ಅನಂತ ಆಸ್ತಂಗತ... ಅಜಾತ ಶತ್ರುವಿಗೆ ಶ್ರದ್ಧಾಂಜಲಿ..
ಅನಂತ ಆಸ್ತಂಗತ... ಅಜಾತ ಶತ್ರುವಿಗೆ ಶ್ರದ್ಧಾಂಜಲಿ..
ಕೇಂದ್ರ ಸಚಿವ ಅನಂತ ಕುಮಾರ್ ಇಂದು ನಸುಕಿನ ಜಾವ ಅನಾರೋಗ್ಯದಿಂದ ವಿಧಿವಶರಾಗಿದ್ದು, ದೇಶ ಹಾಗೂ ರಾಜ್ಯದ ಎಲ್ಲಾ ರಾಜಕೀಯ ನಾಯಕರು ಕಂಬನಿ ಮಿಡಿಯುತ್ತಿದ್ದಾರೆ
** ಇದು ನಿಜಕ್ಕೂ ಒಂದು ಆಘಾತಕಾರಿ ಘಟನೆ. ಇದು ಸರ್ಕಾರ ಮತ್ತು ಪಕ್ಷಕ್ಕೆ ಅತೀ ದೊಡ್ಡ ನಷ್ಟ. ಒಬ್ಬ ಅತ್ಯುತ್ತಮ ಆಡಳಿತಗಾರ ಮತ್ತು ಜನಪ್ರಿಯ ನಾಯಕರಾಗಿ ಅನಂತ್ ಕುಮಾರ್ ಜೀ ಎಂದಿಗೂ ನೆನಪಿನಲ್ಲುಳಿಯುತ್ತಾರೆ. ಉತ್ತರ ಪ್ರದೇಶ ಸರ್ಕಾರದ ಪರವಾಗಿ ನಾನು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ
-ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
** ಅನಂತ್ ಕುಮಾರ್ ಜೀ ಅವರ ಅಗಲಿಕೆಯ ಸುದ್ದಿ ತಿಳಿದು ತೀವ್ರ ಬೇಸರವಾಯಿತು. ಅವರ ಕುಟುಂಬಕ್ಕೆ ಮತ್ತು ಬಂಧು, ಸ್ನೇಹಿತರಿಗೆ ನನ್ನ ಸಂತಾಪಗಳು. ಅವರ ಆಟ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ
- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
** ಅನಂತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರು ಕೆಲದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು, ಆದರೆ ಇಷ್ಟು ಬೇಗ ನಮ್ಮನ್ನಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರು ಗುಣಮುಖರಾಗಿ ಮತ್ತೆ ನಮ್ಮೊಂದಿಗೆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿದ್ದೆವು. ಅವರ ಪತ್ನಿ ಮತ್ತು ಮಕ್ಕಳಿಗೆ ನನ್ನ ಸಂತಾಪಗಳು
- ಎಂ ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
** ನಾನು ಕಂಡ ಅದ್ಭುತ ವ್ಯೆಕ್ತಿತ್ವ ವಾಗ್ಮಿ ಸರಳ ಸಜ್ಜನ ನಾಯಕ ಶ್ರೀ ಅನಂತಕುಮಾರ್ ರವರು..ಕಾಲನತೆಕ್ಕೆಗೆ ಇಷ್ಟು ಬೇಗ ಆಲಂಗಿಸಿದರು! ನಂಬಲಾಗಲಿಲ್ಲಾ!ಅವರ ಆತ್ಮಕ್ಕೆ ಶಾಂತಿ ಕೋರುವೆ!ಹರಿಓಂ..
