ಗೋ ಮೂತ್ರ, ಸಗಣಿಯಿಂದ ತಯಾರಿಸಲ್ಪಡುವ ವಸ್ತುಗಳು ಅಮೆಜಾನ್ ನಲ್ಲಿ!

ಜೈ ಶೇಗುಣಸಿ ಸುದ್ದಿ ‌...

ಗೋ ಮೂತ್ರ ಹಾಗೂ ಸಗಣಿಯಿಂದ ಸೋಪು, ಶಾಂಪು, ಔಷಧಿ: ಆರ್.ಎಸ್.ಎಸ್ ಉತ್ನಪನ್ನಗಳು ಅಮೆಜಾನ್ ನಲ್ಲಿ ಮಾರಾಟವಾಗಲಿದೆ.

ಗೋ ಮೂತ್ರ ಹಾಗೂ ಸಗಣಿಯನ್ನು ಬಳಸಿ, ಸ್ನಾನದ ಸೋಪು, ಶಾಂಪು, ಮುಖಕ್ಕೆ ಹಚ್ಚುವ ಹಾಗೂ ತೊಳೆಯುವ ಕ್ರೀಂ ಮುಂತಾದವುಗಳನ್ನು ಆರ್.ಎಸ್.ಎಸ್ ಸಂಘಟನೆಯ ಔಷದಿ ಕಂಪನಿಯೊಂದು ತಯಾರಿಕೆ ಮಾಡಿ, ಅಮೆಜಾನ್ ಮೂಲಕ ಮಾರಾಟ ಮಾಡಲಿದೆ.

ಆರ್.ಎಸ್.ಎಸ್ ಸಂಘಟನೆಯು ಮಥುರಾದಲ್ಲಿ “ದೀನ ದಯಾಳ್ ಧಾಮ್” ಎಂಬ ಔಷಧ ಅಂಗಡಿಯೊಂದನ್ನು ನಡೆಸುತ್ತಿದೆ. ಅಕ್ಟೋಬರ್ ತಿಂಗಳಿನಿಂದ ಈ ಔಷಧ ಅಂಗಡಿ ಗೋ ಮೂತ್ರದಲ್ಲಿ ತಯಾರಿಸಲ್ಪಡುವ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಿವೆ.

ಇದರ ಬಗ್ಗೆ ಆರ್.ಎಸ್.ಎಸ್ ವಕ್ತಾರ ಅರುಣ್ ಕುಮಾರ್, ಆಂಗ್ಲ ದಿನ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ‘ಗೋ ಮೂತ್ರ ಹಾಗೂ ಸಗಣಿಯ ಮೂಲಕ ತಯಾರಿಸಲ್ಪಡುವ ಔಷಧಿಗಳು, ಸ್ನಾನದ ಸೋಪು, ಶಾಂಪೂ, ಮುಖಕ್ಕೆ ಹಚ್ಚುವ ಕ್ರೀಂ ಹಾಗೂ ಪೌಡರ್ ಮುಂತಾದ 30 ಬಗೆಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಇವುಗಳು ಮುಂದಿನ ತಿಂಗಳಿನಿಂದ ಅಮೆಜಾನ್ ಆನ್ ಲೈನ್ ಮೂಲಕ ಮಾರುಕಟ್ಟೆಗೆ ಬರಲಿದೆ. ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ ಧರಿಸುವ ಕುರ್ತಾ, ಯೋಗಿ ಆದಿತ್ಯನಾಥ್ ಧರಿಸುವ ಜುಬ್ಬಾ ಮುಂತಾದ ವಸ್ತತ್ರಗಳನ್ನೂ ತಯಾರಿಸಿ ಮಾರಾಟ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

ದೀನ ದಯಾಳ್ ಧಾಮ್ ಔಷಧ ಅಂಗಡಿಯ ಕಾರ್ಯದರ್ಶಿ ‘ಗೋವಿನ ಮೂತ್ರ ಹಾಗೂ ಸಗಣಿಯನ್ನು ಮೂಲ ವಸ್ತುಗಳನ್ನಾಗಿ ಬಳಸಿ, ವಿವಿಧ ಔಷಧೀಯ ಉತ್ಪನ್ನಗಳನ್ನು ತಯಾರಿಸಲಿದ್ದೇವೆ. ಮಧುಮೇಹ ರೋಗಿಗಳಿಗೆ ವಿಶೇಷವಾದ ಔಷಧಿಗಳನ್ನು ತಯಾರಿಸುವ ಜೊತಗೆ ಬೊಜ್ಜು ಕರಗಿಸುವ ಔಷಧಿಗಳನ್ನೂ ತಯಾರಿಸುತ್ತೇವೆ. ಜೊತೆಯಲ್ಲಿ ಸೋಪು, ಶಾಂಪೂ, ಟೂತ್ ಪೇಸ್ಟ್, ಪೌಡರ್, ಅಗರ ಬತ್ತಿ ಮುಂತಾದವುಗಳನ್ನು ತಯಾರಿಸುತ್ತಿದ್ದೇವೆ. ಇದಕ್ಕಾಗಿ ವಿವಿಧ ಸ್ಥಳಗಳಿಂದ ಗೋ ಮೂತ್ರ ಹಾಗೂ ಸಗಣಿಯನ್ನು ಸಂಗ್ರಹಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ಮಾಲೀಕತ್ವದಲ್ಲಿ 90 ಹಸುಗಳನ್ನು ಸಾಕುತ್ತಿದ್ದೇವೆ. ಇದರ ಮೂಲಕವೂ ಸಗಣಿ, ಮೂತ್ರವನ್ನು ಸಂಗ್ರಹಿಸುತ್ತಿದ್ದೇವೆ. ಎಂದು ಹೇಳುತ್ತಿದ್ದಾರೆ.

ಒಟ್ಟಾರೆಯಗಿ, ಮುಂದಿನ ತಿಂಗಳು ಗೋ ಮೂತ್ರ ಹಾಗೂ ಸಗಣಿಯ ಉತ್ಪನ್ನಗಳು ಅಮೆಜಾನ್ ನಲ್ಲಿ ದೊರಕುವುದು ಗ್ಯಾರಂಟಿ.

ಸಾವಯವ ಉತ್ಪನ್ನಗಳಿಗೆ ಸಂಪರ್ಕಿಸಿ 94448264480


ಈ ಲೇಖನ ಇಷ್ಟವಾದರೆ ಶೇರ್ ಮಾಡಿ...

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18