Posts

Showing posts from February, 2019

ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ವಶಕ್ಕೆ ಸಿಲುಕಿದ್ದೇಗೆ,? ಇಲ್ಲಿದೆ ಮಾಹಿತಿ!

Image
ಜೈ ಶೇಗುಣಸಿ ಸುದ್ದಿ.: ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಈ ಮಧ್ಯೆ ಅಭಿನಂದನ್ ಅವರು ಪಾಕಿಸ್ತಾನ ಸೈನಿಕರ ವಶಕ್ಕೆ ಸಿಲುಕ್ಕಿದ್ದು ಹೇಗೆ ಎಂಬ ವಿವರ ಇಲ್ಲಿದೆ. ಫೆ.14ರ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಫೆಬ್ರವರಿ 26ರಂದು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಹಿಂದಿರುಗಿದ್ದವು. ಇದಕ್ಕೆ ಪ್ರತಿಯಾಗಿ ಫೆಬ್ರವರಿ 27ರಂದು ಬೆಳಗ್ಗೆ ಪಾಕಿಸ್ತಾನದ ಮೂರು ಎಫ್-16 ಯುದ್ಧ ವಿಮಾನಗಳು ವಾಯುಸೀಮೆಯನ್ನು ದಾಟಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿತ್ತು. ಈ ವೇಳೆ ಭಾರತೀಯ ವಾಯುಸೇನೆಯ ಮಿಗ್-21 ಹಾಗೂ ಸುಖೋಯ್ ಯುದ್ಧ ವಿಮಾನಗಳು ಎಫ್-16ಗೆ ಮುಖಾಮುಖಿಯಾಗಿದ್ದವು. ಭಾರತೀಯ ಯುದ್ಧ ವಿಮಾನಗಳು ಕಂಡ ತಕ್ಷಣ ಎಫ್-16 ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಕ್ಕೆ ಪಲಾಯನ ಮಾಡುವ ವೇಳೆ ಮಿಗ್-21 ಹಾಗೂ ಸುಖೋಯ್ ವಿಮಾನ ಹಿಂದೆ ನುಗ್ಗಿ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸಿತ್ತು. ಈ ವೇಳೆ ಮಿಗ್-21 ಹಾರಿಸುತ್ತಿದ್ದ ಅಭಿನಂದನ್ ವರ್ತಮಾನ್ ಅವರು ಎಫ್-16 ಅನ್ನು ಅಡ್ಡಗಟ್ಟಿ ಹೊಡೆದುರುಳಿಸಬೇಕು ಅನ್ನುವ ಯೋಚನೆಯಿಂದ ಅಭಿನಂದನ್ ತಮ್ಮ ವಿಮಾನವನ್ನು ಎಫ್-21 ಬೆನ್ನಟ್ಟಿ ಹೋಗುತ್ತಿದ್ದರು. ಈ ವೇಳೆ ಸುಖೋಯ್ ಯುದ್ಧ ವಿಮಾನ ಒ...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 28-02-19 ** ಶೇಗುಣಸಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಿಲ್ಲೆಗೆ ಮಾದರಿ: ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ ** ಯುದ್ಧ ವಾತಾವರಣ: ಹೈ ಅಲರ್ಟ್, ಕಾರ್ಯಕ್ರಮ ಅರ್ಧಕ್ಕೇ ಮೊಟಕುಗೊಳಿಸಿ ತುರ್ತು ಸಭೆಗೆ ಧಾವಿಸಿದ  ಮೋದಿ ** ಭಾರತೀಯ ಸೇನೆಗೆ ಒಂದು ಯುದ್ಧ ವಿಮಾನ ನಷ್ಟ: ಒಬ್ಬ ಪೈಲಟ್​ ನಾಪತ್ತೆ ** ಪೈಲಟ್​ ಆಭಿನಂದನ್​ ಪಾಕ್​ ವಶದಲ್ಲಿರುವುದನ್ನು ಸ್ಪಷ್ಟಪಡಿಸಿದ ಭಾರತ: ಬಂಧಿತ ಪೈಲಟ್​ ಕ್ಷೇಮಕ್ಕೆ ಒತ್ತಾಯ ** ನಮ್ಮ ಪೈಲಟ್​ ಸುರಕ್ಷಿತವಾಗಿ ಆದಷ್ಟು ಬೇಗ ಮರಳಲಿ ಎಂದು ಪಾರ್ಥಿಸುತ್ತೇನೆ: ಸಿಎಂ ಕುಮಾರಸ್ವಾಮಿ ** ಗಡಿ ಉಲ್ಲಂಘಿಸಿದ ಪಾಕ್ ಎಫ್‌-16 ಹೊಡೆದುರುಳಿಸಿದ ಭಾರತೀಯ ಸೇನೆ ** ಭಾರತದ 2 ವಿಮಾನ ಹೊಡೆದುರುಳಿಸಿ ಇಬ್ಬರು ಪೈಲಟ್​ಗಳನ್ನು ಬಂಧಿಸಲಾಗಿದೆ: ಪಾಕ್​ ಸೇನೆ; ಇಬ್ಬರಲ್ಲ, ಒಬ್ಬ ಐಎಎಫ್ ಪೈಲಟ್ ಮಾತ್ರ​ ನಮ್ಮ ವಶದಲ್ಲಿದ್ದಾರೆ: ಸಂಜೆ ವೇಳೆಗೆ ಉಲ್ಟಾ ಹೊಡೆದ ಪಾಕ್ ** ಯುದ್ಧ ಆರಂಭವಾದರೆ ಅದರ ನಿಯಂತ್ರಣ ನನ್ನ ಕೈಲೂ ಇಲ್ಲ, ಮೋದಿ ಕೈಲೂ ಇರದು, ಶಾಂತಿಯಿಂದ ವರ್ತಿಸೋಣ: ಇಮ್ರಾನ್​ ** ಉಗ್ರರನ್ನು ಬೆಂಬಲಿಸದಂತೆ ಯುದ್ಧಸನ್ನದ್ಧ ಪಾಕಿಸ್ತಾನಕ್ಕೆ ಚೀನಾ ಎಚ್ಚರಿಕೆ ** ಶೂಟಿಂಗ್ ವಿಶ್ವಕಪ್: ಮನು ಭಾಕರ್, ಸೌರಭ್ ಚೌಧರಿ ಜೊಡಿಗೆ ಚಿನ್ನ ** ಕ್ರಿಕೆಟ್: ಆಸಿಸ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ ಜಯ; ಸರಣಿ ಸಮಬಲ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 27-02-19 ** ಪುಲ್ವಾಮ ದಾಳಿಗೆ ಪ್ರತೀಕಾರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದಿಂದ ಏರ್ ಸ್ಟ್ರೈಕ್; ಜೈಷ್ ಅಡಗುದಾಣಗಳು ಧ್ವಂಸ; ಪಾಕ್ ಗಡಿಯೊಳಗೆ ನುಗ್ಗಿ 350 ಉಗ್ರರನ್ನು ಹೊಡೆದುರುಳಿಸಿದ ಭಾರತ ** 1971ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಪಾಕ್ ನೆಲಕ್ಕೆ ನುಗ್ಗಿದ ಲೋಹದ ಹಕ್ಕಿಗಳು ** ಇಂದು ಶೇಗುಣಸಿಯ ಕೂಡನಹಳ್ಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ ** ದೇಶ ಸುರಕ್ಷಿತ ಕೈಗಳಲ್ಲಿದೆ, ದೇಶಕ್ಕಿಂತ ಮಿಗಿಲು ಯಾವುದೂ ಇಲ್ಲ, ದೇಶ ತಲೆ ತಗ್ಗಿಸಲು ಬಿಡಲ್ಲ: ಪ್ರಧಾನಿ ಮೋದಿ ** ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಳ್ಗಿಚ್ಚು: ವಾಯುಪಡೆ ಹೆಲಿಕಾಪ್ಟರ್‌ಗಳಿಂದ ಮುಂದುವರೆದ  ಕಾರ್ಯಾಚರಣೆ ** ಲೋಕಸಭಾ ಚುನಾವಣೆ: ಸೀಟು ಹಂಚಿಕೆ ಬಗ್ಗೆ  ಮೈತ್ರಿ ಪಕ್ಷದಲ್ಲಿ ಮೂಡಿಲ್ಲ ಒಮ್ಮತ ** ಸುಮಲತಾಗಿಲ್ಲ ಮಂಡ್ಯ ಟಿಕೆಟ್, ಸಚಿವ ಡಿ.ಕೆ.ಶಿವಕುಮಾರ್ ಪರೋಕ್ಷ ಹೇಳಿಕೆ ** ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಕೋನರೆಡ್ಡಿ ನೇಮಕ ** ದೆಹಲಿ: ಜನಸಾಮಾನ್ಯರೊಂದಿಗೆ ಮೋದಿ ಮೆಟ್ರೋ ಪ್ರಯಾಣ ** ವಾಯುಪಡೆ ದಾಳಿ: ಪಂಜಾಬಿನ ಆರು ಗಡಿ ಜಿಲ್ಲೆಗಳಲ್ಲಿ ಹೈ ಆಲರ್ಟ್ ** ವಾಯುಪಡೆ ದಾಳಿಗೆ ಸರ್ವ ಪಕ್ಷಗಳಿಂದ ಮೆಚ್ಚುಗೆ: ಸುಷ್ಮಾ ಸ್ವರಾಜ್ ಸಂತಸ ** ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ: ಪಾಕಿಸ್ತಾನ ಸೇನೆ, ಜನರಿಗೆ ಇಮ್ರಾನ್ ಖಾನ್ ಸೂಚನೆ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 26-02-19 ** ಅಥಣಿ: ದ್ರಾಕ್ಷಿ ಸಾಗಿಸುತ್ತಿದ್ದ ಲಾರಿ ಪಲ್ಟಿ, ಸ್ಥಳದಲ್ಲೇ ಮೂವರು ಸಾವು ** ಬೆಳಗಾವಿ ಜಿಪಂ ಸದಸ್ಯರ ತಿಂಗಳ ಗೌರವಧನ ಹುತಾತ್ಮ ಯೋಧ ಗುರು ಕುಟುಂಬಕ್ಕೆ ** 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋವರೆಗೂ ಮನೆಗೆ ಹೋಗುವುದಿಲ್ಲ: ಬಿಎಸ್​ವೈ ಸಂಕಲ್ಪ ** ಶಿವಮೊಗ್ಗ ಲೋಕಸಭೆ ಕ್ಷೇತ್ರ ಖಂಡಿತ ನಮ್ಮದೇ, ಮಧು ಬಂಗಾರಪ್ಪ ನಮ್ಮ ಅಭ್ಯರ್ಥಿ: ದೇವೇಗೌಡ ** ವೋಲಾ-ಊಬರ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಸೇವೆ: ಬಂಡೆಪ್ಪ ಕಾಶೆಂಪುರ ** ಬಂಡೀಪುರ ನಂತರ ನಂದಿ ಬೆಟ್ಟದಲ್ಲೂ ಕಾಡ್ಗಿಚ್ಚು: ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳ ಹರಸಾಹಸ ** ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ ಮಾಡಿ, ಹುತಾತ್ಮ ಯೋಧರನ್ನು ಸ್ಮರಿಸಿದ ಪ್ರಧಾನಿ ಮೋದಿ ** ಉರಿ, ಪುಲ್ವಾಮಾ ದಾಳಿ: ನ್ಯಾಯಾಂಗ ತನಿಖೆಗೆ ಸುಪ್ರೀಂ ನಕಾರ ** ಪುಲ್ವಾಮಾ ದಾಳಿ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಜಾ ** ಬಂಡೀಪುರ ಕಾಡ್ಗಿಚ್ಚು: ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಭೇಟಿ; ಯದುವೀರ್​ ಬೇಸರ, ಪುನೀತ್-ದರ್ಶನ್ ಮನವಿ ​ ** ಪರಿಕ್ಕರ್ ಆರೋಗ್ಯ ಸ್ಥಿರ, 'ಆಂತರಿಕ ರಕ್ತಸ್ರಾವ ಸ್ಥಗಿತಗೊಂಡಿದೆ': ಗೋವಾ ಸ್ಪೀಕರ್ ** ಉತ್ತರ ಖಂಡ್, ಮಧ್ಯಪ್ರದೇಶದಲ್ಲೂ ಬಿಎಸ್ಪಿ- ಎಸ್ಪಿ ಮೈತ್ರಿ ವಿಸ್ತರಣೆ ** ಅಯೋಧ್ಯೆಯಲ್ಲಿ ಪ್ರಾರ್ಥನೆ ಮೂಲಭೂತ ಹಕ್ಕು: ತ್ವರಿತ ವಿಚಾರಣೆಗೆ ಸುಬ್ರ...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-02-19 ** ಬಂಡೀಪುರದಲ್ಲಿ ಆರದ ಬೆಂಕಿ, ಸಾವಿರಾರು ಎಕರೆ ಅರಣ್ಯ ನಾಶ; ವನ್ಯ ಜೀವಿಗಳ ಸಾವು ** ರಾಜ್ಯ ರಾಜಕೀಯದಲ್ಲಿ ದಲಿತರನ್ನು ತುಳಿಯುವ ಕೆಲಸ ನಡೆಯುತ್ತಿದೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ** ಚುನಾವಣೇಲಿ ಸ್ಪರ್ಧೆ ಖಚಿತ, ಕಾಂಗ್ರೆಸ್ ಕಡೆ ಒಲವಿರೋದು ನಿಜ: ಸುಮಲತಾ ** ಖರ್ಗೆ ಪ್ರಧಾನಿಯಾದರೂ ಅಚ್ಚರಿಪಡಬೇಕಿಲ್ಲ- ಶಾಮನೂರು ಶಿವಶಂಕರಪ್ಪ ** 20 ಸೀಟು ಗೆದ್ದರೆ ಗದ್ದುಗೆಯ ಮೇಲೆ ಯಡಿಯೂರಪ್ಪ : ಶಾ ಅಭಯಹಸ್ತ ** ಬೆಂಗಳೂರು ಘಟನೆ ಮಾಸುವ ಮುನ್ನವೇ ಚೆನ್ನೈನಲ್ಲಿ ಅಗ್ನಿ ಅವಘಡ: ನೂರಾರು ಕಾರುಗಳು ಬೆಂಕಿಗಾಹುತಿ ** ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ ** ಮೂರು ತಿಂಗಳ ಬಳಿಕ ಮತ್ತೆ ಮನ್​ ಕೀ ಬಾತ್​ನಲ್ಲಿ ಭೇಟಿಯಾಗುವೆ: ಮೋದಿ ** ಗೋರಕ್​ಪುರದಲ್ಲಿ ಕಿಸಾನ್​ ಆದಾಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ** ಗೋವಾ ಸಿಎಂ ಮನೋಹರ್ ಪರ್ರಿಕರ್ ಮತ್ತೆ ಆಸ್ಪತ್ರೆಗೆ ದಾಖಲು ** ಕಿಸಾನ್ ಸಮ್ಮಾನ್ ಬಿಜೆಪಿಯ ಮತಕ್ಕಾಗಿ ಲಂಚದ ಯೋಜನೆಯಾಗಿದೆ; ಪಿ ಚಿದಂಬರಂ ಟೀಕೆ ** ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಭಾರತ, ಆಸೀಸ್ ಆಟಗಾರರು ** ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದು ವಿಶ್ವದಾಖಲೆ ನಿರ್ಮಿಸಿದ 16 ವರ್ಷದ ಸೌರಬ್ ** ಮೊದಲ ಟಿ-20: ಭಾರತದ ವಿರುದ್ಧ ಆಸಿಸ್ ಗೆ ಸುಲಭ ಜಯ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 24-02-19 ** ಬೆಂಗಳೂರು: ಏರೋ ಇಂಡಿಯಾ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು! ** ನೆರೆವೈರಿ ಪಾಕಿಗೆ ಟೊಮೆಟೊ ರಫ್ತು ಮಾಡದಿರಲು ಕೋಲಾರ ರೈತರು ನಿರ್ಧಾರ ** ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ರೈತರ ಮೇಲಿದ್ದ ಕೇಸ್ ವಾಪಸ್ ** ನಮ್ಮನ್ನು ಯಾರೂ ಏನೂ ಮಾಡಲಾಗದು: ಸರ್ಕಾರ ಉಳಿಸುವ ಶಕ್ತಿ ನನಗೆ, ಡಿಕೆ ಶಿವಕುಮಾರ್​ಗೆ ಇದೆ: ಸಿಎಂ ** ಅತಿ ಕಡಿಮೆ ಸ್ಥಾನ ಬಂದ ಜೆಡಿಎಸ್‌ ಕೈಗೆ ಅಧಿಕಾರ ಕೊಟ್ಟು ಇತಿಹಾಸ ನಿರ್ಮಿಸಿದ ಸಿದ್ದರಾಮಯ್ಯ: ಬಿಎಸ್​ವೈ ** ಮಾ. 1ರಿಂದ ಆಗುಂಬೆ ಘಾಟಿ ರಸ್ತೆ ಬಂದ್ ** ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗಳ ಮೇಲಲ್ಲ: ನರೇಂದ್ರ ಮೋದಿ ** ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ನೆನೆದು ಯೋಗಿ ಆದಿತ್ಯನಾಥ್​ ವೇದಿಕೆಯಲ್ಲೇ ಕಣ್ಣೀರು ** ಪ್ರತ್ಯೇಕತಾವಾದಿಗಳ ಮೇಲೆ ಮುಗಿಬಿದ್ದ ಸರಕಾರ, 150ಕ್ಕೂ ಹೆಚ್ಚು ಬಂಧನ: ಕಾಶ್ಮೀರ ಉದ್ವಿಗ್ನ ** ಜಮ್ಮುಕಾಶ್ಮೀರ ಲಿಬರೇಷನ್​ ಫ್ರಂಟ್​ ಮುಖ್ಯಸ್ಥ ಯಾಸಿನ್​ ಮಲಿಕ್​ ಬಂಧನ ** ಜಮ್ಮು-ಕಾಶ್ಮೀರದಲ್ಲಿ ಭದ್ರತೆ ಹೆಚ್ಚಳ: 10 ಸಾವಿರ ಸೈನಿಕರ ಏರ್​ಲಿಫ್ಟ್​ ** ಪುಲ್ವಾಮಾ ದಾಳಿಗೂ, ಜೈಷ್​ ಕಚೇರಿಯನ್ನು ವಶಕ್ಕೆ ಪಡೆದಿರುವುದಕ್ಕೂ ಸಂಬಂಧವಿಲ್ಲ: ಪಾಕ್​ ** ಪುಲ್ವಾಮ ದಾಳಿ: ತೀಕ್ಷ್ಣ ಪ್ರತೀಕಾರಕ್ಕಾಗಿ ಭಾರತದ ತುಡಿತ ನನಗೆ ಅರ್ಥವಾಗುತ್ತ...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 23-02-19 ** ಆಡಿಯೋ ಟೇಪ್ ಪ್ರಕರಣ: ಬಿಎಸ್ ವೈ ಸೇರಿ ನಾಲ್ವರ ವಿರುದ್ಧದ ಎಫ್ ಐ ಆರ್ ಗೆ ಕೋರ್ಟ್ ಮಧ್ಯಂತರ ತಡೆ ** ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರಾಜ್ಯಪಾಲರಿಂದ ಚಾಲನೆ ** ಸಿದ್ದರಾಮಯ್ಯ ಅವರ ಅಪ್ಪನಾಣೆ ಮೋದಿ ಪ್ರಧಾನಿ ಆಗೇ ಆಗ್ತಾರೆ: ಸಚಿವ ಜಿಗಜಿಣಗಿ ** ಶೀಘ್ರದಲ್ಲೇ ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿಗೆ ಪ್ರಧಾನಿ ಶಿಲಾನ್ಯಾಸ: ಪಿಯೂಷ್ ಗೋಯಲ್ ** ಜೆಡಿಎಸ್​ ಸೇರಿದ್ದ ಅರುಣಾಚಲಪ್ರದೇಶ ಮಾಜಿ ಸಿಎಂ ಅಪಾಂಗ್ ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ, ಈಶಾನ್ಯದ ಉಸ್ತುವಾರಿ ** 3 ಎಎಲ್‍ಎಚ್‍-ಎಂಕೆ ಹೆಲಿಕಾಪ್ಟರ್ ಗಳನ್ನು ಸೇನೆಗೆ ಹಸ್ತಾಂತರಿಸಿದ ಎಚ್ಎಎಲ್‍ ** ಸಿಯೋಲ್​ ಶಾಂತಿ ಪುರಸ್ಕಾರ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ** ಜೈಷ್​ ಎ ಮೊಹಮದ್​ನ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ ** ದೇಶದೊಳಗಿನ ಕಾಶ್ಮೀರಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಿ: ಸುಪ್ರೀಂಕೋರ್ಟ್​ ಸೂಚನೆ ** ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಘೋಷಿಸಿದ ತೆಲಂಗಾಣ ಸಿಎಂ ** ಯುದ್ಧದ ಮಾತು ಬರುತ್ತಿರುವುದು ನಮ್ಮಿಂದಲ್ಲ ಎಂದ ಪಾಕಿಸ್ತಾನದ ಸೇನಾಧಿಕಾರಿ ಆರಿಫ್​ ಗಫೂರ್​ ** ಐಪಿಎಲ್ ಅದ್ಧೂರಿ ಉದ್ಘಾಟನೆ ಇಲ್ಲ; ವೆಚ್ಚದ ಹಣ ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ಅರ್ಪಣೆ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 22-02-19 ** ಇಂದಿನಿಂದ ಅಬುಧಾಬಿಯಲ್ಲಿ 15ನೇ ವಿಶ್ವ ಕನ್ನಡ ಸಂಸ್ಕ್ರತಿ ಸಮ್ಮೇಳನ: ಶೇಗುಣಸಿಯ ಸಾಹಿತಿ ನಾನಾಸಾಹೇಬ ಹಚ್ಚಡದ ಯುವ ಸಾಹಿತ್ಯ ಗೋಷ್ಠಿಗೆ ಆಹ್ವಾನ ** ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ: ಶಾಸಕ ಕಂಪ್ಲಿ ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ ** ಕನ್ನಡ ಚಿತ್ರಂಗದ ಬೆಳವಣಿಗೆಗೆ ಸರ್ಕಾರ ಸದಾ ಸಿದ್ಧ: ಮುಖ್ಯಮಂತ್ರಿ ಕುಮಾರಸ್ವಾಮಿ ** ಎಸ್ಐಟಿ ತನಿಖೆಗೆ ಆತುರಬೇಡ , ಲೋಕ ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ: ಸಿಎಂ ಕುಮಾರಸ್ವಾಮಿ ** ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ನಟಿ ಸುಮಲತಾ ಅಂಬರೀಶ್​ ಸ್ಪಷ್ಟನೆ ** ಭಾರತದ ನದಿಗಳನ್ನು ಪಾಕ್​ಗೆ ಹರಿಸದಿರಲು ನಿತಿನ್​ ಗಡ್ಕರಿ ನಿರ್ಧಾರ: ಪುಲ್ವಾಮಾ ದಾಳಿಗೆ ಮತ್ತೊಂದು ತಿರುಗೇಟು ** ಸ್ವದೇಶಿ ನಿರ್ಮಿತ ತೇಜಸ್​ ವಿಮಾನದಲ್ಲಿ ಹಾರಾಟ ನಡೆಸಿದ ಭೂ ಸೇನಾ ಮುಖ್ಯಸ್ಥ ರಾವತ್​ ** ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ ** ನಾವು ಮತ್ತೆ ಮೋದಿ ಸರ್ಕಾರ ತಂದು ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್​ ಷಾ ** ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮಗನ ವಿರುದ್ಧ ಮುಲಾಯಂ ಸಿಂಗ್‌ ಕಿಡಿ ** ನಮ್ಮೊಂದಿಗಿನ ಮೈತ್ರಿಗೆ ಕಾಂಗ್ರೆಸ್​ ಒಪ್ಪುತ್ತಿಲ್ಲ, ಅವರ ಮನವೊಲಿಸಿ ಸಾಕಾಯಿತು: ಅರವಿಂದ್​ ಕೇಜ್ರಿವಾಲ್​ ** ಎಸ್​ಪಿ-ಬಿಎಸ್​ಪಿ ನಡುವೆ ಕ್ಷೇತ್ರ ಹಂಚಿಕೆಯೂ ಪೂರ್ಣ: ಅಮೇಥಿ, ರಾಯ್​...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 21-02-19 ** ಮಾತಿನಿಂದ ಏನೂ ಆಗಲ್ಲ, ಮೋದಿ ಮಾಡಿ ತೋರಿಸಬೇಕು: ದಿನೇಶ್‌ ಗುಂಡೂರಾವ್ ** ಆನಂದ್​ ಸಿಂಗ್​ ಮೇಲಿನ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಬಂಧನ ** ಮೇಕೆದಾಟು ಯೋಜನೆ: ಸುಪ್ರೀಂ ವಿಚಾರಣೆ 3 ವಾರಗಳ ಕಾಲ ಮುಂದೂಡಿಕೆ ** ಅಯೋಧ್ಯೆ ವಿವಾದ: ಫೆಬ್ರವರಿ 26ರಂದು ಪಂಚ ಸದಸ್ಯರ ಪೀಠ ವಿಚಾರಣೆ ** ಪುಲ್ವಾಮಾ ಉಗ್ರ ದಾಳಿ: ಎನ್ಐಎ ತನಿಖೆ ಆರಂಭ, ಪೊಲೀಸ್, ಸೇನೆ, ಗುಪ್ತಚರ ಇಲಾಖೆ ಸಹಕಾರ ** ವಿಶ್ವದ ದಿಗ್ಗಜರ ಜತೆ ಭಾರತ ನಿಲ್ಲಲು ಏರ್ ಶೋ ಸಹಾಯ: ನಿರ್ಮಲಾ ಸೀತಾರಾಮನ್ ** ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್​ ಮೈತ್ರಿ ಘೋಷಣೆ: ಕಾಂಗ್ರೆಸ್​ಗೆ 9 ಕ್ಷೇತ್ರ ** ನಿಮ್ಮೊಂದಿಗೆ ನಾವಿದ್ದೇವೆ: ಹುತಾತ್ಮ ಯೋಧರ ಕುಟುಂಬವನ್ನು ಭೇಟಿ ಮಾಡಿದ ರಾಹುಲ್‌, ಪ್ರಿಯಾಂಕ ಗಾಂಧಿ ** ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಘಾತ: ಸಿಎಂ ಸ್ಥಾನ ನೀಡದಿದ್ದರೆ ನಮ್ಮ ದಾರಿ ನಮಗೆ ಎಂದ ಮಿತ್ರ ಪಕ್ಷ ಶಿವಸೇನೆ ** ತಿಂಗಳೊಳಗೆ ಹಣ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ: ಎರಿಕ್ಸನ್​ ಪ್ರಕರಣದಲ್ಲಿ ಅನಿಲ್​ ಅಂಬಾನಿಗೆ ಸುಪ್ರೀಂ ತರಾಟೆ ** ಭಯೋತ್ಪಾದನೆ ಬೆಂಬಲಿಗರು ವಿಶ್ವಸಂಸ್ಥೆ ಕ್ರಮ ಎದುರಿಸಬೇಕು: ಜೈಶ್ ವಿರುದ್ಧ ಸೌದಿ ವಿದೇಶಾಂಗ ಸಚಿವರ ಗುಡುಗು ** ಉಗ್ರರ ವಿರುದ್ಧದ ಹೋರಾಟಕ್ಕೆ ಸೌದಿ ಅರೇಬಿಯಾ ನೆರವು ** ಮಸೂದ್​ ಅಜರ್​ನನ್ನು ಜಾಗತಿಕ ಉಗ್ರಗಾಮಿ ಎಂದು ಘೋಷಿಸುವ ವಿಷಯದಲ್ಲಿ ಭಾರತಕ್ಕೆ ರಷ್ಯಾ ಬೆಂ...
ಜೈ‌ ಶೇಗುಣಸಿ ಸುದ್ದಿ ಸಂಪದ... ದಿ: 20-02-19 ** ಬೆಳಗಾವಿ ವಿಟಿಯು ವಿಭಜನೆ ಸದ್ಯಕ್ಕಿಲ್ಲ: ಸಿಎಂ ಸ್ಪಷ್ಟನೆ ** ಆಪರೇಷನ್‌ ಕಮಲ ಎನ್ನಲಾದ ಆಡಿಯೋದಲ್ಲಿನ ಧ್ವನಿ ನನ್ನದಲ್ಲ: ಪ್ರೀತಂ ಗೌಡ ** ನಾವು ಭಿಕ್ಷುಕರಲ್ಲ: ಸ್ಥಾನ ಹೊಂದಾಣಿಕೆ ಕುರಿತು ಕಾಂಗ್ರೆಸ್ ಗೆ ಸಿಎಂ ಕುಮಾರಸ್ವಾಮಿ ** ಏರ್​ ಶೋ ತಾಲೀಮು ವೇಳೆ 2 ಯುದ್ಧ ವಿಮಾನಗಳ ಡಿಕ್ಕಿಯಾಗಿ ಪತನ; ಒಬ್ಬ ಪೈಲಟ್​ ದುರ್ಮರಣ, ಮತ್ತಿಬ್ಬರಿಗೆ ತೀವ್ರ ಗಾಯ.ಏರ್​ ಶೋ ತಾಲೀಮು ರದ್ದು ** ತಮಿಳುನಾಡಿನಲ್ಲೂ ಮೈತ್ರಿ: ಐದು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟ ಎಐಎಡಿಎಂಕೆ ** ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ: ಗೌರವ ಸಲ್ಲಿಸಿದ ಪ್ರಧಾನಿ ಮೋದಿ ** ನನ್ನಿಂದ ಪವಾಡ ನಿರೀಕ್ಷಿಸಬೇಡಿ: ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ; ಕಾರ್ಯಕರ್ತರಿಗೆ ಪ್ರಿಯಾಂಕಾ ಕೆರೆ ** ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಕೊಂದು ಹಾಕಲಾಗುತ್ತದೆ: ಕಾಶ್ಮೀರಿ ಯುವಕರಿಗೆ ಸೇನೆಯ ಖಡಕ್​ ಎಚ್ಚರಿಕೆ ** ಯಾವುದೇ ಸಾಕ್ಷಿಯಿಲ್ಲದೆ ಭಾರತ ನಮ್ಮ ವಿರುದ್ಧ ಆರೋಪಿಸುತ್ತಿದೆ: ಪುಲ್ವಾಮಾ ದಾಳಿ ಕುರಿತು ಪಾಕ್​​ ಪ್ರಧಾನಿಯ ಪ್ರತಿಕ್ರಿಯೆ ** ಭಯೋತ್ಪಾದನೆಗೆ ಪಾಕಿಸ್ತಾನ ನರಮಂಡಲವಿದ್ದಂತೆ: ಇಮ್ರಾನ್ ಖಾನ್‌ಗೆ ಭಾರತ ತಿರುಗೇಟು ** ಭಾರತದ ಗುಟುರಿಗೆ ಬೆದರಿದ ಪಾಕಿಸ್ತಾನ: ಸಂಭಾವ್ಯ ಅಪಾಯ ನಿವಾರಿಸಲು ವಿಶ್ವಸಂಸ್ಥೆಗೆ ಮೊರೆ ** ಭಯೋತ್ಪಾದನೆ ನಿರ್ಮೂಲನೆಗೆ ಇಸ್ರೇಲ್‌ನಿಂದ ಭಾರತಕ್ಕೆ ಬೇಷರತ್‌ ಬೆಂಬಲ ಘೋಷಣೆ ...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 19-02-19 ** ಬಿಬಿಎಂಪಿ ಬಜೆಟ್; ಸರ್ವಜನರ ಹಿತ ಪರಮ ಗುರಿ, 645.97 ಕೋಟಿ ಮೊತ್ತದ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ ** ಫೆಬ್ರವರಿ 23,24ರಂದು ನಡೆಯಬೇಕಿದ್ದ ಬಿಎಂಆರ್‌ಸಿಎಲ್ ಪರೀಕ್ಷೆ ಮುಂದೂಡಿಕೆ ** ಪುಲ್ವಾಮ ಉಗ್ರ ದಾಳಿ: ಕೇವಲ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯಲ್ಲ: ಕುಮಾರಸ್ವಾಮಿ ** ಧರ್ಮಸ್ಥಳದಲ್ಲಿ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ವೈಭವದ ತೆರೆ ** ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮತ್ತೊಮ್ಮೆ ಬೆದರಿಕೆ ಕರೆ ** ಶ್ರೀಶೈಲ ಜಗದ್ಗುರು ನೇತೃತ್ವದಲ್ಲಿ 1.96 ಲಕ್ಷ ಜನರಿಂದ ಇಷ್ಟಲಿಂಗ ಪೂಜೆ ** ಮಹಾರಾಷ್ಟ್ರ: ಲೋಕ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು ** ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ಪುಲ್ವಾಮ ದಾಳಿ ಹುತಾತ್ಮ ಸಿಆರ್ ಪಿಎಫ್ ಯೋಧರ ಸಾಲ ಮನ್ನಾ ** ಎನ್​ಕೌಂಟರ್​: ಪುಲ್ವಾಮಾ ದಾಳಿಯ ಮಾಸ್ಟರ್​ಮೈಂಡ್​ ಸೇರಿ ಮೂವರು ಉಗ್ರರ ಹತ್ಯೆ ** ಪಾಕ್​ನೊಂದಿಗಿನ ಮಾತುಕತೆ ಮುಗಿದು ಹೋದ ಅಧ್ಯಾಯ: ಪ್ರಧಾನಿ ಮೋದಿ ** ಶಾಂತಿ ಇಲ್ಲದ ಮೇಲೆ 'ಪೀಸ್ ಬಸ್ ಸೇವೆ'ಗೂ ಅರ್ಥವಿಲ್ಲ: ಭಾರತ-ಪಾಕ್ ನಡುವಿನ ಬಸ್ ಸಂಚಾರ ಸ್ಥಗಿತ ** ಭಾರತೀಯ ಚಿತ್ರರಂಗದಿಂದ ಪಾಕ್​ ಕಲಾವಿದರಿಗೆ ಬ್ಯಾನ್​: ಎಐಸಿಡಬ್ಲ್ಯೂ ನಿರ್ಧಾರ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 18-02-19 ** ಫೆ.19ರಂದು ಕರ್ನಾಟಕ ಬಂದ್ ಗೆ ಬದಲಾಗಿ ಕರಾಳ ಕರ್ನಾಟಕ ಆಚರಣೆ ** ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಬೇಕಿದೆ : ಯಡಿಯೂರಪ್ಪ ** ನಿಮ್ಮಲ್ಲಿ ಉರಿಯುತ್ತಿರುವ ಪ್ರತೀಕಾರದ ಜ್ವಾಲೆ ನನ್ನಲ್ಲೂ ಉರಿಯುತ್ತಿದೆ: ಪ್ರಧಾನಿ ಮೋದಿ ** ಪಾಕಿಸ್ತಾನ ಗಡಿ ಸಮೀಪವೇ ವಾಯು ಶಕ್ತಿ ಪ್ರದರ್ಶಿಸಿದ ಭಾರತ ** ಪಾಕ್​ ವಿದೇಶಾಂಗ ಸಚಿವಾಲಯ ವೆಬ್​ಸೈಟ್​ ಹ್ಯಾಕ್​: ಭಾರತದ ಕಡೆ ಬೊಟ್ಟು ಮಾಡುತ್ತಿರುವ ಪಾಕಿಸ್ತಾನ ** ಭಾರತೀಯ ವೈದ್ಯರ ನಿಯೋಗದ ಪಾಕಿಸ್ತಾನ ಪ್ರವಾಸ ರದ್ದು ** ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ನಮ್ಮ ಹೊಣೆ ಎಂದ ಮುಖೇಶ್​ ಅಂಬಾನಿ, ನೀತಾ ಅಂಬಾನಿ ** ಪುಲ್ವಾಮಾ ದಾಳಿ: ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರತಿ ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ನೆರವು ** ಸೈನಿಕರ ಕಲ್ಯಾಣ ನಿಧಿಗೆ ಉರಿ ತಂಡದಿಂದ 1 ಕೋಟಿ. ರೂ. ** ಹುತಾತ್ಮ ಯೋಧರ ಕುಟುಂಬಗಳಿಗೆ ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್​ನಿಂದ 2.51 ಕೋಟಿ ರೂ. ನೆರವು ** ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ: ರಜನೀಕಾಂತ್​ ಸ್ಪಷ್ಟನೆ ** ಕ್ರಿಕೆಟ್​ ವಿಶ್ವಕಪ್​ನಲ್ಲಿ ಪಾಕ್​ ಜತೆ ಭಾರತ ಆಡಬಾರದು: ಬಿಸಿಸಿಐಗೆ ಸಿಸಿಐ ಕಾರ್ಯದರ್ಶಿ ಮನವಿ
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 17-02-19 ** ಹುತಾತ್ಮ ಯೋಧ ಗುರು ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ನಮನ; 25 ಲಕ್ಷ ರೂ. ಪರಿಹಾರ, ಯೋಧನ ಪತ್ನಿಗೆ ಸರ್ಕಾರಿ ಉದ್ಯೋಗ ಘೋಷಣೆ ** ಮಂಡ್ಯದ ವೀರ ಯೋಧ ಗುರು ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವಗಳೊಂದಿಗೆ ಹೂಟ್ಟೂರಲ್ಲಿ ಅಂತ್ಯಸಂಸ್ಕಾರ ** ನಮ್ಮದು ನವ ಭಾರತ, ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ ** ಹುತಾತ್ಮ ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ಕೊಡುತ್ತೇನೆ: ಸುಮಲತಾ ** ಯೋಧರ ಕಲ್ಯಾಣಕ್ಕಾಗಿ ಮಂತ್ರಾಲಯ ಶ್ರೀಮಠದಿಂದ 10 ಲಕ್ಷ ರೂ. ದೇಣಿಗೆ ** ಹುತಾತ್ಮ ಯೋಧ ಗುರು ಕುಟುಂಬಕ್ಕೆ ವಿಳಂಬ ಮಾಡದೆ ಜೀವ ವಿಮಾ ಹಣ ನೀಡಿದ ಎಲ್​ಐಸಿ ** ಭಯೋತ್ಪಾದನೆ ಹತ್ತಿಕ್ಕಲು ಕೇಂದ್ರಕ್ಕೆ ಎಲ್ಲಾ ರೀತಿಯ ಬೆಂಬಲ: ಸರ್ವಪಕ್ಷಗಳ ಒಕ್ಕೊರಲ ನಿರ್ಧಾರ ** ಪುಲ್ವಾಮಾ ದಾಳಿ ನಂತರ ವಿವಾದಾಸ್ಪದ ಹೇಳಿಕೆ: ಕಪಿಲ್ ಶರ್ಮಾ ಶೋ ನಿಂದ ಸಿಧುಗೆ ಗೇಟ್ ಪಾಸ್ ** ಪುಲ್ವಾಮ ಉಗ್ರ ದಾಳಿ ಪರಿಣಾಮ: ಪಾಕ್​ ಉತ್ಪನ್ನಗಳ ಮೇಲಿನ ಆಮದು ಸುಂಕ ಶೇ.200 ಹೆಚ್ಚಳ ** ಪಾಕಿಸ್ತಾನಕ್ಕೆ ಇರಾನ್​ನಿಂದ ಪ್ರತಿಕಾರದ ಬೆದರಿಕೆ ** ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​: ಸಿಂಧು ಸೋಲಿಸಿ ಪ್ರಶಸ್ತಿ ಗೆದ್ದ ಸೈನಾ
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 16-02-19 ** ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ನಿಯಮಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ** ಬಂಡಾಯ ತಂಡ: ಸಿದ್ದರಾಮಯ್ಯರನ್ನು ಭೇಟಿಯಾದ ರಮೇಶ್​ ಜಾರಕಿಹೊಳಿ, ನಾಗೇಂದ್ರ ** ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ: ವಿಚಾರಣೆಗೆ ಬರುವಂತೆ ಸಚಿವ ಪುಟ್ಟರಂಗ ಶೆಟ್ಟಿಗೆ ನೋಟಿಸ್​ ** ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿ: ಪೇಜಾವರ ಶ್ರೀ ** ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್​ ಚಂದ್ರ ಅಧಿಕಾರ ಸ್ವೀಕಾರ ** ಕೇಂದ್ರ ಹಣಕಾಸು ಸಚಿವರಾಗಿ ಮತ್ತೆ ಕಾರ್ಯಭಾರವಹಿಸಿಕೊಂಡ ಅರುಣ್​ ಜೇಟ್ಲಿ ** ಪುಲ್ವಾಮ ದಾಳಿ: ಜಮ್ಮುವಿನಲ್ಲಿ ಪಾಕ್​ ವಿರುದ್ಧ ಭುಗಿಲೆದ್ದ ಆಕ್ರೋಶ ** ಭದ್ರತಾ ಪಡೆಗಳು ಸಂಚರಿಸುವಾಗ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ: ರಾಜನಾಥ್ ಸಿಂಗ್ ** ಭಾರತಕ್ಕೆ ಬೆಂಬಲ ಸೂಚಿಸಿರುವ ದೇಶಗಳಿಗೆ ಪಾಕಿಸ್ತಾನದ ವಿರುದ್ಧ ಕೋಪವಿದೆ: ಭಯೋತ್ಪಾದನೆ ಅಂತ್ಯಗೊಳಿಸುತ್ತೇವೆ- ಮೋದಿ ** ಹುತಾತ್ಮ ಯೋಧರ ಶವಪೆಟ್ಟಿಗೆ ಕೊಂಡೊಯ್ಯಲು ಹೆಗಲುಕೊಟ್ಟ ಗೃಹ ಸಚಿವ ರಾಜನಾಥ್ ಸಿಂಗ್ ** ಪುಲ್ವಾಮಾ ದಾಳಿ: ಪಾಕ್ ರಾಯಭಾರಿಗೆ ಭಾರತ ತರಾಟೆ, ಶೀಘ್ರ ಪ್ರತಿದಾಳಿಯ ಎಚ್ಚರಿಕೆ ** ಈ ದಾಳಿಯನ್ನು ಮರೆಯುವುದಿಲ್ಲ, ಇದಕ್ಕೆ ಪ್ರತೀಕಾರ ಪಡೆದೇ ಪಡೆಯುತ್ತೇವೆ: ಸಿಆರ್​ಪಿಎಫ್​ ಶಪಥ ** ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್​ ಷಾ ...
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 15-02-19 ** ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಸಿಆರ್‏ಪಿಎಫ್ ಬಸ್ ಸ್ಫೋಟ, 30 ಯೋಧರು ಹುತಾತ್ಮ ** ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ ** ಗದ್ದಲದ ನಡುವೆಯೇ ಹಲವು ವಿಧೇಯಕಗಳಿಗೆ ಅಂಗೀಕಾರ, ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ** ಕಲ್ಲು ತೂರಾಟ ಪ್ರಕರಣ: ಬಿಜೆಪಿ ಶಾಸಕ ಪ್ರೀತಂ ಗೌಡ ಕುಟುಂಬಕ್ಕೆ ರಕ್ಷಣೆ ನೀಡಲು ಸ್ಪೀಕರ್ ಆದೇಶ ** ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸಕ್ಕೆ ಕಾಂಗ್ರೆಸ್‌ ನಾಯಕರ ಭೇಟಿ, ಸಾಂತ್ವನ ** ಧರ್ಮಸ್ಥಳ ಮಹಾಮಸ್ತಕಾಭಿಷೇಕದಲ್ಲಿ ವೇದಿಕೆ ಚಪ್ಪರ ಕುಸಿದು ಮೂವರಿಗೆ ಗಾಯ ** ಅಮಿತ್​ ಷಾ ಗೋ ಬ್ಯಾಕ್​: ರಾಯಚೂರಿನಲ್ಲಿ ಕಾಂಗ್ರೆಸಿಗರ ಪ್ರತಿಭಟನೆ, ಬಂಧನ ** ಮಹಾಘಟಬಂಧನ ಗೆದ್ರೆ ಒಬ್ಬೊಬ್ಬರು ಒಂದೊಂದು ದಿನ ಪ್ರಧಾನಿ ಮಂತ್ರಿ: ಅಮಿತ್ ಷಾ ವ್ಯಂಗ್ಯ ** ಅನಾರೋಗ್ಯಕ್ಕೀಡಾದ ಅಣ್ಣಾ ಹಜಾರೆ: ಐಸಿಯುನಲ್ಲಿ ಚಿಕಿತ್ಸೆ ** ಆಪ್‌ನೊಂದಿಗಿನ ಮೈತ್ರಿಯನ್ನು ಕಾಂಗ್ರೆಸ್‌ ಕೈಬಿಟ್ಟಿದೆ: ಅರವಿಂದ ಕೇಜ್ರಿವಾಲ್‌ ** ದೆಹಲಿ ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರವಿದೆ: ಸುಪ್ರೀಂ; ಈ ಆದೇಶ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದ ಅರವಿಂದ್ ಕೇಜ್ರಿವಾಲ್ ** ಲೋಕಸಭಾ ಚುನಾವಣೆಗೆ ಸ್ಪರ್ಧೆ: ಪ್ರಿಯಾಂಕ ಗಾಂಧಿ ಸ್ಪಷ್ಟನೆ ** ಅನಿಲ್​ ಅಂಬಾನಿ ವಿರುದ್ಧದ ಸುಪ್ರೀಂ ಆದೇಶ ತಿದ್ದಿದ ಆರೋಪದಲ್ಲಿ ಇಬ್ಬರು...
