Posts

ಸಾವಯವ ಬೆಲ್ಲ...! (ಶೇಗುಣಸಿಯ ಬೆಲ್ಲದ ಮನೆಯ ಕುರಿತು ಒಂದಿಷ್ಟು..)

Image
 ಸಾವಯವ ಬೆಲ್ಲ (ಶೇಗುಣಸಿಯ ಬೆಲ್ಲದ ಮನೆಯ ಕುರಿತು ಒಂದಿಷ್ಟು..) ಹಸಿರು ಕ್ರಾಂತಿಯ ನೆಪದಲ್ಲಿ ಭೂಮಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಕಬ್ಬು ಬೆಳೆದು ಅದನ್ನು ಸಕ್ಕರೆ ಕಾರ್ಖಾನೆಗೆ ಕಳಿಸುವುದು ಸರ್ವೆ ಸಾಮಾನ್ಯ. ಆದರೆ ಅತೀಯಾದ ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬಂಜರು ಭೂಮಿಯಾಗುತ್ತಿದೆ. ಇಂತಹದರ ಮಧ್ಯೆ ನಾವು ಸಾವಯವ ಪದ್ದತಿಯಲ್ಲಿ ಕಬ್ಬು ಬೆಳೆದು ಯಾವುದೇ ರಾಸಾಯನಿಕ ಅಥವಾ ಬಣ್ಣ ಉಪಯೋಗಿಸದೇ ಸಾವಯವ ಕಬ್ಬಿನಿಂದ ಬೆಲ್ಲ ತಯಾರಿಸುತ್ತಿದ್ದೇವೆ.  ಬೆಲ್ಲ ತಯಾರಿಸುವುದು ಹಿರಿಯರ ಕಾಲದಿಂದ ಗೊತ್ತಿರುವ ಕಸುಬು. ಸಕ್ಕರೆ ಕಾರ್ಖಾನೆ ಆರಂಭವಾಗುವಕ್ಕಿAತ ಮುಂಚೆ ಒಂದು ಊರಿಗೆ ೫-೬ ಬೆಲ್ಲದ ಮನೆ(ಗಾಣದ ಮನೆ) ಇರುತ್ತಿದ್ದವು. ಆದರೆ ಈಗ ಒಂದು ಇಲ್ಲದಂತಾಗಿದೆ, ಇದ್ದರೂ ಅದು ರಾಸಾಯನಿಕ ಅಥವಾ ಬಣ್ಣ ಉಪಯೋಗಿಸಿ ಬೆಲ್ಲ ತಯಾರಿಸುವ ಗಾಣದ ಮನೆಗಳು. ನಮ್ಮದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ೩೨ ಜನರ ಅವಿಭಕ್ತ ಕುಟುಂಬ. ಹಿರಿಯರಾದ ಶಿವರಾಯ ಯಲಡಗಿ, ಕೃಷಿ ಪಂಡಿತ ಕಲ್ಮೇಶ ಯಲಡಗಿರವರ ಮಾರ್ಗದರ್ಶನದಲ್ಲಿ ಒಕ್ಕಲುತನ ಮಾಡುತ್ತಿರುವ ಕೃಷಿ ಕುಟುಂಬ. ಕಬ್ಬು ಬೇಸಾಯ: ತಳಿಗಳು: ಸಿಓ ೮೬೦೩೨, ೧೦೦೦೧, ೯೧೦೧೦, ಓ ೯೨೦೦೫. ೪.೫ ಅಥವಾ ೫ ಫೀಟ್ ಸಾಲಿನಲ್ಲಿ ಕಬ್ಬು ಲಾವಣಿ ಮಾಡಿ, ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕಾಂಪೋಸ್ಟ ಗೊಬ್ಬರ, ಜೀವಾಮೃತ, ಘನ ಜೀವಾಮೃತ, ಗೋಕೃಪಾಮೃತ ಬಳಸಿ ಕಬ್ಬು ಬೆಳೆಯುತ್ತೇವೆ....

