ರಾಹುಲ್ ಬ್ಯಾಟಿಂಗ್, ಕುಲದೀಪ್ ಬೌಲಿಂಗ್ ಅಬ್ಬರಕ್ಕೆ ಬೆದರಿದ ಇಂಗ್ಲೆಂಡ್..
ಜೈ ಶೇಗುಣಸಿ ಸುದ್ದಿ...
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಎಂಟು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವನ್ನು ಭಾರತ ಕುಲದೀಪ್ ಯಾದವ್ (5 ವಿಕೆಟ್) ಅವರ ಪ್ರಕರ ಬೌಲಿಂಗ್ ದಾಳಿಯ ಮೂಲಕ 159 ರನ್‌ಗಳಿಗೆ ಕಟ್ಟಿ ಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ್ದ ಭಾರತ ತಂಡ ಆರಂಭದಲ್ಲಿ ಶಿಖರ್ ಧವನ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತಾದರೂ, ಕೆಎಲ್ ರಾಹುಲ್ (101*) ಅವರ ಸಮಯೋಚಿತ ಆಟದ ನೆರವಿನಿಂದ ಯಶಸ್ವಿಯಾಗಿ ಗೆಲುವಿನ ಗುರಿ ಮುಟ್ಟಿತು.
ಧವನ್ ಹೊರತಾಗಿಯೂ ಕನ್ನಡಿಗ ರಾಹುಲ್ ಭಾರತಕ್ಕೆ ಉತ್ತಮ ಆರಂಭವೊದಗಿಸಿಕೊಟ್ಟರು. ಇವರಿಗೆ ರೋಹಿತ್ ಶರ್ಮಾ ಅವರಿಂದ ಉತ್ತಮ ಸಾಥ್ ದೊರೆಯಿತು. ಹೀಗಿರುವಾಗಲೇ 32 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಹೀಗಿದ್ದರೂ, ಉತ್ತಮ ಆಟ ಮುಂದುವರಿಸಿದ ರಾಹುಲ್ ಕೇವಲ 53 ಎಸೆತಗಳಲ್ಲೇ ಶತಕ ಸಾಧನೆ ಮಾಡುವ ಮೂಲಕ ಭಾರತವನ್ನು ಗೆಲ್ಲಿಸಿದರು. ಅಂತಿಮವಾಗಿ ಭಾರತ 18.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಇಂಗ್ಲೆಂಡ್ ಪರ ಜೆಸಿ ಬಟ್ಲರ್ 69 (46), ಜೆಜೆ ರಾಯ್ 30 (20) ಹೊರತು ಪಡಿಸಿದರೆ ಯಾರಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.
ಇನ್ನು ಭಾರತದ ಪರ ಬೌಲಿಂಗ್ ಮಾಡಿದ ಕುಲದೀಪ್ ಯಾದವ್ ಐದು ವಿಕೆಟ್ಗಳನ್ನು ಕಸಿಯುವ ಮೂಲಕ ಪಂದ್ಯದ ಗೆಲುವಿಗೆ ರಾಹುಲ್ ಅವರಷ್ಟೇ ಪ್ರಧಾನ ಪಾತ್ರ ವಹಿಸಿದರು. ಇನ್ನುಳಿದಂತೆ ಯಾದವ್ 2, ಪಾಂಡ್ಯ 1 ವಿಕೆಟ್ ಪಡೆದರು.

Comments
Post a Comment