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 14-02-19 ** ಆಪರೇಷನ್​ ಕಮಲದ ಆಡಿಯೋದಲ್ಲಿ ದೇವೇಗೌಡರ ಬಗ್ಗೆ ಹಗುರ ಮಾತು: ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ, ಕಾರ್ಯಕರ್ತನಿಗೆ ಗಾಯ ** ನನ್ನನ್ನು ಕೊಲೆ ಮಾಡಿಸಲು ಸಿಎಂ ಎಚ್​ಡಿಕೆ, ರೇವಣ್ಣ ಕಾರ್ಯಕರ್ತರನ್ನು ಕೆರಳಿಸಿದ್ದಾರೆ: ಪ್ರೀತಂ ಗೌಡ ** ಆಡಿಯೋ ಕ್ಲಿಪ್​​ ವಿಚಾರಕ್ಕೆ 3ನೇ ದಿನ ಬಜೆಟ್​ ಅಧಿವೇಶನವೂ ವ್ಯರ್ಥ ** ಸದನದಲ್ಲಿ ರೇಪ್​ ಪದ ಬಳಕೆಗೆ ಸ್ಪೀಕರ್​ ಕ್ಷಮೆಯಾಚನೆ ** ಅನರ್ಹತೆ ಭೀತಿ: ನಾಲ್ವರು ಅತೃಪ್ತ ಕಾಂಗ್ರೆಸ್ ಶಾಸಕರು ಸದನಕ್ಕೆ ಹಾಜರು ** ಸಿಎಂ ಎಚ್​ಡಿಕೆ ವಿರುದ್ಧ ಯಾವುದೇ ಅಸಮಾಧಾನವಿಲ್ಲ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಶಾಸಕ ಮಹೇಶ್​ ಕುಮಟಳ್ಳಿ ** ನಾವು ಆಪರೇಷನ್​ಗೆ ಒಳಗಾಗುವುದಕ್ಕೆ ಸಣ್ಣ ಮಕ್ಕಳಲ್ಲ: ಶಾಸಕ ಉಮೇಶ್​ ಜಾಧವ್​ ** ಬಿಜೆಪಿಯಲ್ಲಿ ಗೆಳೆಯರಿದ್ದು, ಅವರ ಮನೆಗೆ ಹೋದರೆ ಅದು ಆಪರೇಷನ್ ಕಮಲವಲ್ಲ: ರಮೇಶ್​ ಜಾರಕಿಹೊಳಿ ** ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಜಾರಿದ ಪಕ್ಷೇತರ ಶಾಸಕ ನಾಗೇಶ್‌, ಸಿದ್ದರಾಮಯ್ಯಗೆ ಬೆಂಬಲ ಪತ್ರ ಹಸ್ತಾಂತರ ** ಕೋಡಿ ಮಠದ ಶ್ರೀಗಳಿಗೆ ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್​ ** ವಿಟಿಯು ವಿಭಜನೆಗೆ ಕಾಂಗ್ರೆಸ್ ವಿರೋಧ: ಬಿಜೆಪಿಗೆ ಎಸ್ಆರ್ ಪಾಟೀಲ್ ಸಾಥ್ ** ತಾಜ್​ಮಹಲ್​ನ ಸೂಕ್ತ ನಿರ್ವಹಣೆ ಮಾಡದ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ತರಾಟೆ ** ಸಂಸತ್​ ಕೊನೆ ಭಾಷಣದಲ್ಲಿ ಮೋದಿಯದ್ದು ಅದೇ ಅಭಿಮಾನ, ಆತ್ಮವಿಶ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 13-02-19

ಜೈ ಶೇಗುಣಸಿ ಸುದ್ದಿ ಸಂಪದ. . ದಿ: 13-02-19 ** ಶಾಸಕ ಮಹೇಶ್ ಕುಮಟಳ್ಳಿ ಪತ್ತೆಗೆ ಮುಂಬೈಗೆ ತೆರಳಿದ ಅಥಣಿ ಪೊಲೀಸರು ** 100 ಗಿಟಾರ್ ಬಳಸಿ ರಾಷ್ಟ್ರಗೀತೆ ನುಡಿಸಿದ ವಿದ್ಯಾರ್ಥಿಗಳು: ಕೆಎಲ್‌ಇ ಸ್ಕೂಲ್ ನೂತನ ವಿಶ್ವದಾಖಲೆ ** ಶಾಸಕ ಉಮೇಶ್ ಜಾಧವ್‌ ಒಂದೆರಡು ದಿನದಲ್ಲಿ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ ** ಆಡಿಯೋ ಕ್ಲಿಪ್​​ ವಿಚಾರಕ್ಕೆ 2 ದಿನ ಬಜೆಟ್​ ಅಧಿವೇಶನ ವ್ಯರ್ಥ: ಇಂದು ಸ್ಪೀಕರ್ ರಿಂದ ಅಂತಿಮ ನಿರ್ಣಯ ಸಾಧ್ಯತೆ ** ಆಡಿಯೋ ಪ್ರಕರಣದ ಎಸ್​ಐಟಿ ತನಿಖೆಯ ನಿರ್ಧಾರದಿಂದ ಹಿಂದೆ ಸರಿಯಲ್ಲ: ಸ್ಪೀಕರ್​ ಸ್ಪಷ್ಟ ನಿಲುವು ** ಆಡಿಯೋ ಪ್ರಕರಣದ ಎಎಸ್​ಐಟಿ ತನಿಖೆ ನಡೆಸದಂತೆ ಬಿಜೆಪಿ ಸದಸ್ಯರಿಂದ ಸ್ಪೀಕರ್​ಗೆ ಮನವಿ ** ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಚಾಲನೆ; ರಾಜ್ಯಾದ್ಯಂತ ಉತ್ತಮ ಸ್ಪಂದನೆ ** ಇಬ್ರಾಹಿಂ ಸುತಾರಗೆ ರೇಣುಕಾಚಾರ್ಯ ಪ್ರಶಸ್ತಿ, ರಂಭಾಪುರಿ ಜಗದ್ಗುರು ಘೋಷಣೆ: ಮಾ.19ರಂದು ರಂಭಾಪುರಿ ಪೀಠದಲ್ಲಿ ಪ್ರಶಸ್ತಿ ಪ್ರದಾನ ** ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸುಧಾಮೂರ್ತಿ ಆಯ್ಕೆ ** ಸಂಸದೆ ಶೋಭಾ ಕರಂದ್ಲಾಜೆ ಬ್ಯಾಂಕ್​ ಖಾತೆಯಿಂದ 20 ಲಕ್ಷ ರೂ. ಎಗರಿಸಿದ ಹ್ಯಾಕರ್​ಗಳು ** ಹೆಸರಿನ ಜತೆ ಭಾರತ ರತ್ನ, ಪದ್ಮ ಪ್ರಶಸ್ತಿಗಳನ್ನು ಬಳಸುವಂತಿಲ್ಲ: ಕೇಂದ್ರ ** ಉದ್ದೇಶಿತ ಒಪ್ಪಂದಕ್ಕೂ ರಾಫೆಲ್ ಗೂ ಸಂಬಂಧ ಇಲ್ಲ: ರಾಹುಲ್ ಆರೋಪ ತಳ್ಳಿಹಾಕ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 12-02-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 12-02-19 ** ಶೇಗುಣಸಿ ಗ್ರಾಮದ ಪ್ರೌಢಶಾಲೆಯನ್ನು ಪದವಿ ಪೂರ್ವ ಕಾಲೇಜನ್ನಿಗಿ ಮೇಲ್ದರ್ಜೆಗೆ ಏರಿಸಿದ ಸರ್ಕಾರ ** ವಿಧಾನಸಭೆಯಲ್ಲಿ 'ಆಪರೇಷನ್ ಆಡಿಯೋ' ಸದ್ದು: ಚಾರಿತ್ರ್ಯವಧೆ ಸಾವಿಗಿಂತ ಕ್ರೂರ ಎಂದ ಸ್ಪೀಕರ್; ತನಿಖೆಗೆ ಆದೇಶ ** 'ಆಪರೇಷನ್ ಆಡಿಯೋ' ತನಿಖೆಗೆ ವಿಶೇಷ ತನಿಖಾ ತಂಡ ರಚನೆ: ಸಿಎಂ ಕುಮಾಸ್ವಾಮಿ ಘೋಷಣೆ ** ನಾಲ್ವರು ಅತೃಪ್ತ​ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ​ಗೆ ಕಾಂಗ್ರೆಸ್ ದೂರು ** ಆಪರೇಷನ್ ಆಡಿಯೋ: ಎಸ್ಐಟಿ ತನಿಖೆಗೆ ಬಿಜೆಪಿ ವಿರೋದ, ನ್ಯಾಯಾಂಗ ತನಿಖೆಗೆ ಆಗ್ರಹ ** ಆಪರೇಷನ್ ಆಡಿಯೋ: ಬಿಎಸ್ ವೈ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು ** ಚಿಕ್ಕಬಳ್ಳಾಪುರದಿಂದ ಅಮಿತ್ ಶಾರಿಂದ ಚುನಾವಣ ಪ್ರಚಾರ ಆರಂಭ ** ಲೋಕಸಭೆಯಲ್ಲಿ ಆಪರೇಷನ್ ಕಮಲ ಪ್ರತಿಧ್ವನಿ: ಕಾಂಗ್ರೆಸ್ ನಿಂದ ಸ್ವಲ್ಪಕಾಲ ಸಭಾತ್ಯಾಗ ** ಪ್ರಧಾನಿ ಮೋದಿ ರಾಜಧರ್ಮ ಪಾಲಿಸುತ್ತಿಲ್ಲ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಆಂಧ್ರ ಸಿಎಂ ನಾಯ್ಡು ** ಹೊಸ ಭವಿಷ್ಯ, ಹೊಸ ರಾಜಕೀಯ ಪ್ರಾರಂಭಕ್ಕೆ ನನ್ನೊಂದಿಗೆ ಕೈಜೋಡಿಸಿ: ಪ್ರಿಯಾಂಕ ಗಾಂಧಿ ವಾದ್ರಾ ** ಯೋಗ ಮಾಡುವುದು ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ, ಮೋದಿಗಾಗಿ ಅಲ್ಲ; ವೆಂಕಯ್ಯ ನಾಯ್ಡು ** ಅನಿಲ್‌ ಅಂಬಾನಿಗೆ ಲೂಟಿ ಮಾಡಲು ಚೌಕಿದಾರ್​ ಪ್ರಧಾನಿಯೇ ಬಾಗಿಲು ತೆರೆದರು: ರಾಹುಲ್​ ಗಾಂಧಿ ** ಲೋಕಪಾಲ ಕಾನೂನು ಜಾರಿಯಾದರೆ ರಾಫೆಲ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 11-02-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 11-02-19 ** ಧಾರವಾಡ ಐಐಟಿಯ ಶಾಶ್ವತ ಕ್ಯಾಂಪಸ್​ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ** ಆಪರೇಷನ್ ಕಮಲ: ಆಡಿಯೋದಲ್ಲಿರುವ ಧ್ವನಿ ನನ್ನದೇ: ಯಡಿಯೂರಪ್ಪ ತಪ್ಪೊಪ್ಪಿಗೆ ** ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ: ಯಡಿಯೂರಪ್ಪ ** ರಾಜ್ಯ ರಾಜಕಾರಣದಿಂದ ಬೇಸತ್ತಿದ್ದಾರೆ ನಾಡಿನ ಜನರು: ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ಅಸಮಾಧಾನ ** ಮುಸ್ಲಿಮರೇ ರಾಮಮಂದಿರ ಕಟ್ತಾರೆ: ಸಚಿವ ಜಮೀರ್ ** ಪ್ರೇಮಿಗಳ ದಿನ ನಮ್ಮ ಸಂಸ್ಕೃತಿಯಲ್ಲ, ಆಚರಣೆಗೆ ಅವಕಾಶ ನೀಡಬಾರದು: ಮುತಾಲಿಕ್ ** ನರೇಂದ್ರ ಮೋದಿ ಉಡುಗೊರೆ ಹರಾಜು: ಅಶೋಕ ಸ್ಥಂಭ ಪ್ರತಿಕೃತಿ 13 ಲಕ್ಷಕ್ಕೆ ಮಾರಾಟ; ಸಂಗ್ರಹವಾದ ಹಣ ಗಂಗಾ ಶುದ್ಧೀಕರಣಕ್ಕೆ ಬಳಕೆ. ** ಹೊಸ ಪಕ್ಷ ಸ್ಥಾಪಿಸಿದ ಪ್ರವೀಣ್ ತೊಗಾಡಿಯಾ: ರಾಮಮಂದಿರ ನಿರ್ಮಾಣ ಭರವಸೆಯೊಡನೆ ಲೋಕಸಭೆಗೆ ಸ್ಪರ್ಧೆ ** ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಫೇಸ್‌ಬುಕ್‌ ಪೋಸ್ಟ್‌ ಹಾಕಿದ ರಾಬರ್ಟ್‌ ವಾದ್ರಾ ** ಅಬುದಾಬಿ ಕೋರ್ಟ್​ಗಳಲ್ಲಿ ಹಿಂದಿಗೆ 3ನೇ ಅಧಿಕೃತ ಭಾಷಾ ಸ್ಥಾನಮಾನ ** ನ್ಯೂಜಿಲೆಂಡ್​ ವಿರುದ್ಧ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತಕ್ಕೆ ವೀರೊಚಿತ ಸೋಲು

