ರೈತರ ಸಾಲಮನ್ನಾ ಬಜೆಟ್ನಲ್ಲಿ ಘೋಷಣೆ: ಎಚ್ಡಿಕೆ
ಜೈ ಶೇಗುಣಸಿ ಸುದ್ದಿ..
ರೈತರ ಸಾಲಮನ್ನಾವನ್ನು ಬಜೆಟ್ನಲ್ಲಿ ಘೋಷಿಸುತ್ತೇನೆ. ರಾಜ್ಯದ ಆರ್ಥಿಕ ಶಿಸ್ತಿಗೆ ಧಕ್ಕೆಯಾಗದ ರೀತಿ ಸಾಲಮನ್ನಾ ಮಾಡಲಾಗುವುದು. ನಾನು ಈ ವಿಚಾರದಲ್ಲಿ ಎಸ್ಕೇಪ್ ಆಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನನ್ನ ಬಜೆಟ್ ಯಾವುದೇ ಒಂದು ವರ್ಗಕ್ಕೆ ಮೀಸಲಿರುವುದಿಲ್ಲ. ಸಾರ್ವಜನಿಕ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಿ ರಾಜ್ಯದ ಆರೂವರೆ ಕೋಟಿ ಜನರಿಗೆ ಅನುಕೂಲವಾಗುವಂಥ ಬಜೆಟ್ನ್ನು ಮಂಡಿಸಲಾಗುತ್ತದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಸರ್ಕಾರದಲ್ಲಿ ಹಲವು ಕಾರ್ಯಕ್ರಮ ನೀಡಬೇಕು. ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ರೈತರ ಸಾಲಮನ್ನಾ ವಿಚಾರವು ಇದೆ. ಇದರಲ್ಲಿ ಅನಗತ್ಯ ಗೊಂದಲ ಬೇಡ. ಇದಕ್ಕೆ ಅವಶ್ಯಕವಾದ ಹಣ ಕ್ರೂಡೀಕರಣ ಮಾಡುತ್ತಿದ್ದೇನೆ ಎಂದಿದ್ದಾರೆ.
ಸಾಲಮನ್ನಾ ವಿಚಾರದಲ್ಲಿ ನನ್ನ ಹಾಗೂ ಡಿಸಿಎಂ ನಡುವೆ ಗೊಂದಲವಿಲ್ಲ. ಗಡುವು ಕೊಡುವುದು ಬೇಡ ಎಂದು ಡಿಸಿಎಂ ಹೇಳಿದ್ದಾರೆ. ಸಾಲಮನ್ನಾ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

Comments
Post a Comment