌ದೋರು ಯಾರು? ಸಾಬ್‌ರಿಗೆ ಕೆಲ್ಸ ಮಾಡುವುದು ಬ್ಯಾಡ' ಎಂದಿದ್ದಾರೆ. ಹಿಂದೂ ಪರ ಮಾತನಾಡುವುದೇ ತಪ್ಪಾ ?  ವಿವಾದಾತ್ಮಕ ಹೇಳಿಕೆ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯತ್ನಾಳ್‌ 'ದೇಶದಲ್ಲಿ ಹಿಂದೂ ಪರ ಮಾತನಾಡುವುದು ತಪ್ಪಾ' ಎಂದು ಪ್ರಶ್ನಿಸಿದರು. 'ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ದೇಶ ವಿರೋಧಿ ಹೇಳಿಕೆ ಕೊಟ್ಟರೆ ಅವರ ವಿರುದ್ಧ ಕ್ರಮವಿಲ್ಲ. ಓವೈಸಿ ಮಾತನಾಡಿದರೆ ಸರಿ ನಾನು ಮಾತನಾಡಿದರೆ ತಪ್ಪೇ' ಎಂದು ಪ...

ಜೈ ಶೇಗುಣಸಿ ದಿನದ ಸುದ್ದಿ... ದಿ|| 07-06-18

ಜೈ ಶೇಗುಣಸಿ ದಿನದ ಸುದ್ದಿ... ದಿ|| 07-06-18 ** ಪಕ್ಷೇತರ ಸೇರಿ ಕಾಂಗ್ರೆಸ್​ನ 15 ಶಾಸಕರು ಮತ್ತು ಜೆಡಿಎಸ್​ನ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ. ** ಸಚಿವ ಸಂಪುಟ ರಚನೆ- ಕಾಂಗ್ರೆಸ್ ಜೆಡಿಎಸ್ ನಲ್ಲಿ ಭುಗಿಲೆದ್ದ ಭಿನ್ನಮತ. ** ಶಾಮನೂರು ಶಿವಶಂಕರಪ್ಪರಿಗೆ ತಪ್ಪಿದ ಸಚಿವ ಸ್ಥಾನ- ಕೈ ಕಾರ್ಪೊರೇಟರ್ ರಾಜೀನಾಮೆ ** ರಾಜೀನಾಮೆ ಬಗ್ಗೆ 3ದಿನದಲ್ಲಿ ನಿರ್ಧಾರ- ಎಂ. ಬಿ. ಪಾಟೀಲ. ** ಸ್ನೇಹಿತ ಡಿಕೆಶಿ ಸಿಎಂ ಕುರ್ಚಿಯಲ್ಲಿ ಕೂರುವುದನ್ನು ನೋಡುವ ಆಸೆಯಿತ್ತು- ನವರಸ ನಾಯಕ ಜಗ್ಗೇಶ್ ** ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪುವ ರೀತಿ ಕೆಲಸ ಮಾಡಿ-ಸಿಎಂ ಕುಮಾರಸ್ವಾಮಿ. ** ಇಂದಿನಿಂದ 5ದಿನಗಳ ಕಾಲ ಸಿದ್ದರಾಮಯ್ಯ ಬಾದಾಮಿ ಪ್ರವಾಸ. ** ಗೃಹ ಮತ್ತು ವಾಹನ ಸಾಲದ ಬಡ್ಡಿ ಹೆಚ್ಚಿಸಿದ ಆರ್ ಬಿ ಐ ** ಕಲಾಂ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ಕೂಟ ರದ್ದು! ** ಕಾಲ ಚಿತ್ರ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌.

ನೂತನ ಸಮ್ಮಿಶ್ರ ಸರ್ಕಾರದ ಸಚಿವರ ದೂರವಾಣಿ ಸಂಖ್ಯೆ ಬೇಕೇ..? ಇಲ್ಲಿದೆ ನೋಡಿ....

Image
ಜೈ ಶೇಗುಣಸಿ ಸುದ್ದಿ

ಜೈ ಶೇಗುಣಸಿ ದಿನದ ಸುದ್ದಿ.. ದಿ|| 06-06-18

ಜೈ ಶೇಗುಣಸಿ ದಿನದ ಸುದ್ದಿ.. ದಿ|| 06-06-18 ** ಪ್ರತಿ ಜಿಲ್ಲೆಯಲ್ಲೂ ಜನತಾ ದರ್ಶನಕ್ಕೆ ಚಿಂತನೆ- ಮುಖ್ಯಮಂತ್ರಿ. ** ಜಯನಗರ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್​ ಅಭ್ಯರ್ಥಿ ಕಾಳೇಗೌಡ. ** ಉಪಸಭಾಪತಿ ಹುದ್ದೆ ಒಪ್ಪಿಕೊಳ್ಳುವುದಿಲ್ಲ- ಎ.ಟಿ.ರಾಮಸ್ವಾಮಿ. ** ಕಾಲ ಚಿತ್ರ ಪ್ರದರ್ಶನ: ಅಹಿತಕರ ಘಟನೆಯಾಗದಂತೆ ತಡೆಯಲು ಹೈಕೋರ್ಟ್‌ ಸೂಚನೆ. ** ಕಾಲಾ ಚಿತ್ರ ಬಿಡುಗಡೆ ಮಾಡದಿರುವುದೇ ಸೂಕ್ತ- ಸಿಎಂ ಕುಮಾರಸ್ವಾಮಿ. ** ಮುಂದಿನ ಚುನಾವಣೆಗೆ ರಾಮ ಮಂದಿರ ವಿಷಯ ಕೈಬಿಟ್ಟರೆ ಬಿಜೆಪಿಗೆ ಬಲು ದುಬಾರಿಯಾದೀತು- ಅಯೋಧ್ಯೆ ಅರ್ಚಕ ಎಚ್ಚರಿಕೆ. ** ಸರ್ಕಾರದಿಂದ ರೈತರಿಗೆ ಶಾಕ್- ರೈತರಿಂದ ಪಡೆಯುವ ಹಾಲಿನ ದರದಲ್ಲಿ 2ರೂ.ಕಡಿತ. ** ಮೇಲ್ಮನೆ ಸದಸ್ಯರಿಗೆ ಯಾವುದೇ ಸಚಿವ ಸ್ಥಾನ ಇಲ್ಲ- ಜೆಡಿಎಸ್. ** ಇಂದು ಮೈತ್ರಿ ಸರ್ಕಾರದ ಸಚಿವರ ಪ್ರಮಾಣ ವಚನ. ** ಸಮ್ಮಿಶ್ರ ಸರಕಾರದಲ್ಲಿ ನನಗೆ ಸಚಿವ ಸ್ಥಾನ ಇಲ್ಲ- ಬಸವರಾಜ ಹೊರಟ್ಟಿ. ** ಕ್ರಿಕೆಟ್: ಅನಿಲ್ ಕುಂಬ್ಳೆ ಬೌಲಿಂಗ್ ವೀಕ್ಷಿಸಿ  ಲೆಗ್ ಸ್ಪಿನ್ ಪಾಠ ಕಲಿತೆ- ರಷೀದ್.