ವಿಶ್ವ ಅಪ್ಪಂದಿರ ದಿನ: ಬದುಕು ರೂಪಿಸಿದ ಅಪ್ಪನಿಗೊಂದು ಕೃತಜ್ಞತೆ

ವಿಶ್ವ ಅಪ್ಪಂದಿರ ದಿನ: ಬದುಕು ರೂಪಿಸಿದ ಅಪ್ಪನಿಗೊಂದು ಕೃತಜ್ಞತೆ ಅಪ್ಪ- ಎಲ್ಲ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೋ. ಅದರಲ್ಲೂ ಹೆಣ್ಣು ಮಕ್ಕಳ ಪಾಲಿಗಂತೂ ಆತ ಯಾವಾಗಲೂ ಪ್ರಥಮ ಪ್ರೀತಿಯಾಗಿರುತ್ತಾನೆ. ಅಪ್ಪ ಅನ್ನುವ ಬಂಧವೇ ಅಂಥದ್ದು. ಅಪ್ಪ ಅಂದರೆ ಕೆಲವರಿಗೆ ಸಿಡುಕು, ಗಂಭೀರ ಮುಖವೊಂದು ನೆನಪಾಗಬಹುದು, ಹಾಗೆಯೇ ಹೆಗಲಿಗೇರಿಸಿಕೊಂಡು ನಡೆದ ಜೀವವೊಂದು ಕಣ್ಣ ಮುಂದೆ ಸುಳಿದು ಹೋಗಬಹುದು. ಚಿಕ್ಕಂದಿನಲ್ಲಿ ಶಿಕ್ಷೆ ಕೊಡುವ, ಗದರುವ ಅಪ್ಪ , ಬೆಳೆಯುತ್ತಿದ್ದಂತೆ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಸ್ನೇಹಿತನಾಗುತ್ತಾನೆ. ಇತ್ತೀಚಿನ ದಿನಗಳಲ್ಲಂತೂ ಅಪ್ಪ ಮತ್ತು ಮಕ್ಕಳ ಸಂಬಂಧ ತುಸು ಜಾಸ್ತಿಯೇ ಅಪ್ಯಾಯಮಾನವಾಗುತ್ತಿದೆ. ಅದೇಕೋ ಗದರುವ, ಸಿಡುಕುವ ಅಪ್ಪ ಮಾಯವಾಗುತ್ತಿದ್ದಾನೆ. ಆಧುನಿಕ ಅಪ್ಪಂದಿರು ಮಕ್ಕಳು ಸ್ನೇಹಿತರಂತೆ ಇರುವ ನಿದರ್ಶನಗಳೇ ಹೆಚ್ಚಾಗಿ ಕಾಣುತ್ತಿವೆ. ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ ಎನ್ನದೇ ನಮಗಾಗಿ ಬೆವರು ಸುರಿಸುತ್ತಾನೆ. ನಿದ್ದೆಗೆಡುತ್ತಾನೆ. ನಿಮಗಾಗಿ ಬದುಕು ತೆತ್ತೆ ಎನ್ನದ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾನೆ. ಅಪ್ಪ ಅಂದರೆ ಕೇವಲ ಜೀವ ಕೊಟ್ಟವನಲ್ಲ. ಬದುಕು ರೂಪಿಸಿದವ. ಜೀವನದ ದಾರಿ ತೋರಿಸಿದವ. ಬಾಲ್ಯದಲ್ಲಿ ಕೈ ಹಿ...

ಬತ್ತಿದ ಕೃಷ್ಣೆಯ ಒಡಲು, ಹನಿ ನೀರಿಗೂ ತತ್ವಾರ..

Image
ಬತ್ತಿದ ಕೃಷ್ಣೆಯ ಒಡಲು, ಹನಿ ನೀರಿಗೂ ತತ್ವಾರ.. - ಚೇತನ ಶಿವರಾಯ ಯಲಡಗಿ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಜೀವನದಿ ಕೃಷ್ಣೆಯ ಒಡಲು ಈಗ ಬತ್ತಿ ಹೋಗಿದೆ. ‌ಗ್ರಾಮದ ಜನ ಹನಿ ನೀರಿಗೂ ಕಷ್ಟ ಪಡುತ್ತಿದ್ದಾರೆ. ಕೃಷ್ಣೆಯಿಂದ ಅವಲಂಬಿಸಿರುವ ರಾಯಬಾಗ, ಅಥಣಿ ತಾಲೂಕಿನ ಜನರು ಈ ಕಷ್ಟ ಪಡುತ್ತಿದ್ದಾರೆ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಬತ್ತುವ ಈ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುತ್ತಿದ್ದರು. ಆದರೆ ಈ ವರ್ಷ ಲೋಕಸಭಾ ಚುನಾವಣೆಯ ಗುಂಗಿನಲ್ಲಿ ಎಲ್ಲಾ ಜನ ಪ್ರತಿನಿಧಿಗಳು ಮರೆತು ಬಿಟ್ಟಿದ್ದಾರೆ. ರಾಷ್ಟ್ರೀಯ ಪಕ್ಷಗಳ ಮುಖಂಡರು ಲೋಕಸಭಾ ಚುನಾವಣೆಯ ಮತಕ್ಕೋಸ್ಕರ, ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೇವೆ, 2-3 ದಿನದಲ್ಲಿ ನೀರು ಬರುತ್ತದೆ ಎಂದೆಲ್ಲಾ ಹೇಳಿದರು. ಆದರೆ ಚುನಾವಣೆ ಮುಗಿದು 1ವಾರ ಕಳೆದರೂ ನೀರಿನ ವಾಸನೆ ಸಹಿತ ಇಲ್ಲ. ನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ, ಜನ ಕುಡಿಯಲು ಬೇರೆ ಗ್ರಾಮಗಳಿಂದ ನೀರು ತಂದು ಜೀವನ ನಡೆಸುತ್ತಿದ್ದಾರೆ. ಆದರೆ ಜಾನುವಾರುಗಳ ಪರಿಸ್ಥಿತಿ ಹೇಳತೀರದು. ಅನಿವಾರ್ಯವಾಗಿ ಕುಡಿಯಲು ಯೋಗ್ಯವಲ್ಲದ ನೀರನ್ನು ಜಾನುವಾರುಗಳಿಗೆ ಕುಡಿಯಲು ಕೊಡಲಾಗುತ್ತಿದೆ. ಅಥಣಿಯ ಶಾಸಕರಾದ ಶ್ರೀ ಮಹೇಶ ಕುಮಟಳ್ಳಿರವರು ಜನರ ಕಷ್ಟಗಳಿಗೆ ಸ್ಪಂದಿಸದೇ, ಬೆಂಗಳೂರು-ಮುಂಬೈ ನಗರಗಳಲ್ಲಿ ರಾಜಕೀಯ ಮೇಲಾಟಗಳಲ್ಲಿ ಮಗ್ನರಾಗಿದ್ದಾರೆ. ಆದಕಾರಣ ಗ್ರಾಮಸ್ಥರು ಶಾಸಕರ ವಿರುದ್ಧ ಆಕ್ರ...
