ಜೈ ಶೇಗುಣಸಿ ಸುದ್ದಿ ಸಂಪದ.. ದಿ: 04-11-18
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 04-11-18
** ಪಂಚ ಕ್ಷೇತ್ರಗಳ ಉಪಸಮರ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ; ಮಂಡ್ಯದಲ್ಲಿ ಕಡಿಮೆ 48.83%, ಜಮಖಂಡಿಯಲ್ಲಿ ಅಧಿಕ 74.41% ಮತದಾನ.** ಹೊರಬಿದ್ದ ಉಪಚುನಾವಣಾ Exit poll ಫಲಿತಾಂಶ: ಬಳ್ಳಾರಿ, ಶಿವಮೊಗ್ಗ, ಜಮಖಂಡಿ ಬಿಜೆಪಿಗೆ, ರಾಮನಗರ, ಮಂಡ್ಯ ಜೆಡಿಎಸ್ ಗೆ, ಕಾಂಗ್ರೆಸ್ ಶೂನ್ಯ
** ದೀಪಾವಳಿ ಹಬ್ಬಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ನ. 6ರಂದು ವಿಶೇಷ ರೈಲು
** ಶಿವಮೊಗ್ಗದಲ್ಲಿ ಶೇ.101ರಷ್ಟು ರಾಘವೇಂದ್ರ ಗೆಲ್ಲುತ್ತಾರೆ : ಯಡಿಯೂರಪ್ಪ
** ಕಾಂಗ್ರೆಸ್‌ನ ಹಣವನ್ನು ಜಿಲ್ಲೆಯ ಜನ ತಿರಸ್ಕರಿಸಿದ್ದಾರೆ, ಗೆಲುವು ನಮ್ಮದೆ: ಶ್ರೀರಾಮುಲು
** ಎಚ್‌ಡಿಕೆ ವಿರುದ್ಧದ ಮೀಟೂ ಹೇಳಿಕೆಗೆ ಈಗಲೂ ಬದ್ಧ: ಕುಮಾರ್ ಬಂಗಾರಪ್ಪ
** 2019ರ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರೆಯಲಿದೆ: ಸಿಎಂ ಕುಮಾರಸ್ವಾಮಿ
** ರಾಮನಗರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಒಳ್ಳೆಯದಲ್ಲ: ಅಂಬಿ
** ನ.10ರಂದು ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ನಿರ್ಧಾರ: ಸಚಿವೆ ಜಯಮಾಲಾ
** ದೀಪಾವಳಿ: ರಾಜ್ಯದಲ್ಲಿ ರಾತ್ರಿ 8 ರಿಂದ 10 ರವರಗೆ ಪಟಾಕಿ ಹೊಡೆಯಲು ಅವಕಾಶ
** ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆದ ಸನ್ನಿಲಿಯೋನ್ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ
** ರಾಮ ಮಂದಿರ ವಿವಾದ ನ್ಯಾಯಾಲಯದ ಅಂಗಳದಲ್ಲಿದ್ದು, ನಾವೇನೂ ಮಾಡಲು ಸಾಧ್ಯವಿಲ್ಲ: ಉತ್ತರಪ್ರದೇಶದ ಡಿಸಿಎಂ
** ಡಿಸೆಂಬರ್ನಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ: ರಾಮ್ ವಿಲಾಸ್ ವೇದಾಂತಿ
** ಶಬರಿಮಲೆ ವಿಶೇಷ ಪೂಜೆ ನ.5ಕ್ಕೆ: ಸೆಕ್ಷನ್ 144 ಜಾರಿಗೆ ಜಿಲ್ಲಾಧಿಕಾರಿ ನಿರ್ಧಾರ
** ಸಿಬಿಐ ವಿವಾದ: ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಾನೂನು ಸಮರ
** ಇಂದು ಭಾರತ ವಿಂಡೀಸ್ ಮೊದಲ ಟಿ-20 ಪಂದ್ಯ, ಗೆಲುವಿನ ವಿಶ್ವಾಸದಲ್ಲಿ ಉಭಯ ಪಡೆ
Comments
Post a Comment