ಬಡ ಜೈನ ವಿದ್ಯಾರ್ಥಿಗಳಿಗೆ ಅರಿಹಂತ ಫೌಂಡೇಶನ್‌ ನೆರವು...

ಜೈ ಶೇಗುಣಸಿ ಸುದ್ದಿ..


ಬಡ ಪ್ರತಿಭಾವಂತ ಜೈನ ವಿದ್ಯಾರ್ಥಿಗಳು ಬಡತನದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಯಬಾಗ ತಾಲೂಕಿನ ಜೈನ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅರಿಹಂತ ಚಾರಿಟೇಬಲ್ ೌಂಡೇಶನ್ ಆರ್ಥಿಕ ನೆರವು ನೀಡುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಫೌಂಡೇಶನ ಅಧ್ಯಕ್ಷ ಡಿ.ಸಿ.ಸದಲಗಿ ಹೇಳಿದ್ದಾರೆ.
ಸ್ಥಳೀಯ ಜೈನ ಮಂದಿರದಲ್ಲಿ ಮಂಗಳವಾರ ನಡೆದ ಫೌಂಡೇಶನ್ ದಾನಿಗಳಿಗೆ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಡು ಬಡತನ ಹಾಗೂ ಸಾಂಸಾರಿಕ ತೊಂದರೆಗಳಿಂದ ಜೈನ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದಾರೆ. ಜೈನ ಸಮಾಜದಿಂದ ಹಿಂದುಳಿದವರಿಗಾಗಿಯೇ ಅರಿಹಂತ ಚಾರಿಟೇಬಲ್ ಫೌಂಡೇಶನ್ ಎಂಬ ಬೃಹತ್ ಸಂಘಟನೆಯನ್ನು ಸ್ಥಾಪಿಸಿ, ಅವರಿಗೆ ಸೂಕ್ತ ಸಹಾಯ ಸಹಕಾರ ನೀಡಲಾಗುತ್ತಿದೆ ಎಂದರು.
ಕಾರ್ಯದರ್ಶಿ ಎಂ.ಪಿ.ಖಾನಟ್ಟಿ ಮಾತನಾಡಿ ಫೌಂಡೇಶನ್ ಆಶ್ರಯದಲ್ಲಿ ಗಣಪತರಾಯ ಗಂಗಾರಾಮ ಹಜಾರೆ ಮತ್ತು ಶ್ರೀಮತಿ ಪ್ರಭಾವತಿ ಹಜಾರೆ ದಂಪತಿಗಳು ತಾಲೂಕಿನ ಜೈನ ಬಡ ವಿದ್ಯಾರ್ಥಿಗಳಿಗೆ ನೆರವಾಗಲು 2018-19 ನೇ ಸಾಲಿಗೆ ಪ್ರೋತ್ಸಾಹ ಧನ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದಲ್ಲಿ ಶೇ 80 ಕ್ಕಿಂತ ಹೆಚ್ಚು ಅಂಕಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.
ಅರ್ಹ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯೊಂದಿಗೆ ಅರ್ಜಿ ಜೊತೆಗೆ ದೃಢೀಕೃತ ಅಂಕಪಟ್ಟಿ, ವ್ಯಾಸಂಗ ಪ್ರಮಾಣ ಪತ್ರದ ವಿವರಗಳೊಂದಿಗೆ ಜುಲೈ 31 ರೊಳಗಾಗಿ ಕಾರ್ಯದರ್ಶಿಗಳು ಅರಿಹಂತ ಚಾರಿಟೇಬಲ್ ಫೌಂಡೇಶನ, ಪಿ.ಎಂ.ಖಾನಟ್ಟಿ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಹತ್ತಿರ ಅಳಗವಾಡಿ, ತಾಲೂಕ ರಾಯಬಾಗ ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 9482383030 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಫೌಂಡೇಶನ ಸದಸ್ಯರಾದ ನೇಮಿನಾಥ ಅಸ್ಕಿ, ಡಿ.ಎಂ.ಶೆಟ್ಟಿ, ಶೀತಲ ಬೇಡಕಿಹಾಳೆ, ಸಂಜಯ ಹಂಜೆ, ಧರ್ಮಪಾಲ ಕುರಾಣಿ, ಸಿದ್ದಪ್ಪ ನಾಗನೂರ, ಈರಗೌಡ ಪಾಟೀಲ, ಭರತೇಶ ಪಾಟೀಲ, ಸಂಜು ಬಡೋರೆ, ಪಾರೀಸ್ ಉಗಾರೆ, ವರ್ಧಮಾನ ಬನವಣೆ, ಕಾರ್ಯದರ್ಶಿ ಎಂ.ಪಿ.ಖಾನಟ್ಟಿ ಹಾಗೂ ಫೌಂಡೇಶನ ಸದಸ್ಯರು ಉಪಸ್ಥಿತರಿದ್ದರು.

Comments

Popular posts from this blog

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18

"ಜೈ ಶೇಗುಣಸಿ" ದಿನದ ಸುದ್ದಿ.. 31-5-18