Posts

Showing posts from August, 2018

ಕೊಡಗಿನ 575ಸಂತ್ರಸ್ತ ಕುಟುಂಬಕ್ಕೆ ನೆರವಾಗಲಿದೆ ಶೇಗುಣಸಿ ಗ್ರಾಮಸ್ಥರ ಕೊಡುಗೆ..

Image
ಜೈ ಶೇಗುಣಸಿ ಸುದ್ದಿ.. ಶೇಗುಣಸಿ ಗ್ರಾಮದ ಗ್ರಾಮಸ್ಥರು ಕೊಡಗಿನ ನೆರೆ ಹಾವಳಿಗೆ ತತ್ತರಿಸಿದ ಸಂತ್ರಸ್ತರಿಗಾಗಿ ಅಗತ್ಯ ವಸ್ತು ಮತ್ತು ಆಹಾರ ಧಾನ್ಯ ಸಂಗ್ರಹಣೆ ಕಾರ್ಯಕ್ಕೆ ತೆರೆ ಬಿದ್ದಿದ್ದು ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾಗಿದೆ. ಕೊಡಗಿನ 575ಕುಟುಂಬಗಳಿಗೆ ನೆರವಾಗುವಂತೆ, ಆಹಾರ ಧಾನ್ಯವನ್ನು ಹಂಚಲು ಸರಳವಾಗುವಂತೆ 575ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಕಿಟ್ ಗಳು ಸಿದ್ದಗೊಂಡಿದೆ. ಪ್ರತಿ ಆಹಾರ ಧಾನ್ಯದ ಕಿಟ್ ನಲ್ಲಿ 2ಕೆ.ಜಿ ಬೇಳೆ, 2ಕೆ.ಜಿ ಗೋಧಿ ಹಿಟ್ಟು, 2ಕೆ.ಜಿ ಸಕ್ಕರೆ, 10ಕೆ.ಜಿ ಅಕ್ಕಿ, 1ಸೀರೆ, 1ಹಲ್ಲುಜ್ಜುವ ಬ್ರಶ್ ಮತ್ತು ಪೇಸ್ಟ್ ಇವೆ. ಸಂಗ್ರಹಿಸಿದ ಒಟ್ಟು ಆಹಾರ ಧಾನ್ಯದ ತೂಕ 90ಕ್ವಿಂಟಲ್ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪ್ಯಾಕ್ ಮಾಡುವ ಸಂದರ್ಭದಲ್ಲಿ ಕಲ್ಮೇಶ ಯಲಡಗಿ, ಅಶೋಕ ಅಮ್ಮಣಗಿ, ಮಹಾಂತೇಶ ಶಾನವಾಡ, ವಿವೇಕ ನಾರಗೊಂಡ, ಕುಮಾರ ಹೊರಟ್ಟಿ, ಶ್ರಿಶೈಲ ಮಠಪತಿ ಸೇರಿದಂತೆ ಅನೇಕರು ಇದ್ದರು.

ಜೈ ಶೇಗುಣಸಿ ದಿನದ ಸುದ್ದಿ... ದಿ: 31-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 31-08-18 ** ಸರ್ಕಾರ 100ದಿನ ಪೂರೈಸಿದ್ದಕ್ಕೆ ಜನತೆಗೆ ಕೃತಜ್ಞತೆ ಸಲ್ಲಿಸಿದ ಹೆಚ್ಡಿಕೆ ** ಇಂದು ರಾಜ್ಯದ 22ಜಿಲ್ಲೆಗಳ 105ಸ್ಥಳಿಯ ಸಂಸ್ಥೆ ಚುನಾವಣೆ ** ಗೃಹ ಸಚಿವರನ್ನು ಭೇಟಿ ಮಾಡಿ ನೆರೆ ನೆರವು ಕೋರಿದ ಸಿಎಂ ಎಚ್​ಡಿಕೆ ** 100 ದಿನದಲ್ಲಿ 100 ಸಮಸ್ಯೆ ತಂದ ದೊಂಬರಾಟದ ಸರ್ಕಾರ: ಕೋಟ ಶ್ರೀನಿವಾಸ ಪೂಜಾರಿ ** ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಹುಲ್​ಗೆ ದೂರು ನೀಡಿದ ಕುಮಾರಸ್ವಾಮಿ ** ಸಿಎಂ ಎಚ್ ಡಿಕೆಗೆ ಸರ್ಕಾರ ಉಳಿಸಿಕೊಳ್ಳುವುದೇ ದೊಡ್ಡ ಚಿಂತೆ: ಬಿಜೆಪಿ ** ದಸರಾ ಉದ್ಘಾಟನೆಯ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ: ಡಾ ಸುಧಾಮೂರ್ತಿ ** ಡಿಎಂಕೆಗೆ ವಾಪಸ್‌ ಕರೆಸಿಕೊಂಡರೆ ಸ್ಟಾಲಿನ್‌ರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳುತ್ತೇನೆ: ಅಳಗಿರಿ ** ನೋಟು ನಿಷೇಧದಿಂದಾಗಿ ಆರ್ಥಿಕತೆ ಸುಗಮ, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ: ಅರುಣ್ ಜೇಟ್ಲಿ ** ರಾಹುಲ ಗಾಂಧಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆ ** ಲಷ್ಕರ್​ ಎ ತೊಯ್ಬಾದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಕಾಶ್ಮೀರಿ ಭದ್ರತಾ ಪಡೆ ** ಏಷ್ಯನ್ ಕ್ರೀಡಾಕೂಟ: ಭಾರತಕ್ಕೆ 2ಚಿನ್ನ, 1ಬೆಳ್ಳಿ; ಒಟ್ಟು 59ಪದಕ ಗೆದ್ದ ಭಾರತ. ** ಕ್ರಿಕೆಟ್: ಆರ್ ಸಿಬಿ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ

ಜೈ ಶೇಗುಣಸಿ ದಿನದ ಸುದ್ದಿ... ದಿ: 30-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 30-08-18 ** ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇಂದಿಗೆ 100ದಿನ; ಸಮಯ ವ್ಯರ್ಥ ಮಾಡದೆ ರಾಜ್ಯದ ಅಭಿವೃದ್ಧಿ: ಸಿಎಂ ** ಹೈಕಮಾಂಡ್ ಸೂಚನೆ ಮೇರೆಗೆ ಕೈ ಸಚಿವರಿಗೆ 6ತಿಂಗಳಿಗೊಮ್ಮೆ ಮೌಲ್ಯ ಮಾಪನ: ಡಿಸಿಎಂ ಪರಮೇಶ್ವರ್ ** ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿರುವುದು ನಿಜ: ಬಿಎಸ್ವೈ ** ** ಸರ್ಕಾರದಿಂದ ಫೋನ್ ಕದ್ದಾಲಿಕೆ ಎಂಬ ಬಿಎಸ್ವೈ ಆರೋಪ- ಮೋದಿ ಭೇಟಿಯಾಗಿ ತನಿಖೆ ನಡೆಸಲಿ: ಎಚ್ಡಿಕೆ ** ನಾನೋ ಶ್ರೀರಾಮುಲುನೋ ಯಾರು ಹೆಚ್ಚು ಕೆಲಸ ಮಾಡ್ತಾರೆ ನೋಡೋಣ: ಸಿದ್ದರಾಮಯ್ಯ ** ನನಗಿಂತ ಸಚಿವೆ ಜಯಮಾಲಾ ಹೆಚ್ಚು ಗ್ಲಾಮರಸ್: ಸಚಿವ ಪ್ರಮೋದ್ ಮಧ್ವರಾಜ್ ** ಮಾಜಿ ಸಚಿವ ಬಾಬುರಾವ್ ಚಿಂಚನೂರ ಬಿಜೆಪಿ ಸೇರ್ಪಡೆ. ** ಕೊಡಗು ನಿರಾಶ್ರಿತರಿಗೆ ನಟಿ ರಶ್ಮಿತಾ ಮಂದಣ್ಣ ನೆರವು ** ಭೀಕರ ಅಪಘಾತದಲ್ಲಿ ನಟ ನಂದಮೂರಿ ಹರಿಕೃಷ್ಣ ಸಾವು ** ರಫೆಲ್​ ರಾಬರಿಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿ, 24 ಗಂಟೆಗಳಲ್ಲಿ ನನಗೆ ಉತ್ತರಿಸಿ: ರಾಹುಲ್​ ಸವಾಲು ** ಏಷ್ಯನ್ ಕ್ರೀಡಾಕೂಟ: ಟ್ರಿಪಲ್‌ ಜಂಪ್‌ನಲ್ಲಿ ಭಾರತಕ್ಕೆ ಒಲಿದ 10 ನೇ ಚಿನ್ನದ ಪದಕ; 54ಪದಕ ಭಾರತದ ಕೊರಳಿಗೆ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 29-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 29-08-18 ** ಸಂತ್ರಸ್ತರಿಗೆ ಮಿಡಿದ ಶೇಗುಣಸಿ ಗ್ರಾಮ: ಕೊಡಗಿಗೆ 50ಕ್ವಿ. ಅಕ್ಕಿ, 15ಕ್ವಿ. ಸಕ್ಕರೆ, 10ಕ್ವಿ. ಗೋಧಿ, 5ಕ್ವಿ. ಬೆಲ್ಲ, ಸೀರೆ, ಅವಶ್ಯ ವಸ್ತುಗಳ ನೆರವು. ** ಈ ಬಾರಿಯ ಸಾಂಪ್ರದಾಯಿಕ ದಸರಾ ಉದ್ಘಾಟಿಸಲಿದ್ದಾರೆ ಸುಧಾಮೂರ್ತಿ ** ಕಾಂಗ್ರೆಸ್‌ಗೆ ಗುಡ್​ ಬೈ ಹೇಳಿ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಬಿಜೆಪಿಗೆ. ** ಬಿಎಸ್​ವೈ ವಿರುದ್ಧದ ಡಿನೋಟಿಫಿಕೇಷನ್​ ಪ್ರಕರಣಗಳು ವಜಾ ** ಇದೇ ಶುಕ್ರವಾರ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಸಭೆ ** ಐದು ವರ್ಷ ಎಚ್ಡಿಕೆ ಅವರೇ ಸಿಎಂ: ತೋಟಗಾರಿಕಾ ಸಚಿವ ಮನಗೂಳಿ ** ಪ್ರಧಾನಿ ಮೋದಿ ಹತ್ಯೆಗೆ ಸಂಚು: ವಿಚಾರವಾದಿ ವರವರ ರಾವ್‌ ಬಂಧನ ** ಕೇರಳ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ ** ದೇಶದ ಜಾತ್ಯತೀತ ತತ್ವಗಳಿಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಡಿಎಂಕೆ ವರಿಷ್ಠ  ಸ್ಟಾಲಿನ್​ ** ಇಸ್ರೋದಿಂದ 2019 ರ ವರ್ಷಾರಂಭದಲ್ಲಿ ಚಂದ್ರಯಾನ-2 ಉಡಾವಣೆ ** ಏಷ್ಯನ್‌ ಕ್ರೀಡಾಕೂಟ: 800ಮೀ‌ ಓಟದಲ್ಲಿ ಭಾರತದ ಮಂಜಿತ್‌ ಸಿಂಗ್‌ಗೆ ಚಿನ್ನ;ಒಟ್ಟು 50ಪದಕ ಗೆದ್ದ ಭಾರತ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 28-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 28-08-18 ** ಅಥಣಿ ಪಿ ಎಲ್ ಡಿ ಬ್ಯಾಂಕ್ ಚುನಾವಣೆ:15ರಲ್ಲಿ 11ಸ್ಥಾನ ಪಡೆದ ಲಕ್ಷ್ಮಣ ಸವದಿ ಬಣ. ** ಅರ್ಕಾವತಿ ಡಿನೋಟಿಫಿಕೇಶನ್​ ತನಿಖೆ: ಎಚ್​ಡಿಕೆ ಹೆಸರು ಕೈಬಿಡಲು ಕೋರ್ಟ್​ ಆದೇಶ ** ಸಮನ್ವಯ ಸಮಿತಿಯಲ್ಲಿ ನಿರ್ಧಾರವಾದರೆ ಸಿಎಂ ಬದಲಾವಣೆ ಎಂದ ಕೃಷಿ ಸಚಿವ ಶಿವಶಂಕರ್ ರೆಡ್ಡಿ. ** ಬಿಜೆಪಿಯವರಿಗೆ ನೀತಿ, ಧರ್ಮ ಯಾವುದೂ ಗೊತ್ತಿಲ್ಲ: ದಿನೇಶ್​ ಗುಂಡೂರಾವ್​ ** 13 ಜಿಲ್ಲೆಗಳ 48 ತಾಲೂಕು ಬರ ಪೀಡಿತ ಎಂದು ಷೋಷಣೆ ** ನಾನು ಮಾಡಿದಷ್ಟು ಕೆಲಸ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ: ಸಿದ್ದರಾಮಯ್ಯ ** ಸಮನ್ವಯ ಸಮಿತಿಯಲ್ಲಿ ದಿನೇಶ್ ಗುಂಡೂರಾವ್,​ ನಾನೂ ಇರಬೇಕು: ಎಚ್​.ವಿಶ್ವನಾಥ್ ** ರಾಮನಗರದಲ್ಲಿ ಕಾಂಗ್ರೆಸ್​ ಸ್ಪರ್ಧಿಸದಿದ್ದರೆ ಬಂಡಾಯವೇಳುತ್ತೇನೆ:  ಸಿ.ಎಂ.ಲಿಂಗಪ್ಪ ** ರೈಲುಗಳಲ್ಲಿ ಶಾಪಿಂಗ್​​ಗೆ ವ್ಯವಸ್ಥೆ ಕಲ್ಪಿಸಲು ರೈಲ್ವೇ ಇಲಾಖೆಗಳ ಚಿಂತನೆ ** ಜೈವಿಕ ಇಂಧನ ಚಾಲಿತ ದೇಶದ ಮೊದಲ ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿ ** ಏಷ್ಯನ್​ ಕ್ರೀಡಾಕೂಟ: ಬ್ಯಾಡ್ಮಿಂಟನ್ನಲ್ಲಿ ಫೈನಲ್​ ತಲುಪಿದ ಸಿಂಧು; ಒಟ್ಟು 41ಪದಕ ಗೆದ್ದ ಭಾರತ