ನೂತನ ಸರ್ಕಾರದಿಂದ ನಾಡಿನ ರೈತರಿಗೆ ಮೊದಲ ಶಾಕ್...

Image
ಜೈ ಶೇಗುಣಸಿ ಸುದ್ದಿ... ನೂತನ ಸಮ್ಮಿಶ್ರ ಸರ್ಕಾರ ನಾಡಿನ ರೈತರಿಗೆ ಮೊದಲ ಶಾಕ್ ನೀಡಿದ್ದು, ಹಾಲಿನ ಖರೀದಿ ದರವನ್ನು 2 ರೂ. ಕಡಿತಗೊಳಿಸಲಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ನಾನಾ ಒಕ್ಕೂಟಗಳು ಹಾಲು ಉತ್ಪಾದಕರಿಂದ ಖರೀದಿಸುವ ದರದಲ್ಲಿ ಲೀಟರ್ ಗೆ 2 ರೂ. ವರೆಗೆ ಕಡಿತ ಮಾಡಿದ್ದು, ಜೂನ್ 1 ರಿಂದಲೇ ಜಾರಿಗೆ ಬಂದಿದೆ. ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಹಾಲು ಉತ್ಪಾದನೆ ಹೆಚ್ಚಳವಾಗುತ್ತದೆ. ಮೇ-ಜೂನ್ ನಲ್ಲಿ ಅತ್ಯಧಿಕ ಪ್ರಮಾಣದ ಹಾಲು ಉತ್ಪತ್ತಿಯಾಗುತ್ತಿರುವ ಕಾರಣ ಹಾಲು ಒಕ್ಕೂಟಗಳಿಗೆ ಹೆಚ್ಚುವರಿ ಹಾಲು ಮಾರಾಟ ಮಾಡಲು ಆಗುವುದಿಲ್ಲ. ಈ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ಮಾರಾಟ ಮಾಡಬೇಕು ಆದರೆ ಹಾಲಿನ ಪುಡಿಗೆ ಬೇಡಿಕೆ ಇಲ್ಲ. ಹಾಗಾಗಿ ದರ ಇಳಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ ಮಾಡಬೇಕೆಂದು ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ಕೊಡುತ್ತಿದೆ. ಆದರೆ ಹೆಚ್ಚು ಉತ್ಪಾದನೆಯಾದರೆ ಹಾಲು ನಿರ್ವಹಣೆ ಮಾಡುವುದು ಕಷ್ಟ ಎಂದು ಹಾಲು ಒಕ್ಕೂಟಗಳು ದರ ಇಳಿಕೆ ಮಾಡಿರುವುದು ಹೈನುಗಾರಿಕೆ ನೆಚ್ಚಿಕೊಂಡಿರುವ ಕುಟುಂಬಗಳಿಗೆ ಹೊಡೆತ ಬಿದ್ದಿದೆ. ಬೆಂಗಳೂರು ಹಾಲು ಒಕ್ಕೂಟದಲ್ಲಿ 2 ರೂ. ಕಡಿತ ಮಾಡಲಾಗಿದೆ. ಇನ್ನೂ ಕೆಲವು ಕಡೆ 1.50-2 ರೂ. ವರೆಗೆ ದರ ಕಡಿತ ಮಾಡಿವೆ. ಆದರೆ, ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದ...

ಕೇಂದ್ರದಿಂದ ಕಬ್ಬು ಬೆಳೆಗಾರರಿಗೆ ಬಂಪರ್‌ ಆಫರ್‌: 8ಸಾವಿರ ಕೋಟಿ ಪ್ಯಾಕೇಜ್‌ ಘೋಷಣೆ..

