ಕೃಷ್ಣಾ ಶುಗರ್ಸ್ ಮಲ್ಟಿಪರ್ಪಸ್ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಲಕ್ಷಾಂತರ ರೂ. ಕಳ್ಳತನ.

ಜೈ ಶೇಗುಣಸಿ ಸುದ್ದಿ..


ಹಲ್ಯಾಳ ಗ್ರಾಮದ ಹೊರವಲಯದ ಕೃಷ್ಣಾ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಕೃಷ್ಣಾ ಶುಗರ್ಸ್ ಮಲ್ಟಿಪರ್ಪಸ್ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಬುಧವಾರ ಮಧ್ಯರಾತ್ರಿ ಲಕ್ಷಾಂತರ ರೂ. ಬುಧವಾರ ಮಧ್ಯರಾತ್ರಿ ಕಳ್ಳತನವಾಗಿದೆ.

ಕೃಷ್ಣಾ ಶುಗರ್ಸ್ ಮಲ್ಟಿಪರ್ಪಸ್ ಕೋ-ಆಪ್. ಕ್ರೆಡಿಟ್ ಸೊಸೈಟಿಯಲ್ಲಿ ವೇತನ ಬಟವಡೆಗೆಂದು ಅಥಣಿ ಕಾರ್ಪೊರೇಷನ್ ಬ್ಯಾಂಕ್‌ನಿಂದ ಬ್ಯಾಂಕನಿಂದ ತಂದಿಡಲಾಗಿದ್ದ 10,85,520 ರೂ. ಕಳ್ಳತನ ಮಾಡಲಾಗಿದೆ ಎಂದು ಅಥಣಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ಅವರು ಕೂಲಂಕಷವಾಗಿ ಪರಿಶೀಲಿಸಿ ಶೀಘ್ರ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಡಿ.ವೈ.ಎಸ್.ಪಿ. ರಾಮಗೌಡ ಬಸರಗಿ, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಸುರೇಶ ಬೆಂಡೆಗುಂಬಳ, ತನಿಖಾ ಸಹಾಯಕ ಬಿ.ಆರ್. ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಿಸಿದೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18