ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ಜೈ ಶೇಗುಣಸಿ ಸುದ್ದಿ...

ಕುಟುಂಬದ ಒಬ್ಬರ ಬೆಳೆ ಸಾಲಮಾತ್ರ ಮನ್ನಾ
* ರೈತ ಕುಟುಂಬದ 2 ಲಕ್ಷ ಸುಸ್ತಿ ಸಾಲಮನ್ನಾ ಮಾಡಲಾಗುತ್ತದೆ, ಕುಟುಂಬ ಎಂದರೆ ರೈತ ಅಥವಾ ಆತನ ಪತ್ನಿ ಅಥವಾ ಆತನ ಮಗನ ಹೆಸರಿನಲ್ಲಿ ಮಾಡಲಾದ ಕೃಷಿ ಸಾಲದಲ್ಲಿ 2 ಲಕ್ಷ ಸಾಲಮನ್ನಾ ಆಗಲಿದೆ. ಒಂದೇ ಕುಟುಂಬದಲ್ಲಿ ಎರಡು ಬೆಳೆಸಾಲ ಇದ್ದರೆ ಒಂದು ಸಾಲ (2 ಲಕ್ಷ) ಮಾತ್ರವೇ ಮನ್ನಾ ಆಗಲಿದೆ.

ಸಾಲ ತೀರಿಸಿದ್ದವರಿಗೆ 25000 ಬಹುಮಾನ!
* 01/04/2009ರ ನಂತರ ಪಡೆದ 30/12/2017 ರ ವೇಳೆಗೆ ಬಾಕಿ ಇರುವ ಬೆಳೆ ಸಾಲ ಮಾತ್ರ ಮನ್ನಾ ಆಗಲಿದೆ. ಅಕಸ್ಮಾತ್ ಅವಧಿಯ ಒಳಗೆ ಸಾಲ ತೀರಿಸಿದವರಿಗೆ 25000 ರೂಪಾಯಿ ಹಣ ವಾಪಾಸ್ಸು ಬರಲಿದೆ.

ಸಹಕಾರ ಸಂಘದ ಸಾಲಮನ್ನಾ ಆಗಿರುವ ರೈತರಿಗೆ ಲಾಭವಿಲ್ಲ
* ಕೃಷಿ ಸಾಲ ಅತವಾ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲ ಮರುಪಾವತಿಸಿದ ರೈತರಿಗೆ 25000 ರೂಪಾಯಿ ಬಹುಮಾನದ ರೀತಿಯಲ್ಲಿ ಸರ್ಕಾರ ನೀಡಲಿದೆ. ಮರುಪಾವತಿ ಮಾಡಿದ ಸಾಲವು 25000 ಕ್ಕಿಂತಲೂ ಕಡಿಮೆ ಇದ್ದರೆ ಅಷ್ಟೆ ಮೊತ್ತವನ್ನು ವಾಪಸ್ಸು ನೀಡಲಾಗುತ್ತದೆ.

ತೋಟಗಾರಿಕೆ, ಪ್ಲಾಂಟೇಶನ್ ಸಾಲವೂ ಮನ್ನಾ
* ಬೆಳೆ ಸಾಲ ಅಥವಾ ಕಿಸಾನ್ ಕ್ರೆಡಿಟ್ ಸಾಲ ಮತ್ತು 12 ರಿಂದ 18 ತಿಂಗಳ ಅವಧಿಯಲ್ಲಿ ತೀರಿಸಬಹುದಾದ ಸಾಲವನ್ನು ಬೆಳೆ ಸಾಲ ಎನ್ನಬಹುದು. ಪ್ಲಾಂಟೇಶನ್, ತೋಟಗಾರಿಕೆಗೆ ಪಡೆದ ಸಾಲಗಳನ್ನೂ ಒಳಗೊಂಡಿರುತ್ತದೆ.

ಯಾವ ಬಗೆಯ ಸಾಲಮನ್ನಾ?
* ಬೆಳೆಸಾಲ, ಮರು ವರ್ಗೀಕರಣ ಆದ ಬೆಳೆ ಸಾಲ (ರಿಸ್ಟ್ರಕ್ಚರ್ಡ್ ಲೋನ್), ವರ್ಷದ ಅವಧಿಯ ಬೆಳೆ ಸಾಲ (NPA), ಒಂದು ವರ್ಷ ಅವಧಿ ಮೀರದ ಸಾಲಗಳು ಮನ್ನಾ ಆಗಲಿವೆ.

ಯಾವ ಬ್ಯಾಂಕ್‌ಗಳ ಸಾಲಮನ್ನಾ
* ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಖಾಸಗಿ ಮತ್ತು ಪ್ರಾಥಮಿಕ ಸಹಕಾರಿ ಕ್ರೆಡಿಟ್ ಸೊಸೈಟಿಗಳು, ರೈತರ ಸಹಕಾರ ಸೇವಾ ಕೇಂದ್ರದಿಂದ ಪಡೆದ ಸಾಲಗಳು, ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆದ ಸಾಲಗಳು ಮನ್ನಾ ಆಗಲಿವೆ.

ಕಿಸಾಸ್ ಕಾರ್ಡ್ ಸಾಲವೂ ಮನ್ನಾ
* ಕೃಷಿ ಸಾಲ ಅತವಾ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲ ಮರುಪಾವತಿಸಿದ ರೈತರಿಗೆ 25000 ರೂಪಾಯಿ ಬಹುಮಾನದ ರೀತಿಯಲ್ಲಿ ಸರ್ಕಾರ ನೀಡಲಿದೆ. ಮರುಪಾವತಿ ಮಾಡಿದ ಸಾಲವು 25000 ಕ್ಕಿಂತಲೂ ಕಡಿಮೆ ಇದ್ದರೆ ಅಷ್ಟೆ ಮೊತ್ತವನ್ನು ವಾಪಸ್ಸು ನೀಡಲಾಗುತ್ತದೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18