ಜೈ ಶೇಗುಣಸಿ ದಿನದ ಸುದ್ದಿ.. ದಿ: 27-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 27-08-18 ** ರಕ್ಷಾ ಬಂಧನ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಮಕ್ಕಳು ** ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಕೊಡುಗೆ ಏನು: ಮಾಜಿ ಸಿಎಂ ಸಿದ್ದರಾಮಯ್ಯ ** ಕಾಂಗ್ರೆಸ್-ಜೆಡಿಎಸ್​ ಅಧಿಕೃತ ರಿಜಿಸ್ಟರ್​ ಮ್ಯಾರೇಜ್: ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ** ಸಾ.ರಾ.ಮಹೇಶ್‌ ಮೇಲೆ ರಕ್ಷಣಾ ಸಚಿವೆ ಗರಂ: ವಿಷಾದ ವ್ಯಕ್ತಪಡಿಸಿದ ಸಿಎಂ ** ಇನ್ನು ಐದು ವರ್ಷ ಯಾರ ಕಾಲೂ ಎಳೆಯೋಲ್ಲ: ಸಚಿವ ಡಿಕೆಶಿ ** ಅತಿಯಾದ ಗೋಮಾಂಸ ಭಕ್ಷಣೆಯಿಂದಾಗಿ ಕೇರಳದಲ್ಲಿ ಪ್ರವಾಹ: ಬಿಜೆಪಿ ಶಾಸಕ ಬಸನಗೌಡ ** ಪ್ರಚಾರಕ್ಕೆ ಕಾಂಗ್ರೆಸ್​ ಮೀಟರ್​ ಬಡ್ಡಿ ಹಣ ಬಳಸುತ್ತಿದೆ: ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ** ಡಿಸೆಂಬರ್ 31ರೊಳಗೆ ಚಿಪ್ ಆಧಾರಿತ ಡೆಬಿಟ್ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಿ; ಎಸ್ ಬಿಐ ** ಅತ್ಯಾಚಾರವನ್ನು ಸಹಿಸಲು ಸಾಧ್ಯವಿಲ್ಲ. ಮಹಿಳೆಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ ** ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸೋದರರ ಫೈಟ್‌, ನಾಮಪತ್ರ ಸಲ್ಲಿಸಿದ ಸ್ಟಾಲಿನ್‌ ** ತೃತೀಯ ಲಿಂಗಿಗಳೊಂದಿಗೆ ಗಂಭೀರ್​ ರಾಖಿ ಸಂಭ್ರಮ ** ಕೇರಳದ ಜನರೊಂದಿಗೆ ಇಡೀ ದೇಶವಿದೆ: ಪ್ರಧಾನಿ ನರೇಂದ್ರ ಮೋದಿ ** ಲೋಕಸಭಾ ಚುನಾವಣೆ: ಕೋಮುವಾದಿಯೇತರ ಪಕ್ಷಗಳ ಮೈತ್ರಿ ಅಗತ್ಯ-ಅಮರ್ತ್ಯಸೇನ್

ಜೈ ಶೇಗುಣಸಿ ದಿನದ ಸುದ್ದಿ... ದಿ: 26-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 26-08-18 ** ನೆರೆ ಸಂತ್ರಸ್ತರಿಗೆ ಇನ್ಫೋಸಿಸ್​ ಪ್ರತಿಷ್ಠಾನದಿಂದ ಮೂರು ಹಂತದಲ್ಲಿ ಸಹಾಯ ಹಸ್ತ: ಸುಧಾಮೂರ್ತಿ ** ಎಚ್​ಡಿಕೆ ಕೊಡಗಿಗೆ ಲೇಟ್​ ಆಗಿ ಬಂದ ಲೇಟ್​ ಕಮ್ಮರ್​: ಶ್ರೀರಾಮುಲು ** ಎಐಸಿಸಿ ಪ್ರಚಾರ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿದ ರಮ್ಯಾ ** ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ, ಮತ್ತೆ ಸಿಎಂ ಆಗುವೆ ಎಂದು ಪುನರುಚ್ಚರಿಸಿದ ಸಿದ್ದು ** ಎಷ್ಟು ದಿನ ಸಿಎಂ ಆಗಿರ್ತೀನೋ ಗೊತ್ತಿಲ್ಲ: ಎಚ್‌.ಡಿ.ಕುಮಾರಸ್ವಾಮಿ ** ಸರ್ಕಾರ ಪತನದ ಕನಸು ಕಾಣುತ್ತಿರುವ ಅಧಿಕಾರಿಗಳಿಗೆ ಶೀಘ್ರ ಬಿಸಿ ಮುಟ್ಟಿಸುತ್ತೇನೆ: ಸಿಎಂ ಕುಮಾರಸ್ವಾಮಿ ** ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ ಚಿತ್ರದ ಚಿನ್ನದ ರಾಖಿಗೆ ಭಾರಿ ಬೇಡಿಕೆ ** ಪ್ರಧಾನಿ ಮೋದಿ ತುರ್ತು ಸಂದರ್ಭದಲ್ಲಿ ಸಹಾಯ ಮಾಡಿಲ್ಲ: ಖರ್ಗೆ ** ಸಾಲ ಮನ್ನಾ ಆಗಿದ್ದರೆ ರಾಜೀನಾಮೆ ನೀಡುತ್ತಿದ್ದೆ: ಶ್ರೀರಾಮುಲು ** ಚಿಕ್ಕಮಗಳೂರಿನಲ್ಲಿ ಮತ್ತೆ ಕಂಪಿಸಿದ ಭೂಮಿ; ಜನರಲ್ಲಿ ಆತಂಕ. ** ಪ್ರವಾಹದಿಂದ ತತ್ತರಿಸಿದ ಕೊಡಗು: ಸಂತ್ರಸ್ತರಿಗೆ ಚಿನ್ನದ ಪದಕ ಅರ್ಪಿಸಿದ ಬೋಪಣ್ಣ ** ಏಷ್ಯನ್‌ ಗೇಮ್ಸ್‌ 2018: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟ ಪಿವಿ ಸಿಂಧು, ಸೈನಾ ನೆಹ್ವಾಲ್; 29ಪದಕ ಮುಡಿಗೇರಿಸಿಕೊಂಡ ಭಾರತ.

ಜೈ ಶೇಗುಣಸಿ ದಿನದ ಸುದ್ದಿ... ದಿ: 25-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 25-08-18 ** ರಾಷ್ಟ್ರೀಕೃತ ಬ್ಯಾಂಕ್ ಗಳ 25ಸಾವಿರ ಚಾಲ್ತಿಸಾಲ, 2ಲಕ್ಷದವರೆಗೆ ಸುಸ್ತಿ  ಸಾಲಮನ್ನಾ: ಮುಖ್ಯಮಂತ್ರಿ ಕುಮಾರಸ್ವಾಮಿ ** ಮಲೆನಾಡು, ಕರಾವಳಿ ಭಾಗದಲ್ಲಿ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ ** ಕೊಡಗಿಗೆ ಬಂದು ಕಾಟಾಚಾರದ ಸಮೀಕ್ಷೆ ನಡೆಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಹುಸಿಯಾದ ಸಂತ್ರಸ್ತರ ನಿರಿಕ್ಷೆ. ** ಕೊಡಗಿಗೆ ಸಂಸದರ ನಿಧಿಯಿಂದ 1 ಕೋಟಿ ರು.; ಪ್ರಧಾನಿಗೆ ವರದಿ ಸಲ್ಲಿಸುವೆ: ನಿರ್ಮಲಾ ಸೀತಾರಾಮನ್ ** ರಕ್ಷಣಾ ಸಚಿವರು ಕಾವೇರಿ ಋಣ ತೀರಿಸಲಿ: ಸಾ.ರಾ.ಮಹೇಶ ** ಮಾಜಿ ಪ್ರಧಾನಿ ಮಗನಾದ ರೇವಣ್ಣಗೆ ಒಳ್ಳೆ ಸಂಸ್ಕಾರ ಇರಬೇಕಿತ್ತು: ಶ್ರೀರಾಮುಲು ** ನಾನು ಇನ್ನೊಮ್ಮೆ ಅಧಿಕಾರಕ್ಕೆ ಬರ್ತೀನಿ: ಮಾಜಿ ಸಿಎಂ ಸಿದ್ದರಾಮಯ್ಯ ** ರಾಹುಲ್​ ಗಾಂಧಿಯಂತಾ ಅಪ್ರಬುದ್ಧ ನಾಯಕ ಯಾರೂ ಇಲ್ಲ: ಪ್ರಲ್ಹಾದ ಜೋಶಿ ** ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ- ಯುಎಇ ಸ್ಪಷ್ಟನೆ ** ಪ್ರಧಾನಿ ಮೋದಿ ಹಾಗೂ ಆರ್​ಎಸ್​ಎಸ್​ ವಿರುದ್ಧ ರಾಹುಲ್​ ವಾಗ್ದಾಳಿ ** ಟ್ರಂಪ್ ವಲಸೆ ನೀತಿಯಿಂದ ಹಾನಿ ಖಚಿತ: ಅಮೆರಿಕಾದ 59 ಸಿಇಓಗಳ ಎಚ್ಚರಿಕೆ ** ಏಷ್ಯನ್​ ಕ್ರೀಡಾಕೂಟ: ಭಾರತಕ್ಕೆ ಟೆನಿಸ್​ನಲ್ಲಿ ಚಿನ್ನ; ಒಟ್ಟು 25ಪದಕ ಗೆದ್ದ ಭಾರತ.

ಜೈ ಶೇಗುಣಸಿ ದಿನದ ಸುದ್ದಿ... ದಿ: 24-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 24-08-18 ** ಪಶ್ಚಿಮವಾಹಿನಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ ಮಾಡಿದ ಯಡಿಯೂರಪ್ಪ ** ಕೃಷಿ ಸಾಲ ಮನ್ನಾ: ನಾಲ್ಕರ ಬದಲು ಒಂದೇ ಕಂತಿನಲ್ಲಿ ಹಣ ಪಾವತಿಗೆ ಕೆಲ ಬ್ಯಾಂಕ್ ಗಳ ಒತ್ತಾಯ ** ದೇವೇಗೌಡರಿಗೆ 2019ರಲ್ಲಿ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಇಲ್ಲ: ಸಿಎಂ ಕುಮಾರಸ್ವಾಮಿ ** 22.50 ಕೋಟಿ ರೂ. ವೆಚ್ಚದಲ್ಲಿ ಕೊಡಗು ರಸ್ತೆ ಅಭಿವೃದ್ಧಿ: ಸಚಿವ ಕೃಷ್ಣ ಬೈರೇಗೌಡ ** ಮತ್ತಷ್ಟು ಸುಧಾರಿಸಿದ ಕೊಡಗು ಪರಿಸ್ಥಿತಿ; ತಮ್ಮ ಮನೆಗಳತ್ತ ತೆರಳುತ್ತಿರುವ ಸಂತ್ರಸ್ತರು. ** ಕೊಡಗು ಪ್ರವಾಹ ಸ್ಥಳಕ್ಕೆ ಸಿದ್ದರಾಮಯ್ಯ ಮತ್ತು ತಂಡ ಭೇಟಿ. ** ಕೊಡಗು: ಮತ್ತಷ್ಟು ಮೃತದೇಹ ಪತ್ತೆ, ಸತ್ತವರ ಸಂಖ್ಯೆ 15ಕ್ಕೆ ಏರಿಕೆ ** 2022ರೊಳಗೆ ಪ್ರತಿಯೊಂದು ಕುಟುಂಬ ಸ್ವಂತ ಮನೆ ಹೊಂದುವುದು ನನ್ನ ಕನಸು - ಪ್ರಧಾನಿ ಮೋದಿ ** ಕೇರಳ ಪ್ರವಾಹ ಪೀಡಿತರ ಪುನರ್ವಸತಿಗೆ ವಿದೇಶಿ ಸರ್ಕಾರಗಳ ಸಹಾಯ ಬೇಡ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ ** ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ಸಾಧ್ಯವೇ ಇಲ್ಲ: ಒ.ಪಿ. ರಾವತ್​ ** ಹಿರಿಯ ಪತ್ರಕರ್ತ ಕುಲ್​ದೀಪ್​ ನಯ್ಯರ್ ​ ವಿಧಿವಶ; ರಾಷ್ಟ್ರಪತಿ, ಪ್ರಧಾನಿ ಸಂತಾಪ ಸೂಚನೆ ** ಟಿ20 ಪಂದ್ಯಕ್ಕೆ ವಿದಾಯ ಘೋಷಿಸಿದ ಮಹಿಳಾ ಆಟಗಾರ್ತಿ ಜುಲಾನಾ ಗೋಸ್ವಾಮಿ ** ಏಷ್ಯನ್ ಕ್ರೀಡಾಕೂಟ: ಒಟ್ಟು 18ಪದಕ ಮುಡಿಗೇರಿಸಿಕೊಂಡ ಭಾರತ

ಕೊಡಗಿನ ಸಂತ್ರಸ್ತರಿಗಾಗಿ ಮಿಡಿದ ಶೇಗುಣಸಿ ಗ್ರಾಮಸ್ಥರ ಹೃದಯ...!