ಜೈ ಶೇಗುಣಸಿ ಸುದ್ದಿ ಸಂಪದ... ದಿ: 10-02-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 10-02-19 ** ತೇರದಾಳ ನೂತನ ತಾಲೂಕು ಘೋಷಣೆ ಹಿನ್ನೆಲೆ ಪಟ್ಟಣದಾದ್ಯಂತ ಸಂಭ್ರಮಾಚರಣೆ ** ಇಂದು ಹುಬ್ಬಳ್ಳಿಗೆ ಪ್ರಧಾನಿ: ಲೋಕಸಭೆ ಚುನಾವಣೆಗೆ ಮೋದಿ ರಣಕಹಳೆ ** ಆಪರೇಷನ್ ಕಮಲ ಆಡಿಯೋ ನಕಲಿ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಮಂಜುನಾಥನ ಸನ್ನಿಧಿಯಲ್ಲಿ ಸಿಎಂ ಶಪಥ ** ಧರ್ಮಸ್ಥಳ ರಾಷ್ಟ್ರದ ಸ್ವಚ್ಛ ಧಾರ್ಮಿಕ ಕೇಂದ್ರ ಪ್ರಶಸ್ತಿಗೆ ಹೆಗ್ಗಡೆಯವರೇ ಕಾರಣ, ಸಿಎಂ ಕುಮಾರಸ್ವಾಮಿ ** ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ : ಬಿ.ಸಿ. ಪಾಟೀಲ್ ಸ್ಪಷ್ಟನೆ ** ಆಪರೇಷನ್ ಆಗದೆ ಪರದಾಡುತ್ತಿದೆ ಬಿಜೆಪಿ: ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯ ** ರಾಹುಲ್‌ ಗಾಂಧಿ ಹಸ್ತಕ್ಷೇಪದಿಂದಲೇ ರಾಜೀನಾಮೆ ನೀಡಿ ಹೊರಬಂದೆ: ಎಸ್‌ ಎಂ ಕೃಷ್ಣ ** ಆಪರೇಷನ್‌ ಕಮಲದಲ್ಲಿ ಮೋದಿ, ಅಮಿತ್‌ ಷಾ ಭಾಗಿಯಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ** ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ಕೇಂದ್ರ ಸಚಿವ ಅರುಣ್​ ಜೇಟ್ಲಿ ** ದೆಹಲಿ ಪ್ರತಿಭಟನೆಗೆ ಜನ ಕರೆದೊಯ್ಯಲು 2 ರೈಲು ಬುಕ್​ ಮಾಡಿದ ಚಂದ್ರಬಾಬು ನಾಯ್ಡು ** ಬೇನಾಮಿ ಆಸ್ತಿ ಪ್ರಕರಣ: 3ನೇ ಬಾರಿಗೆ ವಿಚಾರಣೆಗೆ ಹಾಜರಾದ ರಾಬರ್ಟ್‌ ವಾದ್ರಾ ** 55 ವರ್ಷ ಆಡಳಿತ ನಡೆಸಿದ ರಾಹುಲ್​ ಬಾಬಾ ಕುಟುಂಬ ದೇಶದ ಅಭಿವೃದ್ಧಿಯಲ್ಲಿ ವಿಫಲ: ಅಮಿತ್​ ಷಾ ** ರಾಮನು ಹಿಂದುಗಳ ಪೂರ್ವಜ ಮಾತ್ರವಲ್ಲ, ಮುಸ್ಲೀಮರ ಪೂರ್ವಜ ಕೂಡ: ಬಾಬಾ ರಾಮ್‌ದೇವ್‌ ** ವೀರ ಸಾವರ್ಕರ್‌ ಒಬ್ಬ 'ಹೇಡ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-02-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-02-19 ** ಸಮ್ಮಿಶ್ರ ಸರ್ಕಾರದಿಂದ ಎರಡನೇ ಬಜೆಟ್, ಕುಮಾರಸ್ವಾಮಿಯಿಂದ ಮಂಡನೆ ** ಕುಮಾರ ಲೆಕ್ಕ 2019: ಭದ್ರಾ ಮೇಲ್ಡಂಡೆ ಯೋಜನೆಗೆ ವೇಗ, ಕೃಷ್ಣಾ ಮೇಲ್ದಂಡೆಗೆ 1,050 ಕೋಟಿ ರೂ. ಟೆಂಡರ್ ** ಸಿದ್ಧಗಂಗಾ ಶ್ರೀ, ಚುಂಚಶ್ರೀ ಹುಟ್ಟೂರುಗಳ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ ** ರೈತ ಸಿರಿ'-ರೈತ ಪರ ಬಜೆಟ್: 'ನೇಗಿಲ ಯೋಗಿ' ಕೈ ಬಲಪಡಿಸಿದ ಸಿಎಂ ಕುಮಾರಸ್ವಾಮಿ ** ಹಾಜರಾತಿ ಕರೆದಾಗ ‘ಎಸ್​ ಸರ್​’ ಬದಲಿಗೆ ‘ಜೈಹಿಂದ್’​: ಜಾರಿಯಾಗುವುದೇ ಸಿಎಂ ಕಚೇರಿ ಆದೇಶ ** ರಾಜ್ಯ ಬಜೆಟ್ ಸಿಹಿಯೂ ಅಲ್ಲ, ಕಹಿಯೂ ಅಲ್ಲ: ಕುರುಬೂರು ಶಾಂತಕುಮಾರ್ ** ಉಮೇಶ್ ಜಾಧವ್ ಗೆ ನೀಡಿದ್ದ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ವಾಪಸ್ ಪಡೆದ ಸರ್ಕಾರ ** ನನಗೆ ವೋಟು ಕೊಡದ ಮೈಸೂರಲ್ಲಿ ಸಾಮೂಹಿಕ ವಿವಾಹ ಮಾಡಲ್ಲ ಬಾದಾಮಿಯಲ್ಲಿ ಮಾಡ್ತೇನೆ: ಸಿದ್ದರಾಮಯ್ಯ ** ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾದ ರೆಬೆಲ್ ಶಾಸಕರ ವಿರುದ್ಧ 'ಪಕ್ಷಾಂತರ ಕಾಯ್ದೆಯಡಿ ದೂರು ದಾಖಲು ** ಜಾರಕಿಹೊಳಿ ಸಾಹುಕಾರರಿಗೆ ಮೋಸ ಮಾಡಲ್ಲ: ಮಹೇಶ್ ಕುಮಟಳ್ಳಿ ** ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ 25 ಸಾವಿರಕ್ಕೆ ಏರಿಸಿದ ರಾಜಸ್ಥಾನ ಸರ್ಕಾರ ** ಪ್ರಧಾನಿ ಮೋದಿಯವರು ರಫೇಲ್​ ವಾಲಾ: ಮಮತಾ ಬ್ಯಾನರ್ಜಿ ಕಟು ಪ್ರತಿಕ್ರಿಯೆ ** ತಮಿಳುನಾಡು ಬಜೆಟ್​ನಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಒತ್ತು: ಶೀಘ್ರವೇ 500 ಇ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-02-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-02-19 ** ಭಿನ್ನಮತೀಯ ಅಥಣಿ ಶಾಸಕ ಮಹೇಶ್​ ಕುಮಠಳ್ಳಿ ಹುಡುಕಿಕೊಡುವಂತೆ ಪೊಲೀಸರಿಗೆ ದೂರು ** ಭಿನ್ನಮತೀಯ ಶಾಸಕರು ಇಂದಿನ ಶಾಸಕಾಂಗ ಸಭೆಗೆ ಗೈರಾದರೆ ಸದಸ್ಯತ್ವ ಅನರ್ಹ ಎಚ್ಚರಿಕೆ ** ವಿಶ್ವ ವಿಖ್ಯಾತ ಹಂಪಿ ಸ್ಮಾರಕ ಧ್ವಂಸ: ಕರ್ನಾಟಕ ಪೊಲೀಸರಿಂದ ಮೂವರ ಬಂಧನ ** ಸಚಿವ ಡಿಕೆಶಿಗೆ ತಾತ್ಕಾಲಿಕ ರಿಲೀಫ್​: ವಿಚಾರಣೆ ದಿನಾಂಕ ಮುಂದೂಡಲು ಇ.ಡಿ. ಒಪ್ಪಿಗೆ ** ಉತ್ತರಪ್ರದೇಶ ಬಜೆಟ್​ನಲ್ಲಿ ಗೋಶಾಲೆಗಳ ನಿರ್ಮಾಣ, ನಿರ್ವಹಣೆಗೆ  247.60 ಕೋಟಿ ರೂ.ಮೀಸಲು ** ದೀದಿ ಧರಣಿಗೆ ಸಾಥ್​ ನೀಡಿದ್ದ ಪೊಲೀಸ್​ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಗೃಹ ಇಲಾಖೆ ಆದೇಶ ** ನಿತಿನ್​ ಗಡ್ಕರಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸೋನಿಯಾ ಗಾಂಧಿ: ಸದನದಲ್ಲಿ ಮೇಜು ಬಡಿದು ಪ್ರಶಂಸೆ ** 2ಜಿ ಹಗರಣದ ಆರೋಪಿಗಳಿಗೆ 15 ಸಾವಿರ ಗಿಡ ನೆಡುವಂತೆ ದೆಹಲಿ ಹೈಕೋರ್ಟ್​ ಆದೇಶ ** ವಾಯುಪಡೆ ದುರ್ಬಲಗೊಳಿಸಲು ಕಾಂಗ್ರೆಸ್ ಪಿತೂರಿ: ಪ್ರಧಾನಿ ಮೋದಿ ** ಲೋಕಸಭೆ ಚುನಾವಣೆ ಬಳಿಕ ರಾಮ ಮಂದಿರ ನಿರ್ಮಾಣ ಕುರಿತು ಹೋರಾಟ: ಆರ್​ಎಸ್​ಎಸ್​ ನಿರ್ಧಾರ ** ಕಾಂಗ್ರೆಸ್ ಜೊತೆ ಮೈತ್ರಿ ಆತ್ಮಹತ್ಯೆಗೆ ಸಮಾನ: ಅಂಬೇಡ್ಕರ್ ಹೇಳಿಕೆ ಪುನರುಚ್ಛರಿಸಿದ ಪ್ರಧಾನಿ ಮೋದಿ ** ರಣಜಿ ಕ್ರಿಕೆಟ್: ಸೌರಾಷ್ಟ್ರ ವಿರುದ್ಧ ಗೆದ್ದ ವಿದರ್ಭ ಚಾಂಪಿಯನ್ ** ಇಂದು ಭಾರತ vs ನ್ಯೂಜಿಲ್ಯಾಂಡ್ 2ನೇ ಟಿ20 ಪಂದ್ಯ; ಒತ್ತಡದಲ್ಲಿ ರೋಹಿತ್ ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-02-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-02-19 ** ಸದನದಲ್ಲಿ ಶಿವಕುಮಾರ ಸ್ವಾಮೀಜಿ, ಜಾರ್ಜ್ ಫರ್ನಾಂಡೀಸ್ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ** ಬಜೆಟ್ ಅಧಿವೇಶನ: ಕಾಂಗ್ರೆಸ್ ನ 7 ಶಾಸಕರು ಸದನಕ್ಕೆ ಗೈರು, ಉಮೇಶ್ ಜಾಧವ್ ಗೆ ನೋಟಿಸ್ ** ಸರ್ಕಾರ ಪತನದ ಭೀತಿ: ಫೆ.8 ರಂದು ಮತ್ತೆ ಕಾಂಗ್ರೆಸ್ ಶಾಸಕಾಂಗ ಸಭೆ, ವಿಪ್ ಜಾರಿ ** ಸಭೆಗೆ ಗೈರಾಗುವ ಶಾಸಕರನ್ನು ಅನರ್ಹಗೊಳಿಸುವುದು ನಿಶ್ಚಿತ: ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್​ ವವಾರ್ನಿಂಗ್ ** ಬಿಜೆಪಿ ನಾಯಕರಿಗೆ ಶಕ್ತಿ ಇದ್ದರೆ ಅವಿಶ್ವಾಸ ಮಂಡಿಸಲಿ: ಮಾಜಿ ಪ್ರಧಾನಿ ದೇವೇಗೌಡ ** ಕಾಂಗ್ರೆಸ್​ ಶಾಸಕರಿಂದಲೇ ಸರ್ಕಾರ ಬಿದ್ದು ಹೋಗುತ್ತೆ: ಬಿಎಸ್ವೈ ** ಶಬರಿಮಲೆ ತೀರ್ಪು ಮರುಪರಿಶೀಲನಾ ಅರ್ಜಿ ವಿಚಾರಣೆಯ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್​ ** ಗಾಂಧಿ ಫೋಟೋಗೆ ಶೂಟ್‌ ಮಾಡಿದ್ದ ಹಿಂದು ಮಹಾಸಭಾ ನಾಯಕಿ ಬಂಧನ ** ಅಕ್ರಮ ಹಣ ವರ್ಗಾವಣೆ ಆರೋಪ: ಇ.ಡಿ. ವಿಚಾರಣೆಗೆ ಹಾಜರಾದ ರಾಬರ್ಟ್​ ವಾದ್ರಾ ** ಬಿಜೆಪಿ ನಾಯಕರನ್ನು ತಡೆಯಲೆತ್ನಿಸುವ ಸಿಎಂ ಮಮತಾ ಪರಿಣಾಮ ಎದುರಿಸಲಿದ್ದಾರೆ: ಅಮಿತ್​ ಷಾ ** ಐಟಿ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಮತ್ತು ಆಧಾರ್ ಲಿಂಕಿಂಗ್ ಕಡ್ಡಾಯ: ಸುಪ್ರೀಂ ಕೋರ್ಟ್ ** ಕ್ರಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ಸೋತ ಟೀಂ ಇಂಡಿಯಾ ಮಹಿಳಾ ಮತ್ತು ಹಾಗೂ ಪುರುಷರ ತಂಡ

ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-02-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-02-19 ** ದೋಸ್ತಿಗಳ ಕಿತ್ತಾಟದಿಂದಲೇ ಸರ್ಕಾರ ಪತನ; ತಾಳ್ಮೆಯಿಂದಿರಿ: ಬಿಎಸ್ ವೈ ** ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದ ಕೆ.ಟಿ. ಶ್ರೀಕಂಠೇಗೌಡ ಮನೆಗೆ ಬಿಗಿ ಭದ್ರತೆ; ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅಂಬಿ ಅಭಿಮಾನಿಗಳು ** ಸಿಎಂ ಎಚ್‌ಡಿಕೆ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವುದು ಸೂಕ್ತ: ಕೆ ಎಸ್‌ ಈಶ್ವರಪ್ಪ ** ನೈಟ್ರೋಜನ್‌ ಬಲೂನ್‌ ಗುಚ್ಛ ಸ್ಫೋಟ: ಅಪಾಯದಿಂದ ಪಾರಾದ ಸುತ್ತೂರು ಶ್ರೀ ** ಬ್ಯಾಂಕ್ ಗಳಿಂದ ವಿಜಯ್ ಮಲ್ಯ ಆಸ್ತಿ ಸ್ವಾಧೀನಕ್ಕೆ ನಮ್ಮ ಆಕ್ಷೇಪ ಇಲ್ಲ: ಇಡಿ ** ಇಸ್ರೊದಿಂದ  ಇಂದು ಜಿಸ್ಯಾಟ್-31 ಉಪಗ್ರಹ ಉಡಾವಣೆ ** ಏಳನೇ ದಿನಕ್ಕೆ ತಲುಪಿದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ: ಲೋಕಪಾಲ್​ ನೇಮಕಕ್ಕೆ ಬಿಡದ ಪಟ್ಟು ** ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕೋಲ್ಕತ ಪೊಲೀಸ್​ ಆಯುಕ್ತರಿಗೆ ಸುಪ್ರೀಂಕೋರ್ಟ್​ ಸೂಚನೆ ** ಮೋದಿ vs ದೀದಿ: ಸುಪ್ರೀಂ ತೀರ್ಪಿನ ಬಳಿಕ ಧರಣಿ ಕೈಬಿಟ್ಟ ಮಮತಾ ಬ್ಯಾನರ್ಜಿ ** ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಬಿಜೆಪಿ ಬಾಗಿಲನ್ನು ಬಂದ್​ ಮಾಡಲಿದ್ದಾರೆ: ಚಂದ್ರಬಾಬು ನಾಯ್ಡು ** ಪ್ರಿಯಾಂಕಾ ಗಾಂಧಿಗೆ ಎಐಸಿಸಿ ಭವನದಲ್ಲೇ ಕಚೇರಿ ** ಚಂದ್ರಬಾಬು ನಾಯ್ಡು ಪಾಲಿಗೆ ಎನ್ ಡಿ ಎ ಬಾಗಿಲು ಶಾಶ್ವತವಾಗಿ ಮುಚ್ಚಿದೆ: ಅಮಿತ್ ಶಾ ** ಮಮತಾ ಬ್ಯಾನರ್ಜಿ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ: ಯೋಗಿ ಆದ...

ಜೈ ಶೇಗುಣಸಿ ಸುದ್ದಿ ಸಂಪದ. ದಿ: 05-02-19

ಜೈ ಶೇಗುಣಸಿ ಸುದ್ದಿ ಸಂಪದ. ದಿ: 05-02-19 ** ಬಾಗಲಕೋಟೆ ಜಿಲ್ಲೆ ಸೀತಾಗಿರಿಯಲ್ಲಿ ಶ್ರೀ ಕಲ್ಮೇಶ್ವರ ಮಹಾರಾಜರ 116ನೇ ಜನ್ಮದಿನಾಚರಣೆ ** ಪ್ರಧಾನಿ ನರೇಂದ್ರ ಮೋದಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ: ಸಿದ್ದರಾಮಯ್ಯ ** ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ನಿವೃತ್ತಿ ಪಡೆದ ದಿನ ನಾನೂ ರಾಜಕೀಯ ಬಿಡುತ್ತೇನೆ: ಸ್ಮೃತಿ ಇರಾನಿ ** ಪಶ್ಚಿಮ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ: ರಾಜನಾಥ್​ ಸಿಂಗ್​ ** ಪಶ್ಚಿಮ ಬಂಗಾಳ ಸ್ಥಿತಿ ತುರ್ತು ಪರಿಸ್ಥಿತಿಯನ್ನು ಹೋಲುತ್ತಿದೆ: ಮಮತಾ ಬೆಂಬಲಕ್ಕೆ ನಿಂತ ದೇವೇಗೌಡ ** ಮನಸ್ಸು ಮಾಡಿದರೆ ಎಂತಹ ರೋಗವನ್ನು ಮೆಟ್ಟಿ ನಿಲ್ಲಬಹುದು: ವಿಶ್ವ ಕ್ಯಾನ್ಸರ್ ದಿನಕ್ಕೆ ಪರಿಕ್ಕರ್ ಸಂದೇಶ ** ಸಾಕ್ಷ್ಯ ನಾಶ ಮಾಡಿದರೆ, ಪಶ್ಚಾತಾಪ ಪಡುತ್ತೀರಿ: ಕೋಲ್ಕತಾ ಪೊಲೀಸ್ ಆಯುಕ್ತರಿಗೆ 'ಸುಪ್ರೀಂ' ಎಚ್ಚರಿಕೆ ** ಪಶ್ಚಿಮ ಬಂಗಾಳದಲ್ಲಿ ದೀದಿ ಧರಣಿ: ಸಿಬಿಐ ಅರ್ಜಿ ವಿಚಾರಣೆ ಇಂದು ಮುಂದೂಡಿದ ಸುಪ್ರೀಂಕೋರ್ಟ್​ ** ಪಶ್ಚಿಮ ಬಂಗಾಳ ಚಿಟ್​ಫಂಡ್ ಹಗರಣ ತನಿಖೆ ಆರಂಭವಾದದ್ದೇ ಕಾಂಗ್ರೆಸ್ ಕಾಲದಲ್ಲಿ: ಕೇಂದ್ರ ಕಾನೂನು ಸಚಿವ ** ಜೀವ ಬಿಡಲು ಸಿದ್ಧ ಆದರೆ ರಾಜಿ ಆಗುವ ಮಾತೇ ಇಲ್ಲ: ಸಿಎಂ ಮಮತಾ ಬ್ಯಾನರ್ಜಿ ** ಬಿಜೆಪಿಯಲ್ಲಿ ತಾಕತ್ತು ಇರುವುದು ನಿತಿನ್​ ಗಡ್ಕರಿಯವರಿಗೆ ಮಾತ್ರ: ಹೊಗಳಿ ಟ್ವೀಟ್​ ಮಾಡಿದ ರಾಹುಲ್ ಗಾಂಧಿ ** ಶಬರಿಮಲೆ ಪ್ರವೇಶಿಸಿದ್ದು 51 ಮಹಿಳೆಯರಲ್ಲ, ಕೇವಲ ಇಬ್...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-02-19

