ನಾನೇಕೆ ಕೇಳಲಿ ಪ್ರತ್ಯೇಕ ! ನನ್ನನ್ನು ಮಾಡಿ ಸಶಕ್ತ !

ನಾನೇಕೆ ಕೇಳಲಿ ಪ್ರತ್ಯೇಕ !
ನನ್ನನ್ನು ಮಾಡಿ ಸಶಕ್ತ !
ಸಾಲ್ಯಾಗ ಇಲ್ಲ ಶಿಕ್ಷಕ !
ನಮಗೆಲ್ಲಿಂದ ಬರಬೇಕು ಲೆಕ್ಕ !

ಹತ್ತಾರು ಎಕರೆ ಹೊಲ ಹೈತ್ರೀ ಚೊಕ್ಕ !
ಒಟ್ಟ ಬರೊದಿಲ್ಲರೀ ಮಳಿ ಯಾಳ್ಯಾಕ !
ಆ ದೈವದ ಕೃಪ ಇಲ್ಲರಿ ನಮ್ಮ ಮ್ಯಾಲ್ಯಾಕ ?
ಸಾಲಗಾರ ತೋರಿ ಸ್ಥಾನ ದಿನಂ ಪ್ರತಿ ನರಲೋಕ !
ಮರೆತೆ ಬಿಟ್ಟಾನ ರೀ ನಮ್ಮ ರಾಜಕೀಯ ನಾಯಕ !
ನಾನೇಕೆ ಕೇಳಲಿ ಪ್ರತ್ಯೇಕ ನನಗೂ ಮಾಡೊ ಸಶಕ್ತ !

ಓಡಿನಿ ಹರದಾರಿ ದೂರ ಸಾಲಿ ಕಲಿಯಾಕ!
ಕಲಿಸಿಲ್ಲರಿಯಪ್ಪಾ ಮಾಸ್ತಾರ ಇಂಗಲಿಸ ಮಾತಾಡ್ಲಿಕ !
ಪಜೀತಿ ಪಟ್ಟು ಪದವಿ ಪಡೆದು ನಡೆದಿನೋ ಪಟ್ಟಣಕ !
ಹೋಗಿನ್ರೀಯಪ್ಪಾ ತಿಳಿಯದ ಊರಿಗೆ ದುಡಿಯಾಕ !
ಹೊರಗ ದಬ್ಯಾರೋ ಇಂಗಲಿಸ ತಿಳಿಯದಕ !
ನಮ್ಮೂರಲ್ಲಿ ಕೆಲಸ ಇದ್ರ ಬರ್ತಿರಲಿಲ್ಲಾರೀ ನಾ ಇಲ್ಲಿ ಸಾಯಾಕ !
ನಮಗೂ ಕೋಡ್ರೀ ಕಾಯಕ,
ನಾನೇಕೆ ಬೇಡಲಿ ಪ್ರತ್ಯೇಕ !

ನಮ್ಮ ಜನ ಬಿದ್ದಾರೋ ಜೋತಾ ಅಜ್ಞಾನಕ
ಕೊಡಿಸೋ ರಾಮನಗರದ ನಾಯಕ,
ನಮ್ಮ ಜನಕ ಜ್ಞಾನದ ಬೆಳಕ !
ಅನಾರೋಗ್ಯದಿಂದ ಸಾಯ್ತಾರೋ ನನ್ನ ಜನ !
ಕಟ್ಟಿಸ್ರೋ ನಮ್ಮ ಭಾಗಕ್ಕ ದೊಡ್ಡ ದಾವಖಾನ!
ಉದ್ದರಿಸೊ ನಮ್ಮ ಜೀವನ!
ತಾನಾಗಿ ಹೆಚ್ಚುವುದು ನಮ್ಮ ತಲಾ ವರಮಾನ !
ಕೇಳೋದಿಲ್ಲ ಪ್ರತ್ಯೇಕ ಜೀವ ಇರೋತನ !

