ಸಾವಿನ ನಮನದಲ್ಲೂ ಎಚ್‌ಡಿಕೆ ರಾಜಕೀಯ...

ಜೈ ಶೇಗುಣಸಿ ಸುದ್ದಿ..


ಸಮಯ ಸಂದರ್ಭಗಳ ಸೂಕ್ಷ್ಮತೆಯನ್ನು ಅರಿಯದೇ ಇಳಕಲ್‌ ಸ್ವಾಮೀಜಿಯವರಿಗೆ ಅಂತಿಮ ನಮನ ಸಲ್ಲಿಸಲು ಹೋಗಿದ್ದನ್ನು ದುಂದು ವೆಚ್ಚ ಎಂಬ ಹೇಳಿಕೆ ಎಷ್ಟು ಸರಿ ಎಂದು ಸಿಎಂ ಕುಮಾರಸ್ವಾಮಿಯವರನ್ನು ಪ್ರಶ್ನಿಸಿ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗ ಪತ್ರ ಬರೆದಿದ್ದಾರೆ.

'ಇಳಕಲ್‌ ಜಿಲ್ಲೆಯ ಮಹಾಂತ ಶಿವಯೋಗಿಗಳ ಅಂತಿಮ ನಮನಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದು ದುಂದು ವೆಚ್ಚ' ಎಂಬ ಸಿಎಂ ಎಚ್‌.ಡಿ.ಕುಮಾರಸ್ವಾವಿಹೇಳಿಕೆಗೆ ''ಆ ಪ್ರವಾಸ ವೆಚ್ಚವನ್ನು ಬೇಕಾದರೆ ನಾನೇ ಭರಿಸುತ್ತೇನೆ,'' ಎಂದು ತಿರುಗೇಟು ನೀಡಿದ್ದಾರೆ.

''ಅಂತಿಮ ನಮನಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಸೂಚಿಸಿದ್ದರು. ಮುಖ್ಯ ಕಾರ್ಯದರ್ಶಿಗಳಿಗೂ ಮಾಹಿತಿ ನೀಡಲಾಗಿದೆ. ಮೃತರ ನಮನ ವಿಚಾರದಲ್ಲಿ ಹಗುರವಾಗಿ ಮಾತನಾಡಿರುವುದು ನನಗೆ ಖೇದವನ್ನುಂಟು ಮಾಡಿದೆ. ಸಂದರ್ಭಗಳ ಸೂಕ್ಷ್ಮ ಅರಿಯದೇ ಒಬ್ಬ ರೈತ ಮತ್ತು ಧರ್ಮಗುರುಗಳ ಅಂತಿಮ ನಮನದ ವಿಚಾರದಲ್ಲೂ ರಾಜಕೀಯ ಯೋಚನೆ ಮಾಡಿದ್ದು ಸರಿಯೇ,'' ಎಂದು ಪ್ರಶ್ನಿಸಿದ್ದಾರೆ.

''ನಿಮ್ಮ ವೈಯಕ್ತಿಕ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಲು ಈ ಹೇಳಿಕೆ ನೀಡಿರುವುದು ನನಗೆ ನೋವುಂಟು ಮಾಡಿದೆ. ವೈಯಕ್ತಿಕವಾಗಿ ನಿಮಗೆ ಸ್ವಾಮೀಜಿಗಳ ಬಗ್ಗೆ ಗೌರವವಿಲ್ಲದೇ ಇರಬಹುದು. ಅಧಿಕಾರ ವಹಿಸಿಕೊಂಡ ತಕ್ಷಣ ಸಿರಿಗೆರೆ ಸ್ವಾಮೀಜಿಗಳಿಗೆ ಅಗೌರವ ತೋರುವ ಮಾತುಗಳನ್ನಾಡಿದ್ದಿರಿ. ಈಗ ಮತ್ತೋರ್ವ ಸ್ವಾಮಿಜೀಗಳ ಅಂತ್ಯ ಸಂಸ್ಕಾರದ ವಿಚಾರದಲ್ಲೂ ರಾಜಕೀಯ ಚಿಂತನೆ ಮಾಡಿದ್ದೀರಿ. ಜನರಿಗೂ ತಪ್ಪು ಸಂದೇಶ ನೀಡುತ್ತಿದ್ದೀರಿ,''ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

 

Comments

Popular posts from this blog

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18

"ಜೈ ಶೇಗುಣಸಿ" ದಿನದ ಸುದ್ದಿ.. 31-5-18