ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-01-19
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-01-19 ** ಇಂದು ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ** ಪ್ರಧಾನಿ ಹುದ್ದೆಯನ್ನೇ ಬಿಟ್ಟ ಕುಟುಂಬ ನಮ್ಮದು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ: ಎಚ್‌ಡಿಕೆ ** ಸಿದ್ದರಾಮಯ್ಯ ಕಾಲದ ಆಡಳಿತವೇ ಚೆನ್ನಾಗಿತ್ತು: ಮಂಜು ** ಬೆಂಗಳೂರು: ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ ** ಫೆಬ್ರವರಿ 9ರಿಂದ ಧರ್ಮಸ್ಥಳ ಬಾಹುಬಲಿಗೆ 4ನೇ ಮಹಾಮಸ್ತಕಾಭಿಷೇಕ ** ಫೆ.20 ರಿಂದ 24ರವರೆಗೆ 12ನೇ ಆವೃತ್ತಿಯ ಏರ್ ಶೋ: ರಫೇಲ್ ಯುದ್ಧ ವಿಮಾನ ಹಾರಾಟ ** ಒಂದು ಲಕ್ಷ ಹಸುಗಳ ರಕ್ಷಣೆಗಾಗಿ 1 ಸಾವಿರ ಗೋಶಾಲೆ ತೆರೆಯಲು ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ನಿರ್ಧಾರ ** ಅತಂತ್ರ ಸಂಸತ್ತಿನಿಂದಾಗಿ ದೇಶದ ಅಭಿವೃದ್ಧಿ 3 ದಶಕಗಳ ಕಾಲ ಕುಂಠಿತಗೊಂಡಿತ್ತು: ಮೋದಿ ** ಲೋಕಸಭೆ ಚುನಾವಣೆ ಸ್ಪರ್ಧಿಸುವವರಿಂದ ಅರ್ಜಿ ಆಹ್ವಾನಿಸಿದ ಜಯಾ ಪಕ್ಷ ಎಐಡಿಎಂಕೆ: ಅರ್ಜಿ ಶುಲ್ಕ 25000 ರೂ. ** ಫೆಬ್ರವರಿ 1 ರಂದು ಕೇಂದ್ರ ಮಧ್ಯಂತರ ಬಜೆಟ್: ಪಿಯೂಷ್ ಗೋಯೆಲ್ ** ಮೂಗಿಗೆ ಪೈಪ್ ಹಾಕಿಕೊಂಡೇ ಬಜೆಟ್ ಮಂಡಿಸಿದ ಗೋವಾ ಸಿಎಂ ಪರಿಕ್ಕರ್ ** ಲೋಕಪಾಲ್, ಲೋಕಾಯುಕ್ತಗಾಗಿ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ ** ಎಲ್ಲಿಗಾದರೂ ಹೋಗಿ, ಏನಾದರೂ ಮಾಡಿ ಕಾನೂನಿನ ಜತೆ ಆಟವಾಡಬೇಡಿ: ಕಾರ್ತಿ ಚಿದಂಬರಂಗೆ ಸುಪ್ರೀಂ ಎಚ್ಚರಿಕೆ ** ಲೋಕಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಕೋಮು ಗಲಭೆ ಸಾಧ್ಯ...