Image
ಜೈ ಶೇಗುಣಸಿ ಸುದ್ದಿ.. ಶೇಗುಣಸಿ: ಇಲ್ಲಿಯ ಗ್ರಾಮಸ್ಥರು ನೆರೆ ಹಾವಳಿಗೆ ತತ್ತರಿಸಿದ ಕೊಡಗು ಸಂತ್ರಸ್ತರಿಗಾಗಿ ಅಗತ್ಯ ವಸ್ತು ಮತ್ತು ಆಹಾರ ಧಾನ್ಯ ಸಂಗ್ರಹಣೆ ಮಾಡಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ, ಸಂತ್ರಸ್ತರಿಗಾಗಿ ಅಗತ್ಯ ನೆರವು ನೀಡಿ ಎಂದು ಮನವಿ ಮಾಡಲಾಯಿತು. ಆಹಾರ ಧಾನ್ಯ ಸಂಗ್ರಹಣೆಯಲ್ಲಿ ಇಲ್ಲಿಯವರೆಗೆ  45ಕ್ವಿಂಟಲ್ ಅಕ್ಕಿ, 11ಕ್ವಿಂಟಲ್ ಸಕ್ಕರೆ, 5ಕ್ವಿಂಟಲ್ ಗೋಧಿ, 5ಕ್ವಿಂಟಲ್ ತೊಗರಿ ಬೇಳೆ ಸಂಗ್ರಹವಾಗಿದೆ. ಎಲ್ಲಾ ಗ್ರಾಮಸ್ಥರು ನೀಡಿದ ಕೊಡುಗೆಯನ್ನು ಶುಕ್ರವಾರ ಸಂಜೆ ಕೊಡಗು ಜಿಲ್ಲೆಗೆ ಕಳುಹಿಸಿ ಕೊಡಲಾಗುವುದು. ಮತ್ತು ಇನ್ನೂ ಶುಕ್ರವಾರ ಸಾಯಂಕಾಲದ ವರೆಗೆ ಆಹಾರ ಧಾನ್ಯವನ್ನು ಸಂಗ್ರಹಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜೈ ಶೇಗುಣಸಿ ದಿನದ ಸುದ್ದಿ.. ದಿ: 23-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 23-08-18 ಬಕ್ರೀದ್​: ರಾಜ್ಯಾದ್ಯಂತ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ, ಸಂಭ್ರಮಾಚರಣೆ ** ಕೊಡಗು: ಮುಂದುವರಿದ ಪರಿಹಾರ ಕಾರ್ಯ, ನಾಳೆಯಿಂದ ಶಾಲೆ ಕಾಲೇಜು ಪ್ರಾರಂಭ ** ಕೇಂದ್ರ ಸರ್ಕಾರದಿಂದ ಕೊಡಗಿಗೆ 1ಕೋಟಿ ಮೌಲ್ಯದ ಜನೌಷಧಿ ಪೂರೈಕೆ. ** ಕೊಡಗಿನಲ್ಲಿ ಹಿಂದಿನಂತೆ ಮಳೆ ಬೀಳೋದಿಲ್ಲ, ಕೆಲವು ಪ್ರದೇಶಗಳು ವಾಸಿಸಲು ಯೋಗ್ಯವಲ್ಲ : ಇಸ್ರೋ ವಿಜ್ಞಾನಿಗಳು ** ಕೊಡಗು ಪ್ರವಾಹ ಸಂತ್ರಸ್ತ ಮಕ್ಕಳಿಗೆ ರಾಜ್ಯದ ಯಾವುದೇ ಶಾಲೆಯಲ್ಲಿ ಉಚಿತ ಪ್ರವೇಶ: ಶಿಕ್ಷಣ ಇಲಾಖೆ ಆದೇಶ ** ಕೊಡಗು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಎರಡು ತಂಡಗಳಿಂದ ಅಧ್ಯಯನ: ವಸತಿ ಸಚಿವ ಯು. ಟಿ.ಖಾದರ್ ** ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗಾಗಿ 10 ಲಕ್ಷ ರೂ.ನೀಡಿದ ಸಚಿವ ಪುಟ್ಟರಾಜು ** ಕೇರಳ ದುರಂತ: ಮುಕ್ತಾಯದ ಹಂತದಲ್ಲಿ ರಕ್ಷಣಾ ಕಾರ್ಯ, ಶುರುವಾಯ್ತು ರಾಜಕೀಯ ಸಮರ ** ಪ್ರಮುಖ ನದಿಗಳಲ್ಲಿ ಅಟಲ್ ಚಿತಾಭಸ್ಮ ವಿಸರ್ಜನೆ: ಪಕ್ಷದ ಮುಖ್ಯಸ್ಥರಿಗೆ 'ಅಸ್ತಿ ಕಳಶ' ನೀಡಿದ ಷಾ, ಮೋದಿ ** ಕೇರಳ ಪ್ರವಾಹದ ಬಳಿಕ ಪೆಟ್ರೋಲ್, ಡೀಸೆಲ್​ಗಾಗಿ ಪರದಾಟ ** ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಸೆಪ್ಟೆಂಬರ್ 1ರಂದು ಭಾರತೀಯ ಅಂಚೆ ಹಣ ಪಾವತಿ ಬ್ಯಾಂಕು ಉದ್ಘಾಟನೆ ** ಭೂತಾನ್ ಸಾಹಿತ್ಯ ಹಬ್ಬದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣೆ ** ಏಷ್ಯನ್ ಕ್ರೀಡಾಕೂಟ: ಭಾರತದ ಬುಟ್ಟಿಗೆ ಮತ್ತೊಂದು ಚಿನ್ನದ ಪದಕ: ಇತಿ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 22-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 22-08-18 ** ತಗ್ಗಿದ ಮಳೆ; ಸಹಜ ಸ್ಥಿತಿಯತ್ತ ಕೊಡಗು, ಮಡಿಕೇರಿ. ** ಬ್ರಹ್ಮಗಿರಿ ಬೆಟ್ಟಗಳ ಮಧ್ಯೆ ಜಲಸ್ಪೋಟ: 50ಏಕರೆ ಅರಣ್ಯ ಹಾನಿ ** ತಪ್ಪಾಗಿದೆ ಬಿಡಿ: ಬಿಸ್ಕೆಟ್‌ ಎಸೆದ ಬಗ್ಗೆ ಕ್ಷಮೆ ಕೇಳಿದ ಸಚಿವ ರೇವಣ್ಣ ** ಶಬರಿಮಲೆ ದರ್ಶನಕ್ಕೆ ಆಗಮಿಸದಂತೆ ಅಯ್ಯಪ್ಪ ಭಕ್ತರಿಗೆ ಮನವಿ ** ಮಳೆಯ ಹೊಡೆತಕ್ಕೆ ಎರಡು ಹೋಳಾದ ಬಿಸಿಲೆಘಾಟ್ ರಸ್ತೆ ** ಪ್ರವಾಹ ಪೀಡಿತ ಕೇರಳದಲ್ಲಿ ರೈಲ್ವೆ ಸಂಚಾರ ಭಾಗಶಃ ಪ್ರಾರಂಭ ** ದೂಧ್​ಸಾಗರ್​ ಘಾಟ್​ನಲ್ಲಿ ಹಳಿ ಮೇಲೆ ಗುಡ್ಡ ಕುಸಿತ: ಕರ್ನಾಟಕ- ಗೋವಾ ರೈಲು ಸಂಚಾರ ರದ್ದು ** ಇಂದು ದೆಹಲಿಯಿಂದ ರಾಜ್ಯಕ್ಕೆ ಬರಲಿದೆ ಅಟಲ್​ ಜೀ ಅಸ್ಥಿ; ರಾಜ್ಯದ 7ನದಿಗಳಲ್ಲಿ ಅಸ್ಥಿ ವಿಸರ್ಜನೆ. ** ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ತೆಗೆದುಹಾಕಿದ ಸುಪ್ರೀಂ ಕೋರ್ಟ್ ** ಲೋಕಪಾಲ್ ಆಯ್ಕೆ ಸಮಿತಿ ಸಭೆಯ ಆಹ್ವಾನ ತಿರಸ್ಕರಿಸಿದ ಖರ್ಗೆ ** ಕೇರಳ ಪ್ರವಾಹ: ರಾಷ್ಟ್ರಪತಿ, ಪ್ರಧಾನಿಗೆ ರಷ್ಯಾ ಅಧ್ಯಕ್ಷ ಪತ್ರ, ಸಂತಾಪ ಸೂಚನೆ ** ಸಿಧು ವಿರುದ್ಧ ಟೀಕೆ ಎರಡು ದೇಶದ ಶಾಂತಿಗೆ ಧಕ್ಕೆ ತಂದಂತೆ: ಇಮ್ರಾನ್​ ಖಾನ್​ ** ಏಷ್ಯನ್ ಕ್ರೀಡಾಕೂಟ: ಮುಂದುವರೆದ ಭಾರತದ ಪದಕ ಬೇಟೆ; ಒಟ್ಟು 10ಪದಕ ಗೆದ್ದ ಭಾರತೀಯರು. ** ಕ್ರಿಕೆಟ್: ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತದ ಗೆಲುವಿಗೆ ಕಾಡಿದ ಬಟ್ಲರ್, ಸ್ಟೋಕ್ಸ. ಭಾರತದ ಜಯಕ್ಕೆ ಒಂದೇ ಮೆಟ್ಟಿಲು. ENG- 311-9 ** ಶೇಗುಣಸಿ ಗ್ರಾ...

ಶೇಗುಣಸಿ ದಿನದ ಸುದ್ದಿ... ದಿ: 21-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 21-08-18 ** ಕೊಡಗು ಪುನರ್‌ ನಿರ್ಮಾಣ: ಎಚ್ಡಿಕೆ ಎರಡು ದಿನ ಅಲ್ಲೇ ವಾಸ್ತವ್ಯಕ್ಕೆ ಚಿಂತನೆ. ** ಶ್ರಾವಣ ಕಡೆ ಸೋಮವಾರದಂದು ಬಿಎಸ್ವೈ ಸಿಎಂ ಆಗಿ ಅಧಿಕಾರ: ಯತ್ನಾಳ್ ಹೊಸ ಬಾಂಬ್ ** ಕೊಡಗಿಗೆ ಸಹಾಯಹಸ್ತ: ಸಿನಿಮಾ ತಾರೆಯರು, ಅಭಿಮಾನಿಗಳಿಂದ ಲಕ್ಷಾಂತರ ರೂ.ದೇಣಿಗೆ ** ಕೊಡಗಿನ ಜನತೆ ಜತೆ ಸರ್ಕಾರವಿದೆ ಯಾರೂ ಭಯ ಪಡುವ ಅಗತ್ಯವಿಲ್ಲ: ಸಿಎಂ ** ದೇವರನಾಡಿನಲ್ಲಿ ತಗ್ಗಿದ ಪ್ರವಾಹ: ಸಾಂಕ್ರಮಿಕ ರೋಗ ಹರಡುವ ಭೀತಿ ** ಕೊಡಗಿನ ಪ್ರವಾಹಕ್ಕೆ ನಾವೇ ಕಾರಣ: ಹೈಕೋರ್ಟ್​ ಸಿಜೆ ದಿನೇಶ್ ಮಹೇಶ್ವರಿ ** ಯೋಧರು ಹಾಗೂ ಸ್ವಯಂಸೇವಕರಿಗೆ ಕೊಡಗಿನ ಜನತೆಯ ಸಲಾಂ ** ಎರಡು ತಿಂಗಳ ವೇತನವನ್ನು ಕೊಡಗಿನ ಸಂತ್ರಸ್ಥರಿಗೆ ನೀಡಿದ ಬಿಜೆಪಿ ಜನಪ್ರತಿನಿಧಿಗಳು. ** ಸಿಎಂ ಕಾಟಾಚಾರಕ್ಕೆ ಕೊಡಗು ಜಿಲ್ಲೆಗೆ ಬಂದು ಹೋದರು: ಶೋಭಾ ಕರಂದ್ಲಾಜೆ ** ಬಕ್ರೀದ್: ಸಾರ್ವಜನಿಕ ಪ್ರಾಣಿ ಬಲಿ ನಿಷೇಧಿಸಿದ ಯೋಗಿ ಸರ್ಕಾರ ** ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಗೌತಮ್‌ ಗಂಭೀರ್‌ ರಾಜಕೀಯ ಪ್ರವೇಶ ಬಹುತೇಕ ಖಚಿತ ** ಪಾಕ್​ ವಿದೇಶಾಂಗ ಸಚಿವನ ದ್ವಿಪಕ್ಷೀಯ ಮಾತುಕತೆ ಹೇಳಿಕೆ ನಿರಾಕರಿಸಿದ ಭಾರತ ** ನೀರವ್​ ಮೋದಿ ಬ್ರಿಟನ್​ನಲ್ಲೇ ವಾಸ್ತವ್ಯ: ವಾಪಸ್​ ಕರೆತರಲು ಸಿಬಿಐ ಸಿದ್ಧತೆ ** ಏಷ್ಯನ್ ಕ್ರೀಡಾಕೂಟ: ಚಿನ್ನ ಗೆದ್ದು ಇತಿಹಾಸ ಬರೆದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ** ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತದ ಹಿಡಿತದಲ...

ಜೈ ಶೇಗುಣಸಿ ದಿನದ ಸುದ್ದಿ... ದಿ: 20-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 20-08-18 ** ಕೊಡಗು ಪ್ರವಾಹ: ತಾತ್ಕಾಲಿಕ ವಾಸದ ಶೆಡ್‌ ನಿರ್ಮಾಣಕ್ಕೆ ಸಿಎಂ ಸೂಚನೆ ** ಕೊಡಗಿನಲ್ಲಿ ವರುಣನ ಆರ್ಭಟ: ಒಟ್ಟು 9 ಬಲಿ; ನಿಲ್ಲದ ಮಳೆ, ಗುಡ್ಡ ಕುಸಿತ. ಕೊಚ್ಚಿ ಹೋದ ಮನೆಗಳು, ಸೇತುವೆ, ರಸ್ತೆಗಳು. ** ಕೊಡಗಿಗೆ ಅಗತ್ಯ ವಸ್ತುಗಳ ನೆರವು ಸಾಕು, ಆರ್ಥಿಕ ನೆರವು ನೀಡಿ: ಸಿಎಂ ಸಲಹೆ. ** ಕೊಡಗು ನೆರೆ ಕುರಿತು ಸಿಎಂಗೆ ಕರೆ ಮಾಡಿದ ಪ್ರಧಾನಿಯಿಂದ ಭರವಸೆ ** ಕೊಡಗು ಪ್ರವಾಹ: ಮೃತರ ಕುಟುಂಬಗಳಿಗೆ ಪುನೀತ್​ ಸಹಾಯಹಸ್ತ ** ಪ್ರವಾಹಪೀಡಿತ ಕೊಡಗಿಗೆ 'ಯಶೋಮಾರ್ಗ' ನೆರವು ** ಕೊಡಗು ಪ್ರವಾಹ: ಅ.31ರವರೆಗೆ ಕೊಡಗು ಪ್ರವಾಸ ನಿಷಿದ್ಧ ** ಕೇರಳ ಪ್ರವಾಹ: ರೆಡ್ ಅಲರ್ಟ್ ಹಿಂದಕ್ಕೆ, ಕೊಚ್ಚಿ ವಿಮಾನ ಹಾರಾಟಕ್ಕೆ ಕ್ರಮ ** ಶಿರಾಡಿ ಘಾಟ್‌ನಲ್ಲಿ ಮೂರ್ನಾಲ್ಕು ತಿಂಗಳು ಸಂಚಾರ ಬಂದ್‌ ** ನಾನೇಕೆ ಹಿಂದು ವಿರೋಧಿ ಆಗಲಿ, ಹಾಗಂತ ಬಿಂಬಿಸಿದರು: ಸಿದ್ದರಾಮಯ್ಯ ** ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ ** ಏಷ್ಯನ್ ಕ್ರೀಡಾಕೂಟ: ಕುಸ್ತಿಯಲ್ಲಿ ಭಜರಂಗ ಪೂನಿಯಾಗೆ ಚಿನ್ನ. ** ಭಾರತ-ಇಂಗ್ಲೆಂಡ್ ಟೆಸ್ಟ್: ಇಂಗ್ಲೆಂಡ್ 161ಕ್ಕೆ ಆಲೌಟ್, ಭಾರತಕ್ಕೆ 167ರನ್ ಮುನ್ನಡೆ. 2ನೇ ಇನ್ನಿಂಗ್ಸ್ -ಭಾರತ.  ಕ್ಕೆ   ವಿಕೆಟ್

