Posts

Showing posts from March, 2019
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 13-03-19 ** ಮಂಡ್ಯ ಜಿಲ್ಲೆಯ ಪ್ರೀತಿ ಅಭಿಮಾನವನ್ನು ದುರುಪಯೋಗಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ: ಸಿಎಂ ಕುಮಾರಸ್ವಾಮಿ ** ಕಾಂಗ್ರೆಸ್ ಪಕ್ಷನಾ, ಪಕ್ಷೇತರನಾ? ಎನ್ನುವ ಗೊಂದಲ ಬಿಟ್ಟರೆ ನನ್ನ ಸ್ಪರ್ಧೆ ಖಚಿತ ಎಂದ ಸುಮಲತಾ ** ಬಿಜೆಪಿ ಸೇರ್ಪಡೆ ಸುಳಿವು ನೀಡಿದ ಎ.ಮಂಜು, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ ಸಾಧ್ಯತೆ ** ರಾಜ್ಯದ 28 ಕ್ಷೇತ್ರದಿಂದಲೂ ಬಿಎಸ್ಪಿ ಅಭ್ಯರ್ಥಿಗಳ ಸ್ಪರ್ಧೆ:ಎನ್. ಮಹೇಶ್ ** "ಕನ್ನಡ ಸುಂದರವಾದ ಭಾಷೆ'': ಪ್ರಧಾನಿ ಮೋದಿ ಟ್ವೀಟ್‌ ** ಕಾಂಗ್ರೆಸ್‌ಗೆ ಭಾರೀ ಮುಜುಗರ: ಮಹಾರಾಷ್ಟ್ರ ಪ್ರತಿಪಕ್ಷ ನಾಯಕನ ಪುತ್ರ ಬಿಜೆಪಿಗೆ ** ಪಾಕ್​ ಮತ್ತು ರಾಹುಲ್​ ಗಾಂಧಿ ಮಧ್ಯದ ಸಾಮಾನ್ಯ ಸಂಗತಿಯೆಂದರೆ ಉಗ್ರರೆಡೆಗಿನ ಪ್ರೀತಿ: ಸ್ಮೃತಿ ಟೀಕೆ ** ಉತ್ತರಪ್ರದೇಶ ಮಾತ್ರವಲ್ಲ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್‌ನೊಂದಿಗೆ ಮೈತ್ರಿಯಿಲ್ಲ:ಮಾಯಾವತಿ ** ಪ್ರಧಾನಿ ಮೋದಿ ತವರಲ್ಲಿ ಪ್ರಿಯಾಂಕಾ ಮೊದಲ ರ‍್ಯಾಲಿ: ಸರ್ಕಾರದ ವಿರುದ್ಧ ವಾಗ್ದಾಳಿ ** ವಿಶ್ವಕಪ್​ನಲ್ಲಿ ಟೀಂ ಇಂಡಿಯಾನೇ ಫೇವರೆಟ್​ ಎಂದ ವಿಶ್ವಶ್ರೇಷ್ಠ ಸ್ಪಿನ್​ ಬೌಲರ್​ ಶೇನ್​ ವಾರ್ನ ** ಇಂದು ಇಂಡೋ-ಆಸಿಸ್ ಫೈನಲ್ ಫೈಟ್: ಉಭಯ ತಂಡಗಳಿಗೆ ಸರಣಿ ಗೆಲುವಿನ ತವಕ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 12-03-19 ** ಚುನಾವಣೆ ಹಿನ್ನೆಲೆ:  ಎಪ್ರೀಲ್ 29, 30ಕ್ಕೆ ಸಿಇಟಿ ಪರೀಕ್ಷೆ ಮೂಂದೂಡಿಕೆ ** ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತಕುಮಾರ್​ ಹೆಸರು ಫೈನಲ್​ ** ದೇವೇಗೌಡರ ವಿರುದ್ದ ಸ್ಪರ್ಧೆಗೆ ನಾನು ಸಿದ್ಧ: ಡಿವಿಎಸ್ ** ನಾನು ಕೇವಲ ಪಾತ್ರಧಾರಿ, ದೇವೇಗೌಡರ ಕುಟುಂಬವೇ ಸೂತ್ರಧಾರಿ: ಮಂಡ್ಯ ಸಂಸದ ಶಿವರಾಮೇಗೌಡ ** ರಾಷ್ಟ್ರಪತಿಯಿಂದ ಡ್ಯಾನ್ಸರ್​ ಪ್ರಭುದೇವ್​, ಮೋಹನ್​ ಲಾಲ್​ ಸೇರಿದಂತೆ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ** ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಶರದ್​ ಪವಾರ್​ ** ಸಂಜೋತಾ ಎಕ್ಸ್​ಪ್ರೆಸ್​ ಸ್ಫೋಟ ಪ್ರಕರಣದ ತೀರ್ಪನ್ನು ಮಾರ್ಚ್​ 14ಕ್ಕೆ ಕಾದಿರಿಸಿದ ಪಂಚಕುಲ ನ್ಯಾಯಾಲಯ ** ಸೇನೆ, ಸೈನಿಕರು ಮಾತ್ರವಲ್ಲ ಶಬರಿಮಲೆ ವಿಚಾರವನ್ನೂ ಚುನಾವಣೆಗೆ ಬಳಸುವಂತಿಲ್ಲ: ಚುನಾವಣಾ ಆಯೋಗ ಎಚ್ಚರಿಕೆ ** ಮಸೂದ್ ಅಜರ್ ಜೀ' ಎಂದ ರಾಹುಲ್ ಗೆ ಬಿಜೆಪಿಯಿಂದ ಲೇವಡಿ ** ಬಾಲಾಕೋಟ್ ಏರ್‌ಸ್ಟ್ರೈಕ್‌ ದಿನ 263 ಉಗ್ರರು ತರಬೇತಿ ಶಿಬಿರದಲ್ಲಿದ್ದರು: ಟೈಮ್ಸ್‌ ನೌ ಎಕ್ಸ್‌ಕ್ಲೂಸಿವ್‌ ವರದಿ ** ಪುಲ್ವಾಮ ದಾಳಿಯ ನಂತರ 6 ಜೈಶ್ ಉಗ್ರರು ಸೇರಿ 18 ಉಗ್ರರ ಹತ್ಯೆ: ಸೇನೆ ** ಪುಲ್ವಾಮಾ ದಾಳಿಯ  ಸಂಚುಕೋರ ಉಗ್ರ ಮುದಾಸಿರ್ ಅಹ್ಮದ್ ಖಾನ್, ಭಾರತೀಯ ಸೈನಿಕರಿಂದ ಎನ್ ಕೌಂಟರ್ ನಲ್ಲಿ ಹತ್ಯೆ ** ಜನರ ಮುಂದಿರುವುದು ಎರಡೇ ಆಯ್ಕೆ- ಮೋದಿ ಇಲ್ಲವೇ ಅರಾಜಕತೆ: ಅರುಣ...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 11-03-19 ** ಲೋಕಸಭಾ ಸಮರ: ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿ; ಎಪ್ರೀಲ್ 11ರಿಂದ 7 ಹಂತದಲ್ಲಿ ಚುನಾವಣೆ, ಕರ್ನಾಟಕದಲ್ಲಿ ಎಪ್ರೀಲ್ 18, 23ರಂದು 2ಹಂತದಲ್ಲಿ ಮತದಾನ; ಮೇ 23ಫಲಿತಾಂಶ ** ನೀವೇನು ಭಯೋತ್ಪಾದಕರ ಹೆಣ ತಂದು ಅಂತ್ಯಕ್ರಿಯೆ ಮಾಡ್ತೀರಾ: ಏರ್​ಸ್ಟ್ರೈಕ್​ ಸಾಕ್ಷಿ ಕೇಳಿದವರಿಗೆ ಕಟು ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ ** ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಬಾಗಲಕೋಟೆ ಜಿಲ್ಲಾಧಿಕಾರಿ ರಾಮಚಂದ್ರನ್ ** ಚುನಾವಣೆಗೆ ತಲೆ ಕೆಡಿಸಿಕೊಂಡಿಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ ** ದೇವೇಗೌಡರ ಕುಟುಂಬ ನಾಟಕದ ಕಂಪನಿ ಇದ್ದ ಹಾಗೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ** ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್​ ಕುಮಾರಸ್ವಾಮಿ ** ವೈದ್ಯಕೀಯ ಪಿಜಿ ಸೀಟು; ರಾಜ್ಯದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ ** ಇದುವರೆಗೆ ಆಗಿದ್ದು ಸಾಕು, ಇನ್ನು ಸುಮ್ಮನೆ ಕೂರಲು ಸಾಧ್ಯವಿಲ್ಲ:ಭಯೋತ್ಪಾದನೆ ಕುರಿತು ಪ್ರಧಾನಿ ನರೇಂದ್ರ ಮೋದಿ ** ಭಾರತೀಯ ಸೇನಾ ಕ್ಯಾಪ್ ಧರಿಸಿ 3ನೇ ಪಂದ್ಯ ಆಡಿದ್ದ ಕೊಹ್ಲಿ ಪಡೆ: ಕ್ಯಾತೆ ತೆಗೆದ ಪಾಕ್‌ಗೆ ಚೀಮಾರಿ ಹಾಕಿದ ಐಸಿಸಿ ** ಭಾರತ-ಆಸಿಸ್ 3ನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು
ಜೈ ಶೇಗುಣಸಿ ಸುದ್ದಿ ಸಂಪದ ದಿ: 10-03-19 ** ಪ್ರಧಾನಿ ಭೇಟಿ ಮಾಡಿದ ಸಿಎಂ ಎಚ್ಡಿಕೆ: ಪ್ರಕೃತಿ ವಿಕೋಪ, ಬರ ಅನುದಾನದ 2064 ಕೋಟಿ ರೂ. ಬಿಡುಗಡೆಗೆ ಒತ್ತಾಯ ** ಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣ ** ಸುಪಾರಿ ಪ್ರಕರಣದಲ್ಲಿ ನನ್ನ ಹೆಸರಿಲ್ಲ, ಇದೆಲ್ಲ ಸುಳ್ಳು: ನಟ ಯಶ್ ಸ್ಪಷ್ಟನೆ ** ಸುಮಲತಾರ ಬಗ್ಗೆ ಎಚ್‌ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್‌ ** ಸುಮಲತಾಗೆ ಅವಮಾನ: ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ** ನಾನು ಮೊದಲು ಮಂಡ್ಯನ್​ ಆಮೇಲೆ ಇಂಡಿಯನ್​: ನನಗೆ ಮಂಡ್ಯದಿಂದ ಟಿಕೆಟ್​ ಕೊಡಿ ಎಂದ ಬಿಜೆಪಿ ನಾಯಕ ಅಬ್ದುಲ್​ ಅಜೀಮ್​ ** ಲೋಕಸಭೆ ಚುನಾವಣೆ: ಮಾ.15ರೊಳಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಬಿಎಸ್ವೈ ** ಲೋಕಸಭೆ ಚುನಾವಣೆ ಅಖಾಡದಲ್ಲಿ ಫೈಟ್‌ಗೆ ರೆಡಿ: ಉಮೇಶ್‌ ಜಾಧವ್‌ ** ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಅವಘಡ, 25 ಎಕರೆ ಅರಣ್ಯ ನಾಶ ** 26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆಗೆ ಯುಪಿಎ ಸರ್ಕಾರ ಅವಕಾಶ ನಿರಾಕರಿಸಲಾಗಿತ್ತು: ಮೋದಿ ** ಹತರಾದ ಉಗ್ರರ ಸಂಖ್ಯೆ ಕೇಳುವುದು ನಮ್ಮ ಸೈನಿಕರ ಶೌರ್ಯ ಪ್ರಶ್ನಿಸುವಂತಿದೆ: ರಾಜನಾಥ್ ಸಿಂಗ್ ** ಭಾರತೀಯ ಗಡಿಯೊಳಗೆ ನುಸುಳಿದ ಪಾಕ್ ಡ್ರೋಣ್ ಅಟ್ಟಾಡಿಸಿದ ಸೇನೆ, ಬಂದದಾರಿಗೆ ಸುಂಕವಿ...
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-03-19 ** ಇಂದು ಶೇಗುಣಸಿಯ ಶ್ರೀ ಮುರುಘೇಂದ್ರ ಶಿಕ್ಷಣ ಸಂಸ್ಥೆಯ ಸ್ನೇಹ ಸಮ್ಮೇಳನ ಮತ್ತು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಂಗಮ ಕಾರ್ಯಕ್ರಮ ** ಕರ್ನಾಟಕ ಭವನಕ್ಕೆ ಶಂಕು ಸ್ಥಾಪನೆ : ಒಟ್ಟಾಗಿ ಪೂಜೆ ಮಾಡಿದ ರೇವಣ್ಣ, ಬಿಎಸ್‌ವೈ ** ವಿಂಗ್​ ಕಮಾಂಡರ್​ ಅಭಿನಂದನ್​ಗೆ ಪರಮವೀರ ಚಕ್ರ ನೀಡಿ: ಪ್ರಧಾನಿಗೆ ತಮಿಳುನಾಡು ಸಿಎಂ ಮನವಿ ** ಕಾಶ್ಮೀರಿಗಳ ಮೇಲೆ ಹಲ್ಲೆ ನಡೆದರೆ ಕಠಿಣ ಕ್ರಮ ತೆಗೆದುಕೊಳ್ಳಿ: ರಾಜ್ಯಗಳಿಗೆ ಪ್ರಧಾನಿ ಮೋದಿ ಮನವಿ ** ವಂಚಕ ವಜ್ರೋದ್ಯಮಿ ನೀರವ್​ ಮೋದಿಯ 100 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗ್ಲೆ ನೆಲಸಮ ** ಅಯೋಧ್ಯೆ ವಿವಾದದ ಶಾಶ್ವತ ಪರಿಹಾರಕ್ಕೆ ಸಂಧಾನಕಾರರ ನೇಮಿಸಿದ ಸುಪ್ರೀಂ ** ನೂತನ ಹಣಕಾಸು ಕಾರ್ಯದರ್ಶಿಯಾಗಿ ಐಎಎಸ್​ ಸುಭಾಷ್​ ಚಂದ್ರ ಗರ್ಗ್​ ನೇಮಕ ** ರಕ್ಷಣಾ ಸಚಿವಾಲಯದಿಂದ ರಫೇಲ್​ ದಾಖಲೆಗಳು ಕಳುವಾಗಿಲ್ಲ: ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಸ್ಪಷ್ಟನೆ ** ಮತದಾರರ ಗುರುತಿನ ಚೀಟಿಗೆ ಆಧಾರ್​ ಜೋಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ ** ಪುಲ್ವಾಮ ದಾಳಿಗಿಂತಲೂ ದೊಡ್ಡ ವಿಧ್ವಂಸಕ ಕೃತ್ಯವೆಸಗಲು 'ಜೈಶ್ ಸಂಚು': ಗುಪ್ತಚರ ಇಲಾಖೆ ಮಾಹಿತಿ ** ಬಾಲಾಕೋಟ್​ನಲ್ಲಿ ಬಾಂಬ್​ ಹಾಕಿ 19 ಮರ ನಾಶಪಡಿಸಿದ ಭಾರತೀಯ ಪೈಲಟ್​ಗಳ ವಿರುದ್ಧ ಎಫ್​ಐಆರ್​ ದಾಖಲಿಸಿದ ಪಾಕ್​ ** ಆಲ್​ ಇಂಗ್ಲೆಂಡ್​ ಚಾಂಪಿಯನ್​ಷಿಪ್​: ಕ್ವಾರ್ಟರ್...
