Posts

Showing posts from May, 2018

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

Image
"ಜೈ ಶೇಗುಣಸಿ" ಸುದ್ದಿ.. ಹೊಸದಿಲ್ಲಿ: ಜನಪ್ರಿಯ ಮೆಸೆಜೀಂಗ್ ಫ್ಲ್ಯಾಟ್‌ಫಾರ್ಮ್ ವಾಟ್ಸಪ್‌ಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿರುವ 'ಕಿಂಬೋ' ಸ್ವದೇಶಿ ಆ್ಯಪ್ ಬಿಡುಗಡೆಯಾದ ಒಂದು ದಿನದೊಳಗೆ ಕಣ್ಮರೆಯಾಗಿದೆ.  ಕಳೆದ ದಿನ ಯೋಗಗುರು ಬಾಬಾ ರಾಮ್‌ದೇವ್ ಅವರ ಒಡೆತನದ ಪತಂಜಲಿ ಸಂಸ್ಥೆಯು ಅತಿ ನೂತನ ಕಿಂಬೋ ಸ್ವದೇಶಿ ಮೆಸೇಜಿಂಗ್ ಸೇವೆಯನ್ನು ಆರಂಭಿಸಿತ್ತು. ಆದರೆ ಕಿಂಬೋ ಬಿಡುಗಡೆಯಾಗಿರುವ 24 ತಾಸಿನೊಳಗೆ ಗೂಗಲ್ ಪ್ಲೇ-ಸ್ಟೋರ್‌ನಿಂದ ಕಣ್ಮರೆಯಾಗಿದೆ. ಇದರಿಂದ ಬಳಕೆದಾರರು ತಬ್ಬಿಬ್ಬಾಗಿದ್ದಾರೆ.  ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಿಂಬೋ ಸರ್ಚ್ ಮಾಡಿದರೆ "ಕ್ಷಮಿಸಿ, ವಿನಂತಿಸಿರುವ URL ಈ ಸರ್ವರ್‌ನಲ್ಲಿ ಕಂಡುಬಂದಿಲ್ಲ" ಎಂಬ ಸಂದೇಶ ಕಂಡುಬರುತ್ತಿದೆ. ಇನ್ನೊಂದೆಡೆ ಭಾರಿ ಟ್ರಾಫಿಕ್‌ ಹರಿವನ್ನು ತಡೆಯಲಾಗದೆ ಕಿಂಬೋ ಅಧಿಕೃತ ವೆಬ್‌ಸೈಟ್ ಸಹ ಕ್ರಾಶ್ ಆಗಿದೆ. 

ಹರಕೆ ಒಪ್ಪಿಸಿದ ಶಾಸಕ ಪಿ.ರಾಜೀವ್‌ ಅಭಿಮಾನಿ....

Image
"ಜೈ ಶೇಗುಣಸಿ" ಸುದ್ದಿ.. ಚುನಾವಣೆಯಲ್ಲಿ ಶಾಸಕ ಪಿ.ರಾಜೀವ್‌ ಪುನಃ ಗೆಲುವು ಸಾಧಿಸಿದರೆ ಕುಡಚಿ ಕ್ಷೇತ್ರದ ದೇವರ ಪಾದಗಟ್ಟೆಗಳಿಗೆ ಪಂಚ ನದಿಗಳ ನೀರು ತಂದು ಹಾಕುವ ಹರಕೆ ಹೊತ್ತಿದ್ದ ಖಣದಾಳ ಗ್ರಾಮದ ನಿವಾಸಿ ವಸಂತ ಮಾರುತಿ ನಾಗರಾಳ (ವಡ್ಡರ) ಗ್ರಾಮದ ಶ್ರೀ ಭರಮಲಿಂಗೇಶ್ವರ ದೇವಸ್ಥಾನ ಪಾದಗಟ್ಟೆಗೆ ನೀರು ಹನಿಸಿದರು.  ಪಿ.ರಾಜೀವ್‌ ಗೆಲುವು ಸಾಧಿಸಿದರೆ ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ನೀರು ತಂದು ಕುಡಚಿ ಮತ ಕ್ಷೇತ್ರದ ಎಲ್ಲ ದೇವರುಗಳ ಪಾದಗಟ್ಟೆಗೆ ಹನಿಸುವ ಹರಕೆ ಹೊತ್ತಿದ್ದೆ. ಶಾಸಕರು ಪುನಾರಾಯ್ಕೆಯಾಗಿದ್ದು ಈಗ ಹರಕೆ ತೀರಿಸುತ್ತಿರುವುದಾಗಿ ವಸಂತ ನಾಗರಾಳ ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ಗುರುಪಾದ ಮರಡಿ, ಭರಮಪ್ಪ ನಿಂಗನೂರ, ಬಸಪ್ಪ ನಾಯಕರ, ಬಸವನಾಯ್ಕ ಗೋಡಿ, ಅಶೋಕ ಕರಜಗಿ, ಭರಮಪ್ಪ ಸತ್ತಿ, ಮುತ್ತಪ್ಪ ಮದಾಳೆ, ಸಹದೇವ ಮಾದರ, ಲಗಮಣ್ಣ ಮದಾಳೆ, ಲಕ್ಷ ್ಮಣ ಬಳಗಾರ ಇತರರು ಉಪಸ್ಥಿತರಿದ್ದರು. 