- ನಟ ಜಗ್ಗೇಶ್
** "ಅನಂತ್ ಕುಮಾರ್ ಅವರ ಅಕಾಲಿಕ ಮರಣದಿಂದ ನನಗೆ ತೀವ್ರ ಆಘಾತ ಮತ್ತು ದುಃಖವಾಗಿದೆ. ಅವರೊಬ್ಬ ಜನಪ್ರಿಯ, ಕ್ರಿಯಾಶೀಲ ವ್ಯಕ್ತಿ. ಬಡವರ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ
- ಎಲ್ ಕೆ ಅಡ್ವಾಣಿ
** 'ಸಂಘಟನಾ ಚತುರ' ಅನಂತಕುಮಾರ್ ಅಮರ್ ರಹೇ-ರಾಷ್ಟ್ರೀಯ ಸ್ವಯಂಸೇವಕ ಸಂಘ
** ''ನಮ್ಮ ನಡುವೆ ಶುರುವಾದ ಸ್ನೇಹ ನಂತರ ಜೀವದ ಗೆಳೆಯರಾಗುವ ಹಾಗೆ ಆಯ್ತು. ಅವರು ನನ್ನ ಮಾರ್ಗದರ್ಶಕರಾಗಿದ್ದರು. ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯರಾಗಲು ಸಲಹೆ, ಸೂಚನೆ ನೀಡುತ್ತಿದ್ದರು. ಅವರು ಚಿಕ್ಕವರಾಗಿದ್ದರೂ ಎಲ್ಲ ವಿಚಾರಗಳಲ್ಲಿ ದೊಡ್ಡವರಾಗಿದ್ದರು. ನನ್ನ ಜೊತೆಗೆ ಅವರು ಕೊನೆಯುಸಿರಿರುವವರೆಗೆ ಇರುತ್ತಾರೆ ಎಂದುಕೊಂಡಿದ್ದೆ.'
- ಶ್ರೀನಾಥ್, ಹಿರಿಯ ನಟ
** ಅನಂತ್ ಕುಮಾರ್ ಅವರ ಅಕಾಲಿಕ ಮರಣದಿಂದ ರಾಜ್ಯಕ್ಕೆ, ದೇಶಕ್ಕೆ ನಷ್ಟವಾಗಿದೆ. ನಾನು ಅವರನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ. ಅವರ ನಿಧನದಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ
-ಸುಬುಧೇಂದ್ರ ತೀರ್ಥ ಸ್ವಾಮೀಜಿ
** ಹಲವು ಬಾರಿ ಸಚಿವರಾಗಿದ್ದ ಅವರು ಪ್ರತಿಬಾರಿ ತಮ್ಮ ಕರ್ತವ್ಯವನ್ನು ಸ್ವಲ್ಪವೂ ಚ್ಯುತಿ ಬಾರದಂತೆ ನಿರ್ವಹಿಸಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕಾಣಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಅವರು ಕರ್ನಾಟಕದ ದನಿ ಆಗಿದ್ದರು. ಅವರ ಸಾವು ರಾಜ್ಯಕ್ಕೆ ನಷ್ಟ ತಂದಿದೆ
- ಮಾಜಿ ಪ್ರಧಾನಿ ದೇವೆಗೌಡ
** ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ
-ಡಿಕೆ ಶಿವಕುಮಾರ್
** ನನ್ನ 32 ವರ್ಷದ ರಾಜಕೀಯ ಕ್ಷೇತ್ರದಲ್ಲಿನ ಗೆಳೆಯ ಅನಂತ ಕುಮಾರ್ ಇನ್ನಿಲ್ಲ ಎಂದು ಇದೀಗ ತಿಳಿದು ಈ ಬೆಳಗ್ಗಿನ ಜಾವ ತೀವ್ರ ಆಘಾತವಾಗಿದೆ. ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಆಗುವುದಿಲ್ಲ
- ಸುರೇಶ ಕುಮಾರ್
