ಜೈ ಶೇಗುಣಸಿ ದಿನದ ಸುದ್ದಿ... ದಿ: 17-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 17-08-18
** ಇಹಲೋಕ ಯಾತ್ರೆ ಮುಗಿಸಿದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ; ಗಣ್ಯರಿಂದ ಸಂತಾಪ. ಇಂದು 10ಗಂಟೆಯಿಂದ ಸಾರ್ವಜನಿಕ ದರ್ಶನ, ಸಂಜೆ ಅಂತ್ಯಕ್ರಿಯೆ.** ಅಟಲ್ ಅಸ್ತಂಗತ: ಇಂದು ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ, 7ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರ್ಕಾರ.
** ಅಟಲ್ ಜಿ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ: ಎಚ್.ಡಿ.ದೇವೇಗೌಡ
** ಗುರುಗಳನ್ನು ಕಳೆದುಕೊಂಡು ಶೂನ್ಯನಾಗಿರುವೆ: ಪ್ರಧಾನಿ ಮೋದಿ.
** ಭಾರತ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ: ರಾಹುಲ್ ಗಾಂಧಿ.
** ನಮ್ಮಿಬ್ಬರದು 65 ವರ್ಷಗಳ ಸ್ನೇಹ :ಭಾವುಕರಾದ ಅಡ್ವಾಣಿ
** ರಾಜ್ಯಾದ್ಯಂತ ವರುಣನ ಅಬ್ಬರ: ಅಪಾಯ ಮಟ್ಟ ಮೀರಿದ ನದಿಗಳು, ಹಲವಡೆ ಜಲಾವೃತ!
** ಬೆಂಗಳೂರಿನಲ್ಲಿ ಭಾರೀ ಶಬ್ಧ: ಭೂಕಂಪದ ಭೀತಿಯಲ್ಲಿ ಜನತೆ
** ಏರ್ ಷೋ ವಿವಾದ: ಪ್ರಜೆಗಳ ಭಾವನೆಯನ್ನು ಕೇಂದ್ರ ಗೌರವಿಸುತ್ತದೆ ಎಂದು ಭಾವಿಸಿದ್ದೇನೆ- ಕುಮಾರಸ್ವಾಮಿ
** ಬಿಜೆಪಿ, ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿರುವ ಸಿಎಂ: ಸಿ.ಟಿ.ರವಿ ಆರೋಪ
** ಗೌರಿ ಹಂತಕರಲ್ಲಿ ಐವರು ಶಂಕಿತರಿಂದ ಕಲಬುರ್ಗಿ ಹತ್ಯೆ: ಎಸ್ಐಟಿ
** ಕೇರಳದಲ್ಲಿ ಮಹಾಮಳೆ: 73 ಮಂದಿ ಸಾವು, ರಕ್ಷಣಾ ಕಾರ್ಯಾಚರಣೆಗೆ ನೌಕಾಪಡೆ
** ಎರಡು ನಿಮಿಷಗಳ ಮೌನ ಆಚರಿಸಿ ವಾಡೇಕರ್‌ಗೆ ಗೌರವ ಸೂಚಿಸಿದ ಟೀಮ್ ಇಂಡಿಯಾ ಆಟಗಾರರು
Comments
Post a Comment