ಕಬ್ಬು ಪೂರೈಸಿದರೂ ಬಿಡುಗಡೆಯಾಗದ ಹಣ: ಸಕ್ಕರೆ ಕಾರ್ಖಾನೆ ಎದುರೇ ಶೇಗುಣಸಿ ರೈತ ಆತ್ಮಹತ್ಯೆ
ಜೈ ಶೇಗುಣಸಿ ಸುದ್ದಿ...
ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬೇಸತ್ತ ರೈತರೊಬ್ಬರು ಕಾರ್ಖಾನೆ ಎದುರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿಯ ಶೇಗುಣಸಿ ಗ್ರಾಮದ ರೈತ ಹನುಮಂತಪ್ಪ ಕಾಡಪ್ಪನವರು ಆತ್ಮಹತ್ಯೆ ಮಾಡಿಕೊಂಡವರು.
ಸಾವರಿನ್ ಶುಗರ್ಸ್ ಕಂಪನಿಗೆ 200 ಟನ್ ಕಬ್ಬು ಪೂರೈಸಿದ್ದ ಹುನುಮಂತಪ್ಪ ಅವರಿಗೆ ಈ ವರಗೆ ಹಣ ಬಿಡುಗಡೆಯಾಗಿರಲಿಲ್ಲ. ಈ ನಡುವೆ ರೈತ ಹನುಮಂತಪ್ಪ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಒಂದೆಡೆ ಕಬ್ಬಿನ ಹಣ ಸಿಗದೆ, ಸಾಲದ ಸಮಸ್ಯೆ ತಾಳಲಾರದೆ ಅವರು ಕಾರ್ಖಾನೆಯ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವರಿನ್ ಶುಗರ್ಸ್ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶಿವಕುಮಾರ್ ಮಲಘಾಣ ಎಂಬುವವರ ಮಾಲಿಕತ್ವದ್ದಾಗಿದೆ.
ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments
Post a Comment