ಹೈಕೋರ್ಟ್​ ಸೂಚನೆಯಂತೆ ಮುಷ್ಕರ ಕೈಬಿಟ್ಟ ಮೆಟ್ರೋ ನೌಕರರು..

ಜೈ ಶೇಗುಣಸಿ ಸುದ್ದಿ..

ಮೆಟ್ರೋ ನೌಕರರ ಸಂಘ ಹೈಕೋರ್ಟ್​ ಸೂಚನೆ ಮೇರೆಗೆ ಮುಷ್ಕರ ಕೈಬಿಟ್ಟಿದೆ. ಮುಂದಿನ 10 ದಿನಗಳವರೆಗೆ ಯಾವುದೇ ಪ್ರತಿಭಟನೆ ಮಾಡದಿರುವಂತೆ ಕೋರ್ಟ್​ ನೀಡಿರುವ ಸೂಚನೆಗೆ ಮೆಟ್ರೋ ಯೂನಿಯನ್​ ಸಹಮತ ವ್ಯಕ್ತಪಡಿಸಿದೆ.
ಎಸ್ಮಾ ರದ್ದುಗೊಳಿಸುವಂತೆ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು 10 ದಿನಗಳ ಗಡುವು ನೀಡಿ ಸರ್ಕಾರ, ಬಿಎಂಆರ್​ಸಿಎಲ್​, ನೌಕರರ ಸಂಘಕ್ಕೆ ತಾಕೀತು ಮಾಡಿದೆ.
ನಿಮ್ಮೆಲ್ಲರ ಭಿನ್ನಾಭಿಪ್ರಾಯಗಳಿಂದ ಜನಸಾಮಾನ್ಯರು ಸಮಸ್ಯೆ ಎದುರಿಸಬಾರದು. ಸದ್ಯಕ್ಕೆ ಮುಷ್ಕರ ಕೈಬಿಟ್ಟು ಸಂಧಾನ ಮಾಡಿಕೊಳ್ಳಿ ಎಂದು ಹೇಳಿರುವ ನ್ಯಾಯಾಲಯ ಮುಂದಿನ ಅರ್ಜಿ ವಿಚಾರಣೆಯನ್ನು ಜೂ.19ಕ್ಕೆ ಮುಂದೂಡಿದೆ.

Comments

Popular posts from this blog

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18

"ಜೈ ಶೇಗುಣಸಿ" ದಿನದ ಸುದ್ದಿ.. 31-5-18