** ನನ್ನ ಅತಿ ಅಮೂಲ್ಯ ಸಹೋದ್ಯೋಹಿ, ಸ್ನೇಹಿತ ಅನಂತ್ ಕುಮಾರ್ ನಿಧನ ನನಗೆ ತೀವ್ರ ದುಃಖ ತಂದಿದೆ. ಅವರೊಬ್ಬ ಗಮನಾರ್ಹ ನಾಯಕ, ಅವರು ಚಿಕ್ಕ ವಯಸ್ಸಿನಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು ಮತ್ತು ಅತ್ಯಂತ ಶ್ರದ್ಧೆ ಮತ್ತು ಸಹಾನುಭೂತಿಯೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸಿದರು
- ನರೇಂದ್ರ ಮೋದಿ
** ಅನಂತ್ ಜೀ ಇನ್ನಿಲ್ಲ ಅಂದಾಗ ನನಗೆ ಬಹಳ ದೊಡ್ಡ ಆಘಾತವೇ ಆಗಿದೆ. ಅವರೊಬ್ಬ ನನ್ನ ವೈಯಕ್ತಿಕ ಗೆಳೆಯ ಅಲ್ಲದೇ ಮಾರ್ಗದರ್ಶಕರಾಗಿಯೂ ಇದ್ದರು. ದೇವರ ಇಚ್ಛೆಗೆ ಉಪಾಯವಿಲ್ಲ
- ಪ್ರಹ್ಲಾದ್ ಜೋಷಿ
** ರಾಜಕಾರಣ ಮೀರಿದ ಸ್ನೇಹ ಸಂಬಂಧ ಹೊಂದಿದ್ದ ಆತ್ನೀಯ ಗೆಳೆಯನನ್ನು ನಾನು ಕಳೆದುಕೊಂಡಿದ್ದೇನೆ
-ಸಿಎಂ ಕುಮಾರಸ್ವಾಮಿ
** ಅನಂತ್ಕುಮಾರ್ ಅವರು ದೊಡ್ಡ ಶಕ್ತಿ. ಆರು ತಿಂಗಳಿಂದ ಅವರಿಗೆ ಆರೋಗ್ಯ ಸರಿಯಿಲ್ಲ ಎಂಬ ವಿಷಯವನ್ನೇ ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ಈಗ ಅವರ ಸಾವಿನ ಸುದ್ದಿಯಿಂದ ತುಂಬ ನೊಂದಿದ್ದೇನೆ
- ಎಂಎಲ್ಸಿ ತಾರಾ
** ಅನಂತ್ಕುಮಾರ್ ಅವರು ನನಗೆ ತುಂಬ ಆತ್ಮೀಯರು. ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದೆ. ಆರೋಗ್ಯ ಸುಧಾರಣೆಯಾಗುತ್ತಿತ್ತು. ಈಗ ಅವರ ಸಾವಿನ ಸುದ್ದಿ ನಂಬಲಾಗುತ್ತಿಲ್ಲ
-ಮಾಜಿ ಡಿಸಿಎಂ ಆರ್.ಅಶೋಕ್
** ಅನಂತ್ಕುಮಾರ್ ಅವರಿಗೆ ಅನಂತ್ಕುಮಾರ್ ಅವರೇ ಸಾಕ್ಷಿ. ಅವರ ದೂರದೃಷ್ಟಿ ಮಾದರಿಯಾಗುವಂಥದ್ದು. ಯಾವುದೇ ಸಂದರ್ಭದಲ್ಲೂ ಸಹನೆ ಕಳೆದುಕೊಳ್ಳುತ್ತಿರಲಿಲ್ಲ
- ಮಾಜಿ ಸಚಿವ ವಿ.ಸೋಮಣ್ಣ
** ಭಾರತೀಯ ಜನತಾ ಪಾರ್ಟಿ ಸದೃಢವಾಗಿ ಬೆಳೆಯಲು ಅನಂತ್ಕುಮಾರ್ ಅವರು ಮುಖ್ಯ ಕಾರಣೀಕರ್ತರು. ಅವರನ್ನು ಕಳೆದುಕೊಂಡಿದ್ದರಿಂದ ಮನಸಿಗೆ ಆಘಾತವಾಗಿದೆ
-ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ
** ರಾಜ್ಯದಲ್ಲಿ ಬಿಜೆಪಿ ಕಟ್ಟಲು ತುಂಬ ಪ್ರಮುಖ ಪಾತ್ರ ವಹಿಸಿದ್ದಾರೆ. ನನ್ನ ಹೆಜ್ಜೆಯೊಂದಿಗೆ ಹೆಜ್ಜೆ ಸೇರಿಸಿ ಸಂಘಟನೆ ಮಾಡಿದ್ದಾರೆ. ಅಪಾರ ಸಾಮಾಜಿಕ ಕಳಕಳಿ ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ
-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
** ಅಗಲಿಕೆ ನೋವು ತಂದಿದೆ
ಬಿಜೆಪಿ ಕಟ್ಟುವಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಪಕ್ಷ ಕಟ್ಟುವಲ್ಲಿ ಅನಂತ್ಕುಮಾರ್ ಅವರದ್ದು ಪ್ರಮುಖ ಪಾತ್ರವಾಗಿತ್ತು. ಅವರ ಅಗಲಿಕೆಯಿಂದ ತುಂಬ ನೋವಾಗಿದೆ
- ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
** ನನ್ನ ಸೋದರನಂತೆ ಇದ್ದರು
ಅನಂತ್ಕುಮಾರ್ ಅವರ ನಿಧನ ನೋವು ತಂದಿದೆ. ಅವರು ನನ್ನ ತಮ್ಮನಂತೆ ಇದ್ದರು. ಆತ್ಮಕ್ಕೆ ಶಾಂತಿ ಸಿಗಲಿ
- ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್
** ನನ್ನ ಹಿರಿಯ ಸಹೋದ್ಯೋಗಿಯನ್ನು ಕಳೆದುಕೊಂಡು ನೋವಾಗಿದೆ. ತುಂಬ ಶಾಕ್ಗೆ ಒಳಗಾಗಿದ್ದೇನೆ
- ಗೃಹ ಸಚಿವ ರಾಜನಾಥ ಸಿಂಗ್
** ಅನಂತ್ಕುಮಾರ್ ಅವರ ಸಾವಿನ ಸುದ್ದಿಯಿಂದ ತುಂಬ ದುಃಖಿತನಾಗಿದ್ದೇನೆ. ಅಪರಿಮಿತ ಉತ್ಸಾಹ, ಪ್ರಾಮಾಣಿಕತೆಯಿಂದ ದೇಶ ಸೇವೆ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ತುಂಬ ಪರಿಶ್ರಮ ಹಾಕಿದ್ದರು
- ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
** .ಅನಂತ್ಕುಮಾರ್ ಅವರ ನಿಧನದ ಸುದ್ದಿಕೇಳಿ ತುಂಬ ನೋವಾಗಿದೆ. ನಮ್ಮ ದೇಶದ ಅದರಲ್ಲೂ ಕರ್ನಾಟಕದ ಜನರಿಗೆ ತುಂಬಲಾರದ ನಷ್ಟವಿದು. ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ
-ರಾಷ್ಟ್ರಪತಿ ಕೊವಿಂದ
** ಪಕ್ಷ ಬೇರೆಯಾದ್ರೂ ನಮ್ಮ ಸ್ನೇಹ ಶಾಶ್ವತ – ವಿಷ್ಣು, ನನ್ನ ಜತೆ ಅನಂತ ಒಡನಾಟ ಹೆಚ್ಚಿತ್ತು
- ಹಳೇ ನೆನಪು ಮೆಲುಕು ಹಾಕಿದ ಅಂಬರೀಷ್
** ಅನಂತಕುಮಾರ್ ನನಗೆ ಗುರುವಾಗಿದ್ದರು
- ಶ್ರೀರಾಮುಲು
** ಸರಳ, ಸಜ್ಜನಿಕೆ ರಾಜಕಾರಣಿಯ ಅಗಲಿಕೆಯಿಂದ ಸಮಾಜಕ್ಕೆ ಬಹುದೊಡ್ಡ ನಷ್ಟವಾಗಿದೆ
-ಶಿವಮೂರ್ತಿ ಮುರುಘಾ ಶರಣರು
** ಸಂಸದನಾದ ನನಗೆ ಹಲವು ವಿಷಯಗಳಲ್ಲಿ ಬೆಂಬಲ ನೀಡಿದ್ದರು. ಮೈಸೂರಿನಲ್ಲಿ ಪಾಸ್ಪೋರ್ಟ್ ಕೇಂದ್ರ, ಏರ್ಪೋರ್ಟ್, ಬೆಂಗಳೂರು-ಮೈಸೂರು ಹೈವೇ ಯೋಜನೆಗಳ ಅನುಷ್ಠಾನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕೇಂದ್ರಕ್ಕೂ, ಕರ್ನಾಟಕಕ್ಕೂ ಕೊಂಡಿಯಾಗಿ ನಿಂತಿದ್ದರು
- ಪ್ರತಾಪ್ ಸಿಂಹ
** ಗದ್ದಲವಿಲ್ಲದ ರಾಜಕಾರಣಿಯಾಗಿದ್ದರು
ಅನಂತಕುಮಾರ್ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದರು. ಮಾಡಿದ್ದನ್ನು ಹೇಳಿಕೊಳ್ಳುವ ಸ್ವಭಾವ ಅವರದ್ದಾಗಿರಲಿಲ್ಲ. ಅವರೊಬ್ಬ ಗದ್ದಲವಿಲ್ಲದ ರಾಜಕಾರಣಿ
- ಲೇಖಕ ಎಸ್.ಎಲ್.ಭೈರಪ್ಪ

Comments
Post a Comment