ಕೇಂದ್ರದಿಂದ ಕಬ್ಬು ಬೆಳೆಗಾರರಿಗೆ ಬಂಪರ್ ಆಫರ್: 8ಸಾವಿರ ಕೋಟಿ ಪ್ಯಾಕೇಜ್ ಘೋಷಣೆ..
ಜೈ ಶೇಗುಣಸಿ ಸುದ್ದಿ..
ಉತ್ತರ ಪ್ರದೇಶ ಸೇರಿದಂತೆ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಭಾರತೀಯ ಜನತಾಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರೈತರ ಹಿತ ಕಾಪಾಡಲು ಮುಂದಾಗಿದೆ.
ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ಕಬ್ಬು ಬೆಳೆಗಾರರಿಗೆ ಬಂಪರ್ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಮೂಲಕ ದೇಶಾದ್ಯಂತ ಇರುವ ಕಬ್ಬು ಬೆಳೆಗಾರರ ರಕ್ಷಣೆಗೆ ತಡವಾದರೂ ಧಾವಿಸಿದೆ. ಕಳೆದ ನಾಲ್ಕು ತಿಂಗಳಿನಿಂದ ಕಬ್ಬು ಬೆಳೆಗಾರರ ಕುರಿತಾಗಿ ಸಾಕಷ್ಟು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ನೂತನ ಪ್ಯಾಕೇಜ್ ಜಾರಿ ಮಾಡಿದೆ.
ಎಂಟು ಸಾವಿರ ಕೋಟಿಯ ಈ ಪ್ಯಾಕೇಜ್ ಘೋಷಣೆ ಮಾಡಿದ್ದು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಮುಂದಾಗಿದೆ. ಮಾರುಕಟ್ಟೆ ಅಸಮತೋಲನ ಸರಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಸಕ್ಕರೆ ತಯಾರಿಕೆಯಲ್ಲಿ ಬ್ರೆಜಿಲ್ ನಂತರದ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಐದು ಕೋಟಿ ಕಬ್ಬು ಬೆಳೆಗಾರರಿದ್ದಾರೆ. 2017-18 ನೇ ಸಾಲಿನಲ್ಲಿ ಅತೀ ಹೆಚ್ಚು ಸಕ್ಕರೆ ತಯಾರಿಕೆ ಭಾರತದಲ್ಲಾಗಿದೆ.
ಇದನ್ನು ಗಮನಿಸಿರುವ ಕೇಂದ್ರ ಇದೀಗ ಈ ಪ್ಯಾಕೇಜ್ ಮೂಲಕ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಇನ್ನಷ್ಟು ಉತ್ತೇಜನ ನೀಡುವ ಇರಾದೆ ಹೊಂದಿದೆ. ಈ ಪ್ಯಾಕೇಜ್ ತುರ್ತು ಸಂಗ್ರಹ ಸೇರಿದಂತೆ ಹಲವಾರು ವಿಷಯಗಳಿಗೆ ಸಹಕಾರ ನೀಡಲಿದೆ. ಈ ತುರ್ತು ಸಂಗ್ರಹ ನಿರ್ಮಾಣಕ್ಕೆ ಹಣವನ್ನು ನೇರವಾಗಿ ರೈತರಿಗೆ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ.
ಸಕ್ಕರೆ ಆಮದಿನ ಮೇಲೆ ಶೇ 50 ರಿಂದ 100ಕ್ಕೆ ಕಸ್ಟಮ್ ಸುಂಕ ಹೆಚ್ಚಿಸಲಾಗಿದ್ದು, ಆಮದಿಗೆ ಕಡಿವಾಣ ಹಾಕಿದೆ. ಇದೇ ವೇಳೆ ರೈತರು ಕಬ್ಬನ್ನು ತುರ್ತು ಸಂಗ್ರಹ ಮಾಡಿಟ್ಟುಕೊಳ್ಳಬಹುದು.

Wow
ReplyDelete