Image
ಜೈ ಶೇಗುಣಸಿ ಸುದ್ದಿ.. ಉತ್ತರ ಪ್ರದೇಶ ಸೇರಿದಂತೆ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಭಾರತೀಯ ಜನತಾಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರೈತರ ಹಿತ ಕಾಪಾಡಲು ಮುಂದಾಗಿದೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ಕಬ್ಬು ಬೆಳೆಗಾರರಿಗೆ ಬಂಪರ್‌ ಪ್ಯಾಕೇಜ್‌ ಘೋಷಣೆ ಮಾಡಿದೆ. ಈ ಮೂಲಕ ದೇಶಾದ್ಯಂತ ಇರುವ ಕಬ್ಬು ಬೆಳೆಗಾರರ ರಕ್ಷಣೆಗೆ ತಡವಾದರೂ ಧಾವಿಸಿದೆ. ಕಳೆದ ನಾಲ್ಕು ತಿಂಗಳಿನಿಂದ ಕಬ್ಬು ಬೆಳೆಗಾರರ ಕುರಿತಾಗಿ ಸಾಕಷ್ಟು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ನೂತನ ಪ್ಯಾಕೇಜ್‌ ಜಾರಿ ಮಾಡಿದೆ. ಎಂಟು ಸಾವಿರ ಕೋಟಿಯ ಈ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಮುಂದಾಗಿದೆ. ಮಾರುಕಟ್ಟೆ ಅಸಮತೋಲನ ಸರಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಸಕ್ಕರೆ ತಯಾರಿಕೆಯಲ್ಲಿ ಬ್ರೆಜಿಲ್‌ ನಂತರದ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಐದು ಕೋಟಿ ಕಬ್ಬು ಬೆಳೆಗಾರರಿದ್ದಾರೆ. 2017-18 ನೇ ಸಾಲಿನಲ್ಲಿ ಅತೀ ಹೆಚ್ಚು ಸಕ್ಕರೆ ತಯಾರಿಕೆ ಭಾರತದಲ್ಲಾಗಿದೆ. ಇದನ್ನು ಗಮನಿಸಿರುವ ಕೇಂದ್ರ ಇದೀಗ ಈ ಪ್ಯಾಕೇಜ್‌ ಮೂಲಕ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಇನ್ನಷ್ಟು ಉತ್ತೇಜನ ನೀಡುವ ಇರಾದೆ ಹೊಂದಿದೆ. ಈ ಪ್ಯಾಕೇಜ್‌ ತುರ್ತು ಸಂಗ್ರಹ ಸೇರಿದಂತೆ ಹಲವಾರು ವಿಷಯಗಳಿಗೆ ಸಹಕಾರ ನೀಡಲಿದೆ. ಈ ತುರ್ತು ಸಂಗ್ರಹ ನಿರ್ಮಾಣಕ್ಕೆ ಹಣವನ್ನು ನೇರವಾಗಿ ರೈತರಿಗೆ ...

ಜೈ ಶೇಗುಣಸಿ ದಿನದ ಸುದ್ದಿ...... ದಿ-05-06-18

ಜೈ ಶೇಗುಣಸಿ ದಿನದ ಸುದ್ದಿ ದಿ-05-06-18 ** ಮಳೆ ಬಂದಮೇಲೆಯೇ ಎಚ್ಚರವಾಗುತ್ತದಾ ನಿಮಗೆ: ಎಚ್​ಡಿಕೆ, ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ತರಾಟೆ. ** ಮೋದಿ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ: ಸದಾನಂದಗೌಡ. ** ಜೂನ್ 6ರಂದು ಸಂಪುಟ ಫೈನಲ್- ಡಿಸಿಎಂ ಪರಮೇಶ್ವರ್. ** ವಿಧಾನ ಪರಿಷತ್​ಗೆ 11 ಸದಸ್ಯರು ಅವಿರೋಧ ಆಯ್ಕೆ. ** 2019 ಲೋಕಸಭಾ ಚುನಾವಣೆ: ಬಿಜಿಪಿ ಬೆಂಬಲಿಸುವಂತೆ ಶಾರಿಂದ ರಾಮದೇವ್ ಭೇಟಿ. ** ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಟಂಟಂ-ಬುಲೆರೋ ವಾಹನ ಡಿಕ್ಕಿ. 10ಮಕ್ಕಳ ಸ್ಥಿತಿ ಗಂಭೀರ. ** ಹೈಕೋರ್ಟ್​ ಸೂಚನೆಯಂತೆ ಮುಷ್ಕರ ಕೈಬಿಟ್ಟ ಮೆಟ್ರೋ ನೌಕರರು. ** ಜನಪ್ರಿಯ ಕೋಡರ್ ಹ್ಯಾಂಗ್ ಔಟ್ ಗಿಟ್ ಹಬ್ ನ್ನು 7.5 ಬಿಲಿಯನ್ ಡಾಲರ್ ಗೆ ಖರೀದಿಸಿದ ಮೈಕ್ರೋಸಾಫ್ಟ್. ** ಏಷ್ಯಾ ಕಪ್ ಟಿ20: ಭಾರತದ ಮಹಿಳಾ ತಂಡಕ್ಕೆ ಎರಡನೇ ಗೆಲುವು.

ಮಳೆ ಬಂದಮೇಲೆಯೇ ಎಚ್ಚರವಾಗುತ್ತದಾ ನಿಮಗೆ: ಎಚ್​ಡಿಕೆ

ಜೈ ಶೇಗುಣಸಿ ಸುದ್ದಿ.. ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ತರಾಟೆ  ಕೆಲಸಗಳೆಲ್ಲ ಅರ್ಧಕ್ಕೆ ನಿಲ್ಲಲು ಕಾರಣವೇನು? ಪ್ರತಿವರ್ಷ ಮಳೆಬಂದು ನೀರು ನಿಲ್ಲುತ್ತದೆ. ಆಗ ಮಾತ್ರ ನಿಮಗೆ ಎಚ್ಚರ ಆಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳೊಂದಿಗೆ ನಡೆಸಿದ ಹಾನಿ ತಡೆ ಸಭೆಯಲ್ಲಿ ಮಾತನಾಡಿ, ನೀರು ನಿಲ್ಲುವ ಜಾಗಗಳು ಗೊತ್ತಿದ್ದರೂ ಅದನ್ನು ಉಳಿದ ದಿನ ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ. ರಾಜಕಾಲುವೆ ನಕ್ಷೆ ಬದಲಾಗಲು ಕಾರಣವೇನು? ಒತ್ತುವರಿ ತೆರವು ಕೈಬಿಟ್ಟಿದ್ದು ಯಾವ ಕಾರಣಕ್ಕೆ. ಕಾರ್ಯಾಚರಣೆ ವೇಳೆ ಶ್ರೀಮಂತರ ಮನೆಗಳು ಬಂದ ತಕ್ಷಣ ಸ್ಥಗಿತಗೊಂಡಿತಾ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಇದೆಲ್ಲ ಆಗಬಾರದು. ಮಳೆಗಾಲದಲ್ಲಿ ಎಲ್ಲಿಯೂ ನೀರು ನಿಲ್ಲಬಾರದು. ತಕ್ಷಣ ಕೆಲಸ ಆರಂಭವಾಗಬೇಕು. ಅವೈಜ್ಞಾನಿಕ ಯೋಜನೆ ಬಿಟ್ಟುಬಿಡಿ. ತಲೆಗೆ ಸ್ವಲ್ಪ ಕೆಲಸ ಕೊಡಿ ಎಂದು ಹೇಳಿದರು. ಸಭೆಯ ನಂತರ ಹೇಳಿಕೆ ನೀಡಿದ ಬಿಬಿಎಂಪಿ ಕಮಿಷನರ್​ ಮಹೇಶ್ವರ್​ ರಾವ್​, ಮಳೆಯಿಂದಾಗುವ ಹಾನಿಗಳನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದೇವೆ. 369 ಪ್ರದೇಶಗಳನ್ನು ಬರಪೀಡಿತ ಎಂದು ಗುರುತಿಸಿದ್ದು ಪರಿಹಾರ ನೀಡಲಾಗುವುದು. ಮಳೆ ನೀರು ನುಗ್ಗುವ 389 ಪ್ರದೇಶಗಳನ್ನು ಗುರುತಿಸಲಾಗಿದ್ದು ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದ...

ಐಟಿ ಪದವೀಧರರಲ್ಲಿ ಶೇ 94 ಮಂದಿಗೆ ಕೌಶಲ್ಯದ ಕೊರತೆ: ಟೆಕ್ ಮಹೀಂದ್ರಾ ಸಿಇಓ...

ಜೈ ಶೇಗುಣಸಿ ಸುದ್ದಿ.. ದೇಶದ ಒಟ್ಟಾರೆ ಎಂಜಿನಿಯರಿಂಗ್‌ ಪದವೀಧರರಲ್ಲಿ ಉತ್ತಮ ಕಂಪನಿಗಳಲ್ಲಿ ಕೆಲಸ ಪಡೆಯುವವರು ಕೇವಲ ಶೇ.6ರಷ್ಟು ಮಾತ್ರ; ಶೇ 94 ಮಂದಿ ಐಟಿ ಪದವೀಧರರೂ ಉದ್ಯೋಗಕ್ಕೆ ಅನರ್ಹರಾಗಿರುತ್ತಾರೆ ಎಂದು ಟೆಕ್‌ ಮಹೀಂದ್ರ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ. ಗುರ್ನಾನಿ ಹೇಳಿದ್ದಾರೆ.  ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್‌ ಪದವೀಧರರಲ್ಲಿ ಕೌಶಲ್ಯದ ಕೊರತೆ ಇಂದಿನ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೈಬರ್‌ ಸೆಕ್ಯುರಿಟಿ ಸೇರಿದಂತೆ ಮಾಹಿತಿ ತಂತ್ರಜ್ಞಾನದ ಅನೇಕ ವಿಭಾಗದಲ್ಲಿ ಉದ್ಯೋಗಗಳಿವೆ. ಆದರೆ ಆ ಸೀಟುಗಳನ್ನು ತುಂಬಲು ಅರ್ಹ ವ್ಯಕ್ತಿಗಳು ನಮ್ಮಲ್ಲಿ ಇಲ್ಲವಾಗಿದ್ದಾರೆ. ಒಟ್ಟಾರೆ ಎಂಜಿನಿಯರಿಂಗ್‌ ಪದವೀಧರರಲ್ಲಿ ಶೇ.96ರಷ್ಟು ಅಭ್ಯರ್ಥಿಗಳು ಐಟಿ ವಿಭಾಗದಲ್ಲಿ ಕೆಲಸ ಮಾಡಲು ಅರ್ಹರಾಗಿರುವುದಿಲ್ಲ ಎಂದು ಹೇಳಿದ್ದಾರೆ.  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈಬರ್‌ ಸೆಕ್ಯುರಿಟಿ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಎಲ್ಲ ಹೊಸ ಸಂಸ್ಥೆಗಳಿಗೆ ಭದ್ರತೆ ಒದಗಿಸುವುದು ಕಷ್ಟವಾಗುತ್ತಿದೆ. ಕೇವಲ ಪಾಸ್‌ವರ್ಡ್‌ಗಳಿಂದ ಇಂದು ಭದ್ರತೆ ಒದಗಿಸುವುದು ಕಷ್ಟಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಅಮೆರಿಕದ ಎಚ್‌-1ಬಿ ವೀಸಾ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಯೊಂದ ಐಟಿ ಸಂಸ್ಥೆ, ವೀಸಾ ವಿಚಾರದಲ್ಲಿ ತನ್ನದೇ ಆದ ಕ...

ಹೈಕೋರ್ಟ್​ ಸೂಚನೆಯಂತೆ ಮುಷ್ಕರ ಕೈಬಿಟ್ಟ ಮೆಟ್ರೋ ನೌಕರರು..

