ಸೀತಾಗಿರಿಯಲ್ಲಿ ಸಂಜೀವಿನಿ ಸಮಾಧಿ ಹೊಂದಿದ ಶ್ರೀ ಸ.ಸ. ಕಲ್ಮೇಶ್ವರ ಮಹಾರಾಜರ ಮಠದಲ್ಲಿ ಶ್ರೀ ರಾಮ ದೇವಸ್ಥಾನದ ಸ್ಥಾಪನೆ ಹಿನ್ನಲೆ....

ಜೈ ಶೇಗುಣಸಿ ಸುದ್ದಿ...


-ಪೀಠಾಧಿಪತಿ ಶ್ರೀ ಸ.ಸ. ವಾಲಿ ಮಹಾರಾಜರ ಸಂಶೋಧನಾ ಪ್ರಬಂಧದಿಂದ..

ಸೀತಾಗಿರಿ  ಹೆಸರೇ ಸೂಚಿಸುವಂತೆ ಸೀತಾಮಾತೆ ವಾಸವಾಗಿದ್ದ ಸ್ಥಾನ. ಸುತ್ತಮುತ್ತಲ ಪ್ರದೇಶದಲ್ಲಿ ಶ್ರೀ ರಾಮದೇವರ ವಾಸ್ತವ್ಯವಿತ್ತು ಎಂದು ತಿಳಿದುಬಂದಿದೆ...

ಚಿನ್ನದ ಮೃಗದ ವೇಷಧಾರಿ ಮಾರೀಚನನ್ನು ಶ್ರೀರಾಮ ಬಹಳ ದೂರದವರೆಗೂ ಅಟ್ಟಿಸಿಕೊಂಡು ಬಂದ..ಅವನನ್ನು ಆಲಮಟ್ಟಿಯ ಸಮೀಪದಲ್ಲಿರು ಅರಣ್ಯದಲ್ಲಿ ಕೊಂದ ಎಂದು..ಚಿನ್ನದ ಮೃಗವನ್ನು ಕೊಂದ ಪ್ರದೇಶವೇ ಈಗಿನ ಚಿಮ್ಮಲಗಿ...
ಸೀತಾದೇವಿಯನ್ನು ಅಪಹರಿಸಿ ಜಟಾಯು ಅಡ್ಡಗಟ್ಟಿ ತೊಂದರೆ ಕೊಡುತ್ತಾ ಅಟ್ಟಿಸಿಕೊಂಡು ಹೋದನಂತೆ..ಅದನ್ನೇ ಈಗ "ಅಡ್ಡಗಟ್ಟಿ  ಹಳ್ಳಿ" ಎಂದು ಕರೆಯುತ್ತಾರೆ...

ಆಲಮಟ್ಟಿಯ ಹತ್ತಿರವೇ ಇರುವ ಇನ್ನೊಂದು  ಸೀತಿಮನಿ ಎಂಬಲ್ಲಿ ಸೀತಾದೇವಿ ವಾಸವಿದ್ದಳು ಎಂದು..ಇಲ್ಲಿ ಇಂದಿಗೂ ಅರಿಶಿಣ ಹೊಂಡ,  ಲವ ಕುಶ ಹೊಂಡ ಎಂಬ ಹೊಂಡಗಳಿವೆ..
 ಲವ ಕುಶರನ್ನು ನೋಡಲು ಶ್ರೀ ರಾಮ ಪುಷ್ಪಕ ವಿಮಾನ ತೆಗೆದುಕೊಂಡು ಬಂದಿಳಿದ ಜಾಗದಲ್ಲಿ ಶ್ರೀ ಕಲ್ಮೇಶ್ವರ ಮಹಾರಾಜರು ಶ್ರೀ ರಾಮಚಂದ್ರಪ್ಪ ಎಂಬ ಹವಾಲ್ದಾರ್ ರ ಮೂಲಕ  75 ವರ್ಷದ ಹಿಂದೆ ತಮ್ಮ ಗುರುಗಳಾದ ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಹೆಸರನ್ನು ಇಟ್ಟು ಮಠ ಸ್ಥಾಪನೆ ಮಾಡಿದರು.