"ಜೈ ಶೇಗುಣಸಿ" ದಿನದ ಸುದ್ದಿ.. 31-5-18

"ಜೈ ಶೇಗುಣಸಿ" ದಿನದ ಸುದ್ದಿ. . ದಿ- 31 ಮೇ 2018 ** ರೈತರ ಸಾಲಮನ್ನಾಕ್ಕೆ ಇನ್ನು 15 ದಿನ ಕಾಲಾಕಾಶ ನೀಡಿ, ರೈತರನ್ನು ಉಳಿಸುವುದು ನಮ್ಮ ಸರಕಾರದ ಜವಾಬ್ದಾರಿ- ಸಿಎಂ ಕುಮಾರಸ್ವಾಮಿ. ** ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ರೈತರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ. ** ಜಾಮೀನು ಅರ್ಜಿ ವಜಾ: ನಲಪಾಡ್‌ಗೆ ಮತ್ತೆ ಜೈಲೇ ಗತಿ ** ಹಣಕಾಸು ಖಾತೆಗಾಗಿ ಮುಖ್ಯಮಂತ್ರಿ ಆಟವಾಡಬಾರದು- ವಾಟಾಳ್‌ ನಾಗರಾಜ್‌ ** ಕರಾವಳಿಯಲ್ಲಿ ಭಾರಿ ಹಾನಿಯೆಸಗಿದ ವರುಣನ ಅಬ್ಬರ. 2ಬಲಿ, 20ಕೋಟಿ ನಷ್ಟ. ** ಬೆಂಗಳೂರು ಸೇರಿದಂತೆ ಹಲವು ಕಡೆ ಗುಡುಗು ಸಹಿತ ಭಾರಿ ಮಳೆ. ** ಇಂಡೋನೇಷ್ಯಾ ನಾಗರಿಕರಿಗೆ 30 ದಿನಗಳ ಉಚಿತ ವೀಸಾ ಘೋಷಿಸಿದ ಮೋದಿ. ** ಪ್ರಧಾನಿ ಮೆಚ್ಚುಗೆ ಗಳಿಸಿದ ಮುಧೋಳದ ಮುದ್ರಾ ಯೋಜನೆಯ ಫಲಾನುಭವಿ ಮಂಜುನಾಥ.

ಜನತಾ ಬ್ಯಾಂಕಿನ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಸ್ವಾಗತ

Image
ಜನತಾ ಬ್ಯಾಂಕಿನ ಶಾಖೆಯ ನೂತನ ಕಟ್ಟಡದ  ಉದ್ಘಾಟನಾ ಸಮಾರಂಭಕ್ಕೆ ಸ್ವಾಗತ "ಜೈ ಶೇಗುಣಸಿ" ಸುದ್ದಿ..               ಇದೇ ಜೂನ್ 3ರಂದು ನಡೆಯಲಿರುವ ಹಾರೂಗೇರಿಯ ಜನತಾ ಬ್ಯಾಂಕಿನ, ಉಗಾರ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ವಿಜಯಪುರದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಅದರದ ಸ್ವಾಗತ.

15 ದಿನಗಳ ಕಾಲಾವಕಾಶ ಕೋರಿದ ಸಿಎಂ: ಸಾಲ ಮನ್ನಾ ಸ್ಕೀಂ ಹೇಗೆ?

"ಜೈ ಶೇಗುಣಸಿ" ಸುದ್ದಿ.. 15 ದಿನಗಳ ಕಾಲಾವಕಾಶ ಕೋರಿದ ಸಿಎಂ: ಸಾಲ ಮನ್ನಾ ಸ್ಕೀಂ ಹೇಗೆ? ಬೆಂಗಳೂರು: ಸಾಲಮನ್ನಾ ಘೋಷಣೆಯಾಗಿದ್ದು, ಆದ್ರೆ ಅದರ ರೂಪುರೇಷೆಗಳನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲು 15 ದಿನಗಳ ಕಾಲಾವಕಾಶ ಬೇಕು ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಲಮನ್ನಾ ಬಗ್ಗೆ ಘೋಷಣೆ ಮಾಡಿದ್ರೂ ಇನ್ನೂ 15 ದಿನ ಕಾಯಬೇಕು. 15 ದಿನಗಳ ಬಳಿಕ ಸರ್ಕಾರದ ರೂಪುರೇಷೆ ಪ್ರಕಟವಾಗಲಿದೆ. 2 ಹಂತಗಳಲ್ಲಿ ಯಾರ ಸಾಲಮನ್ನಾ ಮಾಡಬೇಕು ಅನ್ನೋದರ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಅಂತ ಹೇಳಿದ್ರು. ಏಪ್ರಿಲ್ 1, 2009 ರಿಂದ ಡಿಸೆಂಬರ್ 31, 2017 ವರೆಗೆ ಮೊದಲ ಸ್ಕೀಂನಲ್ಲಿ ಚುನಾಯಿತ ಸದಸ್ಯರ, ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಳಸಿದವರ, ಸತತ 3 ವರ್ಷ 4 ಲಕ್ಷಕ್ಕೆ ಆದಾಯಕ್ಕೆ ತೆರಿಗೆ ಕಟ್ಟಿರುವವರ, ಸಹಕಾರ ಬ್ಯಾಂಕ್ ಪದಾಧಿಕಾರಿಗಳಾಗಿ 3 ಲಕ್ಷ ಆದಾಯ ಇರುವವರ ಸಾಲಮನ್ನಾ ಇಲ್ಲ. ಅಲ್ಲದೇ ನಗರ ಪಾಲಿಕೆ ವ್ಯಾಪ್ತಿ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ಸಾಲ ಮನ್ನಾ ಇಲ್ಲ ಅಂತ ಹೇಳಿದ್ರು. ಇದರಲ್ಲಿ ವರ್ಷಕ್ಕೆ 4 ಲಕ್ಷ ರೂ. ಆದಾಯ ಹೊಂದಿ ತೆರಿಗೆ ಕಟ್ಟುವವರನ್ನು ಸೇರಿಸಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು. ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಂಡವಾಳ ಹಾಕಿ...

"ಜೈ ಶೇಗುಣಸಿ" ದಿನದ ಸುದ್ದಿ.. 30/5/18

"ಜೈ ಶೇಗುಣಸಿ" ದಿನದ ಸುದ್ದಿ..                                                                                                                                        ದಿ- 30 ಮೇ 2018 ** ಶೀಘ್ರ ಸಚಿವ ಸಂಪುಟ ವಿಸ್ತರಣೆ: ಪರಮೇಶ್ವರ್‌. ** ಸಕಲ ಸರ್ಕಾರಿ ಗೌರವಗಳೊಂದಿಗೆ ಲಿಂಗಾಯತ ಸಂಪ್ರದಾಯದಂತೆ ಶಾಸಕ ಸಿದ್ದು ನ್ಯಾಮಗೌಡರ ಅಂತ್ಯಕ್ರಿಯೆ. ** ಕೃಷಿ ಸಾಲ ಮನ್ನಾ- ಇಂದು ರೈತ ಸಂಘಟನೆಗಳೊಂದಿಗೆ ಸಿಎಂ ಸಭೆ. ** ವೇತನ ಪರಿಷ್ಕರಣೆಗೆ ಆಗ್ರಹಿಸಿ ಇಂದು ಮತ್ತು ನಾಳೆ ಬ್ಯಾಂಕ್​ ನೌಕರರ ಮುಷ್ಕರ. ** ರಾಜ್ಯ ರೈತರ ಸಾಲ ಮನ್ನಾ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ರಾಜ್ಯಾದ್ಯಂತ ರೈತ ಚಳವಳಿಯ ಮೂಲಕ ಹೋರಾಟ- ಕೋಡಿಹಳ್ಳಿ ಚಂದ್ರಶೇಖರ್‌. ** ಸಾಲುಮರದ ತಿಮ್ಮಕ್ಕರ ಸಾವಿನ ಸುದ್ದಿ ಹಬ್ಬಿಸಿದ್ದವ ಪೊಲೀಸ್​ ವಶಕ್ಕೆ. ** ಮಹಾಮಳೆಗೆ ಮುಳುಗಿದ ಮಂಗಳೂರು, 2ದಿನ ಶಾಲಾ-ಕಾಲೇಜು ರಜೆ. **...