ಜೈ ಶೇಗುಣಸಿ ದಿನದ ಸುದ್ದಿ... ದಿ: 19-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 19-08-18 ** ಮಳೆ ಸಂತ್ರಸ್ತರ ರಕ್ಷಣೆಗಾಗಿ ಅವಿರತ ಶ್ರಮಿಸುತ್ತಿದ್ದೇವೆ:ಎಚ್​.ಡಿ. ಕುಮಾರಸ್ವಾಮಿ ** ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಜಲಾವೃತ, ಪಕ್ಷಿ ವೀಕ್ಷಕರ ಪ್ರವೇಶ ನಿಷಿದ್ಧ ** ಕೇರಳದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ: 500 ಕೋಟಿ ರೂ.ಪ್ಯಾಕೇಜ್​ ಘೋಷಣೆ ** ಅಕ್ರಮ ನೀರಾವರಿ ತಡೆಗೆ ಕಾನೂನು ರಚನೆ: ಕೃಷಿ ಸಚಿವ ಶಿವಶಂಕರರೆಡ್ಡಿ ** ಮಡಿಕೇರಿ ಗಂಜಿಕೇಂದ್ರಕ್ಕೆ ಸಿಎಂ ಭೇಟಿ: ಮನೆ ಕಟ್ಟಿಸಿಕೊಡುವ ಭರವಸೆ ** ಕೊಡಗು: ತಗ್ಗಿದ ಮಳೆ; ರಕ್ಷಣೆ, ಪರಿಹಾರ ಕಾರ್ಯ ಬಿರುಸು ** ಭೂಕಂಪನ ವದಂತಿಗೆ ಕಿವಿಗೊಡಬೇಡಿ: ಕೊಡಗು ಜಿಲ್ಲಾಧಿಕಾರಿ ಮನವಿ ** ಸಂಜೆ 6ರ ಬಳಿಕ ವರ್ಕ್ ಇ-ಮೇಲ್ಸ್‌ಗೆ ಪ್ರತಿಕ್ರಿಯಿಸಬೇಡಿ: ಅಮೆಜಾನ್ ಮುಖ್ಯಸ್ಥ ಅಮಿತ್ ಅಗರವಾಲ್ ** ಕೇರಳದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮನವಿ ** ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಮ್ರಾನ್​ ಖಾನ್​ ಪದಗ್ರಹಣ ** ಕ್ರಿಕೆಟ್: ಟೆಸ್ಟ್ ಕ್ಯಾಪ್ ಧರಿಸಿದ ರಿಷಭ್ ಪಂತ್ ಭಾರತದ 291ನೇ ಆಟಗಾರ. ** ಭಾರತ-ಇಂಗ್ಲೆಂಡ್ ಟೆಸ್ಟ್: ಕುಸಿದ ಭಾರತಕ್ಕೆ ಕೊಹ್ಲಿ, ರಹಾನೆ ಆಸರೆ;

ಜೈ ಶೇಗುಣಸಿ ದಿನದ ಸುದ್ದಿ.. ದಿ: 18-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 18-08-18 ** ವಾಜಪೇಯಿ ಪಂಚಭೂತಗಳಲ್ಲಿ ಲೀನ: ಸ್ಮೃತಿ ಸ್ಥಳದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ** ಅಂತ್ಯಸಂಸ್ಕಾರದಲ್ಲಿ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಅಡ್ವಾಣಿ, ನೇಪಾಳ, ಬಾಂಗ್ಲಾ, ಭೂತಾನ್ ಮುಂತಾದ ಸಾರ್ಕ್ ದೇಶಗಳ ನಾಯಕರು ಭಾಗಿ. ** ಅಟಲ್ ಪುತ್ರಿ ನಮಿತಾ ಭಟ್ಟಾಚಾರ್ಯ ಮುಂದಾಳತ್ವದಲ್ಲಿ ನಡೆದ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ** ಅಟಲ್​  ಪ್ರಜಾಪ್ರಭುತ್ವದ ಮೇರು ವ್ಯಕ್ತಿತ್ವ: ಸೋನಿಯಾ ಗಾಂಧಿ ** ನನ್ನ ತಂದೆ, ಗುರುವನ್ನು ಕಳೆದುಕೊಂಡಿದ್ದೇನೆಂದು ಕಣ್ಣೀರು ಹಾಕಿದ ಮೋದಿ ** ಪ್ರತಿ ಭಾರತೀಯನ ಹೃದಯ, ಮನಸಿನಲ್ಲಿ ಅಟಲ್‌ ಅಜರಾಮರ: ಪ್ರಧಾನಿ ಮೋದಿ ** ಅಟಲ್ ಬಿಹಾರಿ ವಾಜಪೇಯಿಯವರು ಅತ್ಯಂತ ಅಪರೂಪದ ಮನುಷ್ಯರಾಗಿದ್ದರು: ನಟ ಅಮಿತಾಭ್ ಬಚ್ಚನ್ ** ವಾಜಪೇಯಿ ನಿಧನ: ಬ್ರಿಟೀಷ್ ಧ್ವಜವನ್ನು ಅರ್ಧ ಮಟ್ಟಕ್ಕಿಳಿಸಿದ ಹೈಕಮಿಷನರ್ ಕಚೇರಿ ** ನೆರೆಹಾವಳಿಯಿಂದ ಹಾನಿಗೊಳಗಾದ ಜಿಲ್ಲೆಗಳಿಗೆ 200ಕೋಟಿ: ಸಿಎಂ ** ಕೊಡಗಿಗೆ ಕೇರಳ ಅನಾಹುತದ ದುಃಸ್ವಪ್ನ; ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹಕ್ಕೆ ತತ್ತರಿಸಿದ ಜನತೆ. ** ಪಾಕಿಸ್ತಾನಕ್ಕೆ ಸೌಹಾರ್ದ ರಾಯಭಾರಿಯಾಗಿ ಹೋಗುತ್ತಿದ್ದೇನೆ: ಸಿಧು ** ಕೇರಳದ ಮೇಲೆ ಮತ್ತೆ ವರುಣನ ಮುನಿಸು: ಮೃತಪಟ್ವವರ ಸಂಖ್ಯೆ 200ಕ್ಕೆ ಏರಿಕೆ ** ಕ್ರಿಕೆಟ್: ಇಂದಿನಿಂದ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್ ಆರ...

ಜೈ ಶೇಗುಣಸಿ ದಿನದ ಸುದ್ದಿ... ದಿ: 17-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 17-08-18 ** ಇಹಲೋಕ ಯಾತ್ರೆ ಮುಗಿಸಿದ ಅಜಾತಶತ್ರು ಅಟಲ್​ ಬಿಹಾರಿ ವಾಜಪೇಯಿ; ಗಣ್ಯರಿಂದ ಸಂತಾಪ. ಇಂದು 10ಗಂಟೆಯಿಂದ ಸಾರ್ವಜನಿಕ ದರ್ಶನ, ಸಂಜೆ ಅಂತ್ಯಕ್ರಿಯೆ. ** ಅಟಲ್‌ ಅಸ್ತಂಗತ: ಇಂದು ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ, 7ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರ್ಕಾರ. ** ಅಟಲ್‌ ಜಿ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ: ಎಚ್‌.ಡಿ.ದೇವೇಗೌಡ ** ಗುರುಗಳನ್ನು ಕಳೆದುಕೊಂಡು ಶೂನ್ಯನಾಗಿರುವೆ: ಪ್ರಧಾನಿ ಮೋದಿ. ** ಭಾರತ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ: ರಾಹುಲ್ ಗಾಂಧಿ. ** ನಮ್ಮಿಬ್ಬರದು 65 ವರ್ಷಗಳ ಸ್ನೇಹ :ಭಾವುಕರಾದ ಅಡ್ವಾಣಿ ** ರಾಜ್ಯಾದ್ಯಂತ ವರುಣನ ಅಬ್ಬರ: ಅಪಾಯ ಮಟ್ಟ ಮೀರಿದ ನದಿಗಳು, ಹಲವಡೆ ಜಲಾವೃತ! ** ಬೆಂಗಳೂರಿನಲ್ಲಿ ಭಾರೀ ಶಬ್ಧ: ಭೂಕಂಪದ ಭೀತಿಯಲ್ಲಿ ಜನತೆ ** ಏರ್ ಷೋ ವಿವಾದ: ಪ್ರಜೆಗಳ ಭಾವನೆಯನ್ನು ಕೇಂದ್ರ ಗೌರವಿಸುತ್ತದೆ ಎಂದು ಭಾವಿಸಿದ್ದೇನೆ- ಕುಮಾರಸ್ವಾಮಿ ** ಬಿಜೆಪಿ, ಕಾಂಗ್ರೆಸ್​ ನಾಯಕರ ಫೋನ್​ ಕದ್ದಾಲಿಕೆ ಮಾಡುತ್ತಿರುವ ಸಿಎಂ: ಸಿ.ಟಿ.ರವಿ ಆರೋಪ ** ಗೌರಿ ಹಂತಕರಲ್ಲಿ ಐವರು ಶಂಕಿತರಿಂದ ಕಲಬುರ್ಗಿ ಹತ್ಯೆ: ಎಸ್ಐಟಿ ** ಕೇರಳದಲ್ಲಿ ಮಹಾಮಳೆ: 73 ಮಂದಿ ಸಾವು, ರಕ್ಷಣಾ ಕಾರ್ಯಾಚರಣೆಗೆ ನೌಕಾಪಡೆ ** ಎರಡು ನಿಮಿಷಗಳ ಮೌನ ಆಚರಿಸಿ ವಾಡೇಕರ್‌ಗೆ ಗೌರವ ಸೂಚಿಸಿದ ಟೀಮ್ ಇಂಡಿಯಾ ಆಟಗಾರರು

ರಾಯಬಾಗ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಬೈಕ್ ನುಚ್ಚುನೂರು..

Image
ಜೈ ಶೇಗುಣಸಿ ಸುದ್ದಿ... ರಾಯಬಾಗ ರೈಲ್ವೆ ನಿಲ್ದಾಣದ ಬಳಿ ಗುರುವಾರ ಬೆಳಗ್ಗೆ 9 ಗಂಟೆಗೆ ಬೈಕ್ ಮೂಲಕ ರೈಲು ಹಳಿ ದಾಟುವ ಸಾಹಸಕ್ಕೆ ಮುಂದಾದ ವ್ಯಕ್ತಿ ರೈಲು ಹತ್ತಿರ ಬರುತ್ತಿದ್ದಂತೆ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ರೈಲಿನ ಚಕ್ರಕ್ಕೆ ಸಿಲುಕಿದ ಬೈಕ್ ನುಚ್ಚುನೂರಾಗಿದೆ. ಮಿರಜ್‌ದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ರಾಯಬಾಗ ರೈಲ್ವೆ ನಿಲ್ದಾಣದ ಸಮೀಪ ಬರುತ್ತಿದ್ದಂತೆಯೇ ಇಂಥದೊಂದು ಅವಘಡ ಸಂಭವಿಸಿದ್ದು, ಭಾರಿ ಸದ್ದಿಗೆ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಚಕ್ರಕ್ಕೆ ಸಿಲುಕಿದ ಬೈಕ್ ರೈಲಿನ ಜತೆ ಸುಮಾರು 300 ಮೀಟರ್‌ವರೆಗೂ ಎಳೆದುಕೊಂಡು ಹೋಗಿದೆ. ಈ ಘಟನೆಯಿಂದ ರೈಲು ನಿಲ್ದಾಣದ ಪ್ಲಾಟ್‌ಾರಂಗೆ ತೀವ್ರ ಹಾನಿಯಾಗಿದೆ. ಬೈಕ್‌ನ ಅವಶೇಷಗಳನ್ನು ತೆಗೆಯಲು ರೈಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ರೈಲಿಗೆ ಬೈಕ್ ಸಿಕ್ಕಿದ್ದರಿಂದ ಮಿರಜ್-ಹುಬ್ಬಳ್ಳಿ ಪ್ಯಾಸೆಂಜರ್ ರೈಲನ್ನು ರಾಯಬಾಗ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಇದರಿಂದ ರೈಲು ಪ್ರಯಾಣ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು. ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 16-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 16-08-18 ** ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿ ಹಲವೆಡೆ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ. ಅತಿವೃಷ್ಟಿಯಿಂದ ಪ್ರವಾಹ ಭೀತಿ. ** ಭಾರಿಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿ: ಎಚ್​ಡಿಕೆ ** ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ: ಭಾರತ ಈಗ ಅಭಿವೃದ್ಧಿಯ ನೆಲ; 2020ಕ್ಕೆ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪಣ. ** ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಸಾಲಮನ್ನಾಕ್ಕೆ ಬದ್ಧ. ಅಖಂಡ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಿಎಂ ಎಚ್​ಡಿಕೆ ** ರಾಜ್ಯದ ಒಂದು ಹನಿ ನೀರು ವ್ಯರ್ಥವಾಗಲು ಬಿಡಲ್ಲ: ಡಿಕೆಶಿ ** ಸಾಹಿತಿ ಕಲ್ಬುರ್ಗಿ ಹತ್ಯೆ ಮಾಡಿದ್ದ ಗ್ಯಾಂಗ್ ನಿಂದಲೇ ಗೌರಿ ಲಂಕೇಶ್ ಹತ್ಯೆ; ಸ್ಪೋಟಕ ಮಾಹಿತಿ ಬಹಿರಂಗ. ** ದೇಶದ ಬಡವರಿಗೆ ನೆರವಾಗುವ ಆರೋಗ್ಯ ಯೋಜನೆ 'ಆಯುಷ್ಮಾನ್ ಭಾರತ' ಸೆ.25ರಿಂದ ಜಾರಿ: ಪ್ರಧಾನಿ ಮೋದಿ. ** ಎಎಪಿ ನಾಯಕ ಅಶುತೋಷ್ ಅವರ ರಾಜಿನಾಮೆ ಅಂಗೀಕರಿಸಲು ಅರವಿಂದ್ ಕೇಜ್ರಿವಾಲ್ ನಕಾರ. ** ಮಹಾದಾಯಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ: ವಿರೇಶ ಸೋಬರದಯಠ- ಸದ್ಯಕ್ಕೆ ಪ್ರತಿಭಟನೆ ಅಂತ್ಯ. ** ಏಮ್ಸ್ ಗೆ ಮೋದಿ ಭೇಟಿ, ವಾಜಪೇಯಿ ಆರೋಗ್ಯ ಕುರಿತು ವಿಚಾರಣೆ ** ಗಡಿಯಲ್ಲಿ ಭಾರತಕ್ಕೆ ಸಿಹಿ ಹಂಚಿ, ಶುಭ ಕೋರಿದ ಪಾಕಿಸ್ತಾನ, ಬಾಂಗ್ಲಾ ಸೇನಾ ಅಧಿಕಾರಿಗಳು ** ಹಾರ್ದಿಕ್​ ಪಾಂಡ್ಯಗಿರುವ ...

