ರುವಾಂಡದ ಬಡ ಕುಟುಂಬಗಳಿಗೆ 200 ಗೋವು ಉಡುಗೊರೆ ನೀಡಿದ ಪ್ರಧಾನಿ ಮೋದಿ...
ಜೈ ಶೇಗುಣಸಿ ಸುದ್ದಿ...
ಬಡತನ ಹಾಗೂ ಬಾಲ್ಯದ ಅಪೌಷ್ಟಿಕತೆ ನಿವಾರಣೆಗೆ ಪಣ ತೊಟ್ಟಿರುವ ರುವಾಂಡ ಅಧ್ಯಕ್ಷ ಪೌಲ್ ಕಾಗಮೆ ಅವರ ಮಹತ್ವಾಕಾಂಕ್ಷೆ ಯೋಜನೆಗೆ ಮೋದಿ ಬೆಂಬಲ ಸೂಚಿಸಿ ಈ ಅಸಾಮಾನ್ಯ ಉಡುಗೊರೆಯನ್ನು ನೀಡಿದ್ದಾರೆ.
ಕಾಗಮೆ ಅವರು 2006ರಲ್ಲಿ ಗಿರಿಂಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಮೂಲಕ ಬಡ ಕುಟುಂಬಗಳಿಗೆ ತಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಅಪೌಷ್ಟಿಕತೆಯನ್ನು ನಿವಾರಿಸಿಕೊಳ್ಳಲು ಒಂದೊಂದು ಗೋವುಗಳನ್ನು ಉಡುಗೊರೆಯಾಗಿ ನೀಡಲು ಪ್ರಾರಂಭಿಸಿದರು.
ಎರಡು ದಿನಗಳ ಕಾಲ ರುವಾಂಡ ಪ್ರವಾಸದಲ್ಲಿರುವ ಮೋದಿ ಇಲ್ಲಿನ ರುವರ್ ಮಾದರಿ ಗ್ರಾಮದ ಕಾರ್ಯಕ್ರಮದಲ್ಲಿ ಗೋವುಗಳನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಗಿರಿಂಕ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರುವಾಂಡ ಸರ್ಕಾರವನ್ನು ಶ್ಲಾಘಿಸಿದರು. ರೂವಾಂಡ ಗ್ರಾಮಗಳ ಆರ್ಥಿಕ ಸಬಲೀಕರಣದಲ್ಲಿ ಗೋವುಗಳ ಪ್ರಾಮುಖ್ಯತೆಯನ್ನು ಕಂಡು ಭಾರತೀಯರು ಆಶ್ಚರ್ಯದಿಂದ ನೋಡಬಹುದು. ಗಿರಿಂಕ ಯೋಜನೆ ರುವಾಂಡ ಗ್ರಾಮಗಳ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಗಿರಿಂಕ ಯೋಜನೆಯೊಂದಿಗೆ ಜೇನು ಕೃಷಿಯನ್ನು ಮಾಡುವಂತೆ ರುವಾಂಡ ಸರ್ಕಾರಕ್ಕೆ ಮೋದಿ ಸಲಹೆ ನೀಡಿದರು. ಹಾಲು ಮತ್ತು ಜೇನು ಉತ್ಪಾದನೆಯನ್ನು ಒಟ್ಟಿಗೆ ಮಾಡುವುದರಿಂದ ಹೆಚ್ಚುವರಿ ಲಾಭವನ್ನು ಗಳಿಸಬಹುದು. ಭಾರತ ಸರ್ಕಾರ ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂಬ ಭರವಸೆಯನ್ನು ನೀಡಿದರು.


Comments
Post a Comment