 ಲೋಕದ ಅಪವಾದಕ್ಕೆ ಅಂಜಿದ ಶ್ರೀ ರಾಮ ಬೆಟ್ಟದ ಮೇಲೆ ಹೋಗುವ ಗೋಜಿಗೆ ಹೋಗಲಿಲ್ಲ. ಇಲ್ಲೆ ನಿಂತು ತನ್ನ ಪರಿವಾರ ಒಂದುಗೂಡಿ ಒಂದೆಡೆ ಇರಲು ಬಯಸಿದ. ಆದರೆ ಅದು ಆ ಸಮಯದಲ್ಲಿ ಕೈಗೂಡಲಿಲ್ಲ. ಈಗ ಆ ಸಮಯ ಬಂದಿದೆ. ಶ್ರೀ ರಾಮಾ ,ಮಾತೆ ಸೀತಾದೇವಿ, ಲವ- ಕುಶ, ಲಕ್ಷ್ಮಣ- ಊರ್ಮಿಳಾ, ದಾಸರಾಮ, ರಾಮದಾಸ ರ ಮೂರ್ತಿಗಳ ಸ್ಥಾಪಿಸಿ ಶ್ರೀ ರಾಮಚಂದ್ರ ಪ್ರಭುಗಳ ಸಂಕಲ್ಪ ಇಂದು ಶ್ರೀ ಸದ್ಗುರು ಡಾ.ಎ.ಸಿ.ವಾಲಿ ಮಹಾರಾಜರ ನೇತೃತ್ವದಲ್ಲಿ  ದಿನಾಂಕ :21-01-2018 ರಂದು ನೆರವೇರಿಸಲಾಯಿತು.

ಶ್ರೀರಾಮ ಕೃಷ್ಣಾತೀರದ ಹಸಿರು ವನದ ಪ್ರಶಾಂತ ವಾತಾವರಣದಲ್ಲಿ ಇರಲು ಇಚ್ಛಿಸಿ ವಾಸ್ತವ್ಯ ಮಾಡಿದನಂತೆ..ಅದು ಇಂದು ರಾಂಪೂರ ಗ್ರಾಮವಾಗಿದೆ.

ಸೀತಾದೇವಿ ತಾವು ತಂಗಿದ್ದ ಪ್ರದೇಶ ಶ್ರೀರಾಮನ ಸನ್ನಿಧಾನವಾಗಬೇಕೆಂದು ಕೇಳಿದಳಂತೆ.. ಮಾರುತಿಯು ಪ್ರಭು ಶ್ರೀರಾಮ ನೀವಿರುಲ್ಲೇ ನನಗೊಂದು ಜಾಗ ಕೊಡಿರಿ . ನಿಮ್ಮ ಸೇವೆ ಮಾಡಿಕೊಂಡಿರುವೆ ಎಂದನಂತೆ...ನೀನು 7 ಊರಿನ ಒಡೆಯನಾಗಿ ಕೃಷ್ಣಾತೀರದಲ್ಲಿ ನೆಲೆಸಿ , ಭಕ್ತರ ಬೇಡಿಕೆಗಳನ್ನು ನಿನ್ನ ಮುಖಾಂತರ ಈಡೇರಿಸುವೆ ಎಂದು ಹೇಳಿದನಂತೆ...ಅದರಂತೆ ಯಲಗೂರೇಶ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ ಎಲ್ಲರ ದೈವವಾಗಿದ್ದಾನೆ...
ಪುರಾಣ ಪ್ರಸಿದ್ಧ ಸೀತಾಗಿರಿಗೆ ಇನ್ನು ಮೇಲೆ ಇತಿಹಾಸ ನಿರ್ಮಾಣ ಕಾರ್ಯದಲ್ಲಿ ತೊಡಗಿ ಪಾವನವಾಗಿ.

||ಜಯ ಜಯ ರಘುವೀರ ಸಮರ್ಥ||

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18