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 13-03-19 ** ಮಂಡ್ಯ ಜಿಲ್ಲೆಯ ಪ್ರೀತಿ ಅಭಿಮಾನವನ್ನು ದುರುಪಯೋಗಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ: ಸಿಎಂ ಕುಮಾರಸ್ವಾಮಿ ** ಕಾಂಗ್ರೆಸ್ ಪಕ್ಷನಾ, ಪಕ್ಷೇತರನಾ? ಎನ್ನುವ ಗೊಂದಲ ಬಿಟ್ಟರೆ ನನ್ನ ಸ್ಪರ್ಧೆ ಖಚಿತ ಎಂದ ಸುಮಲತಾ ** ಬಿಜೆಪಿ ಸೇರ್ಪಡೆ ಸುಳಿವು ನೀಡಿದ ಎ.ಮಂಜು, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ ಸಾಧ್ಯತೆ ** ರಾಜ್ಯದ 28 ಕ್ಷೇತ್ರದಿಂದಲೂ ಬಿಎಸ್ಪಿ ಅಭ್ಯರ್ಥಿಗಳ ಸ್ಪರ್ಧೆ:ಎನ್. ಮಹೇಶ್ ** "ಕನ್ನಡ ಸುಂದರವಾದ ಭಾಷೆ'': ಪ್ರಧಾನಿ ಮೋದಿ ಟ್ವೀಟ್‌ ** ಕಾಂಗ್ರೆಸ್‌ಗೆ ಭಾರೀ ಮುಜುಗರ: ಮಹಾರಾಷ್ಟ್ರ ಪ್ರತಿಪಕ್ಷ ನಾಯಕನ ಪುತ್ರ ಬಿಜೆಪಿಗೆ ** ಪಾಕ್​ ಮತ್ತು ರಾಹುಲ್​ ಗಾಂಧಿ ಮಧ್ಯದ ಸಾಮಾನ್ಯ ಸಂಗತಿಯೆಂದರೆ ಉಗ್ರರೆಡೆಗಿನ ಪ್ರೀತಿ: ಸ್ಮೃತಿ ಟೀಕೆ ** ಉತ್ತರಪ್ರದೇಶ ಮಾತ್ರವಲ್ಲ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್‌ನೊಂದಿಗೆ ಮೈತ್ರಿಯಿಲ್ಲ:ಮಾಯಾವತಿ ** ಪ್ರಧಾನಿ ಮೋದಿ ತವರಲ್ಲಿ ಪ್ರಿಯಾಂಕಾ ಮೊದಲ ರ‍್ಯಾಲಿ: ಸರ್ಕಾರದ ವಿರುದ್ಧ ವಾಗ್ದಾಳಿ ** ವಿಶ್ವಕಪ್​ನಲ್ಲಿ ಟೀಂ ಇಂಡಿಯಾನೇ ಫೇವರೆಟ್​ ಎಂದ ವಿಶ್ವಶ್ರೇಷ್ಠ ಸ್ಪಿನ್​ ಬೌಲರ್​ ಶೇನ್​ ವಾರ್ನ ** ಇಂದು ಇಂಡೋ-ಆಸಿಸ್ ಫೈನಲ್ ಫೈಟ್: ಉಭಯ ತಂಡಗಳಿಗೆ ಸರಣಿ ಗೆಲುವಿನ ತವಕ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 12-03-19 ** ಚುನಾವಣೆ ಹಿನ್ನೆಲೆ:  ಎಪ್ರೀಲ್ 29, 30ಕ್ಕೆ ಸಿಇಟಿ ಪರೀಕ್ಷೆ ಮೂಂದೂಡಿಕೆ ** ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತಕುಮಾರ್​ ಹೆಸರು ಫೈನಲ್​ ** ದೇವೇಗೌಡರ ವಿರುದ್ದ ಸ್ಪರ್ಧೆಗೆ ನಾನು ಸಿದ್ಧ: ಡಿವಿಎಸ್ ** ನಾನು ಕೇವಲ ಪಾತ್ರಧಾರಿ, ದೇವೇಗೌಡರ ಕುಟುಂಬವೇ ಸೂತ್ರಧಾರಿ: ಮಂಡ್ಯ ಸಂಸದ ಶಿವರಾಮೇಗೌಡ ** ರಾಷ್ಟ್ರಪತಿಯಿಂದ ಡ್ಯಾನ್ಸರ್​ ಪ್ರಭುದೇವ್​, ಮೋಹನ್​ ಲಾಲ್​ ಸೇರಿದಂತೆ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ** ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಶರದ್​ ಪವಾರ್​ ** ಸಂಜೋತಾ ಎಕ್ಸ್​ಪ್ರೆಸ್​ ಸ್ಫೋಟ ಪ್ರಕರಣದ ತೀರ್ಪನ್ನು ಮಾರ್ಚ್​ 14ಕ್ಕೆ ಕಾದಿರಿಸಿದ ಪಂಚಕುಲ ನ್ಯಾಯಾಲಯ ** ಸೇನೆ, ಸೈನಿಕರು ಮಾತ್ರವಲ್ಲ ಶಬರಿಮಲೆ ವಿಚಾರವನ್ನೂ ಚುನಾವಣೆಗೆ ಬಳಸುವಂತಿಲ್ಲ: ಚುನಾವಣಾ ಆಯೋಗ ಎಚ್ಚರಿಕೆ ** ಮಸೂದ್ ಅಜರ್ ಜೀ' ಎಂದ ರಾಹುಲ್ ಗೆ ಬಿಜೆಪಿಯಿಂದ ಲೇವಡಿ ** ಬಾಲಾಕೋಟ್ ಏರ್‌ಸ್ಟ್ರೈಕ್‌ ದಿನ 263 ಉಗ್ರರು ತರಬೇತಿ ಶಿಬಿರದಲ್ಲಿದ್ದರು: ಟೈಮ್ಸ್‌ ನೌ ಎಕ್ಸ್‌ಕ್ಲೂಸಿವ್‌ ವರದಿ ** ಪುಲ್ವಾಮ ದಾಳಿಯ ನಂತರ 6 ಜೈಶ್ ಉಗ್ರರು ಸೇರಿ 18 ಉಗ್ರರ ಹತ್ಯೆ: ಸೇನೆ ** ಪುಲ್ವಾಮಾ ದಾಳಿಯ  ಸಂಚುಕೋರ ಉಗ್ರ ಮುದಾಸಿರ್ ಅಹ್ಮದ್ ಖಾನ್, ಭಾರತೀಯ ಸೈನಿಕರಿಂದ ಎನ್ ಕೌಂಟರ್ ನಲ್ಲಿ ಹತ್ಯೆ ** ಜನರ ಮುಂದಿರುವುದು ಎರಡೇ ಆಯ್ಕೆ- ಮೋದಿ ಇಲ್ಲವೇ ಅರಾಜಕತೆ: ಅರುಣ...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 11-03-19 ** ಲೋಕಸಭಾ ಸಮರ: ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿ; ಎಪ್ರೀಲ್ 11ರಿಂದ 7 ಹಂತದಲ್ಲಿ ಚುನಾವಣೆ, ಕರ್ನಾಟಕದಲ್ಲಿ ಎಪ್ರೀಲ್ 18, 23ರಂದು 2ಹಂತದಲ್ಲಿ ಮತದಾನ; ಮೇ 23ಫಲಿತಾಂಶ ** ನೀವೇನು ಭಯೋತ್ಪಾದಕರ ಹೆಣ ತಂದು ಅಂತ್ಯಕ್ರಿಯೆ ಮಾಡ್ತೀರಾ: ಏರ್​ಸ್ಟ್ರೈಕ್​ ಸಾಕ್ಷಿ ಕೇಳಿದವರಿಗೆ ಕಟು ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ ** ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಬಾಗಲಕೋಟೆ ಜಿಲ್ಲಾಧಿಕಾರಿ ರಾಮಚಂದ್ರನ್ ** ಚುನಾವಣೆಗೆ ತಲೆ ಕೆಡಿಸಿಕೊಂಡಿಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ ** ದೇವೇಗೌಡರ ಕುಟುಂಬ ನಾಟಕದ ಕಂಪನಿ ಇದ್ದ ಹಾಗೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ** ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್​ ಕುಮಾರಸ್ವಾಮಿ ** ವೈದ್ಯಕೀಯ ಪಿಜಿ ಸೀಟು; ರಾಜ್ಯದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ ** ಇದುವರೆಗೆ ಆಗಿದ್ದು ಸಾಕು, ಇನ್ನು ಸುಮ್ಮನೆ ಕೂರಲು ಸಾಧ್ಯವಿಲ್ಲ:ಭಯೋತ್ಪಾದನೆ ಕುರಿತು ಪ್ರಧಾನಿ ನರೇಂದ್ರ ಮೋದಿ ** ಭಾರತೀಯ ಸೇನಾ ಕ್ಯಾಪ್ ಧರಿಸಿ 3ನೇ ಪಂದ್ಯ ಆಡಿದ್ದ ಕೊಹ್ಲಿ ಪಡೆ: ಕ್ಯಾತೆ ತೆಗೆದ ಪಾಕ್‌ಗೆ ಚೀಮಾರಿ ಹಾಕಿದ ಐಸಿಸಿ ** ಭಾರತ-ಆಸಿಸ್ 3ನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು
ಜೈ ಶೇಗುಣಸಿ ಸುದ್ದಿ ಸಂಪದ ದಿ: 10-03-19 ** ಪ್ರಧಾನಿ ಭೇಟಿ ಮಾಡಿದ ಸಿಎಂ ಎಚ್ಡಿಕೆ: ಪ್ರಕೃತಿ ವಿಕೋಪ, ಬರ ಅನುದಾನದ 2064 ಕೋಟಿ ರೂ. ಬಿಡುಗಡೆಗೆ ಒತ್ತಾಯ ** ಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣ ** ಸುಪಾರಿ ಪ್ರಕರಣದಲ್ಲಿ ನನ್ನ ಹೆಸರಿಲ್ಲ, ಇದೆಲ್ಲ ಸುಳ್ಳು: ನಟ ಯಶ್ ಸ್ಪಷ್ಟನೆ ** ಸುಮಲತಾರ ಬಗ್ಗೆ ಎಚ್‌ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್‌ ** ಸುಮಲತಾಗೆ ಅವಮಾನ: ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ** ನಾನು ಮೊದಲು ಮಂಡ್ಯನ್​ ಆಮೇಲೆ ಇಂಡಿಯನ್​: ನನಗೆ ಮಂಡ್ಯದಿಂದ ಟಿಕೆಟ್​ ಕೊಡಿ ಎಂದ ಬಿಜೆಪಿ ನಾಯಕ ಅಬ್ದುಲ್​ ಅಜೀಮ್​ ** ಲೋಕಸಭೆ ಚುನಾವಣೆ: ಮಾ.15ರೊಳಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಬಿಎಸ್ವೈ ** ಲೋಕಸಭೆ ಚುನಾವಣೆ ಅಖಾಡದಲ್ಲಿ ಫೈಟ್‌ಗೆ ರೆಡಿ: ಉಮೇಶ್‌ ಜಾಧವ್‌ ** ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಅವಘಡ, 25 ಎಕರೆ ಅರಣ್ಯ ನಾಶ ** 26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆಗೆ ಯುಪಿಎ ಸರ್ಕಾರ ಅವಕಾಶ ನಿರಾಕರಿಸಲಾಗಿತ್ತು: ಮೋದಿ ** ಹತರಾದ ಉಗ್ರರ ಸಂಖ್ಯೆ ಕೇಳುವುದು ನಮ್ಮ ಸೈನಿಕರ ಶೌರ್ಯ ಪ್ರಶ್ನಿಸುವಂತಿದೆ: ರಾಜನಾಥ್ ಸಿಂಗ್ ** ಭಾರತೀಯ ಗಡಿಯೊಳಗೆ ನುಸುಳಿದ ಪಾಕ್ ಡ್ರೋಣ್ ಅಟ್ಟಾಡಿಸಿದ ಸೇನೆ, ಬಂದದಾರಿಗೆ ಸುಂಕವಿ...
