ಗುರುವಿನ ಕೃಪೆವೊಂದಿದ್ದರೆ ಮುಕ್ತಿ ಸಾಧ್ಯ- ಶ್ರೀ ರೇವಣಸಿದ್ಧೇಶ್ವರ ಮಹಾರಾಜರ ಅಭಿಮತ..
ಜೈ ಶೇಗುಣಸಿ ಸುದ್ದಿ..
ನಾವು ನಂಬಿದ ಗುರು ಎಂದೂ ನಮ್ಮ ಕೈ ಬಿಡುವುದಿಲ್ಲ. ನಮ್ಮನ್ನು ಕಷ್ಟದಿಂದ ಪಾರುಮಾಡುವ ಶಕ್ತಿ ಗುರುವಿಗೆ ಇದೆ ಎಂದು ಇಂಚಗೇರಿ ಆಧ್ಯಾತ್ಮ ಆಶ್ರಮದ ಪೀಠಾಧಿಪತಿಗಳಾದ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.
ಬೆಂಗಳೂರಿನ ಮಂತ್ರಿ ಮಾಲ್ ಎದುರು ಶ್ರೀ ಗುಂಡುರಾವ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಶ್ರೀ ಮಾಧವಾನಂದ ಮಹಾರಾಜರ ಪುಣ್ಯಸ್ಮರಣೆ ಹಾಗೂ ಪಂಪಕವಿ ರಾಮಪ್ಪ ಬೆಳಗಲಿ ರವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು, ಗುರುವಿನ ಕೃಪೆವೊಂದಿದ್ದರೆ ಮುಕ್ತಿ ಸಾಧ್ಯ ಎಂದರು.
ಸಾನಿಧ್ಯ ವಹಿಸಿದ್ದ ಅಥಣಿ ಭೂ ಕೈಲಾಸ ಮಂದಿರದ ಶ್ರೀ ಮಹಾದೇವ ಮಹಾರಾಜರು, ಮಾಧವಾನಂದ ಮಹಾರಾಜರ ಜೀವನದ ಘಟನೆಗಳನ್ನು ಬಿಚ್ಚಿಟ್ಟರು. ಕಾರ್ಯಕ್ರಮದಲ್ಲಿ ಕಕಮರಿಯ ತಾರಾಚಂದ ಮಹಾರಾಜರು, ಹೋಮಿಯೋಪತಿ ವೈದ್ಯ ಡಾ. ರುದ್ರೇಶ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಇಂಡಿ ಶಾಸಕ ಯಶವಂತಗೌಡ, ಕ್ರಾಂತಿವೀರ ಮಹಾದೇವರು ಚಿತ್ರದ ನಿರ್ದೇಶಕ ಓಂ ಸಾಯಿಪ್ರಕಾಶ್, ನಟರಾದ ಶ್ರೀ ರಾಮ್ ಕುಮಾರ್, ಶ್ರೀ ಶ್ರೀಶೈಲ ನಾರಗೊಂಡ ರವರು ಪಾಲ್ಗೊಂಡಿರುವುದು.

Comments
Post a Comment