ಹರಕೆ ಒಪ್ಪಿಸಿದ ಶಾಸಕ ಪಿ.ರಾಜೀವ್‌ ಅಭಿಮಾನಿ....

"ಜೈ ಶೇಗುಣಸಿ" ಸುದ್ದಿ..


ಚುನಾವಣೆಯಲ್ಲಿ ಶಾಸಕ ಪಿ.ರಾಜೀವ್‌ ಪುನಃ ಗೆಲುವು ಸಾಧಿಸಿದರೆ ಕುಡಚಿ ಕ್ಷೇತ್ರದ ದೇವರ ಪಾದಗಟ್ಟೆಗಳಿಗೆ ಪಂಚ ನದಿಗಳ ನೀರು ತಂದು ಹಾಕುವ ಹರಕೆ ಹೊತ್ತಿದ್ದ ಖಣದಾಳ ಗ್ರಾಮದ ನಿವಾಸಿ ವಸಂತ ಮಾರುತಿ ನಾಗರಾಳ (ವಡ್ಡರ) ಗ್ರಾಮದ ಶ್ರೀ ಭರಮಲಿಂಗೇಶ್ವರ ದೇವಸ್ಥಾನ ಪಾದಗಟ್ಟೆಗೆ ನೀರು ಹನಿಸಿದರು. 

ಪಿ.ರಾಜೀವ್‌ ಗೆಲುವು ಸಾಧಿಸಿದರೆ ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ನೀರು ತಂದು ಕುಡಚಿ ಮತ ಕ್ಷೇತ್ರದ ಎಲ್ಲ ದೇವರುಗಳ ಪಾದಗಟ್ಟೆಗೆ ಹನಿಸುವ ಹರಕೆ ಹೊತ್ತಿದ್ದೆ. ಶಾಸಕರು ಪುನಾರಾಯ್ಕೆಯಾಗಿದ್ದು ಈಗ ಹರಕೆ ತೀರಿಸುತ್ತಿರುವುದಾಗಿ ವಸಂತ ನಾಗರಾಳ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಗುರುಪಾದ ಮರಡಿ, ಭರಮಪ್ಪ ನಿಂಗನೂರ, ಬಸಪ್ಪ ನಾಯಕರ, ಬಸವನಾಯ್ಕ ಗೋಡಿ, ಅಶೋಕ ಕರಜಗಿ, ಭರಮಪ್ಪ ಸತ್ತಿ, ಮುತ್ತಪ್ಪ ಮದಾಳೆ, ಸಹದೇವ ಮಾದರ, ಲಗಮಣ್ಣ ಮದಾಳೆ, ಲಕ್ಷ ್ಮಣ ಬಳಗಾರ ಇತರರು ಉಪಸ್ಥಿತರಿದ್ದರು. 

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18