Shegunashi (ಶೇಗುಣಸಿ)

S hegunashi ( ಶೇಗುಣಸಿ) Shegunashi  is a village in the southern state of  Karnataka , India.  It is located in the  Athani   taluk  of  Belagavi district  in Karnataka. Demographics As of 2011 India  census , Shegunashi had a population of 7793 with 3959 males and 3834 females. Transportation Shegunasi has  NWKRTC  bus service. The nearest railway station is  Kudachi  railway station, which is 24 km from the city.  Belagavi and  Kolhapur  are the nearest airports. There is a proposal for a new railway line between  Bagalkot – Kudachi - Terdal  to connect  Bagalkot  with Belagavi & Miraj. A survey of this 105.0 km new railway line has been completed and submitted to  South Western Railway   Hubballi . Educational institutions. Shree Murughendra Swamiji (SMS) High School Government Kannada Primary School Government Kannada High School Shree Mu...

"ಜೈ ಶೇಗುಣಸಿ" ದಿನದ ಸುದ್ದಿ..29-5-18

"ಜೈ ಶೇಗುಣಸಿ" ದಿನದ ಸುದ್ದಿ. .                                                                                                                                        ದಿ- 29 ಮೇ 2018 ** ರಾಜ್ಯ ಸಚಿವ ಸಂಪುಟ ರಚನೆ ಹಿನ್ನೆಲೆ- ದೆಹಲಿಯಲ್ಲಿ ಸುಧೀರ್ಘ ಚರ್ಚೆ ನಂತರವೂ ಖಾತೆಗಳ ಹಂಚಿಕೆಯಲ್ಲಿ ಮೂಡದ ಒಮ್ಮತ. ** ಬಿಜೆಪಿ ಕರೆ ನೀಡಿದ ಕರ್ನಾಟಕ ಬಂದ್ ಗೆ ರಾಜ್ಯದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ. ** ಆರ್‌ಆರ್‌ನಗರ ವಿಧಾನಸಭೆ ಚುನಾವಣೆ-ಶೇ.53ರಷ್ಟು ಮತದಾನ. ** ಬುಧವಾರ ಸಾಲಮನ್ನಾ ಬಗ್ಗೆ ಅಂತಿಮ ನಿರ್ಧಾರ- ಎಚ್ಡಿಕೆ. ** ವಾರದೊಳಗೆ ಸಾಲಮನ್ನಾ ಮಾಡದಿದ್ದರೆ ಉಗ್ರ ಹೋರಾಟ- ಯಡಿಯೂರಪ್ಪ. ** ಕರ್ನಾಟಕಕ್ಕೆ ಕಲ್ಲಿದ್ದಲು ಪೂರೈಸಿ- ಮೋದಿಗೆ ಹೆಚ್ಡಿಕೆ ಮನವಿ. ** ರಾಜ್ಯ ಸರ್ಕಾರದ ನೂತನ ಎಜಿ ಆಗಿ ಉದಯ್ ಹೊಳ್ಳ ನೇಮಕ. ** ಆರ್‌ಎಸ್‌ಎಸ್‌ ಕಾರ್ಯಕ್ರಮ ಆಹ್ವಾನ ಸ್ವೀಕರಿಸಿದ...