ಪ್ರಧಾನಿ ಮೋದಿ: ಐದು ವರ್ಷ, ಐದು ಸ್ವಾತಂತ್ರ್ಯೋತ್ಸವ, ಐದು ಬಗೆ…

Image
ಜೈ ಶೇಗುಣಸಿ ಸುದ್ದಿ.. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಅವರ ಐದನೇ ಸ್ವಾತಂತ್ರ್ಯೋತ್ಸವ. ತಮ್ಮ ಅಧಿಕಾರವಧಿಯಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೆ ಐದು ಬಾರಿ ತಿರಂಗ ಧ್ವಜ ಹಾರಿಸಿರುವ ಅವರಿಗೆ ಇದು ಈ ಅಧಿಕಾರವಧಿಯ ಕೊನೆಯ ಸ್ವಾತಂತ್ರ್ಯೋತ್ಸವ. ಪ್ರತಿ ಬಾರಿಯ ಸ್ವಾತಂತ್ರ್ಯೋತ್ಸವದಲ್ಲೂ ಮೋದಿ ಅವರ ವೇಷ ಭೂಷಣದಲ್ಲಿ ಅತಿ ವಿಶಿಷ್ಟವಾಗಿ ಕಂಡಿದ್ದು, ತಲೆಯ ಮೇಲಿನ ರುಮಾಲು. ಈ ಐದೂ ವರ್ಷಗಳಲ್ಲೂ ಅವರು ಐದು ಬಗೆಯ ರುಮಾಲು ತೊಟ್ಟು ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಅದರ ಫೋಟೋಗಳು ಇಲ್ಲಿವೆ. ಪ್ರಧಾನಿಯಾದ ಮೊದಲ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ... 2015ರ ಸ್ವಾತಂತ್ರ್ಯೋತ್ಸವದಲ್ಲಿ... 2016ರಲ್ಲಿ ಕಂಡಿದ್ದು ಹೀಗೆ... 2017ರ ಸ್ವಾತಂತ್ರ್ಯೋತ್ಸವಲ್ಲಿ... ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ...

ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯ ಬಗ್ಗೆ ತಿಳಿದರೆ ನಿಮ್ಮ ಮೈ ರೋಮಾಂಚನಗೊಳ್ಳುತ್ತದೆ.. ಇಂತಹ ವೀರ ಯೋಧನ‌ ಬಗ್ಗೆ ಹಲವು ಮಾಹಿತಿ ಇಲ್ಲಿದೆ ಓದಿ ತಪ್ಪದೇ ಶೇರ್ ಮಾಡಿ..

Image
ಜೈ ಶೇಗುಣಸಿ ಸುದ್ದಿ.... ಸಂಗೊಳ್ಳಿ ರಾಯಣ್ಣ ಎಂಬ ಹೆಸರು ಕೇಳಿದ‌ ಕೂಡಲೇ ನಮ್ಮ ಮೈ ರೋಮಾಂಚನಗೊಳ್ಳುತ್ತದೆ. ಹೌದು ನಮ್ಮ ರಾಯಣ್ಣ ಹುಟ್ಟಿದ್ದು ಆಗಸ್ಟ್ 15 1798 ಕಿತ್ತೂರಿನಿಂದ 14 ಕಿ.ಮೀ ದೂರವಿರುವ ಸಂಗೊಳ್ಳಿಯಲ್ಲಿ. ಇವರ ತಂದೆ ಬರಮಪ್ಪ ಮತ್ತು ತಾಯಿ ಕೆಂಚವ್ವ. ಇನ್ನು ಹುಲಿಯ ಹೊಟ್ಟೆಯಲ್ಲಿ‌ ಹುಲಿಯೇ ಹುಟ್ಟುತ್ತದೆ ಎಂಬ ಮಾತಿಗೆ ನಮ್ಮ ರಾಯಣ್ಣ ನಿದರ್ಶನವಾಗುತ್ತಾರೆ. ಏಕೆಂದರೆ ರಾಯಣ್ಣನವರ ತಾತ ರಾಗಪ್ಪ ಗಿಡಮೂಲಿಕೆಗಳಿಂದ ಔಷಧಿಗಳನ್ನು ತಯಾರಿಸಿ ಜನರ ಕಾಯಿಲೆಗಳನ್ನು ನಿವಾರಿಸುತ್ತಿದ್ದರು. ಇನ್ನು ಇವರ ತಂದೆ ಬರಮಪ್ಪ ಜನರಿಗೆ ಕಾಡುತ್ತಿದ್ದ ಹುಲಿಯೊಂದನ್ನು ಕತ್ತಿಯಿಂದ ಕೊಂದು ತಮ್ಮ ವೀರತನದಿಂದ ಅಲ್ಲಿನ‌ರಾಜನಾಗಿದ್ದ ಮಲ್ಲಸರ್ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಸಾಹಸದಿಂದ ಕಿತ್ತೂರಿನ ಸಂಸ್ಥಾನದಲ್ಲಿ ಪ್ರಸಿದ್ಧಿಯಾಯಿತು. ಇನ್ನು ಇಲ್ಲಿದ್ದ ಸಂಗೊಳ್ಳಿ ಗರಡಿಮನೆ ಬಹಳ ಪ್ರಸಿದ್ಧವಾಗಿತ್ತು. ಇಲ್ಲಿನ ಎಲ್ಲಾ ಯುವಕರು ಇಲ್ಲಿನ ಗರಡಿ ಮನೆಗೆ ಬಂದು ಕತ್ತಿವರಸೆ , ಕವಣೆ ಕುಣಿತ, ದೊಣ್ಣೆ ವರಸೆ, ಗುರಿ ಹೊಡೆತ ಗಳನ್ನೊಳಗೊಂಡ ಹಲವು ವಿದ್ಯೆಗಳನ್ನು ಕಲಿತು ಯುದ್ಧ ಮಾಡುವ ಜಾಣ್ಮೆಯನ್ನು ತಿಳಿದು ಕಿತ್ತೂರಿಗೆ ಸೇವೆ ಸಲ್ಲಿಸಲು ಅಲ್ಲಿನ ಸೇನೆಗೆ ಸೇರುತ್ತಿದ್ದರು. ಸಂಗೊಳ್ಳಿ ರಾಯಣ್ಣರೂ ಸಹ ಇದೇ ಗರಡಿಯಲ್ಲಿ ಪಳಗಿದ್ದರು. ಇನ್ನು ಅಮಟೂರಿನ ಬಾಳಪ್ಪ, ಚೆನ್ನಬಸವಣ್ಣ ಮತ್ತು ರಾಯಣ್ಣ ಎಲ್ಲರೂ ಒಟ್ಟಾಗಿ ಗರಡಿಯಲ್ಲಿ ಪಳಗಿ ಹಲವು ಯುದ್ಧ ಕಲ...

ಜೈ ಶೇಗುಣಸಿ ದಿನದ ಸುದ್ದಿ... ದಿ: 15-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 15-08-18 ** ಇಂದು 72 ನೇ ಸ್ವಾತಂತ್ರ್ಯ ದಿನಾಚರಣೆ: ಪ್ರಧಾನಿ ನರೇಂದ್ರ ಮೋದಿಯಿಂದ ಐತಿಹಾಸಿಕ ಕೆಂಪು ಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ, ಧ್ವಜಾರೋಹಣ. ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಫಿಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ. ** ದೇಶ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: ನಮ್ಮ ರೈತರು ಲಕ್ಷಾಂತರ ಕೋಟಿ ಜನರಿಗೆ ಆಹಾರವನ್ನು ಉತ್ಪಾದಿಸುತ್ತಾರೆ. ರೈತರ ಆದಾಯ ದ್ವಿಗುಣಗೊಳ್ಳಬೇಕಿದೆ. ಅನ್ನದಾತರ ಏಳಿಗಾಗಿ ನಾವು ಇಂದು ಶ್ರಮಿಸುವ ಮೂಲಕ ಸ್ವಾತಂತ್ರ್ಯ ಯೋಧರ ಭಾರತದ ಕನಸುಗಳು ನನಸು ಮಾಡಬೇಕಾಗಿದೆ. ** ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಶೇಗುಣಸಿ ರೈತ ಕಲ್ಮೇಶ ಯಲಡಗಿ ಸೇರಿದಂತೆ ಸಾಧಕ ರೈತರಿಗೆ ವಿಶೇಷ ಆಹ್ವಾನ. ** ಮಹದಾಯಿ ನ್ಯಾಯಮಂಡಳಿ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ಸಹಿ: ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು ** ಮಹದಾಯಿಯಲ್ಲಿ ನ್ಯಾಯ ಸಿಕ್ಕಿಲ್ಲ, ಸುಪ್ರೀಂಗೆ ಮೇಲ್ಮನವಿ ಸಲ್ಲಿಸುತ್ತೇವೆ: ಡಿಕೆಶಿ ** ಮಹದಾಯಿ ತೀರ್ಪಿನ ಕೂಲಂಕಷ ಅಧ್ಯಯನ ನಂತರ ಮುಂದಿನ ನಡೆ: ಸಿಎಂ ಕುಮಾರಸ್ವಾಮಿ ** ಮಹದಾಯಿ ನ್ಯಾಯಾಧಿಕರಣದ ತೀರ್ಪು ಸ್ವಾಗತಾರ್ಹ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ** ಸಿಎಂ ಆಗುವ ಕನಸಿಲ್ಲ, ಎಚ್​ಡಿಕೆ ರಾಷ್ಟ್ರ ರಾಜಕಾರಣಕ್ಕೆ ಹೋಗೋದಿಲ್ಲ: ರೇವಣ್ಣ ** ಕುಕ್ಕೆ ಸುಬ್ರಹ್ಮಣ್ಯನಿಗೆ...

ಜೈ ಶೇಗುಣಸಿ ದಿನದ ಸುದ್ದಿ.. ದಿ:14-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ:14-08-18 ** ಪ್ರಮಾಣ ವಚನಕ್ಕೆ ಮೋದಿ, ಬಿಎಸ್‌ವೈ ಮಾಡಿದ ಖರ್ಚೆಷ್ಟು ತೆಗೆಸಿ: ಎಚ್​ಡಿಕೆ ** ಏರ್‌ ಷೋ ಸ್ಥಳಾಂತರ ಎನ್ನುವುದು ಸುಳ್ಳು ಸುದ್ದಿ: ಬಿಎಸ್‌ವೈ ** ಬೆಂಗಳೂರಿನಲ್ಲಿಯೇ ಏರ್ ಷೋ ಮಾಡುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ ಕುಮಾರಸ್ವಾಮಿ ** ಮೈಸೂರಿನಿಂದ ಮತ್ತೆ ಲೋಕಸಭೆಗೆ ಸ್ಪರ್ಧೆ: ಪ್ರತಾಪ್ ಸಿಂಹ ** ನಾನು ಉತ್ತರ ಕರ್ನಾಟಕದ ಸಿಎಂ ಕೂಡ ಎಂದು ಸಾಬೀತು ಪಡಿಸುತ್ತೇನೆ: ಕುಮಾರಸ್ವಾಮಿ ** ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಲು ಮೋದಿಗೆ ರಾಜ್ಯ ನಾಯಕರ ಮನವಿ. ** ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ, ಮುಂದೆ ರಾಷ್ಟ್ರ ರಾಜಕಾರಣಕ್ಕೆ ಕುಮಾರಸ್ವಾಮಿ: ದೇವೇಗೌಡ ** ಭಾರತದಲ್ಲಿ ಪುಣೆ ಅತ್ಯಂತ ವಾಸಯೋಗ್ಯ ನಗರ, ದೆಹಲಿಗೆ 65ನೇ ಸ್ಥಾನ ** ರಾಜ್ಯದ ರೈತರ ಶೇ. 50ರಷ್ಟು ಕೃಷಿ ಸಾಲ ಮನ್ನಾ ಮಾಡುವಂತೆ ಪ್ರಧಾನಿಗೆ ರಾಹುಲ್ ಆಗ್ರಹ ** ಆರ್​ಪಿಎಫ್ ನೇಮಕ ಮಹಿಳೆಯರಿಗೆ ಶೇ.50 ಮೀಸಲು ** ಕಾಶ್ಮೀರದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದ ಬಿಜೆಪಿ ** ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ನಿಧನ. ** ಮಹಾಮೈತ್ರಿ ಕೂಟದಿಂದ ಬಿಜೆಪಿ ಕಟ್ಟಿಹಾಕಲು ಸಾಧ್ಯವಿಲ್ಲ, ಉ.ಪ್ರದಲ್ಲಿ 80ರ ಪೈಕಿ 74 ಕ್ಷೇತ್ರ ನಮ್ಮದೇ: ಶಾ ** ಭಾರತ, ಅಮೆರಿಕಾ ಜಂಟಿಯಾಗಿ ಭಯೋತ್ಪಾದನೆ ಎದುರಿಸಲು ಬದ್ಧವಾಗಿರುವುದಾಗಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು &...

