Father's Day Special.... I
ಜೈ ಶೇಗುಣಸಿ .....
13ನೇ ವರ್ಷಕ್ಕೇ ಮನೆಯಿಂದ ಹೊರಹಾಕುವ ಅಮೆರಿಕದಲ್ಲೇ ಮಕ್ಕಳು ‘ಮದರ್‍ಸ್ ಡೇ’, ‘ಫಾದರ್‍ಸ್ ಡೇ’ ಆಚರಿಸುತ್ತಾರೆ! ಹಾಗಿರುವಾಗ ಭಾರತೀಯರಾದ ನಮ್ಮಲ್ಲಿ ಕೊನೆಯುಸಿರುವವರೆಗೂ ಮಕ್ಕಳ ಅಭ್ಯುದಯದ ಬಗ್ಗೆಯೇ ಯೋಚಿಸುವ ಅಪ್ಪ-ಅಮ್ಮನನ್ನು ನೆನಪಿಸಿಕೊಳ್ಳದಿರುವುದು ಥರವೇ?! ಇದೆಲ್ಲಾ ವೆಸ್ಟ್‌ರ್ನ್ ಕಾನ್ಸೆಪ್ಟ್, ಗ್ರೀಟಿಂಗ್ಸ್ ಕಾರ್ಡ್ ಕಂಪನಿಯವರ ವ್ಯಾಪಾರ ತಂತ್ರ ಎಂದು ಯಾರೇನೇ ಬೊಬ್ಬೆ ಹಾಕಲಿ. ಜೂನ್ 17‘ಫಾದರ್‍ಸ್ ಡೇ’. ನಾವು ಅಂಬೆಗಾಲಿಡುವಾಗ ಕೈಹಿಡಿದು ಮುನ್ನಡೆಸಿದ, ನಾವೇ ಜನ್ಮಕೊಟ್ಟಾಗ ಮೊಮ್ಮಕ್ಕಳಿಗೂ ಪುಟ್ಟ ಪುಟ್ಟ ಹೆಜ್ಜೆಯಿಡುವುದನ್ನು ಕಲಿಸುವ ಅಪ್ಪನ ಅಗೋಚರ ಪ್ರೀತಿ, ನಿಸ್ವಾರ್ಥತೆಯನ್ನು ನೆನೆದು ಕನಿಷ್ಠ ಕೃತಜ್ಞತೆಯನ್ನಾದರೂ ಹೇಳೋಣ. ಮರೆಯದಿರಿ.
Superrrr
ReplyDelete