Image
ಜೈ ಶೇಗುಣಸಿ ಸುದ್ದಿ.. ಮೆಟ್ರೋ ನೌಕರರ ಸಂಘ ಹೈಕೋರ್ಟ್​ ಸೂಚನೆ ಮೇರೆಗೆ ಮುಷ್ಕರ ಕೈಬಿಟ್ಟಿದೆ. ಮುಂದಿನ 10 ದಿನಗಳವರೆಗೆ ಯಾವುದೇ ಪ್ರತಿಭಟನೆ ಮಾಡದಿರುವಂತೆ ಕೋರ್ಟ್​ ನೀಡಿರುವ ಸೂಚನೆಗೆ ಮೆಟ್ರೋ ಯೂನಿಯನ್​ ಸಹಮತ ವ್ಯಕ್ತಪಡಿಸಿದೆ. ಎಸ್ಮಾ ರದ್ದುಗೊಳಿಸುವಂತೆ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು 10 ದಿನಗಳ ಗಡುವು ನೀಡಿ ಸರ್ಕಾರ, ಬಿಎಂಆರ್​ಸಿಎಲ್​, ನೌಕರರ ಸಂಘಕ್ಕೆ ತಾಕೀತು ಮಾಡಿದೆ. ನಿಮ್ಮೆಲ್ಲರ ಭಿನ್ನಾಭಿಪ್ರಾಯಗಳಿಂದ ಜನಸಾಮಾನ್ಯರು ಸಮಸ್ಯೆ ಎದುರಿಸಬಾರದು. ಸದ್ಯಕ್ಕೆ ಮುಷ್ಕರ ಕೈಬಿಟ್ಟು ಸಂಧಾನ ಮಾಡಿಕೊಳ್ಳಿ ಎಂದು ಹೇಳಿರುವ ನ್ಯಾಯಾಲಯ ಮುಂದಿನ ಅರ್ಜಿ ವಿಚಾರಣೆಯನ್ನು ಜೂ.19ಕ್ಕೆ ಮುಂದೂಡಿದೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ !

ಜೈ ಶೇಗುಣಸಿ ಸುದ್ದಿ.. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಧಾರವಾಡ ಕರ್ನಾಟಕ ವಿವಿ ನಿರ್ಣಯ ಕೈಗೊಂಡಿದೆ. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವ ಬಗ್ಗೆ ಕುಲಸಚಿವರು ಎಲ್ಲ ವಿಭಾಗದ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಜೈ ಶೇಗುಣಸಿ ದಿನದ ಸುದ್ದಿ... 04-06-18

ಜೈ ಶೇಗುಣಸಿ ದಿನದ ಸುದ್ದಿ  ದಿ-04-06-2018 ** ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಣಯ ಕೈಗೊಂಡ ಧಾರವಾಡದ ಕರ್ನಾಟಕ ವಿವಿ. ** ಆರ್ಥಿಕ ಭದ್ರತೆ ಕಾಯ್ದುಕೊಳ್ಳಲು ಹಾಗೂ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ದುಂದು ವೆಚ್ಚವನ್ನು ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತೀರ್ಮಾನ. ** ಕಾಂಗ್ರೆಸ್ ಸಚಿವ ಸ್ಥಾನದ ಪಟ್ಟಿ ಇಂದು ಫೈನಲ್. ** ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಮೆಟ್ರೋ ನೌಕರರ ಮುಷ್ಕರ. ಮೆಟ್ರೋ ಓಡುವುದು ಡೌಟ್. ** ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ ರಾಜಿನಾಮೆ. ** ರಾಜ್ಯ ಸರಕಾರದ ವೈಫಲ್ಯ ಜನರ ಗಮನಕ್ಕೆ- ಬಿಎಸ್‌ವೈ. ** ಎಚ್​ಡಿಕೆ ಕಣ್ಣೀರಲ್ಲಿ ಕೊಚ್ಚಿಹೋಯ್ತು ನನ್ನ ನೀರಾವರಿ ಯೋಜನೆ- ಸಿ.ಪಿ.ಯೋಗೇಶ್ವರ್​. ** ಅಗ್ನಿ 5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ.

ಸಿಂಗಾಪುರದ ಆರ್ಕಿಡ್ ಗೆ ಪ್ರಧಾನಿ ನರೇಂದ್ರ ಮೋದಿ ಹೆಸರು

Image
"ಜೈ ಶೇಗುಣಸಿ" ಸುದ್ದಿ.. ಸಿಂಗಾಪುರ: ಸಿಂಗಾಪುರದಲ್ಲಿರುವ ರಾಷ್ಟ್ರೀಯ ಆರ್ಕಿಡ್ ಗಾರ್ಡನ್ ನಲ್ಲಿರುವ ವಿಶಿಷ್ಟ ಆರ್ಕಿಡ್ ಪುಷ್ಪಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರಿಡಲಾಗಿದೆ. ಸಿಂಗಾಪುರಕ್ಕೆ ಪ್ರವಾಸದಲ್ಲಿದ್ದಾಗ ಪ್ರಧಾನಿ ಮೋದಿ ಅಲ್ಲಿನ ಆರ್ಕಿಡ್ ಗಾರ್ಡನ್ ಗೆ ಭೇಟಿ ನೀಡಿದ್ದರು. ಈ ಭೇಟಿಯ ಸವಿ ನೆನಪಿಗಾಗಿ ಉಷ್ಣವಲಯದಲ್ಲಿ ಬೆಳೆವ ಆರ್ಕಿಡ್ ಪುಷ್ಪಕ್ಕೆ ’ಡೆಂಡ್ರೋಬ್ರಿಯಮ್‌ ನರೇಂದ್ರ ಮೋದಿ’  ಎಂದು ಹೆಸರನ್ನಿಡಲಾಗಿದೆ. ಈ ಕುರಿತಂತೆ ಭಾರತ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರಆದ ರವೀಶ್‌ ಕುಮಾರ್‌ ಟ್ವೀಟ್ ಮಾಡಿದ್ದಾರೆ. ಈ ಗಿಡವು ಸುಮಾರು 38 ಸೆಂಟಿ ಮೀಟರ್ ಉದ್ದ ಬೆಳೆಯುತ್ತದೆ. 14–20 ಹೂವುಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.