ಜೈ ಶೇಗುಣಸಿ ಸುದ್ದಿ ಸಂಪದ... ದಿ: 08-03-19 ** ಅಮ್ಮ ರಾಮನಗರ, ಅಪ್ಪ ಚೆನ್ನಪಟ್ಟಣ, ಮಗನಿಗೆ ಮಂಡ್ಯ ಆದರೆ ಕಾರ್ಯಕರ್ತರು ಗೆಣಸು ಕೀಳೋದಾ: ಎಚ್‌ಡಿಕೆ ಕುಟುಂಬದ ವಿರುದ್ಧ ಆಕ್ರೋಶ ** ಮಂಡ್ಯ ಬಿಟ್ಟು ಎಲ್ಲೂ ಸ್ಪರ್ಧಿಸಲ್ಲ, ಬಿಜೆಪಿಯವರು ಯಾರೂ ಸಂಪರ್ಕಿಸಿಲ್ಲ: ಸುಮಲತಾ ** ಸುಮಲತಾ ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ: ಬಿಎಸ್​ವೈ ** ಒಬ್ರು ರಿಮೋಟ್‍ನಿಂದ ಚಲಿಸುವವರು, ಮತ್ತೊಬ್ಬರು ಕುಂಕುಮ ಕಂಡ್ರೆ ಭಯ ಪಡುವವರು: ಸಿಎಂ, ಸಿದ್ದು ಕುರಿತು ಸ್ಮೃತಿ ಇರಾನಿ ವ್ಯಂಗ್ಯ ** ಮಾ.9ರಂದು ಮಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ** ಹೊಸ 20 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ** ಲೋಕಪಾಲ ನೇಮಕ ಆಯ್ಕೆ ಸಮಿತಿ ಸಭೆಗೆ ದಿನಾಂಕ ನಿಗದಿಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ ** ಮೋದಿ ಆಡಳಿತಾವಧಿಯಲ್ಲಿ ಬಡತನ ಹೆಚ್ಚಳ: ಅಧಿಕಾರಕ್ಕೆ ಬಂದರೆ ನಿರ್ಮೂಲನೆ- ರಾಹುಲ್ ** ಪಾಕ್ ಗಡಿಯಲ್ಲಿ ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರೀ; ಭಾರತೀಯ ಯೋಧರಿಗೆ ಬಿಪಿನ್ ಸೂಚನೆ ** ಇಂದು ರಾಂಚಿಯಲ್ಲಿ ಭಾರತ-ಆಸಿಸ್ 3ನೇ ಏಕದನ; ಭಾರತಕ್ಕೆ ಸರಣಿ ಗೆಲುವಿನ ಗುರಿ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-03-19 ** ಕರ್ನಾಟಕದ 21ರೈತರಿಗೆ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿಯ ಗರಿ; ಸಿಎಂರಿಂದ ಪ್ರದಾನ ** ಕರ್ನಾಟಕದ ರಿಮೋಟ್‌ ಕಂಟ್ರೋಲ್‌ ಸಿಎಂ ರೈತ ವಿರೋಧಿಯಾಗಿದ್ದಾರೆ: ನರೇಂದ್ರ ಮೋದಿ; ನಾನು ರಿಮೋಟ್ ಕಂಟ್ರೋಲ್ ಸಿಎಂ ಆಗಿ ಅಭಿವೃದ್ಧಿ ಕೆಲಸ ಮಾಡ್ತಿದ್ದೇನೆ: ಎಚ್​ಡಿಕೆ ತಿರುಗೇಟು ** ಏನೇ ಬೇಡಿಕೆ ಇದ್ದರು ಚರ್ಚಿಸಿ, ಬಿಜೆಪಿ ಆಮಿಷಕ್ಕೆ ಒಳಗಾಗಬೇಡಿ: ಜಾರಕಿಹೊಳಿ, ಕುಮಟಳ್ಳಿ ಮನವೊಲಿಕೆಗೆ ಸಿಎಂ ಯತ್ನ ** ಲೋಕ ಸಮರ: 10ಸೀಟ್ ಗಾಗಿ ಜೆಡಿಎಸ್ ಬಿಗಿಪಟ್ಟು; ರಾಹುಲ್ ಜೊತೆಗಿನ‌ ಗೌಡರ ಮಾತುಕತೆ ವಿಫಲ ** ಸಾಂಸ್ಕೃತಿಕ ನಗರಿ ಮೈಸೂರು ದೇಶದ ಮೂರನೇ ಸ್ವಚ್ಛ ನಗರ ** ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್​ ಜಾಧವ್​ ಬಿಜೆಪಿಗೆ ಅಧಿಕೃತ ಸೇರ್ಪಡೆ ** ಬಾಲಾಕೋಟ್​ ದಾಳಿ ಕುರಿತು ಕೇಂದ್ರ ಸರ್ಕಾರಕ್ಕೆ 12ಪುಟಗಳ ಸಾಕ್ಷಿ ಒದಗಿಸಿದ ವಾಯುಪಡೆ ** ಅಭಿನಂದನ್​ ಯಾವುದೇ ಸಾಮಾಜಿಕ ಜಾಲತಾಣ ಖಾತೆಯನ್ನು ಹೊಂದಿಲ್ಲ: ವಾಯುಪಡೆ ** ಸಫಾಯಿ ಕರ್ಮಚಾರಿಗಳ ಕಾರ್ಪಸ್​ ಫಂಡ್​ಗೆ ಸ್ವಂತ ಉಳಿತಾಯದ 21 ಲಕ್ಷ ರೂ.