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-03-19 ** ಇಂದು ಶೇಗುಣಸಿಯ ಶ್ರೀ ಮುರುಘೇಂದ್ರ ಶಿಕ್ಷಣ ಸಂಸ್ಥೆಯ ಸ್ನೇಹ ಸಮ್ಮೇಳನ ಮತ್ತು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಂಗಮ ಕಾರ್ಯಕ್ರಮ ** ಕರ್ನಾಟಕ ಭವನಕ್ಕೆ ಶಂಕು ಸ್ಥಾಪನೆ : ಒಟ್ಟಾಗಿ ಪೂಜೆ ಮಾಡಿದ ರೇವಣ್ಣ, ಬಿಎಸ್‌ವೈ ** ವಿಂಗ್​ ಕಮಾಂಡರ್​ ಅಭಿನಂದನ್​ಗೆ ಪರಮವೀರ ಚಕ್ರ ನೀಡಿ: ಪ್ರಧಾನಿಗೆ ತಮಿಳುನಾಡು ಸಿಎಂ ಮನವಿ ** ಕಾಶ್ಮೀರಿಗಳ ಮೇಲೆ ಹಲ್ಲೆ ನಡೆದರೆ ಕಠಿಣ ಕ್ರಮ ತೆಗೆದುಕೊಳ್ಳಿ: ರಾಜ್ಯಗಳಿಗೆ ಪ್ರಧಾನಿ ಮೋದಿ ಮನವಿ ** ವಂಚಕ ವಜ್ರೋದ್ಯಮಿ ನೀರವ್​ ಮೋದಿಯ 100 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗ್ಲೆ ನೆಲಸಮ ** ಅಯೋಧ್ಯೆ ವಿವಾದದ ಶಾಶ್ವತ ಪರಿಹಾರಕ್ಕೆ ಸಂಧಾನಕಾರರ ನೇಮಿಸಿದ ಸುಪ್ರೀಂ ** ನೂತನ ಹಣಕಾಸು ಕಾರ್ಯದರ್ಶಿಯಾಗಿ ಐಎಎಸ್​ ಸುಭಾಷ್​ ಚಂದ್ರ ಗರ್ಗ್​ ನೇಮಕ ** ರಕ್ಷಣಾ ಸಚಿವಾಲಯದಿಂದ ರಫೇಲ್​ ದಾಖಲೆಗಳು ಕಳುವಾಗಿಲ್ಲ: ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಸ್ಪಷ್ಟನೆ ** ಮತದಾರರ ಗುರುತಿನ ಚೀಟಿಗೆ ಆಧಾರ್​ ಜೋಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ ** ಪುಲ್ವಾಮ ದಾಳಿಗಿಂತಲೂ ದೊಡ್ಡ ವಿಧ್ವಂಸಕ ಕೃತ್ಯವೆಸಗಲು 'ಜೈಶ್ ಸಂಚು': ಗುಪ್ತಚರ ಇಲಾಖೆ ಮಾಹಿತಿ ** ಬಾಲಾಕೋಟ್​ನಲ್ಲಿ ಬಾಂಬ್​ ಹಾಕಿ 19 ಮರ ನಾಶಪಡಿಸಿದ ಭಾರತೀಯ ಪೈಲಟ್​ಗಳ ವಿರುದ್ಧ ಎಫ್​ಐಆರ್​ ದಾಖಲಿಸಿದ ಪಾಕ್​ ** ಆಲ್​ ಇಂಗ್ಲೆಂಡ್​ ಚಾಂಪಿಯನ್​ಷಿಪ್​: ಕ್ವಾರ್ಟರ್...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 08-03-19 ** ಅಮ್ಮ ರಾಮನಗರ, ಅಪ್ಪ ಚೆನ್ನಪಟ್ಟಣ, ಮಗನಿಗೆ ಮಂಡ್ಯ ಆದರೆ ಕಾರ್ಯಕರ್ತರು ಗೆಣಸು ಕೀಳೋದಾ: ಎಚ್‌ಡಿಕೆ ಕುಟುಂಬದ ವಿರುದ್ಧ ಆಕ್ರೋಶ ** ಮಂಡ್ಯ ಬಿಟ್ಟು ಎಲ್ಲೂ ಸ್ಪರ್ಧಿಸಲ್ಲ, ಬಿಜೆಪಿಯವರು ಯಾರೂ ಸಂಪರ್ಕಿಸಿಲ್ಲ: ಸುಮಲತಾ ** ಸುಮಲತಾ ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ: ಬಿಎಸ್​ವೈ ** ಒಬ್ರು ರಿಮೋಟ್‍ನಿಂದ ಚಲಿಸುವವರು, ಮತ್ತೊಬ್ಬರು ಕುಂಕುಮ ಕಂಡ್ರೆ ಭಯ ಪಡುವವರು: ಸಿಎಂ, ಸಿದ್ದು ಕುರಿತು ಸ್ಮೃತಿ ಇರಾನಿ ವ್ಯಂಗ್ಯ ** ಮಾ.9ರಂದು ಮಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ** ಹೊಸ 20 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ** ಲೋಕಪಾಲ ನೇಮಕ ಆಯ್ಕೆ ಸಮಿತಿ ಸಭೆಗೆ ದಿನಾಂಕ ನಿಗದಿಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ ** ಮೋದಿ ಆಡಳಿತಾವಧಿಯಲ್ಲಿ ಬಡತನ ಹೆಚ್ಚಳ: ಅಧಿಕಾರಕ್ಕೆ ಬಂದರೆ ನಿರ್ಮೂಲನೆ- ರಾಹುಲ್ ** ಪಾಕ್ ಗಡಿಯಲ್ಲಿ ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರೀ; ಭಾರತೀಯ ಯೋಧರಿಗೆ ಬಿಪಿನ್ ಸೂಚನೆ ** ಇಂದು ರಾಂಚಿಯಲ್ಲಿ ಭಾರತ-ಆಸಿಸ್ 3ನೇ ಏಕದನ; ಭಾರತಕ್ಕೆ ಸರಣಿ ಗೆಲುವಿನ ಗುರಿ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-03-19 ** ಕರ್ನಾಟಕದ 21ರೈತರಿಗೆ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿಯ ಗರಿ; ಸಿಎಂರಿಂದ ಪ್ರದಾನ ** ಕರ್ನಾಟಕದ ರಿಮೋಟ್‌ ಕಂಟ್ರೋಲ್‌ ಸಿಎಂ ರೈತ ವಿರೋಧಿಯಾಗಿದ್ದಾರೆ: ನರೇಂದ್ರ ಮೋದಿ; ನಾನು ರಿಮೋಟ್ ಕಂಟ್ರೋಲ್ ಸಿಎಂ ಆಗಿ ಅಭಿವೃದ್ಧಿ ಕೆಲಸ ಮಾಡ್ತಿದ್ದೇನೆ: ಎಚ್​ಡಿಕೆ ತಿರುಗೇಟು ** ಏನೇ ಬೇಡಿಕೆ ಇದ್ದರು ಚರ್ಚಿಸಿ, ಬಿಜೆಪಿ ಆಮಿಷಕ್ಕೆ ಒಳಗಾಗಬೇಡಿ: ಜಾರಕಿಹೊಳಿ, ಕುಮಟಳ್ಳಿ ಮನವೊಲಿಕೆಗೆ ಸಿಎಂ ಯತ್ನ ** ಲೋಕ ಸಮರ: 10ಸೀಟ್ ಗಾಗಿ ಜೆಡಿಎಸ್ ಬಿಗಿಪಟ್ಟು; ರಾಹುಲ್ ಜೊತೆಗಿನ‌ ಗೌಡರ ಮಾತುಕತೆ ವಿಫಲ ** ಸಾಂಸ್ಕೃತಿಕ ನಗರಿ ಮೈಸೂರು ದೇಶದ ಮೂರನೇ ಸ್ವಚ್ಛ ನಗರ ** ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್​ ಜಾಧವ್​ ಬಿಜೆಪಿಗೆ ಅಧಿಕೃತ ಸೇರ್ಪಡೆ ** ಬಾಲಾಕೋಟ್​ ದಾಳಿ ಕುರಿತು ಕೇಂದ್ರ ಸರ್ಕಾರಕ್ಕೆ 12ಪುಟಗಳ ಸಾಕ್ಷಿ ಒದಗಿಸಿದ ವಾಯುಪಡೆ ** ಅಭಿನಂದನ್​ ಯಾವುದೇ ಸಾಮಾಜಿಕ ಜಾಲತಾಣ ಖಾತೆಯನ್ನು ಹೊಂದಿಲ್ಲ: ವಾಯುಪಡೆ ** ಸಫಾಯಿ ಕರ್ಮಚಾರಿಗಳ ಕಾರ್ಪಸ್​ ಫಂಡ್​ಗೆ ಸ್ವಂತ ಉಳಿತಾಯದ 21 ಲಕ್ಷ ರೂ.ನೀಡಿದ ಮೋದಿ ** ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ಕುರಿತ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್​ ** ಪಾಕ್​ ನಾಗರಿಕರ ವಿಸಾ ಅವಧಿಯನ್ನು 5 ವರ್ಷದಿಂದ ಮೂರು ತಿಂಗಳಿಗೆ ಇಳಿಸಿದ ಯುಎಸ್​ ಸರ್ಕಾರ