"ಜೈ ಶೇಗುಣಸಿ" ದಿನದ ಸುದ್ದಿ.. 03-06-2018

"ಜೈ ಶೇಗುಣಸಿ" ದಿನದ ಸುದ್ದಿ.. ದಿ-03 ಜೂನ್ 2018 **ರಾಜ್ಯದಲ್ಲಿ ಇಸ್ರೇಲ್​ ಮಾದರಿ ಕೃಷಿ ಪದ್ಧತಿ ಅಳವಡಿಕೆ- ಎಚ್​.ಡಿ. ಕುಮಾರಸ್ವಾಮಿ. ** ಲಕ್ಷ್ಮೀಸಾಗರ ಕೆರೆಗೆ ಕೆಸಿ ವ್ಯಾಲಿ ನೀರು- ಭಾವುಕರಾದ ಸ್ಪೀಕರ್​ ರಮೇಶ್​ ಕುಮಾರ್. ** ಬಿಎಸ್​ವೈಗೆ ಬುದ್ಧಿ ಹೇಳುವಷ್ಟು ದೊಡ್ಡ ಮನುಷ್ಯ ಕುಮಾರಸ್ವಾಮಿ ಅಲ್ಲ: ಶ್ರೀರಾಮುಲು. ** ಜೆಡಿಎಸ್ ಪುಟಗೋಸಿ ಪಕ್ಷ- ಅನಂತಕುಮಾರ್ ಹೆಗ್ಡೆ. ** ಮಾನ ಮುಚ್ಚಿಕೊಳ್ಳಲು ಪುಟಗೋಸಿ ಬೇಕು.-ಎಚ್ಡಿಕೆ ಟಾಂಗ್. ** ರಾಜ್ಯದ ಹಲವೆಡೆ ಮುಂದುವರಿದ ಮಳೆ. ** ಸಾಲ ಮನ್ನಾ ಮಾಡದಿದ್ದರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್. ** ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ  ರಾಷ್ಟ್ರಗಳ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರಮೋದಿ. ** ನಿಫಾ ಭೀತಿ- ಕೋಯಿಕೋಡ್ನಲ್ಲಿ ಜೂನ್​ 12ರ ವರೆಗೆ ಶಾಲಾ ಕಾಲೇಜುಗಳಿಗೆ ರಜೆ. ** ಧೋನಿ ನಾಯಕನಾಗಿ ಹಿಂತಿರುಗಿ ಮತ್ತೆ ಐಪಿಎಲ್ ಗೆದ್ದಿರುವುದು ಶ್ರೇಷ್ಠ: ರಾಹುಲ್. ** ಅಫ್ಘಾನಿಸ್ತಾನ ಟೆಸ್ಟ್​: ಗಾಯಾಳು ಸಾಹಾ ಸ್ಥಾನಕ್ಕೆ ಕಾರ್ತಿಕ್​ ಆಯ್ಕೆ.

ಕಪ್ಪು ಹಣದ ಮಾಹಿತಿ ನೀಡಿ, 5 ಕೋಟಿ ರೂ.ವರೆಗೆ ಬಹುಮಾನ ಗೆಲ್ಲಿ!

"ಜೈ ಶೇಗುಣಸಿ" ದಿನದ ಸುದ್ದಿ.. ಕಾಳ ಧನಿಕರ, ಬೇನಾಮಿ ಆಸ್ತಿ ಹೊಂದಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಕಪ್ಪು ಹಣದ ಕುರಿತು ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ. ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ‘ಆದಾಯ ತೆರಿಗೆ ಮಾಹಿತಿದಾರರ ಬಹುಮಾನ ಯೋಜನೆ’ಗೆ ತಿದ್ದುಪಡಿ ತರಲಾಗಿದೆ. ಇದರನ್ವಯ ಮಾಹಿತಿದಾರರಿಗೆ 50 ಲಕ್ಷ ರೂ.ವರೆಗೆ ಬಹುಮಾನ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಜತೆಗೆ ಬೇನಾಮಿ ವಹಿವಾಟು ಮಾಹಿತಿದಾರರ ಬಹುಮಾನ ಯೋಜನೆ, 2018ನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಘೋಷಿಸಿದೆ. ಹೊಸ ಯೋಜನೆಯನ್ವಯ ಬೇನಾಮಿ ವಹಿವಾಟು ಮತ್ತು ಬೇನಾಮಿ ಆಸ್ತಿಯ ಕುರಿತು ಮಾಹಿತಿ ನೀಡುವವರಿಗೆ 1 ಕೋಟಿ ರೂ.ವರೆಗೆ ಬಹುಮಾನ ದೊರೆಯಲಿದೆ. ಈ ಸೌಲಭ್ಯವನ್ನು ವಿದೇಶಿಯರಿಗೂ ನೀಡಲಾಗಿದೆ ಎಂದು ಸಿಬಿಡಿಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜತೆಗೆ ವಿದೇಶದಲ್ಲಿ ಕಪ್ಪು ಹಣ ಹೊಂದಿರುವವರ ಮಾಹಿತಿ ನೀಡುವವರಿಗೆ 5 ಕೋಟಿ ರೂ.ವರೆಗೆ ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಈ ಮೂಲಕ ಕಪ್ಪು ಹಣದ ಕುರಿತು ಆದಾಯ ತೆರಿಗೆ ಇಲಾಖೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂಬ ವಿಶ್ವಾಸವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಜೈ ಶೇಗುಣಸಿ" ದಿನದ ಸುದ್ದಿ.. ದಿ- 02-06-2018