ಜೈ ಶೇಗುಣಸಿ ಸುದ್ದಿ ಸಂಪದ... ದಿ:  04-02-19 ** ಬಾಣಸವಾಡಿ-ವೈಟ್ ಫೀಲ್ಡ್ ನಡುವೆ ಹೊಸ ಡೆಮು ರೈಲು ಸಂಚಾರ ಪ್ರಾರಂಭ ** ಪಶ್ಚಿಮ ಬಂಗಾಳದ ಬಾಲೂರ್ ಘಾಟ್ ನಲ್ಲಿ ಯೋಗಿ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಅನುಮತಿ ನಿರಾಕರಣೆ: ಟೆಲಿಪೋನ್ ಮೂಲಕ ಸಾರ್ವಜನಿಕ ಭಾಷಣ ** ತಿರುಪತಿ ದೇವಾಲಯದಲ್ಲಿ ವಜ್ರ ಖಚಿತ 3 ಕಿರೀಟ ಕಳ್ಳತನ ** ರೈತರಿಗೆ ನೀಡುವ ವರ್ಷಕ್ಕೆ 6 ಸಾವಿರ ರೂ. ನೆರವು ಭವಿಷ್ಯದಲ್ಲಿ ಹೆಚ್ಚಾಗಲಿದೆ: ಜೇಟ್ಲಿ ಸುಳಿವು ** ಕೋಲ್ಕತ ಪೊಲೀಸ್​ ಕಮಿಷನರ್​ ನಿವಾಸದ ಬಳಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಪೊಲೀಸರು ** ಸಿಬಿಐ ಮುಖ್ಯಸ್ಥರ ನೇಮಕಕ್ಕೆ ಮಲ್ಲಿಕಾರ್ಜುನ್​ ಖರ್ಗೆ ರಾಜಕೀಯ ಬಣ್ಣ ಬಳಿದಿದ್ದಾರೆ: ಅರುಣ್​ ಜೇಟ್ಲಿ ಅಸಮಾಧಾನ ** ಜಮ್ಮು-ಕಾಶ್ಮೀರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ** ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೂಲಕ ಬಿಜೆಪಿ ಮುಸ್ಲಿಂರನ್ನು ದ್ವೇಷಿಸುತ್ತಿದೆ: ಅರವಿಂದ್​ ಕೇಜ್ರಿವಾಲ್​ ** ಸರ್ಜಿಕಲ್​ ಸ್ಟ್ರೈಕ್​ ಮೂಲಕ ಭಾರತ ಭಯೋತ್ಪಾದನೆ ವಿರುದ್ಧದ ನೀತಿಯನ್ನು ಸ್ಪಷ್ಟಪಡಿಸಿದೆ: ಮೋದಿ ** ಐದನೇ ದಿನಕ್ಕೆ ಕಾಲಿಟ್ಟ ಅಣ್ಣ ಹಜಾರೆ ಸತ್ಯಾಗ್ರಹ: ಗ್ರಾಮಸ್ಥರಿಂದ ಹೆದ್ದಾರಿ ತಡೆ ** ಕಿವೀಸ್ ವಿರುದ್ಧ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾಗೆ 35 ರನ್​ ಗೆಲುವು

ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-02-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-02-19 ** ಇಂದಿನಿಂದ ಶಿವಮೊಗ್ಗ ಮತ್ತು ಬೆಂಗಳೂರು ಮಧ್ಯೆ ಜನ ಶತಾಬ್ದಿ ರೈಲು ಸಂಚಾರ ಆರಂಭ ** ಬಜೆಟ್ ನಲ್ಲಿ ಯಶಸ್ವಿನಿ ಆರೋಗ್ಯ ಯೋಜನೆ ಮರು ಜಾರಿ: ಸಿಎಂ ಎಚ್. ಡಿ. ಕುಮಾರಸ್ವಾಮಿ ** ಲೋಕಸಭೆಗೆ ಸ್ಪರ್ಧಿಸಲ್ಲ, ವಿಧಾನಸಭೆಗೆ ಸ್ಪರ್ಧಿಸುವುದೇ ಗುರಿ ಎಂದ ಉಪೇಂದ್ರ ** ಕಾಂಗ್ರೆಸ್‌ನಿಂದ ಸಿಎಂ ಕುಮಾರಸ್ವಾಮಿಗೆ ಕಿರುಕುಳ, ಒತ್ತಡ ಇಲ್ಲ: ಸಚಿವ ಕೃಷ್ಣಬೈರೇಗೌಡ ** ಸಚಿವ ಡಿಕೆಶಿಗೆ ಮತ್ತೆ ಟ್ರಬಲ್: ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ** ಮಂಡ್ಯ ಲೋಕಸಭೆ ಚುನಾವಣೆಗೆ ನಾನೇ ಜೆಡಿಎಸ್‌ ಅಭ್ಯರ್ಥಿ: ಸಂಸದ ಎಲ್‌ ಆರ್‌ ಶಿವರಾಮೇಗೌಡ ** ಐಪಿಎಸ್ ಅಧಿಕಾರಿ ರಿಷಿಕುಮಾರ್ ಶುಕ್ಲಾ ಸಿಬಿಐ ನ ನೂತನ ನಿರ್ದೇಶಕ ** 2019 ಜನವರಿಯಲ್ಲಿ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್ ಟಿ ಆದಾಯ ಸಂಗ್ರಹ ** ಕೇಂದ್ರದ ಮಧ್ಯಂತರ ಬಜೆಟ್ ಗೆ ತಡೆ ಕೋರಿ 'ಸುಪ್ರೀಂ'ಗೆ ಅರ್ಜಿ ** ಪಶ್ಚಿಮ ಬಂಗಾಳ ಬಿಜೆಪಿ ರ್ಯಾಲಿಯಲ್ಲಿ ಕಾಳ್ತುಳಿತದ ಭೀತಿ, ಭಾಷಣ ಮೊಟಕುಗೊಳಿಸಿದ ಪ್ರಧಾನಿ ಮೋದಿ! ** ರಾಮಮಂದಿರ ನಿರ್ಮಾಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ: ಅಮಿತ್‌ ಷಾ ** ಹಣ ವರ್ಗಾವಣೆ ಪ್ರಕರಣ : ಫೆ.16ರವರೆಗೂ ರಾಬರ್ಟ್ ವಾದ್ರಾಗೆ ಮಧ್ಯಂತರ ಜಾಮೀನು ಮಂಜೂರು ** ಅಮೆರಿಕಾದಲ್ಲಿ ಬಂಧಿತ ವಿದ್ಯಾರ್ಥಿಗಳ ರಕ್ಷಣೆಗೆ ಮೊದಲ ಆದ್ಯತೆ: ಸುಷ್ಮಾ ಸ್ವರಾಜ್ ** ಚೀನಾ ಗಡಿ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-02-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-02-19 ** ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಪಿಯೂಷ್ ಗೊಯಲ್; ಬಿಜೆಪಿಯಿಂದ ಚಪ್ಪಾಳೆ, ಚುನಾವಣೆ ಗಿಮಿಕ್ ಎಂದ ವಿರೋಧ ಪಕ್ಷ. * ದೇಶದ ಎಲ್ಲ ಸಣ್ಣ ರೈತರಿಗೆ 6000ರೂ‌. ಪರಿಹಾರ * ನೈಸರ್ಗಿಕ ವಿಕೋಪಕ್ಕೊಳಗಾದ ರೈತರಿಗೆ 5% ಬಡ್ಡಿ ದರದಲ್ಲಿ ಸಾಲ * ಅಂಚೆ ಠೇವಣಿ TDS ಮಿತಿ 10000 ದಿಂದ 40000ಕ್ಕೆ ಹೆಚ್ಚಳ * ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ತೆರಿಗೆ ಪಾವತಯಿಂದ ವಿನಾಯಿತಿ * ಮನೆ ಬಾಡಿಗೆ ಮೇಲಿನ ಸೆಸ್ ಇಳಿಕೆ, ಗೃಹ ಸಾಲ 2ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ * ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19ಸಾವಿರ ಕೋಟಿ ಮೀಸಲು * ಉಜ್ವಲ ಯೋಜನೆಯಡಿ 8ಕೋಟಿಯಷ್ಟು ಉಚಿತ ಗ್ಯಾಸ್ ಗುರಿ * ಸಣ್ಣ ಕೈಗಾರಿಕೆಯ 1ಕೋಟಿವರೆಗಿನ ಸಾಲಕ್ಕೆ 2% ಮೀಸಲು * ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ * ತೆರಿಗೆ ವಿನಾಯಿತಿ-2ಲಕ್ಷದಿಂದ 5ಲಕ್ಷಕ್ಕೆ ಏರಿಕೆ * ಕಾರ್ಮಿಕ ಬೊನಸ್ 7000ರೂ.ಗೆ ಏರಿಕೆ, ಗ್ರಾಚ್ಯುಟಿ ಮೊತ್ತ 10ಲಕ್ಷದಿಂದ 30ಲಕ್ಷಕ್ಕೆ ಏರಿಕೆ ** 12 ಕೋಟಿ ರೈತರು, 3 ಕೋಟಿಗಿಂತ ಹೆಚ್ಚು ವೃತ್ತಿಪರರಿಗೆ ಬಜೆಟ್‌ ಲಾಭದಾಯಕ: ನರೇಂದ್ರ ಮೋದಿ ** ಅತ್ಯುತ್ತಮ ಬಜೆಟ್​ ಮಂಡಿಸಿದ ಪಿಯೂಷ್​ ಗೋಯಲ್​: ಅರುಣ್​ ಜೇಟ್ಲಿ ಟ್ವೀಟ್​ ** ಗೋವಾ ಸಿಎಂ ಪರಿಕ್ಕರ್ ಏಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗಕ್ಕೆ ದಾಖಲು ** ಮೇಲುಕೋಟೆಯ ಪಂಚಕಲ್ಯಾಣಿ ಜೀರ್ಣೋದ್ಧಾರಕ್ಕೆ ಇನ್ಫೋಸಿಸ್ ಫೌಂಡೇಶನ್ ನ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 01-02-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 01-02-19 ** ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ; ಶ್ರೀಗಳಿಗಾಗಿ ಬಂದ ಲಕ್ಷಾಂತರ ಭಕ್ತರು ** ನಮ್ಮೊಂದಿಗೆ ಇಂಥವರು ಇದ್ದರೆಂಬುದೇ ನಮ್ಮ ಪುಣ್ಯ: ಸಿದ್ಧಗಂಗಾ ಶ್ರೀಗೆ ಶ್ರೀಶೈಲ ಜಗದ್ಗುರುಗಳ ನುಡಿನಮನ ** ಬೆಂಗಳೂರು ಅಭಿವೃದ್ಧಿಗೆ ರೂ.8,015 ಕೋಟಿ: ರಾಜ್ಯ ಸಚಿವ ಸಂಪುಟ ಅಸ್ತು ** ಬರ ಪೀಡಿತ ತಾಲೂಕುಗಳಲ್ಲಿ ಬಿಜೆಪಿ ಪ್ರವಾಸ: ಸಿಎಂ ಕುಮಾರಸ್ವಾಮಿ ಆಕ್ರೋಶ ** ಬಜೆಟ್‌ಗೂ ಮುನ್ನ ಗಿಫ್ಟ್: ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ರೂ. 1.46 ಇಳಿಕೆ, ಸಬ್ಸಿಡಿ ರಹಿತ ರೂ.30 ಇಳಿಕೆ ** ಶಬರಿಮಲೆ ತೀರ್ಪು: ಫೆ. 6ಕ್ಕೆ ಮರು ಪರಿಶೀಲನಾ ಅರ್ಜಿ ವಿಚಾರಣೆ ** ಸಂಸತ್ತು ಬಜೆಟ್ ಅಧಿವೇಶನ: ಎಲ್ಲಾ ವಿಚಾರಗಳ ಕುರಿತ ಚರ್ಚೆಗೆ ಸರ್ಕಾರ ಸಿದ್ಧ; ಪ್ರಧಾನಿ ಮೋದಿ ** ಅಯೋಧ್ಯೆ ವಿವಾದವನ್ನು ಕಾಶ್ಮೀರ ಸಮಸ್ಯೆಯಂತಾಗಿಸಬೇಡಿ: ಕೇಂದ್ರ ಸರ್ಕಾರಕ್ಕೆ ಶಿವಸೇನೆ ಎಚ್ಚರಿಕೆ ** ಲೋಕಸಭಾ ಚುನಾವಣೆ: ಉದ್ಯೋಗ ವಂಚಿತ ಯುವಜನಾಂಗದಿಂದ ಬಿಜೆಪಿ ಸರ್ಕಾರದ ಪದಚ್ಯುತಿ-ಅಖಿಲೇಶ್ ** ಮೋದಿ ಗ್ರಾಫ್​ ಇಳಿಯುತ್ತಿದ್ದರೆ, ರಾಹುಲ್ ಗ್ರಾಫ್​ ಮೇಲೇರುತ್ತಿಲ್ಲ, ಪ್ರಾದೇಶಿಕ ಪಕ್ಷಗಳೇ ಕಿಂಗ್​: ಟಿಆರ್'ಎಸ್ ** 4ನೇ ಏಕದಿನ ಪಂದ್ಯ: ಕಿವೀಸ್ ಬೌಲರ್ ಗಳ ಅರ್ಭಟ- ಭಾರತಕ್ಕೆ ಸೋಲು