ಕೊಡಗಿನ 575ಸಂತ್ರಸ್ತ ಕುಟುಂಬಕ್ಕೆ ನೆರವಾಗಲಿದೆ ಶೇಗುಣಸಿ ಗ್ರಾಮಸ್ಥರ ಕೊಡುಗೆ..
ಜೈ ಶೇಗುಣಸಿ ಸುದ್ದಿ..
ಶೇಗುಣಸಿ ಗ್ರಾಮದ ಗ್ರಾಮಸ್ಥರು ಕೊಡಗಿನ ನೆರೆ ಹಾವಳಿಗೆ ತತ್ತರಿಸಿದ ಸಂತ್ರಸ್ತರಿಗಾಗಿ ಅಗತ್ಯ ವಸ್ತು ಮತ್ತು ಆಹಾರ ಧಾನ್ಯ ಸಂಗ್ರಹಣೆ ಕಾರ್ಯಕ್ಕೆ ತೆರೆ ಬಿದ್ದಿದ್ದು ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾಗಿದೆ.ಕೊಡಗಿನ 575ಕುಟುಂಬಗಳಿಗೆ ನೆರವಾಗುವಂತೆ, ಆಹಾರ ಧಾನ್ಯವನ್ನು ಹಂಚಲು ಸರಳವಾಗುವಂತೆ 575ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಕಿಟ್ ಗಳು ಸಿದ್ದಗೊಂಡಿದೆ. ಪ್ರತಿ ಆಹಾರ ಧಾನ್ಯದ ಕಿಟ್ ನಲ್ಲಿ 2ಕೆ.ಜಿ ಬೇಳೆ, 2ಕೆ.ಜಿ ಗೋಧಿ ಹಿಟ್ಟು, 2ಕೆ.ಜಿ ಸಕ್ಕರೆ, 10ಕೆ.ಜಿ ಅಕ್ಕಿ, 1ಸೀರೆ, 1ಹಲ್ಲುಜ್ಜುವ ಬ್ರಶ್ ಮತ್ತು ಪೇಸ್ಟ್ ಇವೆ.
ಸಂಗ್ರಹಿಸಿದ ಒಟ್ಟು ಆಹಾರ ಧಾನ್ಯದ ತೂಕ 90ಕ್ವಿಂಟಲ್ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ಯಾಕ್ ಮಾಡುವ ಸಂದರ್ಭದಲ್ಲಿ ಕಲ್ಮೇಶ ಯಲಡಗಿ, ಅಶೋಕ ಅಮ್ಮಣಗಿ, ಮಹಾಂತೇಶ ಶಾನವಾಡ, ವಿವೇಕ ನಾರಗೊಂಡ, ಕುಮಾರ ಹೊರಟ್ಟಿ, ಶ್ರಿಶೈಲ ಮಠಪತಿ ಸೇರಿದಂತೆ ಅನೇಕರು ಇದ್ದರು.


Comments
Post a Comment