ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

"ಜೈ ಶೇಗುಣಸಿ" ಸುದ್ದಿ..

ಸಿಂಗಾಪುರ: ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರದಲ್ಲಿ ಗುರುವಾರ ಹಣ ಪಾವತಿಗೆ ಸಂಬಂಧಿಸಿದ ಮೂರು ಭಾರತೀಯ ಮೊಬೈಲ್‌ ಆ್ಯಪ್‌ಗಳನ್ನು ಬಿಡುಗಡೆಗೊಳಿಸಿದರು. 

'ಉದ್ಯಮ, ಆವಿಷ್ಕಾರ ಮತ್ತು ಸಮುದಾಯ' ಕುರಿತ ಸಮಾವೇಶದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಅವರು ಭಾರತದ 'ಭೀಮ್‌', 'ರೂಪೇ' ಮತ್ತು ಎಸ್‌ಬಿಐ ಆ್ಯಪ್‌ಗಳನ್ನು ಬಿಡುಗಡೆಗೊಳಿಸಿದರು. ರುಪೇ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಸಿಂಗಾಪುರದ ಎಲೆಕ್ಟ್ರಾನಿಕ್‌ ವರ್ಗಾವಣೆ ನೆಟ್‌ವರ್ಕ್‌ (ಎನ್‌ಇಟಿಎಸ್‌) ಜತೆಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ರುಪೇ ಬಳಕೆದಾರರು ಸಿಂಗಾಪುರದ ಎಲ್ಲ ಎನ್‌ಇಟಿಎಸ್‌ ಸ್ವೀಕಾರ ಕೇಂದ್ರಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ. ಪ್ರತಿವರ್ಷ ಸುಮಾರು ಐದು ದಶಲಕ್ಷ ಭಾರತೀಯರು, ಸಿಂಗಾಪುರಕ್ಕೆ ಮತ್ತು ಸಿಂಗಾಪುರ ಮೂಲಕ ಪ್ರವಾಸ ಮಾಡುವುದರಿಂದ ಇದು ಬಹುಕೋಟಿ ಡಾಲರ್‌ ವಹಿವಾಟಿಗೆ ಕಾರಣವಾಗುತ್ತದೆ ಎಂದು ಉದ್ಯಮ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 

ನಂತರ ಮಾತನಾಡಿದ ಮೋದಿ ಅವರು, ''ಭಾರತ ಮತ್ತು ಸಿಂಗಾಪುರ ನಡುವಿನ ಸ್ನೇಹಮಯ ಸಂಬಂಧ ವಿಶ್ವಕ್ಕೆ ಮಾದರಿಯಾಗಿದೆ. ಸಿಂಗಾಪುರದಲ್ಲಿ ತಮಿಳಿಗೆ ಅಧಿಕೃತ ಭಾಷೆಯ ಮಾನ್ಯತೆ ನೀಡಲಾಗಿದೆ. ಇಲ್ಲಿನ ಶಾಲೆಗಳಲ್ಲಿ ಐದು ಭಾರತೀಯ ಭಾಷೆಗಳನ್ನು ಕಲಿಯುವ ಅವಕಾಶ ಒದಗಿಸಲಾಗಿದೆ. ಭಾರತದ ಎಲ್ಲ ಹಬ್ಬಗಳ ಆಚರಣೆಗಳನ್ನು ನೋಡಲು ಸಿಂಗಾಪುರಕ್ಕೆ ಬರಬೇಕು,'' ಎಂದು ಬಣ್ಣಿಸಿದರು. 

''ಭಾರತೀಯ ಪ್ರತಿಭೆಗಳನ್ನು ಸಿಂಗಾಪುರ ಸರಕಾರ ಗುರುತಿಸಿದೆ. ಅವರ ಪ್ರತಿಭೆಯನ್ನು ಪೋಷಿಸಿದೆ. ಅದಕ್ಕೆ ಸಿಂಗಾಪುರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಸಿಂಗಾಪುರದ ಭಾರತೀಯರು, ಸಿಂಗಾಪುರವನ್ನು ತಮ್ಮ ಪ್ರತಿಭೆಯಿಂದ ಸಿಂಗರಿಸಿದ್ದಾರೆ,'' ಎಂದು ಹೇಳಿದರು. 

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18