ಜಲಯೋಗ ಪ್ರದರ್ಶಿಸಿ ಯೋಗದ ಮಹತ್ವ ಸಾರಿದ ಅಂಗವಿಕಲರು
ಜೈ ಶೇಗುಣಸಿ ಸುದ್ದಿ..
4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಗರದಲ್ಲಿ ಆಯೋಜಿಸಲಾಗಿದ್ದ ಜಲಯೋಗ ಕಾರ್ಯಕ್ರಮದಲ್ಲಿ ಅಂಗವಿಕಲರು ಜಲಯೋಗ ಪ್ರದರ್ಶಿಸಿ ಯೋಗ ಮಹತ್ವವನ್ನು ಸಾರಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಕೆಎಲ್ಇ ಶಿಕ್ಷಣ ಸಂಸ್ಥೆಗಳ ಸಯೋಗದಲ್ಲಿ ನಗರದ ಕೆಎಲ್ಇ ಸಂಸ್ಥೆಯ ಸುವರ್ಣ ಜಿಎನ್ ಎಮ್ ಸಿ ಈಜುಕೊಳದಲ್ಲಿ ಜಲಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಮೇಶ ಕಲಘಟಗಿ ಅವರ ತಂಡದೊಂದಿಗೆ ಸಣ್ಣ ಮಕ್ಕಳು ನೀರಿನಲ್ಲಿ ಯಾವುದೇ ಪ್ರಯಾಸವಿಲ್ಲದೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಹಿರಿಯರೂ ಸಹ ಜಲಯೋಗ ಪ್ರದರ್ಶನ ನೀಡಿದರು. ಪರ್ವತ ಆಸನ, ಹನುಮ ಆಸನ, ಸಮಸ್ಥಿತಿ, ಸೂರ್ಯ ನಮಸ್ಕಾರ,ಕಂದರ ಆಸನ ಇನ್ನಿತರ ಆಸನಗಳನ್ನು ಪ್ರದರ್ಶಿಸಿದರು.
ಹನಿ ಹನಿ ಮಳೆಯ ನಡುವೆಯೂ ಜನರು ಯೋಗಭಂಗಿಗಳನ್ನು ನೋಡಿ ಸಂತಸಪಟ್ಟರು.
Comments
Post a Comment