ಜೈ ಶೇಗುಣಸಿ ದಿನದ ಸುದ್ದಿ... ದಿ: 15-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 15-08-18
** ಇಂದು 72 ನೇ ಸ್ವಾತಂತ್ರ್ಯ ದಿನಾಚರಣೆ: ಪ್ರಧಾನಿ ನರೇಂದ್ರ ಮೋದಿಯಿಂದ ಐತಿಹಾಸಿಕ ಕೆಂಪು ಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ, ಧ್ವಜಾರೋಹಣ. ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಫಿಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ.** ದೇಶ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: ನಮ್ಮ ರೈತರು ಲಕ್ಷಾಂತರ ಕೋಟಿ ಜನರಿಗೆ ಆಹಾರವನ್ನು ಉತ್ಪಾದಿಸುತ್ತಾರೆ. ರೈತರ ಆದಾಯ ದ್ವಿಗುಣಗೊಳ್ಳಬೇಕಿದೆ. ಅನ್ನದಾತರ ಏಳಿಗಾಗಿ ನಾವು ಇಂದು ಶ್ರಮಿಸುವ ಮೂಲಕ ಸ್ವಾತಂತ್ರ್ಯ ಯೋಧರ ಭಾರತದ ಕನಸುಗಳು ನನಸು ಮಾಡಬೇಕಾಗಿದೆ.
** ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಶೇಗುಣಸಿ ರೈತ ಕಲ್ಮೇಶ ಯಲಡಗಿ ಸೇರಿದಂತೆ ಸಾಧಕ ರೈತರಿಗೆ ವಿಶೇಷ ಆಹ್ವಾನ.
** ಮಹದಾಯಿ ನ್ಯಾಯಮಂಡಳಿ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ಸಹಿ: ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು
** ಮಹದಾಯಿಯಲ್ಲಿ ನ್ಯಾಯ ಸಿಕ್ಕಿಲ್ಲ, ಸುಪ್ರೀಂಗೆ ಮೇಲ್ಮನವಿ ಸಲ್ಲಿಸುತ್ತೇವೆ: ಡಿಕೆಶಿ
** ಮಹದಾಯಿ ತೀರ್ಪಿನ ಕೂಲಂಕಷ ಅಧ್ಯಯನ ನಂತರ ಮುಂದಿನ ನಡೆ: ಸಿಎಂ ಕುಮಾರಸ್ವಾಮಿ
** ಮಹದಾಯಿ ನ್ಯಾಯಾಧಿಕರಣದ ತೀರ್ಪು ಸ್ವಾಗತಾರ್ಹ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ
** ಸಿಎಂ ಆಗುವ ಕನಸಿಲ್ಲ, ಎಚ್ಡಿಕೆ ರಾಷ್ಟ್ರ ರಾಜಕಾರಣಕ್ಕೆ ಹೋಗೋದಿಲ್ಲ: ರೇವಣ್ಣ
** ಕುಕ್ಕೆ ಸುಬ್ರಹ್ಮಣ್ಯನಿಗೆ ಒಣದ್ರಾಕ್ಷಿ ತುಲಾಭಾರ ಸೇವೆ ಮಾಡಿದ ಸಿಎಂ
** ಇಬ್ಬರು ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದ ಭಾರತದ ಸೈನಿಕರು
Comments
Post a Comment