ಕಪ್ಪು ಹಣದ ಮಾಹಿತಿ ನೀಡಿ, 5 ಕೋಟಿ ರೂ.ವರೆಗೆ ಬಹುಮಾನ ಗೆಲ್ಲಿ!

"ಜೈ ಶೇಗುಣಸಿ" ದಿನದ ಸುದ್ದಿ..

ಕಾಳ ಧನಿಕರ, ಬೇನಾಮಿ ಆಸ್ತಿ ಹೊಂದಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಕಪ್ಪು ಹಣದ ಕುರಿತು ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ.
ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ‘ಆದಾಯ ತೆರಿಗೆ ಮಾಹಿತಿದಾರರ ಬಹುಮಾನ ಯೋಜನೆ’ಗೆ ತಿದ್ದುಪಡಿ ತರಲಾಗಿದೆ. ಇದರನ್ವಯ ಮಾಹಿತಿದಾರರಿಗೆ 50 ಲಕ್ಷ ರೂ.ವರೆಗೆ ಬಹುಮಾನ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಜತೆಗೆ ಬೇನಾಮಿ ವಹಿವಾಟು ಮಾಹಿತಿದಾರರ ಬಹುಮಾನ ಯೋಜನೆ, 2018ನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಘೋಷಿಸಿದೆ.
ಹೊಸ ಯೋಜನೆಯನ್ವಯ ಬೇನಾಮಿ ವಹಿವಾಟು ಮತ್ತು ಬೇನಾಮಿ ಆಸ್ತಿಯ ಕುರಿತು ಮಾಹಿತಿ ನೀಡುವವರಿಗೆ 1 ಕೋಟಿ ರೂ.ವರೆಗೆ ಬಹುಮಾನ ದೊರೆಯಲಿದೆ. ಈ ಸೌಲಭ್ಯವನ್ನು ವಿದೇಶಿಯರಿಗೂ ನೀಡಲಾಗಿದೆ ಎಂದು ಸಿಬಿಡಿಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜತೆಗೆ ವಿದೇಶದಲ್ಲಿ ಕಪ್ಪು ಹಣ ಹೊಂದಿರುವವರ ಮಾಹಿತಿ ನೀಡುವವರಿಗೆ 5 ಕೋಟಿ ರೂ.ವರೆಗೆ ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಈ ಮೂಲಕ ಕಪ್ಪು ಹಣದ ಕುರಿತು ಆದಾಯ ತೆರಿಗೆ ಇಲಾಖೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂಬ ವಿಶ್ವಾಸವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments

Post a Comment

Popular posts from this blog

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18

"ಜೈ ಶೇಗುಣಸಿ" ದಿನದ ಸುದ್ದಿ.. 31-5-18