ರಾಜಸ್ಥಾನದಲ್ಲಿ ಹಸುವಿನ ಹಾಲಿಗಿಂತ, ಮೂತ್ರವೇ ದುಬಾರಿ !

ಜೈ ಶೇಗುಣಸಿ ಸುದ್ದಿ...

ರಾಜಸ್ಥಾನದಲ್ಲಿ ಈಗ ಹಸುಗಳ ಹಾಲಿಗಿಂತ, ಮೂತ್ರವೇ ದುಬಾರಿ. ಗೋಮೂತ್ರಕ್ಕೆ ಬಹುಬೇಡಿಕೆಯಿದ್ದು ಇದು ರೈತರಿಗೆ ವರದಾನವಾಗಿ ಪರಿಣಮಿಸಿದೆ.
ಹೈಬ್ರೀಡ್​ ತಳಿ ಹಸುಗಳಾದ ಗಿರ್​, ಥರ್ಪಾಕರ್​ ಹಸುಗಳ ಮೂತ್ರ ಮಾರುಕಟ್ಟೆಯಲ್ಲಿ ಒಂದು ಲೀಟರ್​ಗೆ 25 -30 ರೂಪಾಯಿಗೆ ಮಾರಾಟವಾಗುತ್ತಿದ್ದು, ಹಾಲಿನ ಬೆಲೆ 22-25 ರೂ.ಇದೆ.
ಹಾಲು ಮಾರಾಟ ಮಾಡುತ್ತಿದ್ದ ಜೈಪುರದ ಕೈಲಾಶ್​ ಗುಜ್ಜರ್​ ಎಂಬುವರು ಮೊದಲು ಸಾವಯವ ಕೃಷಿಕರಿಗೆ ಗೋಮೂತ್ರದ ಉಪಯೋಗ ತಿಳಿಸಿ ಮಾರಾಟ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ಅವರ ಆದಾಯ ಸುಮಾರು ಶೇ. 30 ರಷ್ಟು ಹೆಚ್ಚಾಗಿದೆ ಎಂದು ಅವರೇ ತಿಳಿಸಿದ್ದಾರೆ.
ಸಾವಯವ ಕೃಷಿಯಲ್ಲಿ ಕೀಟನಾಶಕಕ್ಕೆ ಪರ್ಯಾಯವಾಗಿ ಗೋಮೂತ್ರ ಬಳಸುತ್ತಾರೆ. ಹಾಗೇ ಔಷಧ, ಹಬ್ಬಗಳ ಆಚರಣೆಯ ಸಮಯದಲ್ಲೂ ಉಪಯೋಗವಾಗುತ್ತದೆ. ಹಾಗಾಗಿ ಅನೇಕ ಜನರು ಖರೀದಿಸುತ್ತಾರೆ. ಇದರಿಂದ ಹಾಲು ಕೊಡುವ ಲಾಭಕ್ಕಿಂತ ಮೂತ್ರದ ಆದಾಯ ಹೆಚ್ಚು ಎಂದಿದ್ದಾರೆ.

ಹಸು ನನಗೆ ಅಮ್ಮನಂತೆ

ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯನ್ನೂ ಏರಿಕೆ ಮಾಡಿರುವ ಕೈಲಾಶ್​, ಇಡೀ ರಾತ್ರಿಯೆಲ್ಲ ಗೋಮೂತ್ರಕ್ಕಾಗಿ ಕಾದಿದ್ದೇನೆ. ಅದು ನೆಲದ ಮೇಲೆ ಬೀಳದಂತೆ ಸಂಗ್ರಹಿಸಿದ್ದೇನೆ. ಹಸು ನನಗೆ ಅಮ್ಮನಂತೆ. ಕಳೆದ ಎರಡು ದಶಕಗಳಿಂದ ಗೋಮೂತ್ರ ಮಾರಾಟ ಮಾಡಿಯೇ ಉತ್ತಮ ಬದುಕು ಕಂಡಿದ್ದೇನೆ ಎಂದಿದ್ದಾರೆ.
ಉದಯಪುರದಲ್ಲಿರುವ ಸರ್ಕಾರಿ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮಹಾರಾಣಾ ಪ್ರತಾಪ್ ಯೂನಿವರ್ಸಿಟಿಯಲ್ಲಿ ಪ್ರತಿ ತಿಂಗಳೂ ಸುಮಾರು 300-500 ಲೀಟರ್​ ಗೋಮೂತ್ರವನ್ನು ಸಾವಯವ ಕೃಷಿಗೆ ಸಂಬಂಧಪಟ್ಟ ಪ್ರಾಜೆಕ್ಟ್​ಗಳಿಗೆ ಬಳಸಲಾಗುತ್ತದೆ. ಇದಕ್ಕಾಗಿಯೇ 15,000-20,000 ರೂಪಾಯಿಯನ್ನು ಖರ್ಚು ಮಾಡುತ್ತಿದೆ. ಹಾಲು ಉತ್ಪಾದಕ ರೈತರಿಗೆ ಗೋಮೂತ್ರವನ್ನೂ ಸರಬರಾಜು ಮಾಡಲು ಯೂನಿವರ್ಸಿಟಿಯಲ್ಲಿ ತಿಳಿಸಿದೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18