ವಿಜಯಭದ್ರ ಮುನಿ ಮಹಾರಾಜರ ಅಂತ್ಯಕ್ರಿಯೆ..
ಜೈ ಶೇಗುಣಸಿ ಸುದ್ದಿ...
ಖವಟಕೊಪ್ಪ ಗ್ರಾಮದಲ್ಲಿ 108 ವಿಜಯಭದ್ರ ಮುನಿಮಹಾರಾಜರ ಅಂತ್ಯಕ್ರಿಯೆ ಬುಧವಾರ ಸಕಲ ವಿಧಿ ವಿಧಾನದೊಂದಿಗೆ ನಡೆಯಿತು. ಆಚಾರ್ಯ 108 ಜಿನಸೇನ ಮುನಿ ಮಹಾರಾಜರು, ಆಚಾರ್ಯ 108 ದೇವಸೇನ ಮುನಿ ಮಹಾರಾಜರು, 108 ಸುಪ್ರಚಾರ್ಯಸೇನ ಮುನಿ ಮಹಾರಾಜರು, ಆಚಾರ್ಯ 108 ಪ್ರಸಂಗ ಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಪ್ರತಿಷ್ಠಾಚಾರ್ಯ ಮಾಣಿಕ ಉಪಾಧ್ಯೆ, ನೇಮಿನಾಥ ಉಪಾಧ್ಯೆ ಸೇರಿ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಂದ ಆಗಮಿಸಿದ 12 ಪಂಡಿತರು ಅಂತ್ಯಕ್ರಿಯೆ ಪೂಜೆ ವಿಧಿ ವಿಧಾನ ನೆರವೇರಿಸಿದರು.
ಶ್ರೀಗಂಧ ಕಟ್ಟಿಗೆ, ಕೊಬ್ಬರಿ, ಹಾಲು, ತುಪ್ಪ, ಕರ್ಪೂರ, ಚಂದನ ಮೊದಲಾದ ಪದಾರ್ಥಗಳಿಂದ ಮಹಾಮುನಿಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕವಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿದರು. ಹುಲಗಬಾಳಿಯ ಶಾಂತಿನಾಥ ಶೆಟ್ಟಿ, ತುಪ್ಪದ ಅಭಿಷೇಕ ಮಾಡಿದರು. ಕುಂತುನಾಥ ಉಗಾರೆ ಕಬ್ಬಿನ ಹಾಲು, ಅನಿಲ ನಂದಗಾಂವ ಗಂಧದ ಅಭಿಷೇಕ, ಅಭಯ ನಂದಗಾಂವ ಹಾಲಿನ ಅಭಿಷೇಕ ಸೇರಿ ನಾಲ್ಕು ದಿಕ್ಕಿನ ಕಳಸಾಭಿಷೇಕ ಹಾಗೂ ಜಲಾಭಿಷೇಕ ನೆರವೇರಿದವು.
ಬಳಿಕ ಕೊಕಟನೂರಿನ ವೀರಗೌಡ ಮನೆತನದವರು ಮಹಾಮುನಿಗಳ ದಹನ ಕ್ರಿಯೆ ಮಾಡಿದರು.
ಜಿನೈಕ್ಯರಾದ 108 ವಿಜಯಭದ್ರ ಮುನಿಮಹಾರಾಜರು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ವೀರಗೌಡ ಮನೆತದಲ್ಲಿ 1947ರ ಅಕ್ಟೋಬರ್ 2ರಂದು ಜನಿಸಿದ್ದರು. 1974 ರಲ್ಲಿ ಧರ್ಮ ಸಂಸ್ಕಾರ ಸ್ವೀಕರಿಸಿದ್ದರು.
ಜಿನೈಕ್ಯರಾದ 108 ವಿಜಯಭದ್ರ ಮುನಿಮಹಾರಾಜರು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ವೀರಗೌಡ ಮನೆತದಲ್ಲಿ 1947ರ ಅಕ್ಟೋಬರ್ 2ರಂದು ಜನಿಸಿದ್ದರು. 1974 ರಲ್ಲಿ ಧರ್ಮ ಸಂಸ್ಕಾರ ಸ್ವೀಕರಿಸಿದ್ದರು.
105 ದಿವ್ಯಸೇನ ಮುನಿಮಹಾರಾಜರು, 105 ಶಾಂತಿಸೇನ ಮುನಿಮಹಾರಾಜರು, ಹಲ್ಯಾಳದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಮಹೇಶ ಕುಮಠಳ್ಳಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಚಿದಾನಂದ ಸವದಿ, ಅಮೂಲ ನಾಯಿಕ, ನಿಂಗಣ್ಣ ನಂದೇಶ್ವರ, ಶಾಂತಿನಾಥ ನಂದೇಶ್ವರ ಇತರರು ಇದ್ದರು.

Comments
Post a Comment