ಕಟ್ಟಿಸಿರಿ ಕನ್ನಡಾಂಬೆಗೆ ದೇವಾಲಯ !
ಇಟ್ಟಿಲ್ರಲ್ಲೋ ಕನ್ನಡತಿಗೆ ಒಂದು ಶೌಚಾಲಯ !
ದೇವಾಲಯ ಕಟ್ಟಿಸಿ ಮಾಡಿರಿ ಹೆಣ್ಣಗೆ ಸನ್ಮಾನ !
ಶೌಚಾಲಯ ಕಟ್ಟಿಸದೆ ಹೆಣ್ಣು ಕುಲಕ್ಕೆ ಮಾಡಿರಿ ಅವಮಾನ !
ಓ ಮಂಡ್ಯದ ನಾಯಕ ಕೊಡು ಉ.ಕ.ಕ್ಕೆ ಅನುಧಾನ !
ನಾನೇಕೆ ಮಾಡಲಿ ಪ್ರತ್ಯೇಕ ತೀರ್ಮಾನ !

ನಮ್ಮ ಶಾಸಕರು ಬೇಕು ನಿಮ್ಮ ಬಲಕ್ಕ!
ಸಚಿವ ಸ್ಥಾನಕ್ಕಿಲ್ಲ ನಮ್ಮವರು ಲೆಕ್ಕಕ್ಕ!
ಕಾವೇರಿ ಪ್ರೀತಿ ಕರ್ನಾಟಕಕ್ಕ
ಮಹದಾಯಿ , ಕಳಸಾ ಬಂಡುರಿ ಇಲ್ಲಾ ರೀ ನಿಮ್ಮ ಲೆಕ್ಕಕ್ಕ !
ಎಲ್ಲ ಬಂಡವಾಳ ನಿಮ್ಮ ಮೂರು ನಗರಕ್ಕ
ಉತ್ತರ ಕರ್ನಾಟಕ ಇರುವುದುವು ನಿಮ್ಮ ಗುಲಾಮಗಿರಿ ಮಾಡೊಕಾ ?

ಅಖಂಡ ಕರ್ನಾಟಕ ಅಂತಿರಿ !
ಬಜೆಟ್ ಅಲ್ಲಿ ನಮಗ ಭಿಕ್ಷೆ ನೀಡಿರಿ !
ಮಲತಾಯಿ ಭಾವ ಮಾಡಿರಿ !
ಪ್ರತ್ಯೇಕ ಕೂಗಿಗೆ ನಡುಗಿರಿ !

ಕೊಟ್ಟಿರಿ ನಮಗ 371( ಜೆ) ಹೊರಾಟದ ಪ್ರತಿಫಲಕ !
ಇನ್ನು ತಂದಿಲ್ಲ ಅನುಷ್ಠಾನಕ್ಕ !
ನೀವು ಮಾಡಿರೋ ಯಪ್ಪ ಮೂಗಿಗೆ ತುಪ್ಪ ಸವರೋ ಕಾಯಕ..
ಇನ್ನು ಸಿಕ್ಕಲ್ಲ ನಮಗ ಉದ್ಯೋಗ ನ್ಯಾಯಾಕ..
ಹೇ ನಾಯಕ ಕೋಡಿಸೋ ನನಗ ನ್ಯಾಯ,
ನಾನೇಕೆ ಬೇಡಲಿ ಪ್ರತ್ಯೇಕ ರಾಜ್ಯ.

ದೊಡ್ಡ ಪ್ಯಾಕ್ಟರಿ ನಿಮ್ಮ ಮಂಡ್ಯಾಕ.
ದೊಡ್ಡ ವಿಜ್ಞಾನ ಸಂಸ್ಥೆ ನಿಮ್ಮ ಹಾಸನಕ...
ದೊಡ್ಡ ಚಲನ ಚಿತ್ರ ಸಂಸ್ಥೆ ನಿಮ್ಮ ರಾಮನಗರಕ್ಕ.
ಎಲ್ಲ ಕ್ಷೇತ್ರದ ಸಂಸ್ಥೆಗಳು ನಿಮ್ಮ ಭಾಗಕ್ಕ..
ಉ.ಕರ್ನಾಟಕ ಜನ ಏನು ನಿಮ್ಮ ಸೇವಕ?
😥😢😢😢😢😢

                                                --(ಸಂಗ್ರಹ)

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18