ಜೈ ಶೇಗುಣಸಿ ದಿನದ ಸುದ್ದಿ.. ದಿ: 13-08-18

ಜೈ ಶೇಗುಣಸಿ ದಿನದ ಸುದ್ದಿ .. ದಿ: 13-08-18 ** ಬೆಳ್ಳಂದೂರಿನ ವೆಂಕಟೇಶ್ವರ ದೇವಾಲಯದಲ್ಲಿ ಕನ್ನಡಕ್ಕೆ‌ ಅಪಮಾನ; ಕನ್ನಡ ಮಾತಾಡಿ ಎಂದಿದ್ದಕ್ಕೆ ಮಹಿಳೆಗೆ ದೇವಸ್ಥಾನ ಸಿಬ್ಬಂದಿ ಧಮ್ಕಿ ** ಬೆಂಗಳೂರಿಗೆ ಶಾಕ್! ಏರ್ ಶೋ ಲಕ್ನೋಗೆ ಶಿಫ್ಟ್ ** ಸಿಎಂ ಕುಮಾರಸ್ವಾಮಿಯವರ ಆಲಮಟ್ಟಿ ಪ್ರವಾಸ ರದ್ದು ** ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷ ಇಂದು ಅಸ್ತಿತ್ವ ಕಳೆದುಕೊಳ್ಳುತ್ತಿದೆ: ಹೆಚ್‍ಡಿ ದೇವೇಗೌಡ ** ಪ್ರಧಾನಿ ಮೋದಿ ಹಿಂದುಳಿದ ವರ್ಗದ ಚಾಂಪಿಯನ್, ಸಿದ್ದರಾಮಯ್ಯ ಡ್ಯೂಪ್ಲಿಕೇಟ್​ ಚಾಂಪಿಯನ್: ಕೆ.ಎಸ್​.ಈಶ್ವರಪ್ಪ ವಾಗ್ದಾಳಿ . ** ಈಗಲೂ ನನಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗಶೆಟ್ಟಿ ** ರಾಖಿ, ಗಣೇಶ ಮೂರ್ತಿಗಳ ಮೇಲಿನ ತೆರಿಗೆಯಲ್ಲಿ ವಿನಾಯಿತಿ: ಹಣಕಾಸು ಸಚಿವ ** ವರ್ಷಾಂತ್ಯದಲ್ಲಿ ಇಸ್ರೋ ಟಿವಿ ಪ್ರಾರಂಭಿಸಲು ನಿರ್ಧರಿಸಿದ್ದಾಗಿ ಮುಖ್ಯಸ್ಥ ಕೆ.ಸಿವನ್​ ಮಾಹಿತಿ ** ಅಫ್ಘಾನಿಸ್ತಾನ: ತಾಲಿಬಾನ್​ ದಾಳಿಯಿಂದ 100 ಸಾವು, 133ಕ್ಕೂ ಹೆಚ್ಚು ಜನರಿಗೆ ಗಾಯ ** ಕಮ್ಯುನಿಸ್ಟ್​ ನಾಯಕ ಸೋಮನಾಥ ಚಟರ್ಜಿ ಆರೋಗ್ಯ ಗಂಭೀರ ** ವಿಯೆಟ್ನಾಂ ಓಪನ್: ಭಾರತದ ಅಜೇಯ್ ಜಯರಾಮ್ ರನ್ನರ್ ಆಫ್. ** ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತಕ್ಕೆ ಹೀನಾಯ ಸೋಲು

ಜೈ ಶೇಗುಣಸಿ ದಿನದ ಸುದ್ದಿ.. ದಿ:12-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ:12-08-18 ** ರೈತರು ನನ್ನ ಮೇಲೆ ನಂಬಿಕೆ ಇಡಿ, ನಿಮ್ಮನ್ನು ಉಳಿಸಿಕೊಳ್ಳುತ್ತೇನೆ: ಎಚ್ಡಿಕೆ ** ಸೀತಾಪುರದಲ್ಲಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಿಎಂ ಎಚ್​ಡಿಕೆ ** ಭತ್ತ ನಾಟಿ ವಿಚಾರದಲ್ಲಿ ಬಿಜೆಪಿ ಗೇಲಿ ಮಾಡುತ್ತಿರುವುದು ಎಚ್ಡಿಕೆಯನ್ನಲ್ಲ, ರೈತರನ್ನ: ವಿಶ್ವನಾಥ್​ ** ಸಿಎಂ ಭತ್ತ ನಾಟಿ ವಿಚಾರ ರಾಜಕೀಯ ಗಿಮಿಕ್: ಬಿಜೆಪಿ ** ಏಷ್ಯಾದ ವಿಶಿಷ್ಟ ನ್ಯಾಯಾಲಯ ಸಂಕೀರ್ಣ ಇಂದು ಹುಬ್ಬಳ್ಳಿಯಲ್ಲಿ ಲೋಕಾರ್ಪಣೆ ** ಕೇರಳದಲ್ಲಿ ಮುಂದುವರಿದ ಮಳೆಯಬ್ಬರ,37 ಜನರ ಸಾವು ** ಭಯೋತ್ಪಾದನೆ ನಿಯಂತ್ರಣದಲ್ಲಿ ಪಾಕ್ ವಿಫಲವಾದ ಕಾರಣ ಸೇನಾಧಿಕಾರಿಗಳಿಗೆ ಮಿಲಿಟರಿ ತರಬೇತಿ ಸ್ಥಗಿತಗೊಳಿಸಿದ ಅಮೆರಿಕ ** ಭಾರತಕ್ಕೆ ಅಕ್ರಮ ಬಾಂಗ್ಲಾ, ರೋಹಿಂದ್ಯ ವಲಸಿಗರನ್ನು ಕರೆತಂದಿದ್ದೇ ಕಾಂಗ್ರೆಸ್: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ** ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಬೇರು ಸಮೇತ ಕಿತ್ತುಹಾಕಲು ಬಂದಿದ್ದೇವೆ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ** ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್: ಭಾರತದ  ಅಜಯ್ ಜಯರಾಮ್ ಫೈನಲ್‌ ಗೆ ಪ್ರವೇಶ ** ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ವೋಕ್ಸ ಶತಕ, ಬೃಹತ್ ಮೊತ್ತದತ್ತ ಇಂಗ್ಲೆಂಡ್; ಇಂಗ್ಲೆಂಡ್ 357-6

ಜೈ ಶೇಗುಣಸಿ ದಿನದ ಸುದ್ದಿ... ದಿ: 11-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 11-08-18 ** ಇನ್ನೊಂದು ತಿಂಗಳಲ್ಲಿ ಬೆಂಗಳೂರನ್ನು ಫ್ಲೆಕ್ಸ್​ ಮುಕ್ತಗೊಳಿಸಿ: ಹೈಕೋರ್ಟ್​ ಚಾಟಿ ** ಈಶ್ವರಪ್ಪ ಮಹಾ ಪೆದ್ದ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ** ಅಗಸ್ಟ್ 20ಕ್ಕೆ ಮಹಾದಾಯಿ ತೀರ್ಪು: ಧಾರವಾಡದಲ್ಲಿ ಹೋರಾಟಗಾರರ ಸಭೆ. ** ರಾಜ್ಯ ಸರ್ಕಾರದಿಂದ ಸಂತ್ರಸ್ತ ಕೇರಳಕ್ಕೆ 10 ಕೋಟಿ ರೂ. ನೆರವು: ಎಚ್​ಡಿಕೆ ** ಲೋಕಸಭೆ ಚುನಾವಣೆಯಲ್ಲಿ ಹಿಂದಿಗಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಬಿ.ಎಸ್‌.ಯಡಿಯೂರಪ್ಪ ** ಸ್ಥಳೀಯ ಸಂಸ್ಥೆ ಚುನಾವಣೆ ಹೊತ್ತಲ್ಲಿ ಅಧಿಕಾರಿಗಳ ವರ್ಗಾವಣೆ ಬೇಡ: ಸರ್ಕಾರಕ್ಕೆ ಚುನಾವಣೆ ಆಯೋಗ ಸೂಚನೆ. ** ಟಿಬೆಟಿಯನ್ನರಿಗೆ ಆಶ್ರಯ ನೀಡಿದ ಕರ್ನಾಟಕಕ್ಕೆ ಧನ್ಯವಾದ: ದಲೈ ಲಾಮಾ. ** ರಫೆಲ್​ ಡೀಲ್​ ವಿರುದ್ಧ ಸೋನಿಯಾ ನೇತೃತ್ವದಲ್ಲಿ ಸಂಸದರ ಪ್ರತಿಭಟನೆ ** ತ್ರಿವಳಿ ತಲಾಕ್​ ತಿದ್ದುಪಡಿ ಮಸೂದೆ ಮೇಲ್ಮನೆಯಲ್ಲಿ ಮಂಡನೆಯೇ ಆಗಲಿಲ್ಲ ** ಕರುಣಾನಿಧಿಗೆ 'ಭಾರತ ರತ್ನ' ನೀಡಿ: ಡಿಎಂಕೆ ಆಗ್ರಹ ** ರಾಜೀವ್‌ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ ** ಅಗಸ್ಟ್ 18ಕ್ಕೆ ಪಾಕ್ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ: ಪಿಟಿಐ ಸಂಸದ ಹೇಳಿಕೆ

ಜೈ ಶೇಗುಣಸಿ ದಿನದ ಸುದ್ದಿ... ದಿ: 10-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 10-08-18 ** ಕೆಆರ್​ಎಸ್​, ಕಬಿನಿಯಿಂದ ನದಿಗೆ ನೀರು: ಕಾವೇರಿ ಕೊಳ್ಳದಲ್ಲಿ ಮತ್ತೆ ಪ್ರವಾಹ ಭೀತಿ ** ಸಮ್ಮಿಶ್ರ ಸರ್ಕಾರ ನಡೆಸೋದು ತುಂಬಾ ಕಷ್ಟ, ಜನರ ಒಳಿತಿಗಾಗಿ ನೋವು ನುಂಗಿಕೊಂಡು ಶ್ರಮಿಸುತ್ತಿದ್ದೇವೆ: ಡಿಸಿಎಂ ಜಿ ಪರಮೇಶ್ವರ ** ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ - ಜೆಡಿಎಸ್ ಮೈತ್ರಿ: ಸಿದ್ದರಾಮಯ್ಯ ** ತಕ್ಷಣವೇ ಸಾಲಮನ್ನಾದ ಹಣ ಕೊಡುವುದಕ್ಕೆ ನಾನೇನು ದುಡ್ಡಿನ ಗಿಡ ಹಾಕಿದ್ದೀನಾ?: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ** 7 ನಿಮಿಷದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ 42 ಲಕ್ಷ ರೂ. ಖರ್ಚು ** ರಾಜಕಾರಣಿಗಳಿಂದ ಸಮಾಜ ಉದ್ಧಾರ ಆಗಲ್ಲ: ಜಿಟಿ ದೇವೇಗೌಡ ** ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕಡೆ ಗಮನ ನೀಡಬೇಕು- ರಾಜ್ಯಪಾಲ ವಿ.ಆರ್.ವಾಲಾ ** ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಹರಿವಂಶ ನಾರಾಯಣ್‌ ಸಿಂಗ್ ಗೆ ಗೆಲುವು ** ಪ್ರಧಾನಿ ನರೇಂದ್ರ ಮೋದಿ ದಲಿತ ವಿರೋಧಿ ಮನಸ್ಥಿತಿ ಹೊಂದಿದ್ದಾರೆ: ರಾಹುಲ್ ** 2019ರ ಲೋಕಸಭಾ ಚುನಾವಣೆ : ಪ್ರತಿಪಕ್ಷಗಳ ಮೈತ್ರಿಗೆ ಎಎಪಿ ಸೇರಲ್ಲ- ಕೇಜ್ರಿವಾಲ್

ಜೈ ಶೇಗುಣಸಿ ದಿನದ ಸುದ್ದಿ...ದಿ: 09-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 09-08-18 ** ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನೇತಾರ ಎಂ.ಕರುಣಾನಿಧಿ ಮರೀನಾ ಬೀಚ್​ನಲ್ಲಿ ದ್ರಾವಿಡ ಸಂಪ್ರದಾಯದಂತೆ ಅಂತ್ಯಸಂಸ್ಕಾರ. ** ಕರುಣಾನಿಧಿ ಸಾವಿನಿಂದ ಬಿಬಿಎಂಪಿಗೆ ಒಂದು ಕೋಟಿ ರೂ. ನಷ್ಟ ** ಪ್ರತಿಪಕ್ಷದಲ್ಲಿರಲು ಜನ ತೀರ್ಪು ನೀಡಿದ್ದಾರೆ; ನಮಗೆ ಆಪರೇಷನ್​ ಕಮಲ ಅಗತ್ಯವಿಲ್ಲ: ಯಡಿಯೂರಪ್ಪ ** ಗೌರಿ ಲಂಕೇಶ್ ಹತ್ಯೆ: ಬೆಳಗಾವಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ. ** ರಾಜ್ಯದ ನೀರಾವರಿ ಯೋಜನೆ ಕುರಿತು ಗಡ್ಗರಿಯೊಂದಿಗೆ ಡಿಕೆಶಿ ಚರ್ಚೆ. ** ಸ್ವಾತಂತ್ರ್ಯ ದಿನಾಚರಣೆ ವರೆಗೆ ಕೆಂಪುಕೋಟೆ ಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ** ರಾಜ್ಯಸಭಾ ಉಪಾಧ್ಯಕ್ಷ ಹುದ್ದೆ: ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗೆ ಶಿವಸೇನೆ ಬೆಂಬಲ ** ಭಾರತದ ಮೊದಲ ಪ್ರಧಾನಿ ಮಹಮದ್​ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು: ಟಿಬೇಟಿಯನ್​ ಅಧ್ಯಾತ್ಮಗುರು ದಲೈ ಲಾಮಾ ** ಅಮೆರಿಕಾನ ನಂಬಬೇಡಿ: ಉತ್ತರ ಕೊರಿಯಾಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ ** ಟೀಂ ಇಂಡಿಯಾ ಜತೆ ಅನುಷ್ಕಾ ಫೋಟೋ ಸೆಷನ್ ; ನೆಟ್ಟಿಗರ ವ್ಯಾಪಕ ಕಿಡಿ ** ಕ್ರಿಕೆಟ್: ಇಂದಿನಿಂದ ಲಾಡ್ಸನಲ್ಲಿ ಭಾರತ-ಇಂಗ್ಲ್ಂಡ್ ಎರಡನೇ ಟೆಸ್ಟ್. ಗೆಲ್ಲಬೇಕಾದ ಒತ್ತಡದಲ್ಲಿ ಭಾರತ

