Posts

Showing posts from June, 2019

ವಿಶ್ವ ಅಪ್ಪಂದಿರ ದಿನ: ಬದುಕು ರೂಪಿಸಿದ ಅಪ್ಪನಿಗೊಂದು ಕೃತಜ್ಞತೆ

ವಿಶ್ವ ಅಪ್ಪಂದಿರ ದಿನ: ಬದುಕು ರೂಪಿಸಿದ ಅಪ್ಪನಿಗೊಂದು ಕೃತಜ್ಞತೆ ಅಪ್ಪ- ಎಲ್ಲ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೋ. ಅದರಲ್ಲೂ ಹೆಣ್ಣು ಮಕ್ಕಳ ಪಾಲಿಗಂತೂ ಆತ ಯಾವಾಗಲೂ ಪ್ರಥಮ ಪ್ರೀತಿಯಾಗಿರುತ್ತಾನೆ. ಅಪ್ಪ ಅನ್ನುವ ಬಂಧವೇ ಅಂಥದ್ದು. ಅಪ್ಪ ಅಂದರೆ ಕೆಲವರಿಗೆ ಸಿಡುಕು, ಗಂಭೀರ ಮುಖವೊಂದು ನೆನಪಾಗಬಹುದು, ಹಾಗೆಯೇ ಹೆಗಲಿಗೇರಿಸಿಕೊಂಡು ನಡೆದ ಜೀವವೊಂದು ಕಣ್ಣ ಮುಂದೆ ಸುಳಿದು ಹೋಗಬಹುದು. ಚಿಕ್ಕಂದಿನಲ್ಲಿ ಶಿಕ್ಷೆ ಕೊಡುವ, ಗದರುವ ಅಪ್ಪ , ಬೆಳೆಯುತ್ತಿದ್ದಂತೆ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಸ್ನೇಹಿತನಾಗುತ್ತಾನೆ. ಇತ್ತೀಚಿನ ದಿನಗಳಲ್ಲಂತೂ ಅಪ್ಪ ಮತ್ತು ಮಕ್ಕಳ ಸಂಬಂಧ ತುಸು ಜಾಸ್ತಿಯೇ ಅಪ್ಯಾಯಮಾನವಾಗುತ್ತಿದೆ. ಅದೇಕೋ ಗದರುವ, ಸಿಡುಕುವ ಅಪ್ಪ ಮಾಯವಾಗುತ್ತಿದ್ದಾನೆ. ಆಧುನಿಕ ಅಪ್ಪಂದಿರು ಮಕ್ಕಳು ಸ್ನೇಹಿತರಂತೆ ಇರುವ ನಿದರ್ಶನಗಳೇ ಹೆಚ್ಚಾಗಿ ಕಾಣುತ್ತಿವೆ. ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ ಎನ್ನದೇ ನಮಗಾಗಿ ಬೆವರು ಸುರಿಸುತ್ತಾನೆ. ನಿದ್ದೆಗೆಡುತ್ತಾನೆ. ನಿಮಗಾಗಿ ಬದುಕು ತೆತ್ತೆ ಎನ್ನದ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾನೆ. ಅಪ್ಪ ಅಂದರೆ ಕೇವಲ ಜೀವ ಕೊಟ್ಟವನಲ್ಲ. ಬದುಕು ರೂಪಿಸಿದವ. ಜೀವನದ ದಾರಿ ತೋರಿಸಿದವ. ಬಾಲ್ಯದಲ್ಲಿ ಕೈ ಹಿ...