"ಜೈ ಶೇಗುಣಸಿ" ದಿನದ ಸುದ್ದಿ.. ದಿ- 02 ಜೂನ್ 2018 ** ಕೊನೆಗೂ ಸಂಪುಟ ರಚನೆಗೆ ಮುಹೂರ್ತ: ಜೆಡಿಎಸ್​ಗೆ ಹಣಕಾಸು ಮತ್ತು ಇಂಧನ, ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ. ** ಕಾಂಗ್ರೆಸ್​ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಯ್ಕೆ. ** ಸರ್ಕಾರ ಬೀಳುತ್ತೆ ಎಂದು ಬಿಎಸ್​​ವೈ ಕನಸು ಕಾಣುತ್ತಿದ್ದಾರೆ- ಎಚ್ಡಿಕೆ. ** ಕಲ್ಲಡ್ಕ ಶಾಲೆಗೆ ಬಿಸಿಯೂಟ ಪೂರೈಕೆ ಪ್ರಾರಂಭಿಸಿದ ರಾಜ್ಯ ಸರ್ಕಾರ. ** 2019ರ ಲೋಕಸಭೆ ಚುನಾವಣೆಗೂ ಕೈ-ತೆನೆ ಮೈತ್ರಿ: ವೇಣುಗೋಪಾಲ್‌ ಘೋಷಣೆ. ** ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ಲಕ್ಷ್ಮಣ ಸವದಿ ನೇಮಕ. ** ವಿಜಯಪುರದ ಶ್ರೀಧರ್ ದೊಡ್ಡಮನಿಗೆ ಸಿಇಟಿಯಲ್ಲಿ ಫಸ್ಟ್ ರ‍್ಯಾಂಕ್. ** ಶಾರ್ಟ್​ ಸರ್ಕಿಟ್​ನಿಂದ  ಬಾಗಲಕೋಟೆ ನ್ಯಾಯಾಲಯದಲ್ಲಿ ಬೆಂಕಿ‌. ** ಕುಂದಾನಗರಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ. ** ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಜೂ.29ಕ್ಕೆ ಮುಂದೂಡಿಕೆ. ** ಕೊನೆಗೂ ಸಂಪುಟ ರಚನೆಗೆ ಮುಹೂರ್ತ: ಜೆಡಿಎಸ್​ಗೆ ಹಣಕಾಸು ಮತ್ತು ಇಂಧನ, ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ. ** ಕಾಂಗ್ರೆಸ್​ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಯ್ಕೆ. ** ಸರ್ಕಾರ ಬೀಳುತ್ತೆ ಎಂದು ಬಿಎಸ್​​ವೈ ಕನಸು ಕಾಣುತ್ತಿದ್ದಾರೆ- ಎಚ್ಡಿಕೆ. ** ಕಲ್ಲಡ್ಕ ಶಾಲೆಗೆ ಬಿಸಿಯೂಟ ಪೂರೈಕೆ ಪ್ರಾರಂಭಿಸಿ...

ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ಲಕ್ಷ್ಮಣ್ ಸವದಿ ನೇಮಕ.

Image
"ಜೈ ಶೇಗುಣಸಿ" ಸುದ್ದಿ.. ಇಂದು ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ ಸವದಿ ಅವರನ್ನು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ರಾಜ್ಯಾಧ್ಯಕ್ಷರಾದ  ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ನೇಮಕ ಮಾಡಿ ಅದೇಶಿಸಿದ್ದಾರೆ.

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

Image
"ಜೈ ಶೇಗುಣಸಿ" ಸುದ್ದಿ.. ಸಿಂಗಾಪುರ:  ಭಾರತ ಪ್ರಧಾನಿ  ನರೇಂದ್ರ ಮೋದಿ  ಅವರು ಸಿಂಗಾಪುರದಲ್ಲಿ ಗುರುವಾರ ಹಣ ಪಾವತಿಗೆ ಸಂಬಂಧಿಸಿದ ಮೂರು ಭಾರತೀಯ ಮೊಬೈಲ್‌ ಆ್ಯಪ್‌ಗಳನ್ನು ಬಿಡುಗಡೆಗೊಳಿಸಿದರು.  'ಉದ್ಯಮ, ಆವಿಷ್ಕಾರ ಮತ್ತು ಸಮುದಾಯ' ಕುರಿತ ಸಮಾವೇಶದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಅವರು ಭಾರತದ 'ಭೀಮ್‌', 'ರೂಪೇ' ಮತ್ತು ಎಸ್‌ಬಿಐ ಆ್ಯಪ್‌ಗಳನ್ನು ಬಿಡುಗಡೆಗೊಳಿಸಿದರು. ರುಪೇ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಸಿಂಗಾಪುರದ ಎಲೆಕ್ಟ್ರಾನಿಕ್‌ ವರ್ಗಾವಣೆ ನೆಟ್‌ವರ್ಕ್‌ (ಎನ್‌ಇಟಿಎಸ್‌) ಜತೆಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ರುಪೇ ಬಳಕೆದಾರರು ಸಿಂಗಾಪುರದ ಎಲ್ಲ ಎನ್‌ಇಟಿಎಸ್‌ ಸ್ವೀಕಾರ ಕೇಂದ್ರಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ. ಪ್ರತಿವರ್ಷ ಸುಮಾರು ಐದು ದಶಲಕ್ಷ ಭಾರತೀಯರು, ಸಿಂಗಾಪುರಕ್ಕೆ ಮತ್ತು ಸಿಂಗಾಪುರ ಮೂಲಕ ಪ್ರವಾಸ ಮಾಡುವುದರಿಂದ ಇದು ಬಹುಕೋಟಿ ಡಾಲರ್‌ ವಹಿವಾಟಿಗೆ ಕಾರಣವಾಗುತ್ತದೆ ಎಂದು ಉದ್ಯಮ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.  ನಂತರ ಮಾತನಾಡಿದ ಮೋದಿ ಅವರು, ''ಭಾರತ ಮತ್ತು ಸಿಂಗಾಪುರ ನಡುವಿನ ಸ್ನೇಹಮಯ ಸಂಬಂಧ ವಿಶ್ವಕ್ಕೆ ಮಾದರಿಯಾಗಿದೆ. ಸಿಂಗಾಪುರದಲ್ಲಿ ತಮಿಳಿಗೆ ಅಧಿಕೃತ ಭಾಷೆಯ ಮಾನ್ಯತೆ ನೀಡಲಾಗಿದೆ. ಇಲ್ಲಿನ ಶಾಲೆಗಳಲ್ಲಿ ಐದು ಭಾರತೀಯ ಭಾಷೆಗಳನ್ನು ಕಲಿಯುವ ಅವಕಾಶ ಒದಗಿಸಲಾಗಿದೆ. ಭಾರತದ ಎಲ್ಲ ಹಬ್ಬಗಳ ಆಚರಣೆಗಳನ್ನು ನೋಡಲು ಸಿಂಗ...

