ಅಥಣಿಯ ಸ್ಟೇಟ್ ಬ್ಯಾಂಕಿನ ಫೀಲ್ಡ್ ಆಫೀಸರ್ ರ ಸೇವೆ ಸ್ಮರಿಸಿದ ಶೇಗುಣಸಿ ರೈತರು...!
ಜೈ ಶೇಗುಣಸಿ ಸುದ್ದಿ...
ಕೇವಲ ಸ್ವಾರ್ಥ-ಸಂಬಳಕ್ಕೆ ಸೀಮಿತವಾಗಿ ದುಡಿಯುವ ಈ ಕಾಲದಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ, ರೈತರ ಹಿತಕ್ಕಾಗಿ ದುಡಿಯುವ ಕೆಲವರಲ್ಲಿ ಸ್ಟೇಟ್ ಬ್ಯಾಂಕ್ ಫೀಲ್ಡ್ ಆಫಿಸರ್ ಶ್ರೀ ಗಾಣಿಗೇರ ಕೂಡ ಒಬ್ಬರು.
ಕಳೆದ ಕೆಲವು ವರ್ಷಗಳಿಂದ ಅಥಣಿ ಶಾಖೆಯ ಸ್ಟೇಟ್ ಬ್ಯಾಂಕಿನ ಫೀಲ್ಡ್ ಆಫೀಸರ್ ಆಗಿ ಕೆಲಸ ನಿರ್ವಹಿಸಿದ ಶ್ರೀ ಗಾಣಿಗೇರರವರು ಇಂದು ಬೇರೆ ಶಾಖೆಗೆ ವರ್ಗಾವಣೆಯಾದರು.

ಈ ಸಂದರ್ಭದಲ್ಲಿ ಶೇಗುಣಸಿ ರೈತರಿಂದ ಗಾಣಿಗೇರರವರಿಗೆ ಅಭಿನಂದನೆ ಮತ್ತು ಬಿಳ್ಕೊಡುಗೆ ಹಾಗೂ ಹೊಸದಾಗಿ ಅಥಣಿ ಶಾಖೆಗೆ ಸ್ಟೇಟ್ ಬ್ಯಾಂಕಿನ ಫೀಲ್ಡ್ ಆಫೀಸರ್ ಆಗಿ ನೇಮಕಗೊಂಡ ಶ್ರೀ ಕೆ.ಬಿ. ಕೊಣ್ಣೂರ ರವರ ಸ್ವಾಗತ ಸಮಾರಂಭ ಶೇಗುಣಸಿ ರೈತರಿಂದ ಶ್ರೀ ಕಲ್ಮೇಶ್ವರ ಸಾವಯವ ಫಾರ್ಮ್ ಹೌಸ್ ನ ಸಭಾಂಗಣದಲ್ಲಿ ನೇರವೇರಿತು.
ಈರ್ವರೂ ಅಧಿಕಾರಿಗಳಿಗೆ ಶೇಗುಣಸಿ ರೈತರಿಂದ ಉಡುಗೊರೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಶಿವರಾಯ ಯಲಡಗಿ, ಅಶೋಕ ಅಮ್ಮಣಗಿ, ಕೃಷಿ ಪಂಡಿತರಾದ ಶ್ರೀ ಕಲ್ಮೇಶ ಯಲಡಗಿ ಮತ್ತು ಬಸವರಾಜ ತೇಲಿ, ಭರತೇಶ ಶಿರಗುಪ್ಪಿ, ಮಹಾಂತೇಶ ಶಾನವಾಡ ಮತ್ತು ಅನೇಕ ರೈತರು ಉಪಸ್ಥಿತರಿದ್ದರು.

Comments
Post a Comment