ಟಿ20ಯಲ್ಲಿ ಭಾರತಕ್ಕೆ ಅತಿದೊಡ್ಡ ಗೆಲುವು... ಸರಣಿ ಗೆದ್ದ ಕೊಹ್ಲಿ ಪಡೆಯಿಂದ ಏನೆಲ್ಲಾ ದಾಖಲೆ!

ಜೈ ಶೇಗುಣಸಿ ಸುದ್ದಿ...


ಡಬ್ಲಿನ್​ : ಕ್ರಿಕೆಟ್​ ಶಿಶು ಐರ್ಲೆಂಡ್​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಬರೋಬ್ಬರಿ 143ರನ್​ಗಳ ಗೆಲುವು ದಾಖಲಿಸಿ 2 ಪಂದ್ಯಗಳ ಸರಣಿಯನ್ನ ವೈಟ್​ ವಾಶ್​ ಮಾಡಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ.
ಅಂತಾರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಟೀಂ ಇಂಡಿಯಾ ಸಾಧಿಸಿರುವ ಅತಿದೊಡ್ಡ ಗೆಲುವು ಇದಾಗಿದೆ. ಭಾರತ ನೀಡಿದ್ದ 214ರನ್​ಗಳ ಟಾರ್ಗೆಟ್​​ ಬೆನ್ನತ್ತಿದ್ದ ಐರ್ಲೆಂಡ್​ ತಂಡ 12.3 ಓವರ್​ಗಳಲ್ಲಿ ಕೇವಲ 70ರನ್​ಗಳಿಸಲು ಮಾತ್ರ ಶಕ್ತವಾಯಿತು. ರಾಹುಲ್​ ಬ್ಯಾಟಿಂಗ್​ ಮಿಂಚು, ಬೌಲಿಂಗ್​ನಲ್ಲಿ ಸ್ವಿನ್ನರ್​ಗಳ ಅಬ್ಬರ, ಐರ್ಲೆಂಡ್​ ವಿರುದ್ಧದ ಟಿ20 ಸರಣಿ ಕೈವಶ
ಟೀಂ ಇಂಡಿಯಾ ಪರ ಆರಂಭಿಕ ಕೆಎಲ್​ ರಾಹುಲ್​ 70ರನ್​(36ಎಸೆತ,3ಬೌಂಡರಿ,6ಸಿಕ್ಸ್​), ಸುರೇಶ್​ ರೈನಾ 69ರನ್​(45ಎಸೆತ,5ಬೌಂಡರಿ,3ಸಿಕ್ಸ್​), ಹಾಗೂ ಹಾರ್ದಿಕ್​ ಪಾಂಡ್ಯ 32ರನ್​(9ಎಸೆತ,1ಬೌಂಡರಿ,4ಸಿಕ್ಸ್​) ಸಿಡಿಸಿದರು.

ಏನೆಲ್ಲಾ ದಾಖಲೆ ನಿರ್ಮಾಣ
ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಅನೇಕ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಟಿ20 ಪಂದ್ಯವೊಂದರಲ್ಲಿ ಭಾರತಕ್ಕೆ ಅತಿದೊಡ್ಡ ಗೆಲುವು ಇದಾಗಿದೆ. ಇದರ ಜತೆಗೆ ಟಿ20 ಪಂದ್ಯವೊಂದರಲ್ಲಿ ಭಾರತದ ವಿರುದ್ಧ ಐರ್ಲೆಂಡ್​ ತಂಡ ಕನಿಷ್ಠ ಮೊತ್ತಕ್ಕೆ ಆಲೌಟ್​ ಆಗಿರುವ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ತಂಡ ಕೇವಲ 80ರನ್​ಗಳಗೆ ಆಲೌಟ್​ ಆಗಿತ್ತು.
ಟಿ20 ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ಸ್ಕೋರ್​​ಗಳಿಸಿ ಆಸ್ಟ್ರೇಲಿಯಾ ದಾಖಲೆ ಅಳಿಸಿ ಹಾಕಿರುವ ಭಾರತ, ದಕ್ಷಿಣ ಆಫ್ರಿಕಾ ದಾಖಲೆ ಸರಿಗಟ್ಟಿದೆ. ಆಸ್ಟ್ರೇಲಿಯಾ 10 ಟಿ20 ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ಸ್ಕೋರ್​ ಮಾಡಿತ್ತು. ಅದನ್ನ ಅಳಿಸಿ ಹಾಕಿರುವ ಭಾರತ 11 ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ಸ್ಕೋರ್​ ಮಾಡಿ ದಕ್ಷಿಣ ಆಫ್ರಿಕಾ ದಾಖಲೆ ಸರಿಗಟ್ಟಿದೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18