ರಾಯಬಾಗ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಬೈಕ್ ನುಚ್ಚುನೂರು..
ಜೈ ಶೇಗುಣಸಿ ಸುದ್ದಿ...
ರಾಯಬಾಗ ರೈಲ್ವೆ ನಿಲ್ದಾಣದ ಬಳಿ ಗುರುವಾರ ಬೆಳಗ್ಗೆ 9 ಗಂಟೆಗೆ ಬೈಕ್ ಮೂಲಕ ರೈಲು ಹಳಿ ದಾಟುವ ಸಾಹಸಕ್ಕೆ ಮುಂದಾದ ವ್ಯಕ್ತಿ ರೈಲು ಹತ್ತಿರ ಬರುತ್ತಿದ್ದಂತೆ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ರೈಲಿನ ಚಕ್ರಕ್ಕೆ ಸಿಲುಕಿದ ಬೈಕ್ ನುಚ್ಚುನೂರಾಗಿದೆ.
ಮಿರಜ್‌ದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ರಾಯಬಾಗ ರೈಲ್ವೆ ನಿಲ್ದಾಣದ ಸಮೀಪ ಬರುತ್ತಿದ್ದಂತೆಯೇ ಇಂಥದೊಂದು ಅವಘಡ ಸಂಭವಿಸಿದ್ದು, ಭಾರಿ ಸದ್ದಿಗೆ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ.
ಚಕ್ರಕ್ಕೆ ಸಿಲುಕಿದ ಬೈಕ್ ರೈಲಿನ ಜತೆ ಸುಮಾರು 300 ಮೀಟರ್‌ವರೆಗೂ ಎಳೆದುಕೊಂಡು ಹೋಗಿದೆ. ಈ ಘಟನೆಯಿಂದ ರೈಲು ನಿಲ್ದಾಣದ ಪ್ಲಾಟ್‌ಾರಂಗೆ ತೀವ್ರ ಹಾನಿಯಾಗಿದೆ. ಬೈಕ್‌ನ ಅವಶೇಷಗಳನ್ನು ತೆಗೆಯಲು ರೈಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ರೈಲಿಗೆ ಬೈಕ್ ಸಿಕ್ಕಿದ್ದರಿಂದ ಮಿರಜ್-ಹುಬ್ಬಳ್ಳಿ ಪ್ಯಾಸೆಂಜರ್ ರೈಲನ್ನು ರಾಯಬಾಗ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಇದರಿಂದ ರೈಲು ಪ್ರಯಾಣ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು. ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Comments
Post a Comment