ವಿದೇಶ ಪ್ರವಾಸದ ಫಲ ಈಗಾಗಲೇ ಕಾಣುತ್ತಿದೆ…

Image
ಜೈ ಶೇಗುಣಸಿ... | ಚಕ್ರಚರ್ತಿ ಸೂಲಿಬೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ 4 ವರ್ಷಗಳಲ್ಲಿ ಮಾಡಿದ ವಿದೇಶ ಪ್ರವಾಸಗಳು, ಅವುಗಳ ಫಲಶ್ರುತಿ ಇತ್ಯಾದಿ ಸಂಗತಿ ಬಗ್ಗೆ ಕಳೆದ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಈ ವಾರ ಅದರ ಮುಂದಿನ ಭಾಗ ನೋಡೋಣ. ನನೆಗುದಿಗೆ ಬಿದ್ದಿದ್ದ, ಫ್ರಾನ್ಸ್ ಜತೆಗಿನ ರಫೆಲ್ ಯುದ್ಧವಿಮಾನ ಒಪ್ಪಂದಕ್ಕೆ ಮರುಚಾಲನೆ ನೀಡುವಲ್ಲಿ ಯಶಸ್ವಿಯಾದ ಮೋದಿ ಸರ್ಕಾರ, ಕಾಂಗ್ರೆಸ್ ಮಾಡಿಕೊಂಡ ಒಪ್ಪಂದಕ್ಕಿಂತ ಕಡಿಮೆ ಬೆಲೆಯಲ್ಲಿ ಅವುಗಳನ್ನು ಖರೀದಿ ಮಾಡುವಷ್ಟು ಚೌಕಾಶಿ ಮಾಡಿತು. ಅಷ್ಟೇ ಅಲ್ಲದೇ, ಮೋದಿಯವರು ತಮ್ಮ ವೈಯಕ್ತಿಕವಾದ ಸಂಬಂಧವನ್ನು ಮುಂದಿಟ್ಟುಕೊಂಡೇ ವಾಯುಸೇನೆಗೆ ಫೈಟರ್ ಜೆಟ್​ಗಳನ್ನು ಉಡುಗೊರೆಯಾಗಿ ಪಡೆದುಕೊಂಡರು. ಇದರ ಫಲವಾಗಿಯೇ ಇಂದು ಚೀನಾದ ವೃದ್ಧಿಯಾಗುತ್ತಿರುವ ಮಿಲಿಟರಿ ಶಕ್ತಿಗೆ ಭಾರತ ಸೆಡ್ಡು ಹೊಡೆದು ನಿಂತಿದೆ. ಹಾಗಂತ ಚೀನಾದೊಂದಿಗೆ ನಮ್ಮ ಬಾಂಧವ್ಯವೇನು ಹಾಳಾಗಿಲ್ಲ. ಕ್ಸಿ ಜಿನ್​ಪಿಂಗ್ ಚೀನಾದ ಅಧ್ಯಕ್ಷರಾಗಿ ಮರು ಆಯ್ಕೆಯಾದಾಗ ಅವರಿಗೆ ಶುಭಾಶಯ ಕೋರಿದ ಮೊದಲಿಗರಲ್ಲಿ ಮೋದಿಯೂ ಇದ್ದರು. ಡೋಕ್ಲಾಂನಲ್ಲಿ ಚೀನಾಕ್ಕೆ ಮುಟ್ಟಿಕೊಂಡು ನೋಡುವಂತಹ ಪಾಠವನ್ನು ಕಲಿಸಿ, ದಕ್ಷಿಣ ಚೀನಾ ಸಮುದ್ರದಲ್ಲಿ ಬಲ ವೃದ್ಧಿಸಿಕೊಂಡಿರುವ ಭಾರತ ಜಾಗತಿಕ ಮಟ್ಟದಲ್ಲಿ ಚೀನೀ ಪ್ರಭಾವವನ್ನು ಕಡಿಮೆ ಮಾಡುತ್ತಿದೆ. ಇದಕ್ಕಾಗಿ ಅಮೆರಿಕ, ಆಸ್ಟ್ರೇಲಿಯಾ, ಜಪಾನ್​ಗಳೊಂದಿಗೆ ಮೋದಿ ನಡೆಸಿದ ಮಾತಿನ ಕಸರತ್ತ...

ಜೈ ಶೇಗುಣಸಿ ದಿನದ ಸುದ್ದಿ... ದಿ: 08-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 08-08-18 ** ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖಂಡ ಎಂ.ಕರುಣಾನಿಧಿ ಇನ್ನಿಲ್ಲ. ಗಣ್ಯರ ಸಂತಾಪ ** 80 ಶಾಸಕರನ್ನು ಸಂಪರ್ಕಿಸಿದ್ದಾರೆ ಬಿಜೆಪಿ ಮಂದಿ: ದಿನೇಶ್​ ಗುಂಡೂರಾವ್​ ಆರೋಪ ** ಸರ್ಕಾರ ಅದಾಗೇ ಬೀಳೋವರ್ಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ ** ಪ್ರಜ್ವಲ್ ರೇವಣ್ಣ ಸ್ಪರ್ಧೆ: ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ಸಚಿವ ಪುಟ್ಟರಾಜು ** ಪ್ರಧಾನಿ ಮೋದಿ ಬಳಿ ಮಾತನಾಡೋ ತಾಕತ್ ಬಿಜೆಪಿಯವ್ರಿಗೆ ಇಲ್ಲ- ಪ್ರಿಯಾಂಕ್ ಖರ್ಗೆ ** ಕನ್ನಡ ಭಾಷೆಯನ್ನು ಯುನೆಸ್ಕೊ ಬುಕ್ ಆಫ್ ರೆಕಾರ್ಡ್​ಗೆ ಸೇರಿಸಲು ವೀರಪ್ಪ ಮೊಯ್ಲಿ ಒತ್ತಾಯ ** ನೀವು ಸೂಟು-ಬೂಟು ಹಾಕಿರುವ ಮಾಣಿಯಂತೆ ಕಾಣುತ್ತೀರಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟಾಂಗ್ ** ಗಡಿ ನುಸುಳುವ ಉಗ್ರರ ಯತ್ನ ವಿಫಲ: ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮ ** ಮುಜಾಫರ್​ಪುರ​ ​ ಶೆಲ್ಟರ್​ ಹೋಂ ಅತ್ಯಾಚಾರ ಪ್ರಕರಣ: ಮುಖ್ಯಮಂತ್ರಿ ನಿತೀಶ್​ ಕುಮಾರ್​ಗೆ ಸುಪ್ರೀಂ ತರಾಟೆ ** ಮಹಿಳೆ, ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ಮೋದಿ ಮೌನ: ರಾಹುಲ್​ ಗಾಂಧಿ ಅಸಮಾಧಾನ ** ಕ್ರಿಕೆಟ್: ಸಿರಾಜ್ ದಾಳಿಗೆ ಆಫ್ರಿಕನ್ನರ ಪೆವಿಲಿಯನ್ ನಡೆ; ಮೊದಲ ಟೆಸ್ಟ್​ನಲ್ಲಿ ಭಾರತ ಎ ತಂಡಕ್ಕೆ ಜಯ

ಜೈ ಶೇಗುಣಸಿ ದಿನದ ಸುದ್ದಿ... ದಿ: 07-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 07-08-18 ** ಎತ್ತಿನಹೊಳೆ ಯೋಜನೆಯ 527 ಕೆರೆಗಳ ಹೂಳೆತ್ತಲು ಸಿಎಂ ಕುಮಾರಸ್ವಾಮಿ ಸೂಚನೆ ** ರಾಹುಲ್ ಪ್ರಧಾನಿ ಮೋದಿ ಅಪ್ಪಿದ ರೀತಿ ಬಾಲಿಶವಾಗಿತ್ತು: ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ** ಮುಂದಿನ ಒಂದು ವರ್ಷ ಕಾಲ ಬೆಂಗಳೂರಿನಲ್ಲಿ ಫ್ಲೆಕ್ಸ್ ಬ್ಯಾನರ್ ಬ್ಯಾನ್ ** ರಾಜ್ಯದಲ್ಲಿದ್ದಾರೆ ಸಿಎಂ, ಸೂಪರ್ ಸಿಎಂ, ಸುಪ್ರೀಂ ಸಿಎಂ: ಬಿಜೆಪಿ ಟೀಕೆ ** ನನ್ನ ಜನ್ಮದಿನದಂದು ದಯವಿಟ್ಟು ಯಾವುದೇ ಫ್ಲೆಕ್ಸ್'ಗಳೂ ಬೇಡ: ಉಪ ಮುಖ್ಯಮಂತ್ರಿ ** ಬಸವಣ್ಣ, ಸ್ವಾಮಿ ವಿವೇಕಾನಂದರನ್ನು ಪಿತೂರಿ ಮಾಡಿ ಕೊಲೆ ಮಾಡಲಾಗಿದೆ: ಕೆಎಸ್ ಭಗವಾನ್ ** ರಾಜ್ಯಸಭೆ: ಆ.9ರಂದು ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ** ಕರುಣಾನಿಧಿ ಆರೋಗ್ಯ ಸ್ಥಿತಿ ಮತ್ತೆ ಗಂಭೀರ: ಚೆನ್ನೈನ ಕಾವೇರಿ ಆಸ್ಪತ್ರೆಯ ವೈದ್ಯಾಧಿಕಾರಿ ** ಜಮ್ಮು ಮತ್ತು ಕಾಶ್ಮೀರ: ಕಲಂ35ರ ಮರು ಪರಿಶೀಲನೆ, ಅರ್ಜಿ ವಿಚಾರಣೆ ಮುಂದೂಡಿದ 'ಸುಪ್ರೀಂ' ** ಮತ್ತೆ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ, ನಿಫ್ಟಿ, ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ** 2018ರ ಡಿಸೆಂಬರ್ ಅಂತ್ಯದೊಳಗೆ ಪ್ರಧಾನಮಂತ್ರಿ ಉಜ್ವರ ಯೋಜನೆಯ ಲಾಭ ಪ್ರತೀಯೊಬ್ಬರನ್ನೂ ತಲುಲಿದೆ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿರ್ದೇಶಕ (ಎಲ್'ಪಿಜಿ) ನಿರ್ದೇಶಕ ಕೆ.ಎಂ. ಮಹೇಶ್

ಜೈ ಶೇಗುಣಸಿ ದಿನದ ಸುದ್ದಿ... ದಿ: 06-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 06-08-18 ** ಜೆಡಿಎಸ್​ ನೂತನ ರಾಜ್ಯಾಧ್ಯಕ್ಷರಾಗಿ ಎಚ್​.ವಿಶ್ವನಾಥ್​ ನೇಮಕ ** ರಾಜ್ಯವನ್ನು ಜಾತಿ ಆಧಾರದ ಮೇಲೆ ಒಡೆಯುವ ಪ್ರಕ್ರಿಯೆ ಆರಂಭ: ಬಿಎಸ್​ವೈ ** ಟಿಕೆಟ್​ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪ್ರಜ್ವಲ್​ ರೇವಣ್ಣ ** ಸುತ್ತೂರು ಶ್ರೀಗಳು ನನ್ನ ಮಕ್ಕಳಿಗೆ ಅವಳಿ ಸೊಸೆಯಂದಿರನ್ನು ಹುಡುಕಲಿ: ಅಶೋಕ್‌ ಖೇಣಿ ** ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಟಿಆರ್‌ಎಸ್‌ ಮೈತ್ರಿ! ** ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ 1, 2 ರೂ.ಗೆ ಕುಡಿಯುವ ನೀರು ** ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ, 2 -3 ದಿನಗಳಲ್ಲಿ ಮನೆಗೆ ವಾಪಸ್‌: ಡಿಎಂಕೆ ** ಬಹುನಿರೀಕ್ಷಿತ ಅಂಚೆ ಪೇಮೆಂಟ್ ಬ್ಯಾಂಕ್‌ಗೆ 21ರಂದು ಪ್ರಧಾನಿ ಚಾಲನೆ ** ಡಿಎಂಕೆ ಹಿರಿಯ ನಾಯಕ ಕರುಣಾನಿಧಿರವರ ಆರೋಗ್ಯ ವಿಚಾರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ** ಜಿಎಸ್ಟಿ ಬಲವರ್ಧನೆ: ಡಿಜಿಟಲ್ ವ್ಯವಹಾರಕ್ಕೆ ಕ್ಯಾಶ್ ಬ್ಯಾಕ್ ಆಫರ್ ** ಕ್ರಿಕೆಟ್-ರಾಜಕೀಯ ಚಾಣಕ್ಯರ ಸಮಾಗಮ: ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿ ಮಾಡಿದ ಅಮಿತ್ ಶಾ ** ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಪಿ.ವಿ.ಸಿಂಧು ** ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರಸ್ಥಾನಕ್ಕೇರಿದ ಕೊಹ್ಲಿ.

ಜೈ ಶೇಗುಣಸಿ ದಿನದ ಸುದ್ದಿ... ದಿ: 05-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 05-08-18 ** ಸ್ಥಳೀಯಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಬೇಡವೇ ಬೇಡ: ಲೋಕಸಭೆಗೆ ಸ್ಫರ್ಧಿಸಲು ಸಿದ್ದುಗೆ 'ಕೈ'ಕಾರ್ಯಕರ್ತರ ಒತ್ತಡ! ** ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನ ಸ್ಥಳ ಇನ್ನೂ ನಿಗದಿಯಾಗಿಲ್ಲ; ನಿರ್ಮಲಾ ಸೀತಾರಾಮನ್ ** ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್‌ ಸ್ಪರ್ಧೆ ಬಗ್ಗೆ ನಿರ್ಧಾರವಿಲ್ಲ: ಶಿವರಾಜ್‌ಕುಮಾರ್‌ ** ಫ್ಲ್ಯಾಶ್​ ಬಳಸದೆ ಅರಮನೆ ಒಳಭಾಗದಲ್ಲಿ ಫೋಟೋ ತೆಗೆಸಿಕೊಳ್ಳಬಹದು: ಮೈಸೂರು ಅರಮನೆ ಮಂಡಳಿ ** ಅಪ್ಪಾಜಿ ಕ್ಯಾಂಟೀನ್ ಸ್ಪರ್ಧೆ: 10 ಜೋಳದ ರೊಟ್ಟಿ, 5 ರಾಗಿ ಮುದ್ದೆ ತಿಂದ ಮಾಗಡಿಯ ಶಾಂತಪ್ಪ ಪ್ರಥಮ ** ಅಮಿತ್ ಷಾ ಇನ್ನು ಪಶ್ಚಿಮ ಬಂಗಾಳದಲ್ಲಿ ತಿಂಗಳಿಗೆ 3 ದಿವಸ ವಾಸ್ತವ್ಯ ** ಇಟಾಲಿಯನ್‌ ಭಾಷೆ ಗೊತ್ತಿದ್ದರೆ ಅದರಲ್ಲೇ ಉತ್ತರಿಸುತ್ತಿದ್ದೆ: ರಾಹುಲ್‌ಗೆ ಅಮಿತ್‌ ಶಾ ತಿರುಗೇಟು ** ಕಾಂಗ್ರೆಸ್ ಕಾರ್ಯಕಾರಿ ಸಮಿತಿ 'ಭ್ರಷ್ಟಾಚಾರದ ಸಮಿತಿ' - ಬಿಜೆಪಿ ** ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್: ಫೈನಲ್ಸ್ ಪ್ರವೇಶಿಸಿದ ಪಿ.ವಿ ಸಿಂಧು ** ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್‌ : ಭಾರತಕ್ಕೆ 31 ರನ್‌ಗಳ ಸೋಲು

ಜೈ ಶೇಗುಣಸಿ ದಿನದ ಸುದ್ದಿ... ದಿ: 04-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 04-08-18 ** ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಹೊರಗುತ್ತಿಗೆ ಸೇವೆ ರದ್ದು ** ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಮನವಿ: ಸಿಎಂ ಕುಮಾರಸ್ವಾಮಿ ** ಬೆಳಗಾವಿ 2ನೇ ರಾಜಧಾನಿ ಘೋಷಣೆಯಿಂದ ಸಿಎಂ ಹಿಂದೆ ಸರಿಯಬಾರದು: ಅಶೋಕ್‌ ಪೂಜಾರಿ ** ಮುಸ್ಲಿಂ ಮಹಿಳೆಯರೇ, ಹಿಂದು ಧರ್ಮಕ್ಕೆ ಬಂದರೆ ಬಾಳು ಸ್ವರ್ಗವಾಗುವುದು: ಸಾಧ್ವಿ ಪ್ರಾಚಿ ** 2019 ರ ಲೋಕಸಭಾ ಚುನಾವಣೆ ಫಲಿತಾಂಶ ನಂತರ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಘೋಷಣೆ ** ಗಣರಾಜ್ಯೋತ್ಸವ ಸಮಾರಂಭದ ವಿಶೇಷ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಗೆ ಭಾರತ ಆಹ್ವಾನ ** ಪ್ರಧಾನಿ ಮೋದಿಯಿಂದ ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲನೆ ** ಕೇಂದ್ರದ ಬಿಜೆಪಿ ಸರ್ಕಾರ ಮಾಧ್ಯಮಗಳನ್ನು ಬೆದರಿಸುತ್ತಿದೆ: ಕಾಂಗ್ರೆಸ್ ** ನೀರವ್‌ ಮೋದಿ ಗಡಿಪಾರು ಕೋರಿ ಬ್ರಿಟನ್ ಗೆ 'ಅಧಿಕೃತ ಅರ್ಜಿ' ಸಲ್ಲಿಸಿದ ಭಾರತ ** ಬಿಎಂಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್‍: ಭಾರತದ ಸೈನಾ ನೆಹ್ವಾಲ್, ರಾಂಕಿರೆಡ್ಡಿಗೆ ಸೋಲು!

ನಾನೇಕೆ ಕೇಳಲಿ ಪ್ರತ್ಯೇಕ ! ನನ್ನನ್ನು ಮಾಡಿ ಸಶಕ್ತ !

ನಾನೇಕೆ ಕೇಳಲಿ ಪ್ರತ್ಯೇಕ ! ನನ್ನನ್ನು ಮಾಡಿ ಸಶಕ್ತ ! ಸಾಲ್ಯಾಗ ಇಲ್ಲ ಶಿಕ್ಷಕ ! ನಮಗೆಲ್ಲಿಂದ ಬರಬೇಕು ಲೆಕ್ಕ ! ಹತ್ತಾರು ಎಕರೆ ಹೊಲ ಹೈತ್ರೀ ಚೊಕ್ಕ ! ಒಟ್ಟ ಬರೊದಿಲ್ಲರೀ ಮಳಿ ಯಾಳ್ಯಾಕ ! ಆ ದೈವದ ಕೃಪ ಇಲ್ಲರಿ ನಮ್ಮ ಮ್ಯಾಲ್ಯಾಕ ? ಸಾಲಗಾರ ತೋರಿ ಸ್ಥಾನ ದಿನಂ ಪ್ರತಿ ನರಲೋಕ ! ಮರೆತೆ ಬಿಟ್ಟಾನ ರೀ ನಮ್ಮ ರಾಜಕೀಯ ನಾಯಕ ! ನಾನೇಕೆ ಕೇಳಲಿ ಪ್ರತ್ಯೇಕ ನನಗೂ ಮಾಡೊ ಸಶಕ್ತ ! ಓಡಿನಿ ಹರದಾರಿ ದೂರ ಸಾಲಿ ಕಲಿಯಾಕ! ಕಲಿಸಿಲ್ಲರಿಯಪ್ಪಾ ಮಾಸ್ತಾರ ಇಂಗಲಿಸ ಮಾತಾಡ್ಲಿಕ ! ಪಜೀತಿ ಪಟ್ಟು ಪದವಿ ಪಡೆದು ನಡೆದಿನೋ ಪಟ್ಟಣಕ ! ಹೋಗಿನ್ರೀಯಪ್ಪಾ ತಿಳಿಯದ ಊರಿಗೆ ದುಡಿಯಾಕ ! ಹೊರಗ ದಬ್ಯಾರೋ ಇಂಗಲಿಸ ತಿಳಿಯದಕ ! ನಮ್ಮೂರಲ್ಲಿ ಕೆಲಸ ಇದ್ರ ಬರ್ತಿರಲಿಲ್ಲಾರೀ ನಾ ಇಲ್ಲಿ ಸಾಯಾಕ ! ನಮಗೂ ಕೋಡ್ರೀ ಕಾಯಕ, ನಾನೇಕೆ ಬೇಡಲಿ ಪ್ರತ್ಯೇಕ ! ನಮ್ಮ ಜನ ಬಿದ್ದಾರೋ ಜೋತಾ ಅಜ್ಞಾನಕ ಕೊಡಿಸೋ ರಾಮನಗರದ ನಾಯಕ, ನಮ್ಮ ಜನಕ ಜ್ಞಾನದ ಬೆಳಕ ! ಅನಾರೋಗ್ಯದಿಂದ ಸಾಯ್ತಾರೋ ನನ್ನ ಜನ ! ಕಟ್ಟಿಸ್ರೋ ನಮ್ಮ ಭಾಗಕ್ಕ ದೊಡ್ಡ ದಾವಖಾನ! ಉದ್ದರಿಸೊ ನಮ್ಮ ಜೀವನ! ತಾನಾಗಿ ಹೆಚ್ಚುವುದು ನಮ್ಮ ತಲಾ ವರಮಾನ ! ಕೇಳೋದಿಲ್ಲ ಪ್ರತ್ಯೇಕ ಜೀವ ಇರೋತನ ! ಕಟ್ಟಿಸಿರಿ ಕನ್ನಡಾಂಬೆಗೆ ದೇವಾಲಯ ! ಇಟ್ಟಿಲ್ರಲ್ಲೋ ಕನ್ನಡತಿಗೆ ಒಂದು ಶೌಚಾಲಯ ! ದೇವಾಲಯ ಕಟ್ಟಿಸಿ ಮಾಡಿರಿ ಹೆಣ್ಣಗೆ ಸನ್ಮಾನ ! ಶೌಚಾಲಯ ಕಟ್ಟಿಸದೆ ಹೆ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 03-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 03-08-18 ** ಉ.ಕ ಬಂದ್ ಗೆ ನೀರಸ ಪ್ರತಿಕ್ರಿಯೆ. ಸಿಕ್ಕಿಲ್ಲ ಜನ ಬೆಂಬಲ ** ಉ.ಕ ಅಭಿವೃದ್ಧಿಗೆ ನಾನು ಬದ್ಧ: ಸಿಎಂ ಕುಮಾರಸ್ವಾಮಿ. ** ಮುಖ್ಯಮಂತ್ರಿ ಪ್ರಚೋದನಾತ್ಮಕ ಹೇಳಿಕೆಯೇ ಬಂದ್​ಗೆ ಕಾರಣ: ಜಗದೀಶ್ ಶೆಟ್ಟರ್​ ** ನನ್ನ ಅಥವಾ ಕುಮಾರಸ್ವಾಮಿ ಜೀವಿತಾವಧಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸಾಧ್ಯವಿಲ್ಲ: ದೇವೇಗೌಡ ** ಆದಾಯ ತೆರಿಗೆ ವಂಚನೆ: ಡಿಕೆ ಶಿವಕುಮಾರ್ ಗೆ ಷರತ್ತುಬದ್ದ ಜಾಮೀನು ** ಬೆಳಗಾವಿ ಎರಡನೇ ರಾಜಧಾನಿ ಹೇಳಿಕೆ: ಕುಮಾರಸ್ವಾಮಿ ವಿರುದ್ಧ ಶಿವಸೇನೆ ಆಕ್ರೋಶ ** ಆದಾಯ ಸ್ಥಿರವಾದ ನಂತರವೇ ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನ: ಸುಶಿಲ್ ಮೋದಿ ** ಭಾರತೀಯ ಮೂಲದ ಅಕ್ಷಯ್ ವೆಂಕಟೇಶ್ ಗೆ "ಗಣಿತದ ನೋಬೆಲ್" ಫೀಲ್ಡ್ಸ್ ಮೆಡಲ್ ಪ್ರಶಸ್ತಿ ** ಹಲಾಲ್‌ನಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ಹುಡುಗಿಯರು ಹಿಂದೂಗಳನ್ನು ಮದುವೆಯಾಗಿ: ಸಾಧ್ವಿ ಪ್ರಾಚಿ ** ಕುಪ್ವಾರ ಎನ್ ಕೌಂಟರ್: ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರು ಹತ ** ಭಾರತ-ಇಂಗ್ಲೆಂಡ ಮೊದಲ ಟೆಸ್ಟ್: ಇಂಗ್ಲೆಂಡ್ 287ಕ್ಕೆ ಆಲೌಟ್, ಕೊಹ್ಲಿ ಶತಕ, ಭಾರತ 274ಕ್ಕೆ ಆಲೌಟ್

ಜೈ ಶೇಗುಣಸಿ ದಿನದ ಸುದ್ದಿ... ದಿ: 02-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 02-08-18 ** ಪ್ರತ್ಯೇಕ ರಾಜ್ಯ ಹೋರಾಟ ಉತ್ತರ ಕರ್ನಾಟಕ ಬಂದ್ ರದ್ದು, ಕೆಲವೆಡೆ ಸಾಂಕೇತಿಕ ಧರಣಿ ಮಾತ್ರ. ** ಅಭಿವೃದ್ಧಿ ವಿಚಾರದಲ್ಲಿ ಸಂದೇಹವಿದ್ದರೆ ಬಿಎಸ್‌ವೈ ಚರ್ಚೆಗೆ ಬರಲಿ: ಎಚ್‌.ಡಿ.ರೇವಣ್ಣ ** ಮಧ್ಯಾಹ್ನದೊಳಗೆ ಬ್ಯಾನರ್​ ತೆರವುಗೊಳಿಸಿ: ಹೈಕೋರ್ಟ್ ಖಡಕ್​ ಸೂಚನೆ ** ನಮ್ಮ ಪ್ರೀತಿಯ ಕರ್ನಾಟಕ ತುಂಡು-ತುಂಡಾಗುವುದು ಬೇಡ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ** ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಬಿಜೆಪಿ ಪ್ರಾಯೋಜಿತ: ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ ಆರೋಪ ** ಅಲ್ಪಾವಧಿ ಬಡ್ಡಿ ದರ ಹೆಚ್ಚಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌, ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳು ತುಟ್ಟಿ. ** ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್‌ ** ಡೊಕ್ಲಾಮ್ ನಲ್ಲಿ ಚೀನಾ ಪಡೆಗಳ ನಿಯೋಜನೆ ಬಗ್ಗೆ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು: ಕಾಂಗ್ರೆಸ್ ** ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ: ಮಮತಾ ಬ್ಯಾನರ್ಜಿ ** ಇಮ್ರಾನ್​ ಖಾನ್​ ಪದಗ್ರಹಣ ಸಮಾರಂಭಕ್ಕೆ ಕ್ರಿಕೆಟ್​ ಗೆಳೆಯರು, ಅಮೀರ್​ ಖಾನ್​ಗೆ ಆಹ್ವಾನ ** ಭಾರತ-ಇಂಗ್ಲೆಂಡ ಮೊದಲ ಟೆಸ್ಟ್: ಇಂಗ್ಲೆಂಡ್ 9ವಿಕೆಟ್ ನಷ್ಟಕ್ಕೆ 285ರನ್, ಅಶ್ವಿನ್ ಗೆ 4ವಿಕೆಟ್.

ಜೈ ಶೇಗುಣಸಿ ದಿನದ ಸುದ್ದಿ.. ದಿ: 01-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 01-08-18 ** ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಮಾಡಲು ಸಿದ್ಧ: ಎಚ್​ಡಿಕೆ ** ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಎರಡು ದಿನ ಕಳೆಯುತ್ತೇನೆ: ಸಿಎಂ ಎಚ್​ಡಿಕೆ ** ಉತ್ತರ ಕರ್ನಾಟಕ ಪ್ರತ್ಯೇಕ ಧ್ವಜ ಹಾರಿಸಲು ಮುಂದಾದ ಹೋರಾಟಗಾರರು ** ಕೊನೆಗೂ ಜಿಲ್ಲಾ ಉಸ್ತುವಾರಿಗಳ ನೇಮಕ. ಬೆಳಗಾವಿಗೆ ಜಾರಕಿಹೊಳಿ ಉಸ್ತುವಾರಿ. ** ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯೇ ಪ್ರತ್ಯೇಕತೆ ಕೂಗಿಗೆ ಕಾರಣ: ಯಡಿಯೂರಪ್ಪ ** ಎಂ. ಕರುಣಾನಿಧಿ ಆರೋಗ್ಯ ವಿಚಾರಿಸಿದ ರಾಹುಲ್‌ ಗಾಂಧಿ ** ಮಲ್ಯರನ್ನು ಯಾವ ಜೈಲಿನಲ್ಲಿಡುತ್ತೀರೋ ಅದರ ವಿಡಿಯೋ ಕಳುಹಿಸಿ: ಲಂಡನ್​ ಕೋರ್ಟ್​ ** ಮರಾಠ ಮೀಸಲು ಹೋರಾಟಕ್ಕೆ ಬೆಂಬಲ: ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 5ಕ್ಕೆ ಏರಿಕೆ!