ಐದು ವರ್ಷಗಳ ಪೂರ್ಣಾವಧಿಗೆ ಎಚ್‌ಡಿಕೆ ಮುಖ್ಯಮಂತ್ರಿ: ಕಾಂಗ್ರೆಸ್ ಒಪ್ಪಿಗೆ..

"ಜೈ ಶೇಗುಣಸಿ" ಸುದ್ದಿ.. ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಧಿಕಾರ ಹಂಚಿಕೆ ಸೂತ್ರವನ್ನು ಇಂದು ಪ್ರಕಟಿಸುವ ಸಾಧ್ಯತೆಯಿದ್ದು, ಎಚ್‌.ಡಿ. ಕುಮಾರಸ್ವಾಮಿ ಅವರೇ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಲು ಕಾಂಗ್ರೆಸ್‌ ಒಪ್ಪಿಕೊಂಡಿದೆ. ಅಲ್ಲದೆ 2019ರ ಲೋಕಸಭಾ ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸಲು ನಿರ್ಧರಿಸಿವೆ.  ಖಾತೆಗಳ ಹಂಚಿಕೆ ಮಾತುಕತೆ ಸುದೀರ್ಘವಾಗುತ್ತಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವೆ ತೀವ್ರ ಭಿನ್ನಮತ ತಲೆದೋರಿದೆ ಎಂಬ ವದಂತಿಗಳಿಗೆ ವಿರುದ್ಧವಾಗಿ, ಸಮನ್ವಯ ಸಮಿತಿ ರಚನೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚನೆ ಮತ್ತು ಸರಕಾರದ ಸ್ಥಿರತೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್‌ ಟೈಮ್ಸ್ ಆಫ್‌ ಇಂಡಿಯಾಗೆ ಗುರುವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.  ಪ್ರಮುಖ ಖಾತೆಗಳ ಪೈಕಿ ಹಣಕಾಸು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಗೃಹ ಖಾತೆಯನ್ನು ಕಾಂಗ್ರೆಸ್ ವಹಿಸಿಕೊಳ್ಳಲಿದೆ.  'ಐದು ವರ್ಷಗಳ ಅವಧಿಗೆ ಸ್ಥಿರ ಸರಕಾರ ನಡೆಸಲು ಸಾಧ್ಯವಾಗುವಂತೆ ಎಲ್ಲ ಪ್ರಮುಖ ವಿಷಯಗಳನ್ನು ಲಿಖಿತ ಒಪ್ಪಂದದ ಮೂಲಕ ಬಗೆಹರಿಸಲಾಗುತ್ತಿದೆ. ಹೀಗಾಗಿಯೇ ಚರ್ಚೆ ದೀರ್ಘವಾಗುತ್ತಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸರಕಾರ ಪೂರ್ಣಾವಧಿಗೆ ಸ್ಥಿರ ಆಡಳಿತ ನೀಡಲು ಅಗತ್ಯವಿರುವ ಎಲ್ಲ ಸಿದ್ಧತೆಯನ್ನೂ ನಾವು ಮಾ...

"ಜೈ ಶೇಗುಣಸಿ" ದಿನದ ಸುದ್ದಿ.. ದಿ- 01 - 06 - 2018

"ಜೈ ಶೇಗುಣಸಿ" ದಿನದ ಸುದ್ದಿ.. ದಿ- 01 ಜೂನ್ 2018 ** ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ-  ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ ಗೆಲುವು. ** ಉಪಚುನಾವಣೆ: 2 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು. ** ರೈತರ ಸಾಲಮನ್ನಾ ವಿಷಯದಲ್ಲಿ ಸಿಎಂ ಕುಮಾರಸ್ವಾಮಿ ಕಾಲಹರಣ ಮಾಡದಿರಲಿ- ಮೊಳಕಾಲ್ಮೂರು ಶಾಸಕ ಶ್ರೀರಾಮುಲು. ** ವೀಸಾ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಆರಂಭಿಸುವಂತೆ ನಿಯೋಗಕ್ಕೆ ಎಚ್ಡಿಕೆ ಮನವಿ. ** ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ: ಸಿಎಂ ಕುಮಾರಸ್ವಾಮಿ ** ಡಿ.ಕೆ.ಬ್ರದರ್ಸ್‌ ಆಪ್ತರ ಮೇಲೆ ಮುಂದುವರಿದ ಸಿಬಿಐ ದಾಳಿ ** ವೋಟರ್ ಐಡಿ ಪ್ರಕರಣ: ತನಿಖೆ ನಂತರ ಸತ್ಯಾಂಶ ಹೊರಬರಲಿದೆ- ಮುನಿರತ್ನ ** ಆರ್​.ಆರ್​.ನಗರದ್ದು ಐತಿಹಾಸಿಕ ತೀರ್ಪು: ಡಿ.ಕೆ.ಶಿವಕುಮಾರ್​. ** ಬಿಡುಗಡೆಯಾದ 24 ತಾಸಿನೊಳಗೆ ಗೂಗಲ್ ಪ್ಲೇ-ಸ್ಟೋರ್‌ನಿಂದ ಪತಂಜಲಿ ಮೆಸೆಜಿಂಗ್ ಆ್ಯಪ್ ಕಿಂಬೋ ಕಣ್ಮರೆ. ** ಜಿಡಿಪಿ ಬೆಳವಣಿಗೆ – ಚೀನಾ ಹಿಂದಿಕ್ಕಿ ಆಗ್ರಸ್ಥಾನ ಕಾಯ್ದುಕೊಂಡ ಭಾರತ. ** ನಟ ದುನಿಯಾ ವಿಜಯ್‌ಗಾಗಿ ಪೊಲೀಸರ ಹುಡುಕಾಟ.