ಬತ್ತಿದ ಕೃಷ್ಣೆಯ ಒಡಲು, ಹನಿ ನೀರಿಗೂ ತತ್ವಾರ..

ಬತ್ತಿದ ಕೃಷ್ಣೆಯ ಒಡಲು, ಹನಿ ನೀರಿಗೂ ತತ್ವಾರ..

- ಚೇತನ ಶಿವರಾಯ ಯಲಡಗಿ

ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಜೀವನದಿ ಕೃಷ್ಣೆಯ ಒಡಲು ಈಗ ಬತ್ತಿ ಹೋಗಿದೆ. ‌ಗ್ರಾಮದ ಜನ ಹನಿ ನೀರಿಗೂ ಕಷ್ಟ ಪಡುತ್ತಿದ್ದಾರೆ. ಕೃಷ್ಣೆಯಿಂದ ಅವಲಂಬಿಸಿರುವ ರಾಯಬಾಗ, ಅಥಣಿ ತಾಲೂಕಿನ ಜನರು ಈ ಕಷ್ಟ ಪಡುತ್ತಿದ್ದಾರೆ.

ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಬತ್ತುವ ಈ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುತ್ತಿದ್ದರು. ಆದರೆ ಈ ವರ್ಷ ಲೋಕಸಭಾ ಚುನಾವಣೆಯ ಗುಂಗಿನಲ್ಲಿ ಎಲ್ಲಾ ಜನ ಪ್ರತಿನಿಧಿಗಳು ಮರೆತು ಬಿಟ್ಟಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಮುಖಂಡರು ಲೋಕಸಭಾ ಚುನಾವಣೆಯ ಮತಕ್ಕೋಸ್ಕರ, ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೇವೆ, 2-3 ದಿನದಲ್ಲಿ ನೀರು ಬರುತ್ತದೆ ಎಂದೆಲ್ಲಾ ಹೇಳಿದರು. ಆದರೆ ಚುನಾವಣೆ ಮುಗಿದು 1ವಾರ ಕಳೆದರೂ ನೀರಿನ ವಾಸನೆ ಸಹಿತ ಇಲ್ಲ.

ನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ, ಜನ ಕುಡಿಯಲು ಬೇರೆ ಗ್ರಾಮಗಳಿಂದ ನೀರು ತಂದು ಜೀವನ ನಡೆಸುತ್ತಿದ್ದಾರೆ. ಆದರೆ ಜಾನುವಾರುಗಳ ಪರಿಸ್ಥಿತಿ ಹೇಳತೀರದು.


ಅನಿವಾರ್ಯವಾಗಿ ಕುಡಿಯಲು ಯೋಗ್ಯವಲ್ಲದ ನೀರನ್ನು ಜಾನುವಾರುಗಳಿಗೆ ಕುಡಿಯಲು ಕೊಡಲಾಗುತ್ತಿದೆ.

ಅಥಣಿಯ ಶಾಸಕರಾದ ಶ್ರೀ ಮಹೇಶ ಕುಮಟಳ್ಳಿರವರು ಜನರ ಕಷ್ಟಗಳಿಗೆ ಸ್ಪಂದಿಸದೇ, ಬೆಂಗಳೂರು-ಮುಂಬೈ ನಗರಗಳಲ್ಲಿ ರಾಜಕೀಯ ಮೇಲಾಟಗಳಲ್ಲಿ ಮಗ್ನರಾಗಿದ್ದಾರೆ. ಆದಕಾರಣ ಗ್ರಾಮಸ್ಥರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ಒಟ್ಟಾರೆ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಜನರ ಕಷ್ಟಗಳಿಗೆ ಸ್ಪಂದಿಸಿ, ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕೃಷ್ಣಾ ನದಿಗೆ ನೀರು ಬಿಡಿಸುವ ಕೆಲಸ ಮಾಡಿಸಬೇಕೆಂದು ಜನರ ಒತ್ತಾಯ..

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18