ಭಕ್ತರ ಶ್ರದ್ಧಾಕೇಂದ್ರ ಶೇಗುಣಸಿಯ ಶ್ರೀ ವಿರಕ್ತಮಠ.


ಜೈ ಶೇಗುಣಸಿ...

[SHEGUNASHI] ...

|| Chetan Yaladagi 



ಭಕ್ತರ ಕಾಮಧೇನು ಶ್ರೀಮಠ: ಶೇಗುಣಸಿಯ ವಿರಕ್ತಮಠ ಮಹಾತಪಸ್ವಿ ಶ್ರೀ ಮುರಘೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದದಿಂದ ಅಪಾರ ಭಕ್ತ ಸಂಕುಲವನ್ನು ಹೊಂದಿ ಶ್ರದ್ಧಾಭಕ್ತಿ ಕೇಂದ್ರವಾಗಿದೆ. ಬಸವಾದಿ ಪ್ರಮಥರ ಸಂಪ್ರದಾಯದಲ್ಲಿ ಶತಮಾನಗಳವರೆಗೆ ಭಕ್ತರನ್ನುದ್ಧರಿಸುತ್ತ ಶ್ರೀಮಠವು ಭಕ್ತರ ಕಾಮಧೇನುವಾಗಿದೆ. ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ಸ್ವಾಮಿಗಳು ಭಕ್ತಪ್ರೇಮಿಗಳು. ಕಳೆದ 50 ವರ್ಷಗಳಿಂದ ಶ್ರೀಮಠದ ಗುರುವಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಜಾಗೃತಿಯನ್ನುಂಟುಮಾಡಿ ಒಂದು ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಂಸ್ಥೆ ಸ್ಥಾಪಿಸಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.       

ಶ್ರೀಮಠದ ಈಗಿನ ಪೀಠಾಧಿಪತಿಗಳಾದ ಶ್ರೀ ಶಂಕರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ, ಮುಂದಿನ ಉತ್ತರಾಧಿಕಾರಿಗಳಾದ ಶ್ರೀ ಮಹಾಂತ ದೇವರ ಕನಸುಗಳೊಂದಿಗೆ ಶ್ರೀಮಠ ಬೆಳೆಯುತ್ತಿದೆ.ಪ್ರತಿ ಅಮಾವಾಸ್ಯೆಗೊಮ್ಮೆ ಅನ್ನದಾಸೋಹದ ಜೊತೆಗೆ ಪ್ರತಿ ವರ್ಷಕ್ಕೊಮ್ಮೆ ವಿಜೃಂಭಣೆಯ ರಥೋತ್ಸವ ನಡೆಯುತ್ತದೆ. ಕರ್ನಾಟಕ ಅಲ್ಲದೆ ಮಹಾರಾಷ್ಟ್ರ ರಾಜ್ಯದಿಂದ ಭಕ್ತರು ಮಠಕ್ಕೆ ಆಗಮಿಸಿ ಗದ್ದುಗೆ ದರ್ಶನ ಪಡೆಯುವುದರ ಜೊತೆಗೆ ಹರಕೆ ತೀರಿಸುವರು.


Google Map: click here
 ಕುಮಾರ ಚೇತನ ಶಿವರಾಯ ಯಲಡಗಿ 
ಮೊ:9686856416
ಲೇಖನ ಇಷ್ಟವಾದರೆ ಶೇರ್ ಮಾಡಿ..
For More Articles: click here

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18