ನೀಡಿದ ಮೋದಿ ** ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ಕುರಿತ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್​ ** ಪಾಕ್​ ನಾಗರಿಕರ ವಿಸಾ ಅವಧಿಯನ್ನು 5 ವರ್ಷದಿಂದ ಮೂರು ತಿಂಗಳಿಗೆ ಇಳಿಸಿದ ಯುಎಸ್​ ಸರ್ಕಾರ
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 06-03-19 ** ಸುಮಲತಾ ಅಂಬರೀಷ್‌ ಬಿಜೆಪಿಗೆ ಬಂದರೆ ಟಿಕೆಟ್‌ ಕೊಡಿಸುತ್ತೇವೆ: ಬಸನಗೌಡ ಯತ್ನಾಳ್‌ ** ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ ಕಾಂಗ್ರೆಸ್‌ನಲ್ಲೇ ಇರುತ್ತಾರೆ: ಸಿದ್ದರಾಮಯ್ಯ ** ಬಿಜೆಪಿ ಸಂಸದ ಪ್ರತಾಪ್ ಸಿಂಹರಿಂದ ಮೈಸೂರು-ಕೆಎಸ್ಆರ್ ಬೆಂಗಳೂರು-ಕಾಚಿಗೂಡ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ** ಬೆಂಗಳೂರು: ಪ್ರಧಾನ್ ಮಂತ್ರಿ ಶ್ರಮ ಯೋಗಿ ಮನ್ -ಧನ್ ಯೋಜನೆಗೆ ಸದಾನಂದಗೌಡ ಚಾಲನೆ ** ರಾಜಸ್ಥಾನದ ಪ್ರಾಥಮಿಕ ಶಾಲಾ ಪಠ್ಯಕ್ರಮದಲ್ಲಿ ಅಭಿನಂದನ್​ ಸಾಹಸಗಾಥೆ ಸೇರ್ಪಡೆಗೊಳಿಸಲು ನಿರ್ಧಾರ ** ದೆಹಲಿಯಲ್ಲಿ ಆಪ್​ನೊಂದಿಗೆ ಮೈತ್ರಿ ಇಲ್ಲ: ಶೀಲಾ ದೀಕ್ಷಿತ್​ ** ಏರ್ ಸ್ಟ್ರೈಕ್ ಮಿಲಿಟರಿ ಕಾರ್ಯಾಚರಣೆಯಲ್ಲ, ನಾಗರಿಕರಿಗೆ ಯಾವುದೇ ಹಾನಿ ಆಗಿಲ್ಲ- ರಕ್ಷಣಾ ಸಚಿವೆ ** ವಿಶ್ವದ 20 ಅತಿ ಕಲುಷಿತ ನಗರಗಳಲ್ಲಿ 15 ಭಾರತದ್ದು!, ದೆಹಲಿ ವಿಶ್ವದಲ್ಲೇ ಅತ್ಯಂತ ಮಲಿನಗೊಂಡ ರಾಜಧಾನಿ: ವರದಿ ** ಸಮುದ್ರ ಮೂಲಕ ದಾಳಿಗೆ ಉಗ್ರರ ಸಂಚು: ನೌಕಾಪಡೆ ಮುಖ್ಯಸ್ಥರ ಎಚ್ಚರಿಕೆ ** ಕ್ರಿಕೆಟ್: ಕೊಹ್ಲಿ ಶತಕಕ್ಕೆ ತಲೆಬಾಗಿದ ಆಸಿಸ್ ಗೆ 8ರನ್ ಗಳ ಸೋಲು
ಜೈ ಶೇಗುಣಸಿ ಸುದ್ದಿ ಸಂಪದ... ದಿ: 05-03-19 ** ಶಾಸಕ ಸ್ಥಾನಕ್ಕೆ ಚಿಂತಯಚೋಳಿ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ ** ಕೇಂದ್ರ ಮಾಜಿ ಸಚಿವ ಧನಂಜಯ ಕುಮಾರ್​ ನಿಧನ ** ವೈಮಾನಿಕ ದಾಳಿ ವೇಳೆ ರಾಫೆಲ್ ಇದ್ದಿದ್ದರೆ ಪರಿಣಾಮವೇ ಬೇರೆ ಆಗಿರುತ್ತಿತ್ತು: ಪ್ರಧಾನಿ ಮೋದಿ ** ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಕುಟುಂಬಸ್ಥರಿಗೆ 110 ಕೋಟಿ ರೂ. ನೆರವು ನೀಡಿದ ಅಂಧ ವಿಜ್ಞಾನಿ ಮುರ್ತಜಾ ಎ. ಹಮೀದ್​ ** ಭಾರತ ಶಾಂತಿಗೆ ಬದ್ಧ, ಅನಿವಾರ್ಯವಾದರೆ ಎಲ್ಲಾ ಶಕ್ತಿ ಬಳಸಿ ರಾಷ್ಟ್ರರಕ್ಷಣೆ: ರಾಷ್ಟ್ರಪತಿ ** ರಾಜಸ್ಥಾನ ಗಡಿ ಬಳಿ ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್​ ಡ್ರೋನ್​ ಹೊಡೆದುರುಳಿಸಿದ ವಾಯುಪಡೆ ** ಗುರಿಗಳ ಮೇಲೆ ದಾಳಿ ಮಾಡುವುದಷ್ಟೇ ನಮ್ಮ ಕೆಲಸ, ಶವಗಳ ಎಣಿಸುವುದಲ್ಲ: ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ** ಸೆಪ್ಟೆಂಬರ್​ನಲ್ಲಿ ದೇಶ ಸೇವೆಗೆ ಸೇರ್ಪಡೆಯಾಗಲಿವೆ ರಫೇಲ್​ ಯುದ್ಧವಿಮಾನಗಳು ** ಓಡಿಸ್ಸಾ: ಬಿಜೆಡಿ ಮಾಜಿ ಸಂಸದ ಬೈಜಯಂತ್ 'ಜಯ್' ಪಾಂಡ ಬಿಜೆಪಿ ಸೇರ್ಪಡೆ ** ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯ ಸ್ಥಾನ ನೀಡಲು ಫ್ರಾನ್ಸ್ ಒತ್ತಾಯ ** ಅಮೆರಿಕದ ಅಲ್ಬಾಮಾದಲ್ಲಿ ಭಾರಿ ಸುಂಟರಗಾಳಿ, 22 ಜನರ ಸಾವು: ಸಾವುನೋವು ಇನ್ನಷ್ಟು ಹೆಚ್ಚುವ ಸಾಧ್ಯತೆ ** ಇಂದು ಆಸಿಸ್ ವಿರುದ್ಧ 2ನೇ ಏಕದಿನ ಕದನ: ಗೆಲುವಿನ ತುಡಿತದಲ್ಲಿ ಟೀಂ ಇಂಡಿಯಾ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-03-19 ** ಮಂಡ್ಯದಲ್ಲಿ ಸುಮಲತಾ ಅಂಬರೀಶ್‍ಗೆ ಬಿಜೆಪಿ ಬೆಂಬಲ: ಸಂಸದೆ ಶೋಭಾ ಕರಂದ್ಲಾಜೆ ** ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿಯಿದ್ದರೇ ನಿಖಿಲ್ ಮಂಡ್ಯದಿಂದ ನಿಲ್ಲಲ್ಲಿ: ದೇವೇಗೌಡ ** ವಿಂಗ್ ಕಮಾಂಡರ್ ಅಭಿನಂಧನ್‌ಗೆ ಎಂಆರ್‌ಐ ಸ್ಕ್ಯಾನ್: ಪಕ್ಕೆಲುಬು, ಬೆನ್ನೆಲುಬಿನಲ್ಲಿ ಗಾಯ ಪತ್ತೆ ** ಎಫ್-16 ಹೊಡೆದುರುಳಿಸಿದ್ದಕ್ಕೆ ಭಾರತದ ವಿರುದ್ಧ ಮೊಕದ್ದಮೆ: ಪಾಕ್ ಪ್ರತಿಪಾದನೆ ತಳ್ಳಿಹಾಕಿದ ಲಾಕ್ಹೀಡ್ ಮಾರ್ಟಿನ್ ** ಜೈಷ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಸಾವು? ಭಾರತೀಯ ವಾಯುಪಡೆ ದಾಳಿಗಳ ಬಳಿಕ ಹರಡಿದ ವದಂತಿ ** 7.5 ಲಕ್ಷ ಅತ್ಯಾಧುನಿಕ ಎಕೆ 203 ರೈಫಲ್​ ತಯಾರಿಕೆಗೆ ರಷ್ಯಾ ಕಂಪನಿಯೊಂದಿಗೆ ಭಾರತ ಸಹಿ ** ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರಕ್ಕೆ ಫುಲ್ ಮಾರ್ಕ್ಸ್: ಹಾಡಿ ಹೊಗಳಿದ ಚಿದಂಬರಂ ** ಪ್ರತಿಪಕ್ಷಗಳು ಮೋದಿಯನ್ನು ನಿಂದಿಸುವ ಕೆಲಸ ಬಿಟ್ಟು ಇನ್ನೇನೂ ಮಾಡುತ್ತಿಲ್ಲ: ಪ್ರಧಾನಿ ವಾಗ್ದಾಳಿ ** ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯದಲ್ಲಿ ಮತ್ತೆ ಅಲ್ಪ ವ್ಯತ್ಯಯ, ಆಸ್ಪತ್ರೆಗೆ ದಾಖಲು ** ಲೋಕಸಭೆ ಚುನಾವಣೆ ಹಿನ್ನೆಲೆ: ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಪುಲೆ ** ಏರ್ ಸ್ಟ್ರೈಕ್ ಕುರಿತು ಸಾಕ್ಷಿ ಕೇಳಿದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್! ** ಸರ್ಕಾರದ ವೈಫಲ್ಯ ಮರೆಮಾಚಲು ಮೋದಿಯಿಂದ ಉಗ್ರರ ದಾಳಿ ಬಳಕೆ: ಮಾಯಾವತಿ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-03-19 ** ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಮಂಡ್ಯದಿಂದ ಮಾತ್ರ; ಸುಮಲತಾ ಪುನರುಚ್ಛಾರ ** ಅಭಿನಂದನ್​ ಎಂಬ ಶಬ್ದದ ಅರ್ಥವೇ ಬದಲಾಗಿದೆ: ವಿಂಗ್​ ಕಮಾಂಡರ್​ ಶೌರ್ಯ ಪ್ರಶಂಸಿಸಿದ ಮೋದಿ ** ಅಭಿನಂದನ್​ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಂದ ಕುಶಲೋಪರಿ ಮಾತುಕತೆ ** ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ: ಅಮಿತ್​ ಷಾ ** ಪಾಕ್​ನಿಂದ ಎಫ್​-16 ಯುದ್ಧ ವಿಮಾನ ದುರ್ಬಳಕೆ ಕುರಿತು ಅಮೆರಿಕಕ್ಕೆ ಸಾಕ್ಷ್ಯ ಒದಗಿಸಿದ ಭಾರತ ** ಪಾಕ್ ಗೆ ತೆರಳುವ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸೇವೆ ಇಂದಿನಿಂದ ಪುನಾರಂಭ: ರೈಲ್ವೆ ಇಲಾಖೆ ** ಟಿಪ್ಪು ಬಗ್ಗೆ ಮಾತನಾಡುವುದು ಬಿಟ್ಟು ಉಗ್ರರನ್ನು ಸದೆಬಡಿಯಿರಿ: ಪಾಕ್​ ವಿರುದ್ಧ ಒವೈಸಿ ಗುಡುಗು ** ಮಾರ್ಚ್ 19ರವರೆಗೂ ರಾಬರ್ಟ್ ವಾದ್ರಾ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ** ವೈಮಾನಿಕ ದಾಳಿಯಲ್ಲಿ ಜೈಶ್​ ತರಬೇತಿ ಕೇಂದ್ರದ 4 ಕಟ್ಟಡಗಳು ಧ್ವಂಸ: ರಡಾರ್ ಚಿತ್ರಗಳಿಂದ ಖಚಿತ ** ಧೋನಿ-ಕೇದಾರ್​ ಜುಗಲ್​ಬದಿಗೆ ಕಾಂಗರೂ ತತ್ತರ... ಮೊದಲ ಪಂದ್ಯದಲ್ಲೇ ಕಾಂಗರೂ ಮಣಿಸಿದ ಟೀಂ ಇಂಡಿಯಾ ** ಸಿಸಿಎಲ್:ತೆಲುಗು ವಾರಿಯರ್ಸ್ ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟ ಕರ್ನಾಟಕ ಬುಲ್ಡೋಜರ್ಸ್
ಜೈ ಶೇಗುಣಸಿ ಸುದ್ದಿ ಸಂಪದ.. ದಿ: 02-03-19 ** ತಾಯ್ನಾಡಿಗೆ ಮರಳಿದ ವಿಂಗ್​ ಕಮಾಂಡರ್​ ಅಭಿನಂದನ್​; ಕೋಟ್ಯಂತರ ಭಾರತಿಯರಲ್ಲಿ ಹರ್ಷ ** ಮಧ್ಯಾಹ್ನ 12ಗಂ.ಗೆ ಎಂದು ಹೇಳಿ, ರಾತ್ರಿ 9.30ಕ್ಕೆ ಅಭಿನಂದನ್ ರನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದ ಪಾಕ್ ** ಕಲಬುರಗಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಸಾಧ್ಯತೆ ** ಸಾಂಸ್ಕೃತಿಕ ಕಲಾವೈಭವಕ್ಕೆ ಕ್ಷಣಗಣನೆ, ಇಂದಿನಿಂದ 2 ದಿನ ಹಂಪಿ ಉತ್ಸವ ** ನನಗೊಂದು ಅವಕಾಶ ಕೊಡಿ: ಮೈಸೂರಿನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ನಿಖಿಲ್​ ಕುಮಾರಸ್ವಾಮಿ ** ನಿಗದಿಯಂತೆಯೇ ನಡೆಯಲಿದೆ ಲೋಕಸಭೆ ಚುನಾವಣೆ: ಸುನೀಲ್ ಅರೋರಾ ** ನಾನು ಪ್ರಧಾನ ಮಂತ್ರಿ ಸ್ಥಾನದ ರೇಸ್​ನಲ್ಲಿಲ್ಲ: ಗಡ್ಕರಿ ಸ್ಪಷ್ಟನೆ ** ಅಭಿನಂದನ್ ಸ್ವದೇಶಕ್ಕೆ ವಾಪಾಸ್ : ನಮ್ಮ ರಾಜತಾಂತ್ರಿಕತೆಗೆ ಸಂದ ಜಯ: ಅಮಿತ್ ಶಾ ** ಉಗ್ರರನ್ನು ಪೋಷಿಸುವುದನ್ನು ನಿಲ್ಲಿಸುವಂತೆ ರಾಷ್ಟ್ರಗಳಿಗೆ ತಿಳಿಸಬೇಕು: ಸುಷ್ಮಾ ಸ್ವರಾಜ್‌ ** ಒಸಾಮಾ ಬಿನ್‌ ಲಾಡೆನ್‌ ಪುತ್ರನ ಸುಳಿವು ಕೊಟ್ಟವರಿಗೆ 7 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ ** ಉಗ್ರನೆಲೆಗಳಲ್ಲ, ಪ್ರಕೃತಿನಾಶವಾಗಿದೆ: ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪಾಕ್ ನಿಂದ'ಇಕೋ ಟೆರರಿಸಂ' ದೂರು ** ಕ್ರಿಕೇಟ್: ಇಂದು ಭಾರತ-ಆಸಿಸ್ ಮೊದಲ ಏಕದಿನ ಪಂದ್ಯ
ಜೈ ಶೇಗುಣಸಿ ಸುದ್ದಿ ಸಂಪದ... ದಿ: 01-03-19 ** ಇಂದಿನಿಂದ 2ನೇ ಪಿಯುಸಿ ಪರೀಕ್ಷೆ, 6 ಲಕ್ಷ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ** ಪಾಕ್​ ವಶದಲ್ಲಿರೋ ಅಭಿನಂದನ್​ ಇಂದು ಬಿಡುಗಡೆ: ಸಂಸತ್ ನಲ್ಲಿ ಇಮ್ರಾನ್ ಖಾನ್ ** ಅಭಿನಂದನ್ ಸ್ವಾಗತಕ್ಕೆ ಸೇನೆ ಸಿದ್ಧ, ಪ್ರತಿದಾಳಿಗೂ ಸನ್ನದ್ಧ ** ಉಗ್ರರ ಸಂಹಾರ: ಸಶಸ್ತ್ರ ಸೇನಾ ಪಡೆಗಳಿಗೆ ಮತ್ತೆ ಫ್ರೀ ಹ್ಯಾಂಡ್‌ ನೀಡಿದ ಪ್ರಧಾನಿ ಮೋದಿ ** ಭಾರತ ಹೋರಾಡುತ್ತದೆ, ಬದುಕುತ್ತದೆ, ಕಾರ್ಯನಿರ್ವಹಿಸುತ್ತದೆ ಮತ್ತು ಗೆಲ್ಲುತ್ತದೆ: ಮೋದಿ ** ನನ್ನ ಮಗ ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ: ಅಭಿನಂದನ್​ ತಂದೆ ** ಶಾಂತಿ ಮಾತುಕತೆಗಾಗಿ ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನ: ಪೈಲಟ್​ ಬಿಡುಗಡೆ ಇಲ್ಲದೆ ಮಾತುಕತೆ ಇಲ್ಲ ಎಂದ ಭಾರತ ** ಪಾಕಿಸ್ತಾನ ಯಾವುದೇ ರೀತಿಯ ದುಸಾಹಸಕ್ಕೆ ಮುಂದಾದರೆ ಎದಿರೇಟು ನೀಡಲು ಸಿದ್ದ- ಸೇನಾ ಮುಖ್ಯಸ್ಥರು ** ನಿಮ್ಮ ಸೌಹಾರ್ದ  ನಡೆ ನಮ್ಮ ಜನರಿಗೆ ನೀಡಿದ 'ಒಂದು ಕಪ್​ ಸಂತೋಷ': ಪಾಕ್​ ಪ್ರಧಾನಿ ಕೊಂಡಾಡಿದ ಸಿಧು ** ಗಡಿನಿಯಂತ್ರಣಾ ರೇಖೆ ಬಳಿ ಪಾಕ್​ನಿಂದ ನಿರಂತರ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ ** ಪಾಕ್-ಭಾರತ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸಂಚಾರ ಸ್ಥಗಿತಗೊಳಿಸಿದ ಪಾಕಿಸ್ತಾನ ** ಭಾರತದ ಪ್ರಸ್ತಾಪಕ್ಕೆ ವಿಶ್ವಸಂಸ್ಥೆಯಲ್ಲಿ ಬೆಂಬಲವಾಗಿ ನಿಂತ ಅಮೆರಿಕ, ಇಂಗ್ಲೆಂಡ್ ಮತ್ತು ಪ್ರಾನ್ಸ್ ** ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ...